ರಾಜ್ಯದಲ್ಲಿ ಗೋಧ್ರಾ ರೀತಿ ಘಟನೆ ಸಂಭವಿಸಬಹುದು: ಹರಿಪ್ರಸಾದ್ ಹೇಳಿಕೆಗೆ ಏನಂದ್ರೂ ಸಿಎಂ?
ನಗರದ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅನುಮಾನ ಊಹೆಗಳಿಗೆ ಉತ್ತರ ಕೊಡಲ್ಲ ಎಂದು ಹೇಳಿದ್ದಾರೆ. ಆ ಮೂಲಕ ‘ಕರ್ನಾಟಕದಲ್ಲಿ ಮತ್ತೊಂದು ಗೋಧ್ರಾ ಹತ್ಯಾಕಾಂಡ ಆಗದಂತೆ ನೋಡಿಕೊಳ್ಳಿ’ ಎಂಬ ಕಾಂಗ್ರೆಸ್ ಮುಖಂಡ, ಎಂಎಲ್ಸಿ B.K.ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.
ಬೆಂಗಳೂರು, ಜನವರಿ 03: ‘ಕರ್ನಾಟಕದಲ್ಲಿ ಮತ್ತೊಂದು ಗೋಧ್ರಾ ಹತ್ಯಾಕಾಂಡ ಆಗದಂತೆ ನೋಡಿಕೊಳ್ಳಿ’ ಎಂಬ ಕಾಂಗ್ರೆಸ್ ಮುಖಂಡ, ಎಂಎಲ್ಸಿ B.K.ಹರಿಪ್ರಸಾದ್ (B. K. Hariprasad) ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ನಗರದ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನುಮಾನ ಊಹೆಗಳಿಗೆ ಉತ್ತರ ಕೊಡಲ್ಲ ಎಂದು ಹೇಳಿದ್ದಾರೆ.
ಮೋದಿ, ಅಮಿತ್ ಶಾ ಸಮಯ ಸಾಧಕರು: ಮಾಜಿ ಸಂಸದ ಉಗ್ರಪ್ಪ
ಈ ವಿಚಾರವಾಗಿ ಮಾಜಿ ಸಂಸದ ಉಗ್ರಪ್ಪ ಪ್ರತಿಕ್ರಿಯೆ ನೀಡಿದ್ದು, ಬಿ.ಕೆ.ಹರಿಪ್ರಸಾದ್ ಹಿರಿಯರು ಅವರಿಗೆ ಮಾಹಿತಿ ಇರಬಹುದು. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಪ್ರಧಾನಮಂತ್ರಿ, ಕೇಂದ್ರ ಗೃಹಸಚಿವರು ಏನು ಬೇಕಾದರೂ ಮಾಡಬಹುದು. ಯಾಕೆಂದರೆ ಮೋದಿ, ಅಮಿತ್ ಶಾ ವಿಚ್ಛಿದ್ರಕಾರಿ ಮನಸ್ಥಿತಿಯವರು ಸಮಯ ಸಾಧಕರು, ಇದಕ್ಕೆ ಉದಾಹರಣೆ ಹುಬ್ಬಳ್ಳಿ ಪ್ರಕರಣ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: 22 ರಂದು ಗೋಧ್ರಾ ರೀತಿಯ ಅಪಾಯ ಸಂಭವಿಸುವ ಮಾಹಿತಿ ಇದೆ, ಅಯೋಧ್ಯ ಯಾತ್ರಿಗಳಿಗೆ ಸರ್ಕಾರ ರಕ್ಷಣೆ ನೀಡಲಿ: ಬಿಕೆ ಹರಿಪ್ರಸಾದ್
ಬಿಜೆಪಿಯವರು ಇದ್ದಕ್ಕಿದ್ದ ಹಾಗೇ ರಾಮಮಯ ಮಾಡಲು ಹೊರಟಿದ್ದಾರೆ. ರಾಮಾಯಣ ಆದರ್ಶದ ರೀತಿ ಇವರ ವರ್ತನೆ ಇದೆಯಾ ಎಂದು ಪ್ರಶ್ನಿಸಿದರು. 300 ಕೋಟಿ ರೂ. ಸರಯೂ ನದಿಯ ಕ್ಲೀನಿಂಗ್ಗೆ ಕೊಟ್ಟಿದ್ದು ಕಾಂಗ್ರೆಸ್. 24 ಸಾವಿರ ರಾಮಾಯಣದ ಶ್ಲೋಕಗಳಿವೆ. ರಾವಣನಿಗೆ ದೇವತೆಗಳಿಂದಾಗಲಿ ಸಾವಿಲ್ಲ ಎಂದು ಶ್ಲೋಕದಲ್ಲಿಯೇ ಇದೆ.
ಎಲ್ಲಿಯೂ ಸಹ ರಾಮ ದೇವರಾಗಿ ಕಾಣಿಸಿಕೊಂಡಿಲ್ಲ. ರಾಮ ದೇವರೇ ಅಲ್ಲದ ಮನುಷ್ಯ ಸಹಜ ಆದರ್ಶಪುರುಷ. ರಾಮ ಎಲ್ಲಿಯೂ ಸಹ ದೇವರ ಸ್ಥಾನ ಬಯಸಿದವರಲ್ಲ. ಕೇವಲ ರಾಜಕೀಯ ಕಾರಣಕ್ಕೋಸ್ಕರ ಮಾತ್ರ ಬಳಸಲಾಗುತ್ತಿದೆ. ರಾಮ ಬಯಸಿದ್ದು, ದೇವರ ಸ್ಥಾನ ಅಲ್ಲ, ರಾಮ ಬಯಸಿದ್ದು ಕೇವಲ ಆದರ್ಶಗಳನ್ನು ಮಾತ್ರ ಎಂದಿದ್ದಾರೆ.
ಇದನ್ನೂ ಓದಿ: ರಾವಣ ಮಾತ್ರ ಅಲ್ಲ, ಸಿದ್ದರಾಮಯ್ಯ ಕೂಡ ರಾಮ ವಿರೋಧಿ -ಶಾಸಕ ಸುನೀಲ್ ಕುಮಾರ್
ಬಿಜೆಪಿ ನಾಯಕರು ಅವರ ಶ್ರೀಮತಿಯವರ ರಕ್ಷಣೆ ಮಾಡಿದ್ದಾರಾ? ರಾಮನ ಆದರ್ಶಗಳನ್ನು ಬಿಜೆಪಿಯವರು ಪಾಲಿಸಿದ್ದಾರಾ? ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಇದ್ದಾವೆ. ಕರಸೇವಕರು ದೂಂಡಾವರ್ತಿ ಮಾಡುವವರಾ? ಕರಸೇವಕರು ಅಕ್ರಮ ಸಾರಾಯಿ ಮಾರಾಟ, ಅಕ್ರಮ ಜೂಜು ಮಟಕಾ ಮಾಡುವವರಾ? ಬಿಜೆಪಿಯವರು ದಿವಾಳಿ ಆಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಆ ರೀತಿ ಏನು ಆಗುವುದಿಲ್ಲ: ಸಚಿವ ಶಿವಾನಂದ ಪಾಟೀಲ್
ಕಲಬುರಗಿಯಲ್ಲಿ ಸಚಿವ ಶಿವಾನಂದ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಆ ರೀತಿ ಏನು ಆಗುವುದಿಲ್ಲ. ಯಾರು ಭಕ್ತಿಯಿದೆ ಅವರು ಹೋಗುತ್ತಾರೆ. ನೀವು ತಕ್ಷಣದ ಪ್ರತಿಕ್ರಿಯೆ ಕೇಳಿರುತ್ತಿರಿ. ನಾವೇನೋ ಹೇಳುತ್ತೇವೆ ಅದೇನೋ ಆಗುತ್ತೆ. ಅಲ್ಲಿಗೆ ಹೋಗುವಂತವರಿಗೆ ಸರ್ಕಾರ ರಕ್ಷಣೆ ನೀಡಬೆಕು. ರಾಜಕೀಯ ಕಾರ್ಯಕ್ರಮದ ರೀತಿ ಆಗಬಾರದು. ಪಕ್ಷ ಪಾರ್ಟಿ ಅಂತ ಅಲ್ಲರ ಎಲ್ಲರೂ ಭಕ್ತಿಯಿಂದ ಹೋಗುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.