ಹೈದರಾಬಾದ್: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ (Gang rape) ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರ ಶೇಖರ್ ರಾವ್ (K Chandrashekar Rao) ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್(BJP chief Bandi Sanjay Kumar), ಉತ್ತರ ಪ್ರದೇಶದಿಂದ ಬುಲ್ಡೋಜರ್ ಬರಲಿದೆ. ಅದು ಎಲ್ಲವನ್ನೂ ಸರಿ ಮಾಡುತ್ತದೆ ಎಂದು ಹೇಳಿದ್ದಾರೆ. ನಿಜವಾದ ಅಪರಾಧಿಗಳನ್ನು ಟಿಆರ್ಎಸ್ ಕಾಪಾಡುತ್ತಿದೆ ಎಂದು ಆರೋಪಿಸಿದ ಬಿಜೆಪಿ ಮುಖ್ಯಸ್ಥ ಕೆಸಿಆರ್ ಮತ್ತು ಅವರ ಮಗ ಕೆಟಿಆರ್ ಇಂಥಾ ಘಟನೆಗಳು ಎಲ್ಲಿಯಾದರೂ ಸಂಭವಿಸಿದರೆ ಡ್ರೋನ್ ಕ್ಯಾಮೆರಾಗಳು ಎಚ್ಚರಿಕೆ ನೀಡುತ್ತವೆ ಎಂದು ಹೇಳಿದ್ದರು. ಅದು ಈಗ ವಿಫಲವಾಯಿತೆ? ಉತ್ತರ ಪ್ರದೇಶದಿಂದ ಬುಲ್ಡೋಜರ್ ಬರಲಿದೆ. ಅದು ಇಲ್ಲಿ ಎಲ್ಲವನ್ನೂ ಸರಿ ಮಾಡುತ್ತದೆ ಎಂದಿದ್ದಾರೆ. ಕೆಸಿಆರ್ ಅವರೇ ರಾಜೀನಾಮೆ ನೀಡಲು ಸಿದ್ಧರಾಗಿ. ಬಿಜೆಪಿ ಸರ್ಕಾರ ತೆಲಂಗಾಣಕ್ಕೆ ₹ 2.52 ಕೋಟಿ ನೀಡಿದೆ ಎಂಬುದನ್ನು ಸಾಕ್ಷ್ಯ ಸಮೇತ ಸಾಬೀತು ಮಾಡುತ್ತೇನೆ. ಒಂದು ಕುಟುಂಬದಿಂದಾಗಿ ಶ್ರೀಲಂಕಾ ಸಾಲದಲ್ಲಿ ಮುಳುಗಿದಂತೆ ಕಲ್ವಕುಂಟ್ಲ ಕುಟುಂಬದಿಂದ ಇಡೀ ತೆಲಂಗಾಣ ಸಾಲದಲ್ಲಿ ಮುಳುಗಲಿದೆ. ತೆಲಂಗಾಣ ಸರ್ಕಾರಕ್ಕೆ ಹೊಸದಾಗಿ ಪಿಂಚಣಿ ಅಥವಾ ಸಂಬಳಕೊಡಲು ಸಾಧ್ಯವಾಗುತ್ತಿಲ್ಲ ಎಂದು ಸಂಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಜುಬಿಲಿ ಹಿಲ್ಸ್ನಲ್ಲಿ ಅಪ್ರಾಪ್ತೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ತೆಲಂಗಾಣದಲ್ಲಿ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಶಾಸಕರ ಪುತ್ರನೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ದ್ದು, ಆತನನ್ನು ಟಿಆರ್ ಎಸ್ ಸರ್ಕಾರ ಕಾಪಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
Minor girl is raped in Hyd, but no action is taken for 5 days. Conspiracy is going on to shield real culprits. KCR, KTR said that drone cameras will send alerts wherever any incident takes place, how come they failed now? Bulldozers will come from Uttar Pradesh to set things here
— Bandi Sanjay Kumar (@bandisanjay_bjp) June 4, 2022
ಭಾನುವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಬಂಧನ ನಡೆದಿದೆ. ಈ ಪ್ರಕರಣದಲ್ಲಿ ಐವರನ್ನು ಆರೋಪಿಗಳೆಂದು ಹೆಸರಿಸಲಾಯಿತು. ಬಂಧಿತರಲ್ಲಿ ಮೂವರು ಅಪ್ರಾಪ್ತರು ಮತ್ತು 18 ವರ್ಷದ ಯುವಕ ಸೇರಿದ್ದಾರೆ. ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಂದ ಎರಡು ದಿನಗಳಲ್ಲಿ ವಿವರವಾದ ವರದಿಯನ್ನು ಕೇಳಿದ್ದಾರೆ.
ತೆಲಂಗಾಣ ಬಿಜೆಪಿ ಶಾಸಕ ರಘುನಂದನ್ ರಾವ್ ಅವರು ಎಐಎಂಐಎಂ ಮುಖಂಡರೊಬ್ಬರ ಪುತ್ರನ ಭಾಗಿಯಾಗಿರುವ ವಿಡಿಯೊ ಪುರಾವೆಗಳನ್ನು ಹಂಚಿಕೊಂಡಿದ್ದು, ಸಂತ್ರಸ್ತೆಯನ್ನು ತೋರಿಸಿದ್ದಾರೆ ಎಂದು ಕಾಂಗ್ರೆಸ್ ರಾವ್ ವಿರುದ್ಧ ಟೀಕಾಪ್ರಹಾರ ಮಾಡಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 4:43 pm, Sun, 5 June 22