ಕಾಂಗ್ರೆಸ್ ನಾಯಕರಿಂದ ಸ್ಪೀಕರ್​ಗೆ ಅವಮಾನ? ಹಾನಗಲ್ ಶಾಸಕ ಮಾನೆಗೆ ನಿರಾಶೆ, ಇಂದು ನಡೆಯದ ಪ್ರಮಾಣ ವಚನ, ಆಗಿದ್ದೇನು?

ಇತ್ತೀಚೆಗೆ ಹಾನಗಲ್ ಉಪ ಚುನಾವಣೆಯಲ್ಲಿ ವಿಜಯ ಸಾಧಿಸಿರುವ ಕಾಂಗ್ರೆಸ್​ನ ಶ್ರೀನಿವಾಸ ಮಾನೆ ಅವರು ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನೇ ಕಾಯಿಸಿ ಕೊನೆಗೂ ಬರೆದೇ ಇದ್ದುದರಿಂದ ಸಭಾಧ್ಯಕ್ಷ ಕಾಗೇರಿ ಅವರು ಮಾನೆ ಅವರಿಗೆ ಪ್ರಮಾಣ ವಚನದ ಬೋಧಿಸದೇ ಮುಂದಿನ ಕಾರ್ಯಕ್ರಮಕ್ಕೆ ಹೋದ ಘಟನೆ ಇಂದು ನಡೆಯಿತು.

ಕಾಂಗ್ರೆಸ್ ನಾಯಕರಿಂದ ಸ್ಪೀಕರ್​ಗೆ ಅವಮಾನ? ಹಾನಗಲ್ ಶಾಸಕ ಮಾನೆಗೆ ನಿರಾಶೆ, ಇಂದು ನಡೆಯದ ಪ್ರಮಾಣ ವಚನ, ಆಗಿದ್ದೇನು?
ಸ್ಪೀಕರ್ ಮತ್ತು ಕಾಂಗ್ರೆಸ್ ನಡುವೆ ಕಾಯುವ ಆಟ: ಹಾನಗಲ್ ಶಾಸಕ ಮಾನೆಗೆ ನಿರಾಶೆ, ಇಂದು ನಡೆಯದ ಪ್ರಮಾಣ, ಆಗಿದ್ದೇನು?

ಬೆಂಗಳೂರು: ಇತ್ತೀಚೆಗೆ ಹಾನಗಲ್ ಉಪ ಚುನಾವಣೆಯಲ್ಲಿ ವಿಜಯ ಸಾಧಿಸಿರುವ ಕಾಂಗ್ರೆಸ್​ನ ಶ್ರೀನಿವಾಸ ಮಾನೆ ಅವರು ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನೇ ಕಾಯಿಸಿ ಕೊನೆಗೂ ಬರೆದೇ ಇದ್ದುದರಿಂದ ಸಭಾಧ್ಯಕ್ಷ ಕಾಗೇರಿ ಅವರು ಮಾನೆ ಅವರಿಗೆ ಪ್ರಮಾಣ ವಚನದ ಬೋಧಿಸದೇ ಮುಂದಿನ ಕಾರ್ಯಕ್ರಮಕ್ಕೆ ಹೋದ ಘಟನೆ ಇಂದು ನಡೆಯಿತು. ಇಂದು ಬೆಳಿಗ್ಗೆ 11 ಗಂಟೆಗೆ ಸಿಂದಗಿ ಶಾಸಕ, ರಮೇಶ್​ ಭೂಸನೂರ್​ ಮತ್ತು ಹಾನಗಲ್​ ಶಾಸಕ, ಮಾನೆ ಅವರಿಗೆ ಪ್ರಮಾಣ ವಚನ ನೀಡುವ ಕಾರ್ಯಕ್ರಮ ನಿರ್ಧಾರವಾಗಿತ್ತು. ಸಾರ್ವಜನಿಕ ಸಂಪರ್ಕ ಇಲಾಖೆ ಕೂಡ 11 ಗಂಟೆಗೆ ಕಾರ್ಯಕ್ರಮ ಇದೆ ಎಂದು ಎಲ್ಲ ಮಾಧ್ಯಮಗಳಿಗೆ ತಿಳಿಸಿತ್ತು. ಆ ಪ್ರಕಾರ, ಭೂಸನೂರ್​ ಮತ್ತು ಮಾನೆ ಅವರು ಪ್ರಮಾಣ ವಚನ ಸ್ವೀಕರಿಸಲು ಬಂದು ಆಸೀನರಾಗಿದ್ದರು. ಇನ್ನೇನು ಕಾರ್ಯಕ್ರಮ ಪ್ರಾರಂಭ ಆಗಬೇಕು ಎನ್ನುವಾಗ ಮಾನೆ ಅವರು, “ಎರಡು ನಿಮಿಷ ಸಾರ್​, ಬಂದೆ,” ಎಂದು ಹೇಳಿ ಎದ್ದು ಹೋದರು. ಹೋದವರು ಬರದಿದ್ದಾಗ, ಬೇರೆ ದಾರಿಯಿಲ್ಲದೇ, ಭೂಸನೂರ್ ಅವರಿಗೆ ಮಾತ್ರ ಪ್ರಮಾಣ ವಚನ ಬೋಧಿಸಿ ಸಭಾಪತಿ ಹೊರ ಹೋದರು. ಆಮೇಲೆ ಬಂದ ಕಾಂಗ್ರೆಸ್​ ನಾಯಕರು ಸ್ಪೀಕರ್​ ತಮಗೆ  ಪ್ರಮಾಣ ವಚನ ಬೋಧಿಸಲಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದರು.​

ಶ್ರೀನಿವಾಸ ಮಾನೆಗೆ ಇಂದು ನಿರಾಶೆಯ ದಿನ
ಭೂಸನೂರ್​ ಅವರಿಗೆ ಪ್ರಮಾಣ ವಚನ ಬೋಧಿಸಿದ ಕಾಗೇರಿ ಅವರು ಮಾನೆ ಅವರಿಗೆ ಕಾಯ್ದರು. ಆಮೇಲೆ ಅವರನ್ನು ಕರೆ ತನ್ನಿ ಎಂದು ಅವರ ಕಚೇರಿಯ ಅಧಿಕಾರಿಗಳಿಗೆ ಹೇಳಿ, ಹೊರಗೆ ಹುಡುಕಾಡಿಸಿದಾಗ ಕಾರಿಡಾರಿನಲ್ಲಿ ಅವರು ಇರಲಿಲ್ಲ. ಅದಾದ ಮೇಲೆ ಅವರ ಹೆಸರನ್ನು ಹೇಳಿ ಕೂಗಿದ್ದಾರೆ. ಆಗಲೂ ಅವರು ಪ್ರತಿಕ್ರಿಯಿಸಿಲ್ಲ. ಆಮೇಲೆ ಅವರು ಮುಂದಿನ ಕಾರ್ಯಕ್ರಮಕ್ಕೆ ಹೊರಟು ಹೋದರು. ಇದಾದ ಮೇಲೆ ಬಂದ ಕೈ ನಾಯಕರು ಸ್ಪೀಕರ್​ ವಿರುದ್ಧ ಹರಿ ಹಾಯ್ದರು. ತಮಗೆ 11.30 ಕ್ಕೆ ಸಮಯ ನಿಗದಿ ಆಗಿತ್ತು ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದರು. ಆದರೆ ದಾಖಲೆಗಳ ಪ್ರಕಾರ ಅದು 11 ಗಂಟೆಗೆ ನಿಶ್ಚಯವಾಗಿತ್ತು ಈಗ ಮಾಹಿತಿ ಹೊರ ಬಂದಿದೆ. ಇದರಿಂದಾಗಿ ಮಾನೆ ಅವರಿಗೆ ಇಂದು ಪ್ರಮಾಣ ವಚನ ಸ್ವೀಕರಿಸಲು ಆಗಲಿಲ್ಲ.  ಇದಾದ ಮೇಲೆ ಮಾನೆ ಅವರು ಸ್ಪೀಕರ್​ ಅವರಿಗೆ ಸಂಪರ್ಕಿಸಿದರು ಎಂದು ತಿಳಿದು ಬಂದಿದೆ.  ಆಗ ಪ್ರಮಾಣ ವಚನವನ್ನು ಇನ್ನೊಂದು ದಿನಕ್ಕೆ ನಿಗದಿ ಮಾಡೋಣ ಎಂದು ಸ್ಪೀಕರ್​ ಕಾಗೇರಿ ಅವರು ತಿಳಿಸಿದ್ದಾರೆ. ಇದರಿಂದ ಸ್ಪೀಕರ್​ ವಿರುದ್ಧ ಡಿಕೆ ಶಿವಕುಮಾರ್ ಮತ್ತು ಶಾಸಕ ಶ್ರೀನಿವಾಸ ಮಾನೆ ಅಸಮಾಧಾನ ಹೊರಹಾಕಿ ತೆರಳಿದರು.

ಅದಕ್ಕೂ ಮುನ್ನ, ಹಾನಗಲ್ ಮತ್ತು ಸಿಂಧಗಿ ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಪೂರ್ವನಿಗದಿಯಾಗಿತ್ತು. ಅದರಂತೆ ಸಿಂಧಗಿ ನೂತನ ಶಾಸಕ ರಮೇಶ್ ಭೂಸನೂರ್ ಸಕಾಲಕ್ಕೆ ಆಗಮಿಸಿ, ಪ್ರಮಾಣ ವಚನ ಸ್ವೀಕಾರ ಮಾಡಿದರು. ರಮೇಶ್ ಭೂಸನೂರ್ ಅವರು ದೇವರು ಹಾಗೂ ಸಿಂಧಗಿ ಮತದಾರರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ನಮ್ಮಿಂದ ಲೇಟ್ ಆಗಿದೆ. ಗೌರವ ಕೊಟ್ಟು ಸ್ಪೀಕರ್ ಚೇಂಬರ್ ಗೆ ಹೋಗ್ತೇವೆ:
ಅದಕ್ಕೂ ಮುನ್ನ ಶ್ರೀನಿವಾಸ ಮಾನೆ ಪ್ರಮಾಣಕ್ಕೆ ವಿಧಾನ ಸೌಧಕ್ಕೆ ವಿಳಂಬವಾಗಿ ಆಗಮಿಸಿದ ಡಿಕೆ ಶಿವಕುಮಾರ್ ಅವರು ಹೌದು, ಸ್ವಲ್ಪ ಲೇಟ್ ಆಯ್ತು, ಟ್ರಾಫಿಕ್ ಇತ್ತು. ಅಷ್ಟು ಅವಸರ ಮಾಡಬಾರದಿತ್ತು. ಅಧಿವೇಶನ ನಡೆಯುವಾಗಲೇ ಯಾವ ಯಾವುದಕ್ಕೋ ಸಮಯ ಬಳಸಿಕೊಂಡು ಬದಲು ಮಾಡಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರಾದರೂ ಕೊನೆಗೆ, ಆಗಲಿ ನಮ್ಮಿಂದ ಲೇಟ್ ಆಗಿದೆ, ಗೌರವ ಕೊಟ್ಟು ಸ್ಪೀಕರ್ ಕಛೇರಿಗೆ ಹೋಗ್ತೇವೆ ಎಂದು ತಿಳಿಸಿದರು. ಅಸಹಾಯಕರಾಗಿ ಕಾದು ಕುಳಿತಿದ್ದ ಡಿಕೆ ಶಿವಕುಮಾರ್ ‘ಏಯ್ ಮಾನೆ, ಆಗಿದ್ದೆಲ್ಲ ಒಳ್ಳೆದೆ ಆಗಿದೆ, ಆಗುವುದೆಲ್ಲ ಒಳ್ಳೆಯದೇ ಆಗಲಿದೆ’ ಎಂದು ಆಧ್ಯಾತ್ಮಿಕ ಮಾತುಗಳನ್ನು ಹೇಳಿದರು.

ಇದನ್ನೂ ಓದಿ:
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆದ್ದೇ ಗೆಲ್ತಾರೆ ಎಂದು ಟ್ರಾಕ್ಟರ್ ಬೆಟ್ಟಿಂಗ್ ಕಟ್ಟಿದ ಮಾನೆ ಅಭಿಮಾನಿ! ಫಲಿತಾಂಶ ಏನಿದೆ?

Click on your DTH Provider to Add TV9 Kannada