ಕುಂಕುಮ ಬೇಡ ಎನ್ನುವ ಇವರು ಹಿಂದೂನಾ? ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಶಾಸಕ ಸಿಟಿ ರವಿ ಕಿಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 02, 2024 | 9:57 PM

ವಿಜಯನಗರದಲ್ಲಿ ಹಂಪಿ ಉತ್ಸವದಲ್ಲಿ ಕುಂಕುಮ ಹಾಕಲು ಸಿಎಂ ಸಿದ್ದರಾಮಯ್ಯ ಹಿಂದೇಟು ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಶಾಸಕ ಸಿ.ಟಿ.ರವಿ, ಕುಂಕುಮ ಬೇಡ ಎನ್ನುವ ಇವರು ಹಿಂದೂನಾ ಎಂದು ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯಗೆ ಮಂಗಳಕರವಾದದ್ದು ಯಾವುದೂ ಬೇಡ. ಅವರಿಗೆ ಬೇಕಿರುವುದು ಅಮಂಗಳಕರವಾದದ್ದೆ ಎಂದು ವಾಗ್ದಾಳಿ ಮಾಡಿದ್ದಾರೆ. 

ಕುಂಕುಮ ಬೇಡ ಎನ್ನುವ ಇವರು ಹಿಂದೂನಾ? ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಶಾಸಕ ಸಿಟಿ ರವಿ ಕಿಡಿ
ಮಾಜಿ ಶಾಸಕ ಸಿ.ಟಿ.ರವಿ, ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಫೆಬ್ರುವರಿ 2: ಹಿಂದೂಗಳಾರೂ ಕುಂಕುಮ, ವಿಭೂತಿ ಬೇಡ ಅಂತಾ ಹೇಳಲ್ಲ. ಕುಂಕುಮ ಬೇಡ ಎನ್ನುವ ಇವರು ಹಿಂದೂನಾ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಮಾಜಿ ಶಾಸಕ ಸಿ.ಟಿ.ರವಿ (CT Ravi) ವಾಗ್ದಾಳಿ ಮಾಡಿದ್ದಾರೆ. ವಿಜಯನಗರದಲ್ಲಿ ಹಂಪಿ ಉತ್ಸವದಲ್ಲಿ ಕುಂಕುಮ ಹಾಕಲು ಸಿಎಂ ಸಿದ್ದರಾಮಯ್ಯ ಹಿಂದೇಟು ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮಾತೆತ್ತಿದರೆ ನಾನು ಹಿಂದೂ ಅಂತಾರೆ. ನಮ್ಮ ತಂದೆ ಹೆಸರಲ್ಲಿ ರಾಮ ಇದೆ ಎಂದು ಹೇಳ್ಳುತ್ತಾರೆ. ಹಾಗಿದ್ದರೆ ಕುಂಕುಮ ಬೇಡ ಅಂತಾ ಯಾಕೆ ಅನ್ನಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಮಂಗಳಕರವಾದದ್ದು ಯಾವುದೂ ಸಿದ್ದರಾಮಯ್ಯಗೆ ಬೇಡ. ಅವರಿಗೆ ಬೇಕಿರುವುದು ಅಮಂಗಳಕರವಾದದ್ದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಶಾಸಕ ಪಿ.ಎಂ.ನರೇಂದ್ರಸ್ವಾಮಿರಿಂದ ಕಾಂಗ್ರೆಸ್​ ಪಕ್ಷ ಹೇಳಿಸಿದೆ

ಸಿ.ಟಿ.ರವಿ ಬಗ್ಗೆ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವಾಚ್ಯ ಶಬ್ದದಿಂದ ನಿಂದನೆ ವಿಚಾರವಾಗಿ ಮಾತನಾಡಿದ ಅವರು, ನರೇಂದ್ರಸ್ವಾಮಿರಿಂದ ಕಾಂಗ್ರೆಸ್​ ಪಕ್ಷ ಹೇಳಿಸಿದೆ. ನಾನು ರಾಷ್ಟ್ರಧ್ವಜಕ್ಕೆ ಅಗೌರವ ತರುವ ರೀತಿಯಲ್ಲಿ ಮಾತನಾಡಿಲ್ಲ. ತಾಲಿಬಾನ್ ಧ್ವಜ ಹಾಕಿದ್ವಾ, ಹನುಮಧ್ವಜ ಹಾಕಿದ್ದೇವೆ ಎಂದಿದ್ದೆ. ಇದರಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ ಆಗುವಂತಹದ್ದು ಎಲ್ಲಿ ಆಗಿದೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಫೆ 7ರಂದು ದಿಲ್ಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ: ಇದಕ್ಕೆ ಪ್ರತಿಯಾಗಿ ರಾಜ್ಯದಲ್ಲಿ ಸರ್ಕಾರ ವಿರುದ್ಧ ಪ್ರತಿಭಟನೆಗೆ ಬಿಜೆಪಿ ನಿರ್ಧಾರ

ಟೂಲ್ ಕಿಟ್ ರಾಜಕಾರಣ ಭಾಗವಾಗಿ ಸಚಿವ ಪ್ರಿಯಾಂಕ್​ ಖರ್ಗೆ ಟ್ವೀಟ್ ಮಾಡಿದರು.​ ಆ ನಂತರ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಹೇಳಿಕೆ ಕೊಟ್ಟರು. ನಾನು ಸ್ವೀಕಾರ ಮಾಡಿಲ್ಲ ಅಂದರೆ ಅವರಿಗೆ ತಾನೇ ಸೇರಬೇಕು? ಅವರು ಏನು ಬೈದರೋ ಅದೆಲ್ಲವೂ ನರೇಂದ್ರಸ್ವಾಮಿಗೆ ಸೇರುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಫೆ.6ರಂದು ರಾಜ್ಯ ಕಾಂಗ್ರೆಸ್​ನಿಂದ ದೆಹಲಿ ಚಲೋ:​ ಪ್ರತಿಭಟನೆ ಘೋಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ಬುದ್ದ ಹೋಗುವಾಗ ಒಬ್ಬರು ಬಾಯಿಗೆ ಬಂದಂತೆ ಬೈತಾರೆ. ಆದರೆ ಇವರು ಏನೂ ಪ್ರತಿಕ್ರಿಯಿಸಲ್ಲ. ಕೊನೆಗೆ ಶಿಷ್ಯ ಕೇಳಿದಾಗ, ಭಿಕ್ಷೆ ತಗೊಳಲ್ಲ ಅಂದರೆ ಅದು ಅವರಿಗೆ ಸೇರುತ್ತದೆ ಅಂತಾ ಹೇಳುತ್ತಾರೆ. ಹಾಗೇ ಅವರು ಏನು ಬೈದರೋ ಅದೆಲ್ಲವೂ ನರೇಂದ್ರ ಸ್ವಾಮಿಗೆ ಸೇರುತ್ತದೆ. ಮತ್ತೆ ಯಾರಿಗೆ ಯಾವುದರ ಬಗ್ಗೆ ಅನುಮಾನ ಇರುತ್ತದೆಯೋ ಆಗ ಇನ್ನೊಬ್ಬರ ಮೇಲೆ ಈ ರೀತಿ ಮಾತಾಡುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.