AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆಗೆ ಒಂದು ವರ್ಷ ಇರುವಾಗಲೆ ತುಮಕೂರಿನಲ್ಲಿ ಶುರುವಾಯ್ತು ಕಾಂಗ್ರೆಸ್ ಟಿಕೆಟ್ ಫೈಟ್

ಮಾಜಿ ಶಾಸಕ ರಾಮಸ್ವಾಮಿ ಸಿದ್ದರಾಮಯ್ಯ ಬಲದಲ್ಲಿ ಟಿಕೆಟ್ ಕೇಳಲು ಮುಂದಾದರೆ, ಡಿಕೆ ಶಿವಕುಮಾರ್ ಸಂಬಂಧಿ ಡಾ.ರಂಗನಾಥ್​ಗೆ ಟಿಕೆಟ್ ನೀಡದಂತೆ ಒತ್ತಡ ಹೇರುತ್ತಿದ್ದಾರೆ.

ಚುನಾವಣೆಗೆ ಒಂದು ವರ್ಷ ಇರುವಾಗಲೆ ತುಮಕೂರಿನಲ್ಲಿ ಶುರುವಾಯ್ತು ಕಾಂಗ್ರೆಸ್ ಟಿಕೆಟ್ ಫೈಟ್
ಮಾಜಿ ಶಾಸಕ ರಾಮಸ್ವಾಮಿ
TV9 Web
| Edited By: |

Updated on:May 24, 2022 | 8:33 AM

Share

ತುಮಕೂರು: ರಾಜ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ (Assembly elections) ಹೆಚ್ಚು- ಕಡಿಮೆ ಒಂದು ವರ್ಷವಿದೆ. ಆದರೆ ಈಗಲೇ ಪಕ್ಷಗಳಿಂದ ತಯಾರಿಗಳು ನಡೆಯುತ್ತಿವೆ. ಈ ನಡುವೆ ಟಿಕೆಟ್​ಗಾಗಿ ಲಾಬಿ ಕೂಡಾ ಶುರುವಾಗಿದೆ. ಕಾಂಗ್ರೆಸ್ (Congress) ನಾಯಕರಿಗೆ ತುಮಕೂರು ಜಿಲ್ಲೆ ಬಿಸಿ ತುಪ್ಪವಾದಂತೆ ಕಾಣುತ್ತಿದೆ. ಕುಣಿಗಲ್ ಕಾಂಗ್ರೆಸ್ ಟಿಕೆಟ್ಗಾಗಿ ಜಿದ್ದಾಜಿದ್ದಿ ಶುರುವಾಗಿದ್ದು, ಶಾಸಕ ಡಾ.ರಂಗನಾಥ್, ಮಾಜಿ ಸಂಸದ ಎಸ್.ಪಿ ಮುದ್ದಹನುಮೇಗೌಡ, ಮಾಜಿ ಶಾಸಕ ರಾಮಸ್ವಾಮಿ ನಡುವೆ ಟಿಕೆಟ್ ಫೈಟ್ ಆರಂಭವಾಗಿದೆ.

ಸಿದ್ದರಾಮಯ್ಯ ಬಲದಲ್ಲಿ ಟಿಕೆಟ್ ಕೇಳಲು ಮುಂದಾಗಿರುವ ಮಾಜಿ ಶಾಸಕ ರಾಮಸ್ವಾಮಿ, ಡಿಕೆ ಶಿವಕುಮಾರ್ ಸಂಬಂಧಿ ಡಾ.ರಂಗನಾಥ್​ಗೆ ಟಿಕೆಟ್ ನೀಡದಂತೆ ಒತ್ತಡ ಹೇರುತ್ತಿದ್ದಾರೆ. ಡಾ.ರಂಗನಾಥ್​ಗೆ ಟಿಕೆಟ್ ನೀಡಿದರೆ ಬಂಡಾಯದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಎಚ್ಚರಿಕೆಯನ್ನೂ ರಾಮಸ್ವಾಮಿಗೌಡ ನೀಡಿದ್ದಾರೆ. ಮತ್ತೊಂದಡೆ ಮಾಜಿ ಸಂಸದ ಎಸ್.ಪಿ ಮುದ್ದಹನುಮೇಗೌಡ ಕೂಡ ಕ್ಷೇತ್ರದಲ್ಲಿ ಭರ್ಜರಿ ಓಡಾಟ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ನೀಡಿದ ಭರವಸೆ ಈಡೇರಿಸಲಿ, ಕುಣಿಗಲ್ ಕಾಂಗ್ರೆಸ್ ಟಿಕೆಟ್ ನನಗೆ ನೀಡುವಂತೆ ಮುದ್ದಹನುಮೇಗೌಡ ಪಟ್ಟು ಬಿದ್ದಿದ್ದಾರೆ.

ಇದನ್ನೂ ಓದಿ: Anti Ageing Food: ವಯಸ್ಸಾಗದಂತೆ ತಡೆಯುವ ಈ ಆಹಾರಗಳು ನಿಮ್ಮ ಡಯಟ್​ನಲ್ಲಿರಲಿ

ಇದನ್ನೂ ಓದಿ
Image
KN Mohan Kumar: ಸ್ಯಾಂಡಲ್​ವುಡ್​ ನಿರ್ದೇಶಕ ಕೆಎನ್ ಮೋಹನ್​ ಕುಮಾರ್ ಇನ್ನಿಲ್ಲ
Image
Petrol Price Today: ಇಂಧನ ದರ ಸ್ಥಿರ; ಬೆಂಗಳೂರಿನಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ
Image
Anti Ageing Food: ವಯಸ್ಸಾಗದಂತೆ ತಡೆಯುವ ಈ ಆಹಾರಗಳು ನಿಮ್ಮ ಡಯಟ್​ನಲ್ಲಿರಲಿ
Image
Fat burn tips: ಭಾರತೀಯ ಈ ದೇಸಿ ಸೂಪರ್‌ಫುಡ್‌ಗಳು ಪೌಷ್ಟಿಕಾಂಶವನ್ನು ಒದಗಿಸುವುದರ ಜೊತೆಗೆ ಕೊಬ್ಬನ್ನು ಕರಗಿಸಲು ಸಹಕಾರಿ

ಚುನಾವಣೆಗೆ ಇನ್ನು ಒಂದು ವರ್ಷ ಸಮಯವಿದೆ. ಆದರೆ ಆಕಾಂಕ್ಷಿತರು ಈಗಲೇ ಕುಣಿಗಲ್ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಶುರು ಮಾಡಿದ್ದಾರೆ. ಇಡೀ ಕ್ಷೇತ್ರ ಸುತ್ತಿ ಮತದಾರರ ಮನ ಗೆಲ್ಲುವ ತಂತ್ರ ನಡೆಸುತ್ತಿದ್ದಾರೆ. ಟೆಕೆಟ್ ಸಿಗುವ ವಿಶ್ವಾಸದಲ್ಲಿ ಮಾಜಿ ಶಾಸಕ ರಾಮಸ್ವಾಮಿ ಇದ್ದಾರೆ. ಸಂಬಂಧಿಯನ್ನು ಬಿಟ್ಟು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೇರೆಯವರಿಗೆ ಟಿಕೆಟ್ ನೀಡುತ್ತಾರ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಇನ್ನೂ ಅಂತಿಮವಾಗದ ಜೆಡಿಎಸ್​ ಅಭ್ಯರ್ಥಿ ಹೆಸರು: ಜೂನ್ 13ರಂದು ನಡೆಯುವ ವಿಧಾನಪರಿಷತ್​ ಚುನಾವಣೆಗೆ ಇನ್ನೂ ಜೆಡಿಎಸ್​ ಅಭ್ಯರ್ಥಿ ಹೆಸರು ಅಂತಿಮವಾಗಿಲ್ಲ. ಅಭ್ಯರ್ಥಿ ಹೆಸರು ಘೋಷಣೆ ಬಗ್ಗೆ ಜೆಡಿಎಸ್ ಗೊಂದಲದಲ್ಲಿದ್ದಾರೆ. ಬೆಳಗ್ಗೆ 10 ಗಂಟೆ ನಂತರ ಅಭ್ಯರ್ಥಿ ಹೆಸರು ಘೋಷಣೆ ಮಾಡುವ ಸಾಧ್ಯತೆಯಿದೆ. ಮಾಜಿ ಎಂಎಲ್​ಸಿ ಶರವಣಗೆ ಜೆಡಿಎಸ್​ ಟಿಕೆಟ್ ಸಿಗುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:29 am, Tue, 24 May 22

ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ