ಉಪ ರಾಷ್ಟ್ರಪತಿ ಚುನಾವಣೆಗೆ ಅಧಿಕೃತ ಆದೇಶ ಜಾರಿ; ಜುಲೈ 19ರವರೆಗೆ ನಾಮಪತ್ರ ಸಲ್ಲಿಕೆ, ಆಗಸ್ಟ್ 6ಕ್ಕೆ ಚುನಾವಣೆ

ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದು ಆರಂಭವಾಗಿದ್ದು ಜುಲೈ 19ಕ್ಕೆ ಬೆಳಗ್ಗೆ 11 ಗಂಟೆಯಿಂದ ಸಂಜೆ 3 ಗಂಟೆಯವರೆ ನಾಮಪತ್ರ ಸಲ್ಲಿಕೆ ಮಾಡಬಹುದು.

ಉಪ ರಾಷ್ಟ್ರಪತಿ ಚುನಾವಣೆಗೆ ಅಧಿಕೃತ ಆದೇಶ ಜಾರಿ; ಜುಲೈ 19ರವರೆಗೆ ನಾಮಪತ್ರ ಸಲ್ಲಿಕೆ, ಆಗಸ್ಟ್ 6ಕ್ಕೆ ಚುನಾವಣೆ
ಚುನಾವಣಾ ಆಯೋಗ
TV9kannada Web Team

| Edited By: Rashmi Kallakatta

Jul 05, 2022 | 4:17 PM

ದೆಹಲಿ: ಚುನಾವಣಾ ಆಯೋಗವು ಉಪ ರಾಷ್ಟ್ರಪತಿ ಚುನಾವಣೆಗೆ (Vice-Presidential election)ಅಧಿಕೃತ ಆದೇಶ ಜಾರಿ ಮಾಡಿದ್ದು  ಆಗಸ್ಟ್ 6ಕ್ಕೆ ಚುನಾವಣೆ ನಡೆಯಲಿದೆ. ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದು ಆರಂಭವಾಗಿದ್ದು ಜುಲೈ 19ಕ್ಕೆ ಬೆಳಗ್ಗೆ 11 ಗಂಟೆಯಿಂದ ಸಂಜೆ 3 ಗಂಟೆಯವರೆ ನಾಮಪತ್ರ ಸಲ್ಲಿಕೆ ಮಾಡಬಹುದು. ನವದೆಹಲಿಯಲ್ಲಿರುವ ಪಾರ್ಲಿಮೆಂಟ್ ಹೌಸ್ ನ ರೂಂನಂ 18ರಲ್ಲಿ ನಾಮಪತ್ರ ಸಲ್ಲಿಸಬಹುದು. ಈ ಚುನಾವಣೆಯ ರಿಟರ್ನಿಂಗ್ ಆಫೀಸರ್ ಆಗಿ ಲೋಕಸಭೆ ಸೆಕ್ರಟರಿ ಜನರಲ್ ಉತ್ಪಲ್ ಕುಮಾರ್ ಸಿಂಗ್ (Utpal Kumar Singh) ಅವರಿಗೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ನಾಮಪತ್ರ ಪರಿಶೀಲನೆ ಜುಲೈ 20ರಂದು ನಡೆಯಸಲಿದ್ದು ಅಂತಿಮ ಪಟ್ಟಿ ಜುಲೈ 22ರಂದು ಪ್ರಕಟವಾಗಲಿದೆ. ಭಾರತದ ರಾಷ್ಟ್ರಪತಿ ಚುನಾವಣೆಯ (Presidential election) ಸಂದರ್ಭದಲ್ಲಿ, ಅರ್ಹ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಮತದಾರರ ಪಟ್ಟಿಯ ದೃಢೀಕೃತ ಪ್ರತಿ, 15,000 ರೂಪಾಯಿ ಸೇರಿದಂತೆ ಕೆಲವು ದಾಖಲೆಗಳನ್ನು  ಸಲ್ಲಿಸಬೇಕಾಗುತ್ತದೆ. ಭಾರತದ ಉಪರಾಷ್ಟ್ರಪತಿಯ ಚುನಾವಣೆಯ ಸಂದರ್ಭದಲ್ಲಿ, ಸಂಸತ್ತಿನಲ್ಲಿ ಮತದಾನ ನಡೆಯುತ್ತದೆ. ಉಪರಾಷ್ಟ್ರಪತಿ ಮೇಲ್ಮನೆಯ ವಾಸ್ತವಿಕ ಅಧ್ಯಕ್ಷರೂ ಆಗಿರುವುದರಿಂದ ಈ ಚುನಾವಣೆಯಲ್ಲಿ ರಾಜ್ಯಸಭೆಯ ಸದಸ್ಯರು ಭಾಗವಹಿಸುತ್ತಾರೆ.

ಮುಂಬರುವ ಉಪ ರಾಷ್ಟ್ರಪತಿ   ಚುನಾವಣೆಯ ಮತದಾನವು ಆಗಸ್ಟ್ 6, 2022 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ನಡೆಯಲಿದೆ. ಅದೇ ದಿನ ಫಲಿತಾಂಶಗಳು ಹೊರಬೀಳುವ ನಿರೀಕ್ಷೆಯಿದೆ.  2017 ರಲ್ಲಿ ಎನ್ ಡಿಎ ವೆಂಕಯ್ಯನಾಯ್ಡು ಅವರನ್ನು ನಾಮನಿರ್ದೇಶನ ಮಾಡಿದ್ದು ಅವರು ದೇಶದ 15ನೇ ಉಪರಾಷ್ಟ್ರಪತಿ ಆಗಿದ್ದರು. ಆಗಸ್ಟ್ 10ರಂದು ಅವರ ಅಧಿಕಾರವಧಿ ಕೊನೆಗೊಳ್ಳಲಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada