ಹನಿಟ್ರ್ಯಾಪ್ ಹೆಸರಿನಲ್ಲಿ ಮುನಿರತ್ನ ಬ್ಲ್ಯಾಕ್ ಮೇಲ್ ಮಾಡುತ್ತಾರೆ: ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಗಂಭೀರ ಆರೋಪ
ಹನಿಟ್ರ್ಯಾಪ್ ಹೆಸರಿನಲ್ಲಿ ಮಾಜಿ ಸಚಿವ ಎನ್ ಮುನಿರತ್ನ ಅವರು ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂದು ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ಮುನಿರತ್ನ ಅವರು ಅಧಿಕಾರಿಗಳ ಮೇಲೆ ಹನಿಟ್ರ್ಯಾಪ್ ಮಾಡಿದ್ದರು. ಮುಖಗವಸು ಹಾಕಿಕೊಂಡು ಮುನಿರತ್ನ ವಿರುದ್ಧ ಆರೋಪ ಮಾಡಿದ ಸಂತ್ರಸ್ಥೆ ಯಾರೆಂದು ಗೊತ್ತಿಲ್ಲ. ಒಂದೊಮ್ಮೆ ಗೊತ್ತಾದರೆ ಅವರ ಪರ ನಿಲ್ಲುತ್ತೇನೆ ಎಂದರು.
ಬೆಂಗಳೂರು, ಅ.9: ಹನಿಟ್ರ್ಯಾಪ್ (Honeytrap) ಹೆಸರಿನಲ್ಲಿ ಮಾಜಿ ಸಚಿವ ಎನ್. ಮುನಿರತ್ನ (N.Munirathna) ಅವರು ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂದು ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ಮುನಿರತ್ನ ಅವರು ಅಧಿಕಾರಿಗಳ ಮೇಲೆ ಹನಿಟ್ರ್ಯಾಪ್ ಮಾಡಿದ್ದರು. ಮುಖಗವಸು ಹಾಕಿಕೊಂಡು ಮುನಿರತ್ನ ವಿರುದ್ಧ ಆರೋಪ ಮಾಡಿದ ಸಂತ್ರಸ್ಥೆ ಯಾರೆಂದು ಗೊತ್ತಿಲ್ಲ. ಒಂದೊಮ್ಮೆ ಗೊತ್ತಾದರೆ ಅವರ ಪರ ನಿಲ್ಲುತ್ತೇನೆ ಎಂದಿದ್ದಾರೆ.
ಮಾಜಿ ಸಚಿವ ಮುನಿರತ್ನ ವಿರುದ್ಧ ಓರ್ವ ಮಹಿಳೆ ಮಾತಾಡಿರುವ ವೀಡಿಯೋ ವಿಷಯ ಗಮನಕ್ಕೆ ಬಂದಿದೆ. ಖಾಸಗಿ ಚಾನೆಲ್ ಒಬ್ಬರು ಇದರ ಬಗ್ಗೆ ಕೇಳಿದರು. ನನಗೇನು ಗೊತ್ತಿಲ್ಲ ಎಂದಿದ್ದೇನೆ. ಮುನಿರತ್ನ ಅವರು ಹನಿಟ್ರ್ಯಾಪ್ ಹೆಸರಿನಲ್ಲಿ ಹೆದರಿಸಿ, ಬೆದರಿಸುತ್ತಾರೆ. ಈ ರೀತಿ ಸಾಕಷ್ಟು ಸಲ ಮಾಡಿದ್ದಾರೆ. ಮುನಿರತ್ನ ಅವರಿಂದ ಅನ್ಯಾಯವಾದ ಸಂತ್ರಸ್ಥರ ಪರ ನಾನು ನಿಲ್ಲುತ್ತೇನೆ ಎಂದರು.
ಈ ಹಿಂದೆ ಮುನಿರತ್ನ ಅವರು ಎಫ್ಎಸ್ಎಲ್ ಅಧಿಕಾರಿ ಮೇಲೆ ಹನಿಟ್ರ್ಯಾಪ್ ಮಾಡಿಸಿದ್ದರು. ಸದ್ಯ ಮುಖಗವಸು ಹಾಕಿಕೊಂಡು ಮುನಿರತ್ನ ವಿರುದ್ಧ ಆರೋಪ ಮಾಡಿದ ಸಂತ್ರಸ್ಥೆ ಯಾರೆಂದು ಗೊತ್ತಿಲ್ಲ. ಅವರ ಸ್ವರ ಕೇಳಿದ ರೀತಿ ಅನಿಸುತ್ತಿದೆ. ಅವರು ಮುಖಗವಸು ಇಲ್ಲದೆ ಮುಂದೆ ಬಂದರೆ ಯಾರಂತ ಗೊತ್ತಾಗಲಿದೆ. ಅವರು ನನ್ನ ಬಳಿ ಬಂದು ಸಹಾಯ ಕೇಳಿದರೆ ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು.
ಇದನ್ನೂ ಓದಿ: ಮನೆಗೆ ಬರುವ ಅತಿಥಿಗಳನ್ನು ಬಿಕಿನಿಯಲ್ಲಿ ಸ್ವಾಗತಕೋರುವ ಹನಿಟ್ರ್ಯಾಪ್ ಸುಂದರಿ ಲಾಕ್, ಮಾಡೆಲ್ ರಂಗಿನಾಟ ಅಬ್ಬಬ್ಬಾ.!
ಯಾರೇ ಸಂತ್ರಸ್ಥರು ಬಂದು ನನ್ನ ಬೆಂಬಲ ಕೇಳಿದರು ನೆರವಿಗೆ ದಾವಿಸುತ್ತೇನೆ. ಮುನಿರತ್ನ ಅವರು ನಾನು ಅಕ್ರಮ ಎಸಗಿಲ್ಲ ಅಂತಾರೆ. ಡಿಕೆ ಶಿವಕುಮಾರ್, ಡಿಕೆ ಸುರೇಶ್ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಆರ್ ಆರ್ ನಗರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ ಅಂತಾರೆ. ಆದರೆ 9 ವಾರ್ಡ್ಗೆ ಅನುದಾನ ತಡೆ ಹಿಡಿದಿರುವುದು ಸ್ವತಃ ಮುನಿರತ್ನ ಅವರೇ. ಈ ಕುರಿತು ತನಿಖೆ ನಡೆಯುತ್ತಿದೆ ಎಂದರು.
ಕುಮಾರಸ್ವಾಮಿ ಕಾರಿನಲ್ಲಿ ಕಾಣಿಸಿದ್ದಕ್ಕೆ ಈ ದ್ವೇಷ ಅಂತ ಮುನಿರತ್ನ ಅವರು ಹೇಳಿದ್ದರು. ಮಾಜಿ ಸಚಿವರಾಗಿರುವ ಮುನಿರತ್ನ ಸಣ್ಣ ಮರಿ. ಬಿಜೆಪಿ ನಾಯಕರಾಗಿ ನೀವು ಏನು ಮಾಡುತ್ತಿದ್ದೀರಿ? ಕುಮಾರಣ್ಣ ವೆಲ್ ಕಮ್ ಮಾಡಲು ನೀನು ಯಾಕೆ ಹೋದೆ? ಮುನಿರತ್ನ ಎಲ್ಲಿ ಕಾಲಿಟ್ಟಿದ್ದಾರೋ ಅಲ್ಲಿ ಸರ್ವ ನಾಶವಾಗಿದೆ. ಬಿಜೆಪಿ ಸೇರಿದರು, ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿತು. ಅಣ್ಣಾಮಲೈ ರಾಜ್ಯ ಉಸ್ತುವಾರಿ ಕೊಟ್ಟಿದ್ದರು. ಪಕ್ಷ ಸೋತು ಸುಣ್ಣ ಆಯಿತು. ನಿಖಿಲ್ ಕುಮಾರಸ್ವಾಮಿ ರಾಜಕೀಯವಾಗಿ ಬೆಳೆಯಬೇಕು. ಮುನಿರತ್ನ ಐರನ್ ಲೆಗ್, ಅವರ ಜೊತೆ ಇರಬೇಡಿ ಎಂದು ಮನವಿ ಮಾಡಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ