AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕೋಡಿ ಲೋಕಸಭೆ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದ ರಮೇಶ್ ಕತ್ತಿ

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಆಪರೇಷನ್ ಹಸ್ತ ಚರ್ಚೆ ನಡೆಯುತ್ತಿದೆ. ವಿಪಕ್ಷಗಳಾದ ಬಿಜೆಪಿ ಜೆಡಿಎಸ್​ನಿಂದ ಹಲವು ನಾಯಕರು ಕಾಂಗ್ರೆಸ್ ಸೇರುತ್ತಾರೆ ಎಂದು ಕೈ ಶಾಸಕ ಲಕ್ಷ್ಮಣ್ ಸವದಿ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಬಿಜೆಪಿ ಮಾಜಿ ಸಂಸದ ರಮೇಶ್ ಕತ್ತಿ ಮತ್ತು ಲಕ್ಷ್ಮಣ್ ಸವದಿ ಭೇಟಿಯೂ ಆಗಿದೆ. ಇದರ ನಡುವೆ ಚಿಕ್ಕೋಡಿಯಲ್ಲಿ ರಮೇಶ್ ಅವರು ಆ್ಯಕ್ಟೀವ್ ಆಗಿದ್ದಾರೆ.

ಚಿಕ್ಕೋಡಿ ಲೋಕಸಭೆ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದ ರಮೇಶ್ ಕತ್ತಿ
ರಮೇಶ್ ಕತ್ತಿ
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: Rakesh Nayak Manchi

Updated on: Sep 29, 2023 | 5:30 PM

ಚಿಕ್ಕೋಡಿ, ಸೆ.29: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಂಸದ ರಮೇಶ್ ಕತ್ತಿ (Ramesh Katti) ಆ್ಯಕ್ಟೀವ್ ಆಗಿದ್ದಾರೆ. ಈ ಬಗ್ಗೆ ನಂದಗಾಂವ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ ರಮೇಶ್, ಬಿಜೆಪಿ ವರಿಷ್ಠರು ನನಗೆ ಈ ಬಾರಿ ಟಿಕೆಟ್ ಕೊಡುವ ಭರವಸೆ ಇದೆ ಎಂದರು.

ಎಲೆಕ್ಷನ್ ಬಂದಾಗ ಆ್ಯಕ್ಟೀವ್ ಆಗೋದು ಏನು ಪ್ರಶ್ನೆ ಇರುವುದಿಲ್ಲ. ಮದುವೆ ಮಾಡಿಕೊಳ್ಳುವ ಟೈಮ್‌ನಲ್ಲಿ ಹುರುಪು ಏನೂ ಇರುವುದಿಲ್ಲ. 18 ರಿಂದ 20 ವಯಸ್ಸು ಆಯಿತೆಂದರೆ ಮದುವೆ ಆಗುತ್ತದೆ ಅಂತಾ ಸ್ವಾಭಾವಿಕವಾಗಿ ಗೊತ್ತಿರುತ್ತದೆ ಎಂದರು.

ಚುನಾವಣೆ ಬಂದಾಗ ಸ್ವಾಭಾವಿಕವಾಗಿ ಅಲ್ಲಿ ಇಲ್ಲಿ ಮಾತನಾಡುತ್ತಾರೆ. ಮಾಧ್ಯಮಗಳಲ್ಲಿ ಹಾಗೇ ಬರೀತಾರೆ, ನಾನಂತೂ ಎಲ್ಲಿಯೂ ಹೇಳಿಲ್ಲ. ಪಕ್ಷದವರು ಕಳೆದ ಬಾರಿ ವಂಚಿತ ಆಗಿದ್ದಾನೆ, ಬಳಿಕ ರಾಜ್ಯಸಭಾ ಸ್ಥಾನ ಕೊಡುತ್ತೇವೆ ಅಂತ ಹೇಳಿದ್ದರು. ಎಂಎಲ್‌ಸಿ ಸ್ಥಾನ ಕೊಡುತ್ತೇವೆ ಅಂತ ಹೇಳಿದ್ದರು. ಅದಕ್ಕೆ ವಂಚಿತ ಆಗಿದ್ದೇನೆ ಎಂದರು.

ಎಲ್ಲಾ ಗಮನದಲ್ಲಿಟ್ಟುಕೊಂಡು ಪಕ್ಷ ನನಗೆ ಟಿಕೆಟ್ ನೀಡುವ ಆಸೆ ನನ್ನಲ್ಲಿದೆ. ಬಿಜೆಪಿಯವರು ಟಿಕೆಟ್ ಕೊಡುವ ನಂಬಿಕೆ ನನ್ನಲ್ಲಿ ಇದೆ. ಜಿಲ್ಲೆಯ ಜನ ಏನು ಹೇಳುತ್ತಾರೆ ಅದರಂತೆ ಅವರ ಸೇವೆಗೆ ಸನ್ನದ್ಧನಾಗುವೆ. ನಾನು ಭವಿಷ್ಯಕಾರನಲ್ಲ, ಆದರೆ ಆತ್ಮವಿಶ್ವಾಸ ಮಾತ್ರ ನನ್ನಲ್ಲಿ ಇದೆ ಎಂದರು.

ಇದನ್ನೂ ಓದಿ: ಚಿಕ್ಕೋಡಿ; ಎಲ್ಲದಕ್ಕೂ ಕಾಲ ಕೂಡಿ ಬರಬೇಕು, ಲಕ್ಷ್ಮಣ್ ಸವದಿ ಮಾರ್ಮಿಕ ಹೇಳಿಕೆ

ಕಳೆದ ಬಾರಿ ನನಗೆ ಟಿಕೆಟ್ ಸಿಗುವ ಆತ್ಮವಿಶ್ವಾಸ ಇತ್ತು, ಆದರೆ ಪಕ್ಷದ ವರಿಷ್ಠರು ಬೇರೆಯವರಿಗೆ ಕೊಡುತ್ತೇವೆ ಸುಮ್ಮನಿರು ಅಂದಿದ್ದರು. ಆ ಪ್ರಕಾರ ಸುಮ್ಮನಾದೆ, ಈಗ ಮತ್ತೆ ನನಗೆ ಟಿಕೆಟ್ ಕೊಡುತ್ತಾರೆ ಎಂಬ ಆತ್ಮವಿಶ್ವಾಸ ಇದೆ ಎಂದರು.

ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಭೇಟಿಯಾದ ವಿಚಾರವಾಗಿ ಮಾತನಾಡಿದ ರಮೇಶ್ ಕತ್ತಿ, ಸವದಿ ಹಾಗೂ ನಮ್ಮದು 35-40 ವರ್ಷಗಳ ಸಂಬಂಧ. ಅಣ್ಣ ಉಮೇಶ್ ಕತ್ತಿ ತೀರಿಕೊಂಡ ಬಳಿಕ ಏನಾದರೂ ಮಾರ್ಗದರ್ಶನ ಪಡೆಯಲು ಅಣ್ಣನ ಸ್ಥಾನದಲ್ಲಿರುವ ಲಕ್ಷ್ಮಣ್ ಸವದಿ ಗಮನಕ್ಕೆ ತರುವುದು ನನ್ನ ಕರ್ತವ್ಯ ಎಂದರು.

ಅಥಣಿ ತಾಲೂಕಿನ ನಂದಗಾಂವದಲ್ಲಿ ಕಾರ್ಯಕ್ರಮ ಇರುವ ಸಂದರ್ಭದಲ್ಲಿ ಅವರ ಮನೆಗೆ ಹೋಗಿ ಭೇಟಿ ಮಾಡಿ ಡಿಸಿಸಿ ಬ್ಯಾಂಕ್, ಈ ಭಾಗದ ಸೊಸೈಟಿಗಳ ಅಭಿವೃದ್ಧಿಗೆ ಏನು ಮಾಡಬೇಕೆಂದು ಮಾರ್ಗದರ್ಶನ ಪಡೆದಿದ್ದೇನೆ. ಇದಕ್ಕೆ ರಾಜಕೀಯ ಕಲ್ಪನೆ ಕೊಡುವ ಅವಶ್ಯಕತೆ ಇಲ್ಲ ಎಂದರು.

ಪಕ್ಷ ಬೇರೆ ಬೇರೆ ಇರಬಹುದು, ಆದರೆ ಮೊದಲಿಂದ ಕೂಡಿ ಬಂದಿದ್ದೇವೆ. ರಾಜಕಾರಣ ಹರಿಯುತ್ತಿರುವ ನೀರು ಅದು ಒಂದೇ ಕಡೆ ನಿಲ್ಲಲ್ಲ. ಒಂದೇ ಕಡೇ ನೀರು ನಿಂತರೆ ನಾರುತ್ತದೆ. ಹರಿಯುವ ಸಂದರ್ಭದಲ್ಲಿ ಹರಿಯುತ್ತದೆ. ಹಿರಿಯ ಸಹೋದರ ಲಕ್ಷ್ಮಣ್ ಸವದಿ ಕರೆದಂತಹ ಸಂದರ್ಭದಲ್ಲಿ ಅವರ ಮನೆಗೆ ಹೋಗಿ ನಂದಗಾಂವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ