ದೇವೇಗೌಡರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ, ದೇವೇಗೌಡರಿಂದ ನೂತನ ಸಿಎಂಗೆ ಸನ್ಮಾನ

Karnataka Politics: ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಎಚ್.ಡಿ.ದೇವೇಗೌಡ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಗೆ ಏರಿದ ಬಳಿಕ ಮೊದಲ ಬಾರಿ ಸೌಹಾರ್ದಯುತ ಭೇಟಿ ನೀಡಿದ್ದಾರೆ.

ದೇವೇಗೌಡರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ, ದೇವೇಗೌಡರಿಂದ ನೂತನ ಸಿಎಂಗೆ ಸನ್ಮಾನ
ದೇವೇಗೌಡರ ಮನೆಗೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai)ಮಾಜಿ ಪ್ರಧಾನಿ ದೇವೇಗೌಡ (HD DeveGowda) ಮತ್ತು ಶಾಸಕ ರೇವಣ್ಣ ಸನ್ಮಾನಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಎಚ್.ಡಿ.ದೇವೇಗೌಡ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಗೆ ಏರಿದ ಬಳಿಕ ಮೊದಲ ಬಾರಿ ಸೌಹಾರ್ದಯುತ ಭೇಟಿ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಗೆ ಮಾಜಿ ಸಚಿವ ವಿ.ಸೋಮಣ್ಣ ಸಾಥ್ ನೀಡಿದ್ದರು.

ದೇವೇಗೌಡರ ಭೇಟಿಯ ನಂತರ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಿ ಎಂದು ದೇವೇಗೌಡರು ಆಶೀರ್ವದಿಸಿದ್ದಾರೆ. ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಅವರು ಸಲಹೆ ನೀಡಿದ್ದಾರೆ. ಜನತಾ ಪರಿವಾರದಲ್ಲಿದ್ದಾಗಿನ ಒಡನಾಟವನ್ನು ಭೇಟಿಯ ವೇಳೆ ಮೆಲುಕುಹಾಕಿದ್ದಾರೆ. ದೊರೆತಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ದೇವೇಗೌಡರ ಭೇಟಿಯಿಂದ ಮನಸ್ಸಿಗೆ ಸಂತಸವಾಗಿದೆ. ಇದೇ ವೇಳೆ ಚನ್ನಮ್ಮರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ. ನೆಲ, ಜಲ, ಭಾಷೆ ವಿಚಾರದಲ್ಲಿ ಯಾವತ್ತೂ ಬೆಂಬಲವಿದೆ ದೇವೇಗೌಡರು ತಿಳಿಸಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದೇ ವೇಳೆ ಪ್ರತಿಕ್ರಿಯಿಸಿದ ಮಾಜಿ ಸಚಿವ ರೇವಣ್ಣ, ದೇವೇಗೌಡರು ಮತ್ತ ಬಸವರಾಜ ಬೊಮ್ಮಾಯಿ ಹಲವಾರು ವರ್ಷ ಜೊತೆಯಲ್ಲೇ ಇದ್ದವರು. ದೇವೇಗೌಡರು ಖುಷಿ ಪಟ್ಟು ಆಶೀರ್ವಾದ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಗೆ ಭಗವಂತ ಒಳ್ಳೆಯದನ್ನು ಮಾಡಲಿ. ಕೊವಿಡ್,ಪ್ರವಾಹ ಎದುರಿಸುವ ಶಕ್ತಿ ನೀಡಲಿ. ಬೊಮ್ಮಾಯಿ ನಮ್ಮ ಆತ್ಮೀಯರು. ಹಲವಾರು ವರ್ಷದ ಗೆಳೆತನ ಇದೆ. ರಾಜ್ಯ ಸಂಕಷ್ಟದಲ್ಲಿದೆ, ಅದನ್ನು ಬಗೆಹರಿಸಬೇಕು. ಜನರನ್ನು ಉಳಿಸಿಕೊಳ್ಳೋದು ಮೊದಲ ಆದ್ಯತೆ. ಕೊರೊ‌ನಾ ಮೂರನೇ ಅಲೆಯನ್ನು ತಡೆಗಟ್ಟಲಿ. ಪ್ರವಾಹ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲಿ. ರಾಜಕಾರಣ ಬೇರೆ,ವಿಶ್ವಾಸವೇ ಬೇರೆ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ಸೇರುವ ಮುನ್ನ ಜನತಾ ಪರಿವಾರದಲ್ಲಿದ್ದರು. ಹೀಗಾಗಿ ಅವರಿಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೂ ಪೂರ್ವಕಾಲದ ಸಂಬಂಧವಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಎಚ್ ಡಿ ದೇವೇಗೌಡರ ಶಿಷ್ಯ ಎಂದು ಸಹ ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ದೇವೇಗೌಡರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೌಹಾರ್ದಯುತವಾಗಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: 

Exclusive: ದೇಶದಲ್ಲಿರುವ 12 ಬಿಜೆಪಿ ಮುಖ್ಯಮಂತ್ರಿಗಳಲ್ಲಿ ನಾಲ್ವರು ವಲಸಿಗರು; ಬಿಜೆಪಿ ಲೆಕ್ಕಾಚಾರ ಬದಲಾಯಿತೇಕೆ?

ರಾಜ್ಯದಲ್ಲಿ ಈಗಿರುವುದು ನಮ್ಮದೇ ಸರ್ಕಾರ; ಜೆಡಿಎಸ್ ವರಿಷ್ಠ ಎಚ್ ಡಿ ಕುಮಾರಸ್ವಾಮಿ ವ್ಯಾಖ್ಯಾನ

(CM Basavaraj Bommai take blessings by Former PM HD DeveGowda GGD)

Click on your DTH Provider to Add TV9 Kannada