ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆದ್ದೇ ಗೆಲ್ತಾರೆ ಎಂದು ಟ್ರಾಕ್ಟರ್ ಬೆಟ್ಟಿಂಗ್ ಕಟ್ಟಿದ ಮಾನೆ ಅಭಿಮಾನಿ! ಫಲಿತಾಂಶ ಏನಿದೆ?

ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆದ್ದೇ ಗೆಲ್ಲುತ್ತಾರೆ ಎಂದು ಅವರ ಅಭಿಮಾನಿಯೊಬ್ಬರು ಒಂದು ಟ್ರಾಕ್ಟರ್ ಬೆಟ್ಟಿಂಗ್ ಕಟ್ಟಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆದ್ದೇ ಗೆಲ್ತಾರೆ ಎಂದು ಟ್ರಾಕ್ಟರ್ ಬೆಟ್ಟಿಂಗ್ ಕಟ್ಟಿದ ಮಾನೆ ಅಭಿಮಾನಿ! ಫಲಿತಾಂಶ ಏನಿದೆ?
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆದ್ದೇ ಗೆಲ್ತಾರೆ ಎಂದು ಟ್ರಾಕ್ಟರ್ ಬೆಟ್ಟಿಂಗ್ ಕಟ್ಟಿದ ಮಾನೆ ಅಭಿಮಾನಿ

ಹಾವೇರಿ: ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ (Srinivas Vishnurav Mane) ಜಯಭೇರಿ ಬಾರಿಸೋದತ್ತ ಮುನ್ನುಗ್ಗುತ್ತಿದ್ದಾರೆ. ಸದ್ಯ ಈಗ ಅವರ ಅಭಿಮಾನಿಗಳು ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಕಟ್ಟುತಿದ್ದಾರೆ. ಕ್ಷೇತ್ರದಲ್ಲಿ ಬೆಟ್ಟಿಂಗ್ ಆಟ ಜೋರಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆದ್ದೇ ಗೆಲ್ಲುತ್ತಾರೆ ಎಂದು ಅವರ ಅಭಿಮಾನಿಯೊಬ್ಬರು ಒಂದು ಟ್ರಾಕ್ಟರ್ ಬೆಟ್ಟಿಂಗ್ ಕಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಅಭಿಮಾನಿ ಬಿಜೆಪಿಯವರು ಒಂದು ಮತಕ್ಕೆ 2,500 ರೂಪಾಯಿ ಕೊಟ್ಟಿದ್ದಾರೆ. ಕಾಂಗ್ರೆಸ್ ಪ್ರಾಮಾಣಿಕವಾಗಿ ಗೆಲ್ಲುತ್ತದೆ ಎಂದು ಶ್ರೀನಿವಾಸ ಮಾನೆ ಅಭಿಮಾನಿ ತಮ್ಮ ನಾಯಕ ಗೆಲ್ಲುವುದಾಗಿ ಟಿವಿ9 ಬಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 12 ನೇ ಸುತ್ತಿನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ನಾಗಾಲೋಟದಲ್ಲಿದ್ದು, 10,460 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಂದಿದ್ದರೆ, ಸಿಂದಗಿಯಲ್ಲಿ ಬಿಜೆಪಿ ಜಯಭೇರಿ ಬಾರಿಸುವತ್ತ ಸಾಗಿದೆ. ಇನ್ನು ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಹೀನಾಯ ಸೋಲಿನತ್ತ ಮುಖ ಮಾಡಿದ್ದಾರೆ.​

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಐದನೇ ಸುತ್ತಿನಲ್ಲಿ ಪಡೆದ ಮತಗಳ ವಿವರ ಬಿಜೆಪಿ-22024, ಕಾಂಗ್ರೆಸ್-23344, ಜೆಡಿಎಸ್-204

ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಸಿಂದಗಿಯಲ್ಲಿ 7ನೇ ಸುತ್ತಿನಲ್ಲಿ ಪಡೆದ ಮತಗಳ ವಿವರ ಬಿಜೆಪಿ-32487, ಕಾಂಗ್ರೆಸ್-19162, ಜೆಡಿಎಸ್-1173

ಸಿಂದಗಿಯಲ್ಲಿ 14ನೇ ಸುತ್ತಿನಲ್ಲಿ ಪಡೆದ ಮತಗಳ ವಿವರ ಬಿಜೆಪಿ-60478, ಕಾಂಗ್ರೆಸ್-42177, ಜೆಡಿಎಸ್-2736

ಸದ್ಯಕ್ಕೆ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಂದಿದೆ. ಆದ್ರೆ ಇಲ್ಲಿ ಬಿಜೆಪಿ ಗೆಲ್ಲುತ್ತದೆ‌ 15 ರಿಂದ 20 ಸಾವಿರ ಅಂತರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಮತ ಎಣಿಕೆ ಕೇಂದ್ರದ ಎದುರು ಬಿಜೆಪಿ ಅಭಿಮಾನಿಗಳು ವಿಶ್ವಾಸ ಹೊರ ಹಾಕಿದ್ದಾರೆ. ಬಿಜೆಪಿ ಬೆಂಬಲಿಗರು ಮೋದಿ ಮೋದಿ ಎಂದು ಘೋಷಣೆ ಹಾಕುತ್ತಿದ್ದಾರೆ.

ಇದನ್ನೂ ಓದಿ ನೋಡಿ: ಹಾನಗಲ್​ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ 1 ಎಕರೆ ಜಮೀನು ಬೆಟ್ಟಿಂಗ್ ಕಟ್ಟಿದ ಅಭಿಮಾನಿ

ಇದನ್ನೂ ಓದಿ: Karnataka ByElection Results 2021 Counting LIVE: ಇಂದು ಹಾನಗಲ್​, ಸಿಂದಗಿ ಉಪಚುನಾವಣೆ ಫಲಿತಾಂಶ

Published On - 10:39 am, Tue, 2 November 21

Click on your DTH Provider to Add TV9 Kannada