‘ನಾನು ವಿನಂತಿಸಿದ್ದರೆ ಮುಖ್ಯಮಂತ್ರಿಯಾಗಬಹುದಿತ್ತು’: ದೇವೇಂದ್ರ ಫಡ್ನವಿಸ್

ನಾನು ವಿನಂತಿಸಿದ್ದರೆ, ಮುಖ್ಯಮಂತ್ರಿಯಾಗಬಹುದಿತ್ತು, ನಾವು ವಿಚಾರಧಾರೆಗಾಗಿ ಶಿವಸೇನಾ ನಾಯಕರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡುವುದು ನನ್ನ ಪ್ರಸ್ತಾಪವಾಗಿತ್ತು. ಆದರೆ ಪಕ್ಷದ ಹಿರಿಯ ನಾಯಕರು..

‘ನಾನು ವಿನಂತಿಸಿದ್ದರೆ ಮುಖ್ಯಮಂತ್ರಿಯಾಗಬಹುದಿತ್ತು’: ದೇವೇಂದ್ರ ಫಡ್ನವಿಸ್
ದೇವೇಂದ್ರ ಫಡ್ನವಿಸ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 05, 2022 | 8:53 PM

ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಮಂಗಳವಾರ ‘ನಾನು ವಿನಂತಿಸಿದ್ದರೆ ಮುಖ್ಯಮಂತ್ರಿಯಾಗಬಹುದಿತ್ತು’ ಎಂದು ಹೇಳಿದ್ದಾರೆ. ಅದೇ ವೇಳೆ ಉದ್ಧವ್ ಠಾಕ್ರೆ (Uddhav Thackeray) ಅವರನ್ನು ಪದಚ್ಯುತಗೊಳಿಸಿದ ಶಿವಸೇನಾ ಬಂಡಾಯ ಶಾಸಕರಾಗಿದ್ದ ಏಕನಾಥ್ ಶಿಂಧೆಯನ್ನು(Eknath Shinde) ಮುಖ್ಯಮಂತ್ರಿ ಮಾಡುವುದು ‘ನನ್ನ ಪ್ರಸ್ತಾಪವಾಗಿತ್ತು’ ಎಂದಿದ್ದಾರೆ. ಬಿಜೆಪಿ ನಾಯಕರು ಮಧ್ಯಪ್ರವೇಶಿಸಿ, ‘ಸರ್ಕಾರದಿಂದ ಹೊರಗುಳಿದಿದ್ದರೆ ಸರ್ಕಾರ ಕಾರ್ಯ ನಿರ್ವಹಿಸಲಾಗದು ಎಂದು ಹೇಳಿದ ನಂತರವೇ ಉಪ ಮುಖ್ಯಮಂತ್ರಿ ಸ್ಥಾನವನ್ನು ಸ್ವೀಕರಿಸಿದ್ದೇನೆ. ಹಾಗಾಗಿ ಅವರ ಆದೇಶದ ಮೇರೆಗೆ ನಾನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದಾರೆ. “ನಾನು ವಿನಂತಿಸಿದ್ದರೆ, ಮುಖ್ಯಮಂತ್ರಿಯಾಗಬಹುದಿತ್ತು, ನಾವು ವಿಚಾರಧಾರೆಗಾಗಿ ಶಿವಸೇನಾ ನಾಯಕರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡುವುದು ನನ್ನ ಪ್ರಸ್ತಾಪವಾಗಿತ್ತು. ಆದರೆ ಪಕ್ಷದ ಹಿರಿಯ ನಾಯಕರು ನಾನು ಸರ್ಕಾರದ ಭಾಗವಾಗದೇ ಇದ್ದರೆ ಸರ್ಕಾರ ಕಾರ್ಯವೆಸಗುವುದಿಲ್ಲ ಎಂದು ಹೇಳಿದರು. ಹಾಗಾಗಿ ಅವರ ಆದೇಶದ ಮೇರೆಗೆ ನಾನು ಉಪ ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ್ದೇನೆ ಎಂದು ಫಡ್ನವಿಸ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಕಳೆದ ವಾರ ಉದ್ಧವ್ ಠಾಕ್ರೆ  ರಾಜೀನಾಮೆ  ನೀಡಿದ ಕೂಡಲೇ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗಿ ಮರಳುತ್ತಾರೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು. ಆದಾಗ್ಯೂ, ಶಿಂಧೆ ಮತ್ತು ಫಡ್ನವಿಸ್ ಅವರು ಸರ್ಕಾರಕ್ಕೆ ತಮ್ಮ ಹಕ್ಕು ಚಲಾಯಿಸಲು ರಾಜ್ಯಪಾಲ ಬಿಎಸ್ ಕೋಶ್ಯಾರಿ ಅವರನ್ನು ಭೇಟಿಯಾದ ಸ್ವಲ್ಪ ಸಮಯದ ನಂತರ, ಬಿಜೆಪಿ ನಾಯಕ ಫಡ್ನವಿಸ್ ಶಿಂಧೆ ಅವರು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದರು. ಆದಾಗ್ಯೂ ತಾನು ಸರ್ಕಾರದ ಭಾಗವಾಗಿರುವುದಿಲ್ಲ ಎಂದಿದ್ದರು. ಇದಾಗಿ ಕೆಲವೇ ಕ್ಷಣಗಳಲ್ಲಿ ಬಿಜೆಪಿ ನಾಯಕತ್ವದ ಒತ್ತಾಯ ದ ಮೇರೆಗೆ  ಫಡ್ನವಿಸ್ ಉಪಮುಖ್ಯಮಂತ್ರಿಯಾದರು.

Published On - 8:50 pm, Tue, 5 July 22