Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಖಾತೆ ತಾತ್ಕಾಲಿಕವಾಗಿ ಸ್ಥಗಿತ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಟ್ವಿಟರ್ ಖಾತೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಮತ್ತು ಅದನ್ನು ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿಕೆ ನೀಡಿದೆ.

Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಖಾತೆ ತಾತ್ಕಾಲಿಕವಾಗಿ ಸ್ಥಗಿತ
ರಾಹುಲ್​ ಗಾಂಧಿ
Follow us
TV9 Web
| Updated By: ganapathi bhat

Updated on:Aug 07, 2021 | 10:29 PM

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಟ್ವಿಟರ್ ಖಾತೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಮತ್ತು ಅದನ್ನು ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿಕೆ ನೀಡಿದೆ. ಸಂಸದನೂ ಆಗಿರುವ ರಾಹುಲ್ ಗಾಂಧಿ ಟ್ವಿಟರ್ ಪೋಸ್ಟ್ ಒಂದರಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಸಂಬಂಧಿಕರ ಫೋಟೊ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟರ್ ಆ ಪೋಸ್ಟ್​ನ್ನು ತೆಗೆದುಹಾಕಿತ್ತು.

ಟ್ವಿಟರ್ ಖಾತೆ ಸಸ್ಪೆಂಡ್ ಆದರೂ ರಾಹುಲ್ ಗಾಂಧಿ ಮಾಡಿರುವ ಹಳೆಯ ಟ್ವೀಟ್ ಅಥವಾ ಸಂಪೂರ್ಣ ಖಾತೆಯನ್ನು ಇತರರು ನೋಡಬಹುದಾಗಿದೆ. ಟ್ವಿಟರ್ ಖಾತೆ ಸಸ್ಪೆಂಡ್ ಎಂದರೆ, ಅದು ಆ ವ್ಯಕ್ತಿಗೆ ಲಭ್ಯವಿರುವುದಿಲ್ಲ. ಮತ್ತು ಅಕೌಂಟ್ ಅಕ್ಸೆಸ್ ಮಾಡಲು ಹೊರಟರೆ, ಖಾತೆ ಸಸ್ಪೆಂಡ್ ಆಗಿದೆ ಎಂಬ ಸಂದೇಶ ಬರುತ್ತದೆ.

ರಾಹುಲ್ ಗಾಂಧಿ ಟ್ವಿಟರ್ ಖಾತೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಅದನ್ನು ಸರಿಪಡಿಸುವ ಕೆಲಸ ಆಗುತ್ತಿದೆ ಎಂದು ಕಾಂಗ್ರೆಸ್ ಅಧಿಕೃತ ಖಾತೆಯ ಮೂಲಕ ಟ್ವೀಟ್ ಮಾಡಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಅಲ್ಲಿಯವರೆಗೆ ರಾಹುಲ್ ಗಾಂಧಿ ಬೇರೆ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ಜನರ ಸಂಪರ್ಕದಲ್ಲಿ ಇರುತ್ತಾರೆ ಎಂದೂ ಕಾಂಗ್ರೆಸ್ ಟ್ವೀಟ್​ನಲ್ಲಿ ಹೇಳಲಾಗಿದೆ.

ವಾರದ ಮೊದಲು ರಾಹುಲ್ ಗಾಂಧಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಬಾಲಕಿಯ ಸಂಬಂಧಿಕರನ್ನು, ಕುಟುಂಬದವರನ್ನು ಭೇಟಿಯಾಗಿದ್ದರು. ಅವರ ಜೊತೆಗೆ ತೆಗೆಸಿಕೊಂಡಿದ್ದ ಫೋಟೊವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಬಳಿಕ, ಆ ಪೋಸ್ಟ್ ಟ್ವಿಟರ್​​ನ ನೀತಿ- ನಿಯಮಗಳನ್ನು ಉಲ್ಲಂಘಿಸಿದೆ ಎಂದು ತಿಳಿದುಬಂದಿತ್ತು. ಇದೀಗ, ರಾಹುಲ್ ಗಾಂಧಿ ಟ್ವಿಟರ್ ಖಾತೆ ಸಸ್ಪೆಂಡ್ ಆಗಿದೆ.

ಇದನ್ನೂ ಓದಿ: ಈ ದೇಶದ ಮಗಳಿಗೆ ನ್ಯಾಯ ಸಿಗಲೇಬೇಕು; ಕೊಲೆಯಾದ ದೆಹಲಿ ಬಾಲಕಿಯ ಕುಟುಂಬದ ಪರ ನಿಂತ ರಾಹುಲ್ ಗಾಂಧಿ

Rahul gandhi: ರಾಹುಲ್ ಗಾಂಧಿ ದಿಢೀರನೇ ರಾಜಕೀಯವಾಗಿ ಸಕ್ರಿಯ; ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಹೋರಾಡಲು ಸನ್ನದ್ಧ

(Congress Leader Rahul Gandhi Twitter account Suspended Party reacts to the issue)

Published On - 9:54 pm, Sat, 7 August 21