ಬೆಂಗಳೂರು: ಸದ್ಯ ಮಧ್ಯಂತರ ಚುನಾವಣೆಗೆ ಹೋಗುವ ಯೋಚನೆ ನಮಗಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟಕಾಲ ಬಂದರೆ ಬೆಂಬಲ ನೀಡುತ್ತೇವೆ. ಈಗ ಜಿ.ಪಂ, ತಾ.ಪಂ ಚುನಾವಣೆ ಬರುತ್ತಿದೆ. ಆ ನಂತರ ಚುನಾವಣೆ ಬಂದೇ ಬಿಡುತ್ತೆ. ಸಿದ್ದರಾಮಯ್ಯ ನನ್ನ ಶಿಷ್ಯ ಅಲ್ಲಾ, ಎಲ್ಲರೂ ಕೂಡ ನಾಯಕರೇ, ಅವರೆಲ್ಲರೂ ಈಗ ಅವರದೇ ಗೌರವಯುತ ಸ್ಥಾನ ತಲುಪಿದ್ದಾರೆ. ಅವರೆಲ್ಲರಿಗೂ ಆ ಗೌರವ ಕೊಡಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಭೇಟಿಯಾದ ನಂತರ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ನೀರಾವರಿ ಹೋರಾಟದ ವಿಚಾರಕ್ಕೆ ನಮ್ಮ ಬೆಂಬಲವಿರುತ್ತದೆ. ದೆಹಲಿ ಸೇರಿದಂತೆ ಎಲ್ಲ ಕಡೆ ಓಡಾಡಲು ನನಗೆ ಆಗುವುದಿಲ್ಲ. ನನ್ನ ಮೊಮ್ಮಗ ಪ್ರಜ್ವಲ್ ರೇವಣ್ಣ ಸಂಸದನಿದ್ದಾನೆ, ಅವರು ಹೋರಾಟಗಳಿಗೆ ಆಗಮಿಸುತ್ತಾರೆ. ರಾಜ್ಯದ ಎಲ್ಲಾ ನಾಯಕರು ಮುಖ್ಯಮಂತ್ರಿ ಆಗಲು ಅಸಾಧ್ಯ. ಸಿದ್ದರಾಮಯ್ಯ ಸೇರಿದಂತೆ ಹಲವರು ಜನತಾ ಪರಿವಾರದಲ್ಲಿದ್ದರು. ಆದರೆ ಅವರೆಲ್ಲರೂ ಸಿಎಂ ಆಗಲಿಲ್ಲ ಎಂದು ಸಹ ದೇವೇಗೌಡರು ಹೇಳಿದರು.
ಸಿಎಂ ಬೊಮ್ಮಾಯಿ ಭೇಟಿ ವೇಳೆ ಯಾವುದೇ ಚರ್ಚೆ ಮಾಡಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಮತ್ತು ನಾನು ಒಟ್ಟಿಗಿದ್ದೆವು. ಜನತಾ ಪರಿವಾರದಲ್ಲಿದ್ದರಿಂದ ಭೇಟಿಗೆ ಬರುವುದಾಗಿ ಹೇಳಿದ್ದರು. ಅಂತೆಯೇ ಭೇಟಿಯಾಗಿದ್ದಾರೆ. ಆದ್ದರಿಂದ ಆಶೀರ್ವಾದ ಪಡೆಯಲು ಮನೆಗೆ ಬಂದಿದ್ದರು. ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಿ ಎಂದು ಸಿಎಂ ಹೇಳಿದ್ದೇನೆ. ಸರ್ಕಾರದ ಒಳ್ಳೆಯ ಕೆಲಸಗಳಿಗೆ ನಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿದ್ದೇನೆ ಎಂದು ಬೆಂಗಳೂರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ಇದನ್ನೂ ಓದಿ:
ದೇವೇಗೌಡರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ, ದೇವೇಗೌಡರಿಂದ ನೂತನ ಸಿಎಂಗೆ ಸನ್ಮಾನ
Mekedatu: ನೀರಿನ ವಿಷಯದಲ್ಲಿ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆಲ್ಲವೂ ಒಂದೇ: ಎಚ್ ಡಿ ದೇವೇಗೌಡ ಭರವಸೆ
(Former PM HD Deve Gowda says no idea of midterm elections to JDS in Karnataka)
Published On - 5:11 pm, Sun, 1 August 21