ಕಾಂಗ್ರೆಸ್ ಭಾರತ ಜೋಡೋ ಪಾದಯಾತ್ರೆಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ವ್ಯಂಗ್ಯ
ಕಾಂಗ್ರೆಸ್ ಭಾರತ ಜೋಡೋ ಪಾದಯಾತ್ರೆಯನ್ನು 1947ರಲ್ಲಿ ಮಾಡಿದ್ದರೇ ಪೋರ್ಚಗೀಸರಿಂದ ಗೋವಾ ವಿಮೋಚನೆ ಮಾಡುವುದು ತಡವಾಗುತ್ತಿರಲಿಲ್ಲ ಎಂದು ಉಡುಪಿಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಉಡುಪಿ: ಕಾಂಗ್ರೆಸ್ (Congress) ಭಾರತ ಜೋಡೋ ಪಾದಯಾತ್ರೆಯನ್ನು (Bharat Jodo Yatra) 1947ರಲ್ಲಿ ಮಾಡಿದ್ದರೇ ಪೋರ್ಚಗೀಸರಿಂದ ಗೋವಾ ವಿಮೋಚನೆ ಮಾಡುವುದು ತಡವಾಗುತ್ತಿರಲಿಲ್ಲ ಎಂದು ಉಡುಪಿಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pramod Sawant) ಹೇಳಿದ್ದಾರೆ. ಪ್ರಮೋದ್ ಸಾವಂತ್ ಇಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಪ್ರಮೋದ್ ಸಾವಂತ್ ಅವರಿಗೆ ಪರ್ಯಾಯ ಕೃಷ್ಣಾಪುರ ಮಠದಿಂದ ಗೌರವ ಸಮರ್ಪಣೆ ಮಾಡಲಾಗಿದೆ.
1947ರಲ್ಲಿ ಪಾದಯಾತ್ರೆ ಮಾಡಿದ್ದರೇ, 1950 ಕ್ಕಾದರೂ ನಮಗೆ ವಿಮೋಚನೆ ಸಿಗುತ್ತಿತ್ತು. 1955ರಲ್ಲಿ ಪೋರ್ಚುಗೀಸರ ವಿರುದ್ಧ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಯುದ್ಧ ಮಾಡಬೇಕಾಯಿತು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾದರು. ಅಂದು ಭಾರತ ಜೋಡೋ ಮಾಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಈಶಾನ್ಯ ಭಾರತ ಸಂಪೂರ್ಣ ನಮ್ಮ ಅವಿಭಾಜ್ಯ ಅಂಗವಾಗಿ ಇರುತ್ತಿತ್ತು. ಪೂರ್ಣ ಕಾಶ್ಮೀರ ಒಳಗೊಂಡ ಅಖಂಡ ಭಾರತ ಇರುತ್ತಿತ್ತು. ಪ್ರಧಾನಮಂತ್ರಿಗಳ ದೂರದರ್ಶಿತ್ವ ಕಂಡು ಅನ್ಯ ಪಕ್ಷಗಳ ನಾಯಕರು ಬಿಜೆಪಿಗೆ ಬರುತ್ತಿದ್ದಾರೆ. ಅಖಂಡ ಭಾರತ, ನವ ಭಾರತದ ಕನಸು ಕಾಣುವ ಯುವಕರಿಗೆ ಪ್ರಧಾನಿ ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು.
ಯುವಕರು ಕ್ಲೀನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಕನಸಿಗೆ ಕೈಜೋಡಿಸುತ್ತಿದ್ದಾರೆ. ನವ ಭಾರತದ ನಿರ್ಮಾಣದ ಕನಸಿನಿಂದಲೇ ಗೋವಾದಲ್ಲಿ ಅನ್ಯಪಕ್ಷೀಯರು ಬಿಜೆಪಿಗೆ ಬಂದಿದ್ದಾರೆ. ಅಲ್ಲಿ ನಡೆದ ಮ್ಯಾಜಿಕ್ ದೇಶದ ಬೇರೆಡೆಯೂ ಆಗಬಹುದು ಎಂದು ಮಾತನಾಡಿದರು.
ನಮಸ್ತೆ ಆರತಿ ಎಂದು ಮಾಡಿದರಾಯತು: ಶಾಸಕ ರಘುಪತಿ ಭಟ್
ಸಲಾಂ ಆರತಿ ಅನ್ನೋದರ ಬದಲು ನಮಸ್ತೆ ಆರತಿ ಎಂದು ಮಾಡಿದರಾಯತು. ಪೂಜೆಯಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಸಲಾಂ ಆರತಿ ಎಂದು ಹೇಳುವ ಅವಶ್ಯಕತೆ ಇಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಟಿಪ್ಪು ಎಕ್ಸ್ಪ್ರೆಸ್ ರೈಲಿಗೆ ಒಡೆಯರ್ ಹೆಸರಿಟ್ಟು ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ರಾಜ್ಯಕ್ಕೆ ಒಡೆಯರ್ ಕೊಡುಗೆ ತುಂಬಾ ಇದೆ. ಕೇಂದ್ರ ಸರಕಾರ ಬಹಳ ಒಳ್ಳೆಯ ಕೆಲಸ ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ