ಗೃಹಲಕ್ಷ್ಮೀ ಕಾರ್ಯಕ್ರಮ ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್​ ಆಗಿರುವುದರ ಹಿಂದೆ ರಾಜಕೀಯ ಷಡ್ಯಂತ್ರದ ಮಾತು

ಕಾಂಗ್ರೆಸ್​ ನಾಲ್ಕನೇ ಗ್ಯಾರಂಟಿ ಅಧಿಕೃತ ಜಾರಿಗೆ ರೆಡಿ ಆಗಿದೆ. ಇದಕ್ಕಾಗಿ ಮೈಸೂರಿನಲ್ಲಿ ಬೃಹತ್​ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಂದಾಗಿದೆ. ಆದ್ರೆ, ಈ ಕಾರ್ಯಕ್ರಮ ಏಕಾಏಕಿ ಬೆಳಗಾವಿಯಿಂದ ಮೈಸೂರಿಗೆ ಏಕೆ ಶಿಫ್ಟ್ ಆಯ್ತು? ಇದಕ್ಕೆ ಅಸಲಿ ಕಾರಣವೇನು ಎನ್ನುವ ಪ್ರಶ್ನೆಗಳು ಬೆಳಗಾವಿ ಜಿಲ್ಲಾ ಕಾಂಗ್ರೆಸ್​ ಉದ್ಭವಿಸಿದ್ದು, ಈ ಬಗ್ಗೆ ಹಲವು ರೀತಿಯ ಮಾತುಗಳು ಕೇಳಿಬರುತ್ತಿವೆ. ಅಲ್ಲದೇ ಲಕ್ಷ್ಮೀ ಹೆಬ್ಬಾಳ್ಕರ್​ ಸಹೋದರ ಇದರ ಹಿಂದೆ ಷಡ್ಯಂತ್ರ ಇದೆ ಎನ್ನುವ ಮಾತುಗಳನ್ನಾಡಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಗೃಹಲಕ್ಷ್ಮೀ ಕಾರ್ಯಕ್ರಮ ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್​ ಆಗಿರುವುದರ ಹಿಂದೆ ರಾಜಕೀಯ ಷಡ್ಯಂತ್ರದ ಮಾತು
ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ
Follow us
ರಮೇಶ್ ಬಿ. ಜವಳಗೇರಾ
|

Updated on: Aug 21, 2023 | 3:32 PM

ಬೆಂಗಳೂರು, (ಆಗಸ್ಟ್ 21): ಗೃಹಲಕ್ಷ್ಮೀ.. ಕಾಂಗ್ರೆಸ್​ನ ಗ್ಯಾರಂಟಿಗಳಲ್ಲಿ ಮಹತ್ವದ ಯೋಜನೆ. ರಾಜ್ಯದ ಮಹಿಳೆಯರ ಕಾತರಕ್ಕೆ ಕಾರಣವಾಗಿರುವ ಗಿಫ್ಟ್‌​.. ಈ ಕೊಡುಗೆ ಫಲಾನುಭವಿಗಳ ಕೈಗೆ ಸಿಗುವುದಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಈಗಾಗಲೇ ಮೂರು ಗ್ಯಾರಂಟಿಗಳು ಒಂದೊಂದಾಗಿ ಅನುಷ್ಠಾನವಾಗಿದ್ದು, ನಾಲ್ಕನೇ ಗ್ಯಾರಂಟಿಯಾಗಿ ಗೃಹಲಕ್ಷ್ಮೀ ಇದೇ ಆಗಸ್ಟ್​ 30 ರಂದು ಮನೆಗಳಿಗೆ ಎಂಟ್ರಿ ಕೊಡಲಿದ್ದಾಳೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಈಗಿನಿಂದಲೇ ತಯಾರಿಗಳು ನಡೆಯುತ್ತಿದ್ದು, ರಾಹುಲ್​ ಗಾಂಧಿ, ಮಲ್ಲಿಕಾರ್ಜುನ್​ ಖರ್ಗೆ ಬಟನ್​ ಒತ್ತುವ ಮೂಲಕ ಗೃಹಲಕ್ಷ್ಮೀಗೆ ಚಾಲನೆ ನೀಡಲಿದ್ದಾರೆ. ಆದ್ರೆ, ಈ ಕಾರ್ಯಕ್ರಮವನ್ನು ಮೊದಲು ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು. ಆದ್ರೆ, ಇದೀಗ ಕಾರ್ಯಕ್ರಮವನ್ನು ಮೈಸೂರಿಗೆ ಶಿಫ್ಟ್​ ಮಾಡಿರುವುದ ನಾನಾ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಈ ಬಗ್ಗೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್​ನಲ್ಲಿ ಬೇರೆ ಮಾತುಗಳು ಹರಿದಾಡಲು ಶುರುವಾಗಿವೆ.

ಹೌದು….ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಕಾರ್ಯಕ್ರಮದಿಂದ ಬೆಳಗಾವಿ ಜಿಲ್ಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವರ್ಚಸ್ಸು ಹೆಚ್ಚಾಗುತ್ತೆ. ಹೀಗಾಗಿ ಬೆಳಗಾವಿಯಿಂದ ಮೈಸೂರಿಗೆ ಶಿಪ್ಟ್ ಮಾಡಿಸಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಅಲ್ಲದೇ ಹೆಬ್ಬಾಳ್ಕರ್ ರಾಜಕೀಯ ವಿರೋಧಿಗಳು ಸಿಎಂ ಮೇಲೆ ಒತ್ತಡ ಹೇರಿ ಈ ಕಾರ್ಯಕ್ರಮವನ್ನು ಮೈಸೂರಿಗೆ ಸ್ಥಳಾಂತರಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಸತೀಶ್ ಜಾರಕಿಹೊಳಿ ಅವರೇ ಕಾರ್ಯಕ್ರಮ ಮೈಸೂರಿಗೆ ಸ್ಥಳಾಂತರ ಮಾಡಿಸಿದ್ದಾರೆ ಎಂದು ಪರೋಕ್ಷವಾಗಿ ಹೆಸರು ಹೇಳದೇ ಲಕ್ಷ್ಮೀ ಹೆಬ್ಬಾಳ್ಕರ್​ ಬೆಂಬಲಿಗರು ಆರೋಸಿದ್ದಾರೆ. ಹೀಗಾಗಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್​ನಲ್ಲಿ ನಾಯಕರ ಮುಸುಕಿನ ಗುದ್ದಾಟ ಶುರುವಾಗಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಆ 30ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ, ಅಂದೇ ಮಹಿಳೆಯರ ಖಾತೆಗೆ ಹಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿಯಲ್ಲೇ ಗೃಹ ಲಕ್ಷ್ಮೀ ಯೋಜನೆ ಚಾಲನೆ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಸಾಲದಕ್ಕೆ ಎರಡು ಕಡೆ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಸ್ತು ಎಂದಿದ್ದರು. ಖುದ್ದು ಡಿಕೆ ಶಿವಕುಮಾರ್ ಅವರೇ ತಮ್ಮ ಮೊಬೈಲ್ ನಲ್ಲಿ ವಾಸ್ತು ನೋಡಿ ಅದೇ ರೀತಿ ವೇದಿಕೆ ನಿರ್ಮಾಣಕ್ಕೆ ಸೂಚನೆ ನೀಡಿದ್ದರು. ಇದೀಗ ಏಕಾಏಕಿ ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್​ ಮಾಡಿರುವುದು ಕಾರ್ಯಕರ್ತರು ಹಾಗೂ ನಾಯಕರ ಮಧ್ಯೆ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಏಕಾಏಕಿ ಕಾರ್ಯಕ್ರಮವನ್ನು ಶಿಫ್ಟ್ ಮಾಡಲು ಅಸಲಿ ಕಾರಣಗಳೇನು ಎನ್ನುವುದು ಲಕ್ಷ್ಮೀ ಹೆಬ್ಬಾಳ್ಕರ್​ ಬೆಂಬಲಿಗರು ಪ್ರಶ್ನೆಯಾಗಿದೆ.

ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್​ಗೆ ಅಸಲಿ ಕಾರಣ

ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಹುಲ್​ ಗಾಂಧಿ, ಮಲ್ಲಿಕಾರ್ಜುನ್​ ಖರ್ಗೆ ಬಟನ್​ ಒತ್ತುವ ಮೂಲಕ ಗೃಹಲಕ್ಷ್ಮೀಗೆ ಚಾಲನೆ ನೀಡಲಿದ್ದಾರೆ. ಮತ್ತೊಂದು ವಿಷಯ ಏನಂದ್ರೆ ಸಂಸದ ರಾಹುಲ್​ ಗಾಂಧಿ ಆಗಸ್ಟ್​ 30ರಂದೇ ವಯನಾಡಿಗೆ ತೆರಳಬೇಕಿರುವುದರಿಂದ ಬೆಳಗಾವಿಯಲ್ಲಿನ ಕಾರ್ಯಕ್ರಮವನ್ನು ಮೈಸೂರಿಗೆ ಶಿಫ್ಟ್​ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕಾರ್ಯಕ್ರಮ ಸ್ಥಳಾಂತರದ ಹಿಂದೆ ಷಡ್ಯಂತ್ರದ ಮಾತು

ಎಂಎಲ್​ಸಿ ಚನ್ನರಾಜ ಹಟ್ಟಿಕೊಳಿ ಮಾತನಾಡಿ, ಮುಖ್ಯಮಂತ್ರಿಗಳು ಎಲ್ಲರನ್ನೂ ಏಕತೆಯಿಂದ ನೋಡುತ್ತಾರೆ ಹಾಗೂ ನಾನು ಅವರನ್ನು ಹತ್ತಿರದಿಂದ ತಿಳಿದಿದ್ದೇನೆ. ನಡೆದಿರುವ ಎಲ್ಲಾ ಘಟನೆಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ಸದ್ಯಕ್ಕೆ ಅವೆಲ್ಲವನ್ನೂ ಮಾಧ್ಯಮಗಳ ಮುಂದೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿವ ಮೂಲಕ ಮೂಲಕ ಕಾರ್ಯಕ್ರಮ ಸ್ಥಳಾಂತರದ ಹಿಂದೆ ಷಡ್ಯಂತ್ರ ಆಗಿರುವುದನ್ನ ಪರೋಕ್ಷವಾಗಿ ಹೇಳಿದರು.

ಸತೀಶ್ ಜಾರಕಿಹೊಳಿರವರ ನೇತೃತ್ವದಲ್ಲಿ ಎರಡು ಸ್ಥಳಗಳನ್ನು ನಿಗದಿಮಾಡಲಾಗಿತ್ತು. ಬೆಳಗಾವಿ ದೊಡ್ಡ ಜಿಲ್ಲೆಯಾದ್ದರಿಂದ, ಎಲ್ಲಾ ಸಿದ್ಧತೆಗಳನ್ನು ಮಾಡಿಯಾಗಿತ್ತು. ಆದರೆ ಕೆಲವೊಂದು ಅನಿರೀಕ್ಷಿತ ಕಾರಣಗಳಿಂದ ಮೈಸೂರಿನಲ್ಲಿ ಉದ್ಘಾಟನೆಯಾಗುತ್ತಿದೆ. ಎಲ್ಲವೂ ಒಳ್ಳೆಯದೇ ಆಗಿದೆ, ಮಂಬರುವ ದಿನಗಳಲ್ಲಿ ರಾಜ್ಯದ ಮಹಿಳೆಯರಿಗೆ ಒಳ್ಳೆಯದೇ ಆಗುತ್ತದೆ ಎಂದರು.

ಕಾರ್ಯಕ್ರಮ ಸ್ಥಳಾಂತರಕ್ಕೆ ಅಸಲಿ ಕಾರಣ ಕೊಟ್ಟ ಜಾರಕಿಹೊಳಿ

ಮೈಸೂರಿಗೆ ಶಿಫ್ಟ್​ ಆಗಿರುವ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿಯವರಿಗೆ ವೈಯನಾಡಿನಲ್ಲಿ ಕಾರ್ಯಕ್ರಮವಿರುವುದರಿಂದ ಅದಕ್ಕೆ ಹತ್ತಿರವಾಗಲೆಂದು ಮೈಸೂರಿಗೆ ಸ್ಥಳಾಂತರಿಸುವ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಿದೆ. ಉದ್ಘಾಟನಾ ಕಾರ್ಯಕ್ರಮ ಎಲ್ಲಿಯೇ ಆದರೂ, ಗೃಹಲಕ್ಷ್ಮೀ ಯೋಜನೆ ನಮ್ಮದಾಗುತ್ತದೆ. ಇದು ಜಿಲ್ಲಾ ಮಟ್ಟದ ಕಾರ್ಯಕ್ರಮವಲ್ಲ, ರಾಜ್ಯ ಮಟ್ಟದ ಕಾರ್ಯಕ್ರಮ ಎಂದು ಸ್ಪಷ್ಟಪಡಿಸಿದರು.

ನಾವೆಲ್ಲಾ ಜಿಲ್ಲಾ ಕೋರ್ಟ್ ಇದ್ದಂತೆ, ಸಿಎಂರವರು ಹೈಕೋರ್ಟ್, ಸುಪ್ರೀಂ ಕೋರ್ಟ್ ಇದ್ದಂತೆ ಅವರ ತೀರ್ಮಾನವೇ ಅಂತಿಮ ಎಂದರು. ಸ್ಥಳಾಂತರದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ, ಬೆಳಗಾವಿಯನ್ನು ಈ ಮೊದಲು ಗುರುತಿಸಿದ್ದರು, ಆದ್ದರಿಂದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವು. ಈಗ ಮೈಸೂರಿಗೆ ಬದಲಾದ್ದರಿಂದ ಅಲ್ಲಿಗೆ ತೆರಳುತ್ತೇವೆ ಎಂದರು.

ಒಟ್ಟಿನಲ್ಲಿ ಈ ಕಾರ್ಯಕ್ರಮ ಮೈಸೂರಿಗೆ ಶಿಫ್ಟ್ ಆಗಿರುವುದಕ್ಕೆ ಬೆಳಗಾವಿ ಕಾಂಗ್ರೆಸ್​ನಲ್ಲಿ ಹಲವು ಚರ್ಚೆಗ ಗ್ರಾಸವಾಗಿದ್ದು, ನಾಯಕರ ಮಧ್ಯೆ ಮುಸುಕಿನ ಗುದ್ದಾಟ ಶುರುವಾಗಿದೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ