AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಕಲಚೇತನ ವ್ಯಕ್ತಿಯ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿದ ಕಿಡಿಗೇಡಿಗಳು, ನ್ಯಾಯ ಕೊಡಿಸಿ ಎಂದು ಕಣ್ಣೀರಾಕಿದ ವಿಕಲಚೇತನ

ಗಿರಿಧರ ಅವರು ಜೀವನೋಪಾಯಕ್ಕಾಗಿ ತೆಂಗು ಮತ್ತು ಪಪ್ಪಾಯಿ ಬೆಳೆದಿದ್ದರು. ಆದ್ರೆ ರಾತ್ರೋರಾತ್ರಿ ತೋಟಕ್ಕೆ ನುಗ್ಗಿದ ಪುಂಡರು ತೆಂಗು, ಪಪ್ಪಾಯಿ ಬೆಳೆ ನಾಶ ಮಾಡಿದ್ದಾರೆ. ಬೆಳೆಯೊಂದಿಗೆ ನಗರಸಭೆ ಬೀದಿ ದೀಪ ಕೂಡ ಪುಡಿ ಮಾಡಿದ್ದಾರೆ.

ವಿಕಲಚೇತನ ವ್ಯಕ್ತಿಯ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿದ ಕಿಡಿಗೇಡಿಗಳು, ನ್ಯಾಯ ಕೊಡಿಸಿ ಎಂದು ಕಣ್ಣೀರಾಕಿದ ವಿಕಲಚೇತನ
ವಿಕಲಚೇತನ ವ್ಯಕ್ತಿಯ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿದ ಕಿಡಿಗೇಡಿಗಳು
TV9 Web
| Updated By: ಆಯೇಷಾ ಬಾನು|

Updated on: Jun 24, 2022 | 3:14 PM

Share

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರದ ಗುನಗಿವಾಡದಲ್ಲಿ ಕೆಲ ಕಿಡಿಗೇಡಿಗಳು(Miscreants)  ವಿಕಲಚೇತನ ವ್ಯಕ್ತಿಯ( Disabled Man) ತೋಟಕ್ಕೆ ನುಗ್ಗಿ ತೋಟದಲ್ಲಿ ತೆಂಗು, ಪಪ್ಪಾಯಿ ಬೆಳೆ ನಾಶಗೊಳಿಸಿದ್ದಾರೆ. ಗಿರಿಧರ ಗುನಗಿ ಎಂಬುವವರ ತೆಂಗು ಮತ್ತು ಪಪ್ಪಾಯಿ ಫಸಲನ್ನ ಹಾಳು ಮಾಡಲಾಗಿದೆ. ಹೀಗಾಗಿ ನ್ಯಾಯ ಕೊಡಿಸಿ ಎಂದು ವಿಕಲಚೇತನ ಗಿರಿಧರ ಅಂಗಲಾಚಿ ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ.

ಗಿರಿಧರ ಅವರು ಜೀವನೋಪಾಯಕ್ಕಾಗಿ ತೆಂಗು ಮತ್ತು ಪಪ್ಪಾಯಿ ಬೆಳೆದಿದ್ದರು. ಆದ್ರೆ ರಾತ್ರೋರಾತ್ರಿ ತೋಟಕ್ಕೆ ನುಗ್ಗಿದ ಪುಂಡರು ತೆಂಗು, ಪಪ್ಪಾಯಿ ಬೆಳೆ ನಾಶ ಮಾಡಿದ್ದಾರೆ. ಬೆಳೆಯೊಂದಿಗೆ ನಗರಸಭೆ ಬೀದಿ ದೀಪ ಕೂಡ ಪುಡಿ ಮಾಡಿದ್ದಾರೆ. ಬೆಳೆ ನಾಶಕ್ಕೆ ನ್ಯಾಯ ಕೊಡಿಸಿ ಎಂದು ವಿಕಲಚೇತನ ಗಿರಿಧರ ಕಣ್ಣೀರು ಹಾಕಿದ್ದಾರೆ. ನಗರಸಭೆ ಮತ್ತು ಪೊಲೀಸರಿಗೆ ಘಟನೆ ಸಂಬಂಧ ಮಾಹಿತಿ ನೀಡಿ ಕೃತ್ಯವೆಸಗಿದ ಕಿಡಿಗೇಡಿಗಳಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Yoga: ನೀವು ಸದಾ ಯಂಗ್ ಆಗಿ ಕಾಣಿಸಲು ಈ ಯೋಗಾಸನಗಳನ್ನು ಮಾಡಿ Miscreants destroyed Disabled persons garden 1

ಗುಡ್ಡ ಕುಸಿತದಿಂದ ಸಂಚಾರ ಅಸ್ತವ್ಯಸ್ತ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಿರಂತರ ಸುರಿಯುತ್ತಿರುವ ಭಾರೀ ಮಳೆ ಹಿನ್ನಲೆ ಗುಡ್ಡ ಕುಸಿತ ಸಂಭವಿಸಿದೆ. ಗೋಕರ್ಣ ಮುಖ್ಯ ಕಡಲತೀರದಿಂದ ರಾಮಮಂದಿರಕ್ಕೆ ಸಾಗುವ ಮಾರ್ಗದಲ್ಲಿ ಗುಡ್ಡ ಕುಸಿತವಾಗಿದೆ. ಗುಡ್ಡ ಕುಸಿತದಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ಬೃಹತ್ ಗಾತ್ರದ ಬಂಡೆಗಳು, ಮರಗಳು ಉರುಳಿ ಬಿದ್ದು ಸಂಚಾರಕ್ಕೆ ತೊಡಕುಂಟಾಗಿದೆ. ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ಮತ್ತಷ್ಟು ಗುಡ್ಡ ಕುಸಿತದ ಆತಂಕ ಎದುರಾಗಿದೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಜನರು ಒತ್ತಾಯಿಸಿದ್ದಾರೆ.

hill collapse

ಗುಡ್ಡ ಕುಸಿತ

ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಅಕ್ಕ, ತಮ್ಮ ಸಾವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್‌ನ ಕುಣಿಗಲ್ ವೃತ್ತದ ಬಳಿ ಭೀಕರ ಅಪಘಾತ ಸಂಭವಿಸಿದೆ. ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಅಕ್ಕ, ತಮ್ಮ ಇಬ್ಬರೂ ಮೃತಪಟ್ಟಿದ್ದಾರೆ. ಬೆಂಗಳೂರಿನ ರಂಜನ್(28), ಶಶಿಕಲಾ(36) ಮೃತರು. ಚಾಲಕ ಮಹೇಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಲಾರಿ ಜಪ್ತಿ ಮಾಡಲಾಗಿದೆ. ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: Pakistan Economy: ದೊಡ್ಡ ಕೈಗಾರಿಕೆಗಳ ಮೇಲೆ ಶೇ 10ರಷ್ಟು ಹೆಚ್ಚುವರಿ ತೆರಿಗೆ ವಿಧಿಸಿದ ಪಾಕಿಸ್ತಾನ, ಷೇರು ಮೌಲ್ಯದಲ್ಲಿ ಭಾರೀ ಕುಸಿತ