‘ತಂದೆಗೆ ನೀಡಿದ್ದ ಸರ್ಕಾರಿ ಬಂಗಲೆ ಖಾಲಿ ಮಾಡಿ’; ಸಂಸದ ಚಿರಾಗ್ ಪಾಸ್ವಾನ್​ಗೆ ನೋಟಿಸ್ ಜಾರಿ

| Updated By: ಸುಷ್ಮಾ ಚಕ್ರೆ

Updated on: Aug 10, 2021 | 12:55 PM

Chirag Paswan Bungalow | ರಾಮ್ ವಿಲಾಸ್ ಪಾಸ್ವಾನ್ ಕೇಂದ್ರ ಸಚಿವರಾಗಿದ್ದಾಗ ಅವರು ನೀಡಿದ್ದ ಬಂಗಲೆಯನ್ನು ಅವರ ಕುಟುಂಬಸ್ಥರು ಇನ್ನೂ ಖಾಲಿ ಮಾಡಿಲ್ಲ. ಹೀಗಾಗಿ ತುರ್ತಾಗಿ ಆ ಬಂಗಲೆಯನ್ನು ಖಾಲಿ ಮಾಡುವಂತೆ ಜುಲೈ 14ರಂದು ಚಿರಾಗ್ ಪಾಸ್ವಾನ್​ಗೆ ನೋಟಿಸ್ ನೀಡಲಾಗಿದೆ.

ತಂದೆಗೆ ನೀಡಿದ್ದ ಸರ್ಕಾರಿ ಬಂಗಲೆ ಖಾಲಿ ಮಾಡಿ; ಸಂಸದ ಚಿರಾಗ್ ಪಾಸ್ವಾನ್​ಗೆ ನೋಟಿಸ್ ಜಾರಿ
ರಾಮ್ ವಿಲಾಸ್ ಪಾಸ್ವಾನ್- ಚಿರಾಗ್ ಪಾಸ್ವಾನ್
Follow us on

ನವದೆಹಲಿ: ಕೇಂದ್ರದ ಮಾಜಿ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಸರ್ಕಾರದಿಂದ ನೀಡಲಾಗಿದ್ದ ಬಂಗಲೆಯಲ್ಲೇ ಅವರ ಕುಟುಂಬಸ್ಥರು ಇನ್ನೂ ವಾಸವಾಗಿದ್ದಾರೆ. ಹೀಗಾಗಿ, ದೆಹಲಿಯಲ್ಲಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಮಗ ಸಂಸದ ಚಿರಾಗ್ ಪಾಸ್ವಾನ್​ಗೆ ಸರ್ಕಾರ ಆದೇಶ ನೀಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯ ಲುಟ್ಯೇನ್​ನಲ್ಲಿರುವ ಬಂಗಲೆ ಸರ್ಕಾರಕ್ಕೆ ಸೇರಿದ್ದಾಗಿದೆ. ಈ ಬಂಗಲೆಯನ್ನು ಕೇಂದ್ರ ಸಚಿವರಿಗೆ, ಸಂಸದರಿಗೆ, ಸರ್ಕಾರದ ಹಿರಿಯ ಅಧಿಕಾರಿಗಳಿಗೆ, ನ್ಯಾಯಮೂರ್ತಿಗಳಿಗೆ, ಸೇನಾಪಡೆಗಳ ಅಧಿಕಾರಿಗಳಿಗೆ ನೀಡಲಾಗುತ್ತದೆ. ಆದರೆ, ರಾಮ್ ವಿಲಾಸ್ ಪಾಸ್ವಾನ್ ಕೇಂದ್ರ ಸಚಿವರಾಗಿದ್ದಾಗ ಅವರು ನೀಡಿದ್ದ ಬಂಗಲೆಯನ್ನು ಅವರ ಕುಟುಂಬಸ್ಥರು ಇನ್ನೂ ಖಾಲಿ ಮಾಡಿಲ್ಲ. ಹೀಗಾಗಿ ತುರ್ತಾಗಿ ಆ ಬಂಗಲೆಯನ್ನು ಖಾಲಿ ಮಾಡುವಂತೆ ಜುಲೈ 14ರಂದು ಚಿರಾಗ್ ಪಾಸ್ವಾನ್​ಗೆ ನೋಟಿಸ್ ನೀಡಲಾಗಿದೆ. ಇದಕ್ಕೂ ಮೊದಲು ಕೂಡ 2 ಬಾರಿ ನೋಟಿಸ್ ನೀಡಲಾಗಿದ್ದು, ಆದರೂ ಚಿರಾಗ್ ಪಾಸ್ವಾನ್ ಕುಟುಂಬಸ್ಥರು ಆ ಬಂಗಲೆಯನ್ನು ಖಾಲಿ ಮಾಡಿಲ್ಲ.

ಕಳೆದ ತಿಂಗಳ ಅಂತ್ಯದಲ್ಲಿ ಕೇಂದ್ರ ಸಚಿವ ಸಂಪುಟವನ್ನು ಪುನಾರಚನೆ ಮಾಡಿರುವುದರಿಂದ ಹೊಸದಾಗಿ ನೇಮಕಗೊಂಡಿರುವ ಕೇಂದ್ರ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ನೀಡಲು ಆ ಬಂಗಲೆಯ ಅಗತ್ಯವಿದೆ ಎಂದು ಸರ್ಕಾರ ಸೂಚಿಸಿದೆ ಎನ್ನಲಾಗಿದೆ. ಹೊಸ ಕೇಂದ್ರ ಸಚಿವರಿಗೆ ಸರ್ಕಾರಿ ಬಂಗಲೆ ನೀಡಬೇಕಾದ ಅನಿವಾರ್ಯತೆ ಇರುವುದರಿಂದ ಅವರಿಗೆ ಸೂಕ್ತವಾದ ಸ್ಥಳದಲ್ಲಿ ಬಂಗಲೆಯನ್ನು ಹುಡುಕುವುದು ಸರ್ಕಾರದ ಅಧಿಕಾರಿಗಳಿಗೆ ಸವಾಲಾಗಿದೆ. ಈಗಾಗಲೇ ವಿಐಪಿ ಏರಿಯಾದಲ್ಲಿರುವ ಏರಿಯಾದಲ್ಲಿರುವ ಸರ್ಕಾರಿ ಬಂಗಲೆಗಳನ್ನು ಹಿಂದಿನವರು ಖಾಲಿ ಮಾಡದ ಕಾರಣ ಅವರನ್ನು ಖಾಲಿ ಮಾಡಿಸುವುದೇ ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದೆ ಎನ್ನಲಾಗಿದೆ.

ದಶಕಗಳಿಂದ ಚಿರಾಗ್ ಪಾಸ್ವಾನ್ ಕುಟುಂಬ ದೆಹಲಿಯ ಆ ಸರ್ಕಾರಿ ಬಂಗಲೆಯಲ್ಲಿಯೇ ವಾಸವಾಗಿದ್ದು, ಅವರ ಸಂಬಂಧಿಯಾದ ನೂತನ ಕೇಂದ್ರ ಸಚಿವ ಪಶುಪತಿ ಪರಾಸ್ ಅವರಿಗೆ ಆ ಬಂಗಲೆಯನ್ನು ನೀಡುವುದಾಗಿ ಸರ್ಕಾರ ತಿಳಿಸಿತ್ತು. ಆದರೆ ಆ ಆಫರ್​ಗೂ ಚಿರಾಗ್ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Karnataka Cabinet: ಹಂಚಿಕೆಯಾದ ಖಾತೆಗಳ ಬಗ್ಗೆ ನೂತನ ಸಚಿವರು ಹೇಳಿದ್ದೇನು?

Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಖಾತೆ ತಾತ್ಕಾಲಿಕವಾಗಿ ಸ್ಥಗಿತ

(Government Orders MP Chirag Paswan to Vacate Bungalow in Delhi which Allotted to His Father)