ಬೆಂಗಳೂರಿನಲ್ಲಿ ಫಾಕ್ಸ್​​​ಕಾನ್​ ಘಟಕ; ನಾಚಿಕೆ ಬಿಟ್ಟು ಕ್ರೆಡಿಟ್ ತಗೊಳ್ತಿದ್ದೀರಿ, ಕಾಂಗ್ರೆಸ್​ ಪಕ್ಷವನ್ನು ಲೇವಡಿ ಮಾಡಿದ ಬಿಜೆಪಿ

|

Updated on: Jun 01, 2023 | 9:05 PM

ಫಾಕ್ಸ್​​ಕಾನ್ ಕರ್ನಾಟಕದಲ್ಲಿ ಘಟಕ ಆರಂಭಿಸುವ ಯೋಜನೆ ಹಾಕಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಉತ್ಪಾದನೆ ಆಧಾರಿತ ಭತ್ಯೆ ಯೋಜನೆ (PLI Scheme) ಕಾರಣ ಎಂಬುದು ನಿಮಗೆ ನೆನಪಿರಲಿ. ಈಗ ನಾಚಿಕೆ ಬಿಟ್ಟು ಕ್ರೆಡಿಟ್ ತಗೊಳ್ಳುತ್ತಿದ್ದೀರಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಬೆಂಗಳೂರಿನಲ್ಲಿ ಫಾಕ್ಸ್​​​ಕಾನ್​ ಘಟಕ; ನಾಚಿಕೆ ಬಿಟ್ಟು ಕ್ರೆಡಿಟ್ ತಗೊಳ್ತಿದ್ದೀರಿ, ಕಾಂಗ್ರೆಸ್​ ಪಕ್ಷವನ್ನು ಲೇವಡಿ ಮಾಡಿದ ಬಿಜೆಪಿ
ಬಿಜೆಪಿ
Follow us on

ಬೆಂಗಳೂರು: ಮುಂಚೂಣಿ ಐಫೋನ್ ತಯಾರಿಕಾ ಕಂಪನಿ ಫಾಕ್ಸ್​​ಕಾನ್ (Foxconn) ದೇವನಹಳ್ಳಿ ಘಟಕದಲ್ಲಿ ಶೀಘ್ರದಲ್ಲೇ ಉತ್ಪಾದನೆ ಆರಂಭಿಸುವ ಗುರಿ ಹೊಂದಿದ್ದು, ಈ ವಿಚಾರವಾಗಿ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾಡಿರುವ ಟ್ವೀಟ್​ಗೆ ಬಿಜೆಪಿ ಕುಹಕವಾಡಿದೆ. ಫಾಕ್ಸ್​​ಕಾನ್ ಕರ್ನಾಟಕದಲ್ಲಿ ಘಟಕ ಆರಂಭಿಸುವ ಯೋಜನೆ ಹಾಕಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಉತ್ಪಾದನೆ ಆಧಾರಿತ ಭತ್ಯೆ ಯೋಜನೆ (PLI Scheme) ಕಾರಣ ಎಂಬುದು ನಿಮಗೆ ನೆನಪಿರಲಿ. ಈಗ ನಾಚಿಕೆ ಬಿಟ್ಟು ಕ್ರೆಡಿಟ್ ತಗೊಳ್ಳುತ್ತಿದ್ದೀರಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಫಾಕ್ಸ್​ಕಾನ್​​ನ ಯೋಜನೆಯೊಂದಿಗೆ ಕರ್ನಾಟಕದಲ್ಲಿ ಉತ್ಪಾದನೆಗೆ ದೊಡ್ಡ ಉತ್ತೇಜನ ದೊರೆತಂತಾಗಿದೆ. ಕಂಪನಿಯು 1.7 ಶತಕೋಟಿ ಡಾಲರ್ ಹೂಡಿಕೆಯೊಂದಿಗೆ ಐಫೋನ್ ಜೋಡಣಾ ಘಟಕವನ್ನು ಆರಂಭಿಸಲಿದ್ದು, ಇದರಿಂದ 50 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. 20 ಮಿಲಿಯನ್ ಸ್ಮಾರ್ಟ್‌ಫೋನ್ ಯೂನಿಟ್‌ಗಳವರೆಗೆ ವಾರ್ಷಿಕ ಸಾಮರ್ಥ್ಯವನ್ನು ಪ್ರಸ್ತಾಪಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಕರ್ನಾಟಕದಲ್ಲಿ ಫಾಕ್ಸ್​​ಕಾನ್ ಘಟಕ ಆರಂಭಿಸುವ ಯೋಜನೆ ಹಾಕಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಉತ್ಪಾದನೆ ಆಧಾರಿತ ಭತ್ಯೆ ಯೋಜನೆ ಕಾರಣ ಎಂಬುದು ನಿಮಗೆ ನೆನಪಿರಲಿ. ಅಂದು ಆ ನಿರ್ಧಾರವನ್ನು ಸ್ವಾಗತಿಸುವ ಬದಲು ನಿಮ್ಮ ಪಕ್ಷವು ಸುಳ್ಳುಗಳನ್ನು ಹೇಳಿ, ನಿಂದನೆ ಮಾಡಿತ್ತು. ಈಗ ನೀವು ನಾಚಿಕೆ ಬಿಟ್ಟು ಬಿಜೆಪಿಯ ಪ್ರಯತ್ನಗಳ ಶ್ರೇಯಸ್ಸನ್ನು ಪಡೆದುಕೊಳ್ಳುತ್ತಿದ್ದೀರಿ. ಬಿಜೆಪಿಯ ಕಠಿಣ ಪರಿಶ್ರಮದ ಕ್ರೆಡಿಟ್ ತೆಗೆದುಕೊಳ್ಳುವುದೇ ಕಾಂಗ್ರೆಸ್​​ನ ಲಕ್ಷಣ ಎಂದು ಉಲ್ಲೇಖಿಸಿದೆ.


ಇದನ್ನೂ ಓದಿ: ಜುಲೈ 1ರ ವೇಳೆಗೆ ಫಾಕ್ಸ್ ಕಾನ್ ಕಂಪನಿಗೆ ಪೂರ್ತಿ ಭೂಮಿ ಹಸ್ತಾಂತರ: ಸಚಿವ ಎಂಬಿ ಪಾಟೀಲ್

2024ರ ಏಪ್ರಿಲ್ 1ರ ವೇಳೆಗೆ ದೇವನಹಳ್ಳಿ ಘಟಕದಲ್ಲಿ ಫಾಕ್ಸ್​ಕಾನ್ ಉತ್ಪಾದನೆ ಆರಂಭಿಸುವ ಗುರಿ ಹೊಂದಿದ್ದು, ಇದಕ್ಕೆ ಪೂರಕವಾಗಿ ಜುಲೈ 1ರ ಹೊತ್ತಿಗೆ ಪೂರ್ತಿಯಾಗಿ ಭೂಮಿ ಹಸ್ತಾಂತರಿಸುವುದಾಗಿ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಗುರುವಾರ ಹೇಳಿದ್ದಾರೆ. ಇದರ ಬೆನ್ನಲ್ಲೇ, ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದರು.

ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ