AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ ಕೃಷ್ಣಮಠ ಭೇಟಿಗೂ ಮುನ್ನ ಮಾಂಸಾಹಾರ ಸೇವಿಸಿದ್ರಾ ಗೋವಾ ಸಿಎಂ?

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಕೃಷ್ಣಮಠ ಭೇಟಿಗೂ ಮುನ್ನ ಮಾಂಸಾಹಾರ ಸೇವಿಸಿದ್ದರು ಎನ್ನುವ ಆರೋಪ ಕೇಳಿಬಂದಿದೆ,

ಉಡುಪಿ ಕೃಷ್ಣಮಠ ಭೇಟಿಗೂ ಮುನ್ನ ಮಾಂಸಾಹಾರ ಸೇವಿಸಿದ್ರಾ ಗೋವಾ ಸಿಎಂ?
Goa CM Pramod Sawant
TV9 Web
| Edited By: |

Updated on: Oct 10, 2022 | 5:42 PM

Share

ಉಡುಪಿ: ಮೊನ್ನೇ ಅಷ್ಟೇ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಡುಪಿಗೆ ಭೇಟಿ ನೀಡಿ ಶ್ರೀಕೃಷ್ಣ ಆಶೀರ್ವಾದ ಪಡೆದುಕೊಂಡಿದ್ದರು. ಈ ವೇಳೆ ಪ್ರಮೋದ್ ಸಾವಂತ್ ಅವರಿಗೆ ಪರ್ಯಾಯ ಕೃಷ್ಣಾಪುರ ಮಠದಿಂದ ಗೌರವ ಸಮರ್ಪಣೆ ಮಾಡಲಾಗಿತ್ತು. ಆದ್ರೆ, ಪ್ರಮೋದ್ ಸಾವಂತ್ ಅವರು ಕೃಷ್ಣಮಠ ಭೇಟಿಗೂ ಮುನ್ನ ಮಾಂಸಾಹಾರ ಸೇವಿಸಿದ್ದರು ಎನ್ನುವ ಆರೋಪ ಕೇಳಿಬಂದಿದೆ,

ಈ ಬಗ್ಗೆ ಉಡುಪಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಗಂಭೀರ ಆರೋಪ ಮಾಡಿದ್ದು, ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಂಸಹಾರ ಸ್ವೀಕರಿಸಿ ದೇವಸ್ಥಾನಕ್ಕೆ ಹೋಗಿದ್ದರು. ಬಿಜೆಪಿ ಈ ವಿಚಾರದಲ್ಲಿ ರಾಜ್ಯಾದ್ಯಂತ ರಾದ್ಧಾಂತ ಮಾಡಿತ್ತು . ನಿಮ್ಮ ನಾಯಕರು ಮಾಂಸಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ಹೋಗಬಹುದೇ? ಈ ಬಗ್ಗೆ ರಾಜ್ಯ ಬಿಜೆಪಿ ಜಿಲ್ಲೆ ಬಿಜೆಪಿಯ ನಾಯಕರುಗಳು ಸ್ಪಷ್ಟನೆ ಕೊಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ ಭಾರತ ಜೋಡೋ ಪಾದಯಾತ್ರೆಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ವ್ಯಂಗ್ಯ

ನಿಮಗೊಂದು ನ್ಯಾಯ ನಮಗೊಂದು ನ್ಯಾಯವೇ? ನಿಮಗೊಂದು ನಿಯಮ ನಮಗೊಂದು ನಿಯಮ ಇದು ಸರಿಯಾ? ಊರಿಗೆ ಬುದ್ಧಿ ಹೇಳುವ ಮೊದಲು ನೀವು ಅದನ್ನು ಪಾಲಿಸಿ. ಅನಾಚಾರ ಅತ್ಯಾಚಾರ ಭ್ರಷ್ಟಾಚಾರದಲ್ಲಿ ಮುಳುಗಿದವರು ಕಾಂಗ್ರೆಸ್ಸಿಗೆ ಬುದ್ಧಿ ಹೇಳುವ ಅಗತ್ಯ ಇಲ್ಲ, ಬೇರೆಯವರಿಗೆ ಕೈ ತೋರಿಸುವ ಮೊದಲು ನೀವು ಸರಿ ಮಾಡಿಕೊಳ್ಳಿ. ಉಡುಪಿ ಕೃಷ್ಣ ಮಠಕ್ಕೆ ಅಪಚಾರವಾಗಿದೆ, ಯಾವುದೇ ಬಿಜೆಪಿ ನಾಯಕರು ಇದಕ್ಕೆ ಪ್ರತಿಕ್ರಿಯೆ ನೀಡುತ್ತಿಲ್ಲ ತುಟಿಪಿಟಿಕ್ ಎನ್ನದೆ ಕುಳಿತಿದ್ದಾರೆ ಎಂದು ಕಿಡಿಕಾರಿದರು.

ಉಡುಪಿಯ ಶಾಸಕರು ಮುಖ್ಯಮಂತ್ರಿಗಳ ಜೊತೆ ಇದ್ದರು. ಬ್ರಾಹ್ಮಣ ಜನಾಂಗಕ್ಕೆ ಸೇರಿದವರಿಗೆ ಇದು ಸರಿ ಕಾಣುತ್ತದಾ? ಮಾಂಸಹಾರ ತಿಂದು ಮಠಕ್ಕೆ ಹೋಗಬಹುದೇ. ಉಡುಪಿ ಶಾಕ ರಘುಪತಿ ಭಟ್ ಇದಕ್ಕೆ ಉತ್ತರ ಕೊಡಬೇಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದರು.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಡುಪಿಗೆ ಆಗಮಿಸಿದ ಸಂದರ್ಭದಲ್ಲಿ ಸರ್ಕ್ಯೂಟ್ ಹೌಸ್‌ನಲ್ಲಿ ತಂಗಿ ಅಲ್ಲಿ ಮಾಂಸಹಾರ ಸೇವಿಸಿ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಅವರೊಂದಿಗೆ ಬಿಜೆಪಿಯ ಶಾಸಕರಾದ ರಘುಪತಿ ಭಟ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಜತೆಗಿದ್ದರು. ಸಿದ್ದರಾಮಯ್ಯ ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುತ್ತಾರೆಂದು ಗುಲ್ಲೆಬ್ಬಿಸುವ ಇವರಿಗೆ ಗೋವಾದ ಮುಖ್ಯಮಂತ್ರಿ ಮಾಂಸಹಾರ ಸೇವಿಸಿ ಕೃಷ್ಣ ಮಠಕ್ಕೆ ಭೇಟಿ ನೀಡಿರುವುದು ಕಾಣುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.