ತಮಿಳುನಾಡಿಗೆ ನೀರು ಬಿಡದಿದ್ದರೆ ರಾಜ್ಯ ಸರ್ಕಾರವನ್ನೇ ವಜಾ ಮಾಡ್ತಾರೆ: ವೀರಪ್ಪ ಮೊಯ್ಲಿ

ತಮಿಳುನಾಡಿಗೆ ನೀರು ಬಿಡಲು ಸುಪ್ರೀಂಕೋರ್ಟ್​ ಆದೇಶದ ಬಗ್ಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿದ್ದು, ತಮಿಳುನಾಡಿಗೆ ಕಾವೇರಿ ನೀರು ಬಿಡಲೇಬೇಕು ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಒಂದು ವೇಳೆ ನೀರು ಬಿಡದಿದ್ದರೆ ಸರ್ಕಾರವನ್ನೇ ವಜಾ ಮಾಡುತ್ತಾರೆ ಎಂದಿದ್ದಾರೆ. ಅಲ್ಲದೇ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ತಮಿಳುನಾಡಿಗೆ ನೀರು ಬಿಡದಿದ್ದರೆ ರಾಜ್ಯ ಸರ್ಕಾರವನ್ನೇ ವಜಾ ಮಾಡ್ತಾರೆ:  ವೀರಪ್ಪ ಮೊಯ್ಲಿ
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ
Edited By:

Updated on: Oct 03, 2023 | 2:01 PM

ಚಿಕ್ಕಬಳ್ಲಾಪುರ, (ಅಕ್ಟೋಬರ್ 03): ತಮಿಳುನಾಡಿಗೆ (Tamil Nadu) ಅನೀರು ಬಿಡಲು ಸುಪ್ರೀಂಕೋರ್ಟ್​ (supreme court) ಆದೇಶದ ಬಗ್ಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ(veerappa moily)  ಮಾತನಾಡಿದ್ದು, ತಮಿಳುನಾಡಿಗೆ ಕಾವೇರು ನೀರು ಬಿಡದಿದ್ದರೆ ರಾಜ್ಯ ಸರ್ಕಾರವನ್ನೆ ವಜಾ ಮಾಡುತ್ತಾರೆ. ಯಾವುದೇ ಸರ್ಕಾರ ಇದ್ದರೂ ಸಹ ನೀರು ಬಿಡುತ್ತಿದ್ದರು ಎಂದು ಹೇಳಿದ್ದಾರೆ. ಈ ಮೂಲಕ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಬೇಕು. ಮಾಡುತ್ತೇವೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.

ಇಂದು (ಅ.03) ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವು ದಿನಗಳಿಂದ ಬೇಡಿಕೊಂಡರೂ ಮೋದಿ ಸಮಯ ನೀಡುತ್ತಿಲ್ಲ/ ಪ್ರಧಾನಮಂತ್ರಿ ಮೋದಿ ಎರಡು ರಾಜ್ಯಗಳನ್ನು ಚರ್ಚೆಗೆ ಕರೆಯಬೇಕಿತ್ತು. ಆದ್ರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ದಟತನದಿಂದ ವರ್ತಿಸುತ್ತಿದ್ದಾರೆ. ತಮಿಳುನಾಡು ವಿರುದ್ಧ ಆರೋಪ ಮಾಡಿದರೆ ಯಾವ ಪ್ರಯೋಜನವಿಲ್ಲ. ಅವರ ಹಕ್ಕು ಅವರು ಕೇಳುತ್ತಿದ್ದಾರೆ, ನಮ್ಮ ಹಕ್ಕು ನಾವು ಕೇಳುತ್ತಿದ್ದೇವೆ ಎಂದರು.

ಇದನ್ನೂ ಒದಿ: Karnataka Breaking Kannada News Live: ಮೆಟ್ರೋ ಹಳಿ ತಪ್ಪಿರುವ ರೀ ರೈಲು ಲಿಫ್ಟಿಂಗ್ ಕಾರ್ಯಾಚರಣೆಗೆ ಮುಂದಾದ ಬಿಎಂಆರ್​ಸಿಎಲ್

ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಯರಿಸಬೇಕು. ಆದರೆ, ಕೇಂದ್ರ ಸರ್ಕಾರ ರಾಜಕೀಯ ಲಾಭಕ್ಕೆ ಕಾವೇರಿ ವಿವಾದದಲ್ಲಿ ಮಧ್ಯಪ್ರವೇಶ ಮಾಡುತ್ತಿಲ್ಲ. ಕಾವೇರಿ ವಿವಾದ ಬಗೆಯರಿಸುವುದು ಅವರಿಗೆ ಬೇಕಿಲ್ಲ. ಬದಲಿಗೆ ರಾಜ್ಯಗಳು ಕಿತ್ತಾಡಬೇಕು ಮೋದಿ ಸರ್ವಾಧಿಕಾರಿಯಾಗಿ ಇರಬೇಕು ಎನ್ನುವ ಭಾವನೆ ಹೊಂದಿದ್ದಾರೆ ಎಂದು ಕಿಡಿಕಾರಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Loading...
Unable to load recommendations.
Follow Us