Karnataka By Election Results 2021 Highlights: ಸಿಂದಗಿಯಲ್ಲಿ ಬಿಜೆಪಿಗೆ ಗೆಲುವು, ಹಾನಗಲ್‌ನಲ್ಲಿ ಕಾಂಗ್ರೆಸ್ಗೆ ಜಯ
Sindagi, Hangal Bypoll Results 2021: ಇಂದು ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.
Sindagi, Hangal Bypoll Results 2021 Counting | ವಿಜಯಪುರ: ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಹಾಗೂ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವಿನ ನಗೆ ಬೀರಿದ್ದಾರೆ. ಹಾನಗಲ್‌ನಲ್ಲಿ ಬಿಜೆಪಿಯಿಂದ ಶಿವರಾಜ ಸಜ್ಜನರ್, ಕಾಂಗ್ರೆಸ್ನಿಂದ ಶ್ರೀನಿವಾಸ್ ಮಾನೆ, ಜೆಡಿಎಸ್ನಿಂದ ನಿಯಾಜ್ ಶೇಖ್ ಸ್ಪರ್ಧಿಸಿದ್ದರು. ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ರಮೇಶ್ ಭೂಸನೂರ, ಜೆಡಿಎಸ್ನಿಂದ ನಾಜಿಯಾ ಅಂಗಡಿ, ಕಾಂಗ್ರೆಸ್ ಪಕ್ಷದಿಂದ ಅಶೋಕ್ ಮನಗೂಳಿ ಕಣಕ್ಕಿಳಿದಿದ್ದರು. ಬೆಳಿಗ್ಗೆ 8ರಿಂದ ಮತ ಎಣಿಕೆ ಕಾರ್ಯ ಆರಂಭವಾಗಿತ್ತು. ಒಂದೆಡೆ ಬಿಜೆಪಿ ಹಾಗೂ ಮತ್ತೊಂದೆಡೆ ಕಾಂಗ್ರೆಸ್ ಗೆಲುವು ಸಾಧಿಸಿದ್ದು ಸಂಭ್ರಮಾಚರಣೆ ಜೋರಾಗಿದೆ. ಮತಎಣಿಕೆಯ ಸಂಪೂರ್ಣ ಅಪ್ಡೇಟ್ಸ್ ಇಲ್ಲಿ ನೀಡಲಾಗಿದೆ.
LIVE NEWS & UPDATES
-
ಬೆಂಗಳೂರಿನಲ್ಲಿ ವಸತಿ ಖಾತೆ ಸಚಿವ ವಿ.ಸೋಮಣ್ಣ ಹೇಳಿಕೆ
ಎರಡು ಕ್ಷೇತ್ರ ಗೆಲ್ಲುವ ತವಕದಲ್ಲಿ ಇದ್ದೆವು. ಸಿಂದಗಿಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ನೀಡಿದ್ದಾರೆ. ಆದರೆ ಹಾನಗಲ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ಸೋಲಾಗಿದೆ. ಹಾನಗಲ್‌ನಲ್ಲಿ ದಿ.ಸಿ.ಎಂ.ಉದಾಸಿ ಓಡಾಟ ಮಾಡಿರಲಿಲ್ಲ. ಶಾಸಕರಾದ ಬಳಿಕ ಅನಾರೋಗ್ಯ ಹಿನ್ನೆಲೆ ಓಡಾಡಿರಲಿಲ್ಲ. ಹೀಗಾಗಿ ಹಾನಗಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಅದು ಮಾನೆ ವರ್ಚಸ್ಸಿನ ಗೆಲುವು, ಕಾಂಗ್ರೆಸ್ ಗೆಲುವಲ್ಲ ಎಂದು ಬೆಂಗಳೂರಿನಲ್ಲಿ ವಸತಿ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
-
ಚಿತ್ರದುರ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸಂಭ್ರಮಾಚರಣೆ
ಹಾನಹಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಹಿನ್ನೆಲೆ ಚಿತ್ರದುರ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸಂಭ್ರಮಾಚರಣೆ ನಡೆದಿದೆ. ನಗರದ ಒನಕೆ ಓಬವ್ವ ವೃತ್ತದಲ್ಲಿ ಕಾಂಗ್ರೆಸ್ ಸಂಭ್ರಮ ಪಟ್ಟಿದ್ದಾರೆ. ಸಿಹಿ ಹಂಚಿ ಜಯ ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದಾರೆ.
-
ನಾವು ಸೋತಿದ್ದರೂ ಇದು ನಮ್ಮ ಸೋಲಲ್ಲ: ಶಿವಾನಂದ ಪಾಟಿಲ್
ಸಿಂದಗಿ ಉಪಚುನಾವಣೆ ಕೈ ಅಭ್ಯರ್ಥಿ ಅಶೋಕ ಮನಗೂಳಿ ಸೋಲು ಹಿನ್ನೆಲೆ ಮಾಜಿ ಸಚಿವ,ಕಾಂಗ್ರೆಸ್ ಮುಖಂಡ ಶಿವಾನಂದ ಪಾಟಿಲ್ ಹೇಳಿಕೆ ನೀಡಿದ್ದಾರೆ. ಬಿಜೆಪಿಯವರು ದುಡ್ಡು ಹಂಚಿ ಗೆದ್ದಿದ್ದಾರೆ. ಇದು ಎಲ್ಲರಿಗೂ ಗೊತ್ತು. ನಾವು ಸೋತಿದ್ದರೂ ಇದು ನಮ್ಮ ಸೋಲಲ್ಲ. ಕಳೆದ ನಾಲ್ಕು ಚುನಾವಣೆಯಲ್ಲಿ ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಇಷ್ಟು ಹೆಚ್ಚು ಮತ ಪಡೆದಿರಲಿಲ್ಲ. ಆದರೆ ಈ ಬಾರಿ 60 ಸಾವಿರಕ್ಕೂ ಅಧಿಕ ಮತ ಪಡೆದು ಬುನಾದಿ ಹಾಕಿದ್ದೇವೆ. ಮುಂದಿನ ದಿನದಲ್ಲಿ ಖಂಡಿತ ಇಲ್ಲಿ ನಮ್ಮ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ ಎಂದು ತಿಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರಗೆ ಅಭಿನಂದನೆ
ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು ಹಿನ್ನೆಲೆಯಲ್ಲಿ, ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರಗೆ ಸಚಿವೆ ಶಶಿಕಲಾ ಜೊಲ್ಲೆ, ಲಕ್ಷ್ಮಣ ಸವದಿ ಅಭಿನಂದನೆ ಸಲ್ಲಿಸಿದ್ದಾರೆ. ಭೂಸನೂರಗೆ ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ. ವಿಜಯಪುರ ನಗರದ ಖಾಸಗಿ ಹೊಟೆಲ್ನಲ್ಲಿ ಭೇಟಿ ಮಾಡಿ ನಾಯಕರಿಗೆ ಸಿಹಿ ತಿನ್ನಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.
ಬಿಜೆಪಿ ಅವರು ದುಡ್ಡಿನಿಂದ ಚುನಾವಣೆ ಗೆದ್ದಿದ್ದಾರೆ: ಅಶೋಕ ಮನಗೂಳಿ
ನಾನು ಸೋತಿರಬಹುದು. ಆದರೆ ಕ್ಷೇತ್ರದ ಜನರು ನನಗೆ 60 ಸಾವಿರಕ್ಕೂ ಅಧಿಕ ಮತ ನೀಡಿದ್ದಾರೆ. ನಾನು ಇದನ್ನು ಸೋಲು ಅಂತ ಕರೆಯೋದಿಲ್ಲ. ಬಿಜೆಪಿ ಅವರು ದುಡ್ಡಿನಿಂದ ಚುನಾವಣೆ ಗೆದ್ದಿದ್ದಾರೆ. ನನಗೆ ಮತ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಅನುಕಂಪದ ಆಧಾರದ ಮೇಲೆ ಸೋತವರು ಬಹಳಷ್ಟು ಜನರಿದ್ದಾರೆ.ಮೊದಲ ಚುನಾವಣೆ ನನಗೆ ಇದು ಸ್ವಲ್ಪ ಅನುಭವದ ಕೊರತೆಯೂ ಇರಬಹುದು. ಈಗ ಸೋತಿರಬಹುದು, ಆದರೆ ಹೆಚ್ಚು ಮತ ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಎತ್ತರಕ್ಕೆ ಒಯ್ದಿದ್ದೇನೆ ಎಂಬ ಸಮಾಧಾನವಿದೆ. ಇನ್ನಷ್ಟು ಗಟ್ಟಿಯಾಗಿ ಕೆಲಸ ಮಾಡುತ್ತೇನೆ ಎಲ್ಲಿ ಎಡಿವಿದೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ ಎಂದು ಅಶೋಕ ಮನಗೂಳಿ ಹೇಳಿದ್ದಾರೆ.
ಸಾಧಿಸಿದ್ದೇವೆಂದು ಕಾಂಗ್ರೆಸ್ ಸಂಭ್ರಮಿಸುವುದು ಬೇಡ: ಮಾಜಿ ಸಿಎಂ ಯಡಿಯೂರಪ್ಪ
ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆ ಆಗಿದೆ. ಸಾಧಿಸಿದ್ದೇವೆಂದು ಕಾಂಗ್ರೆಸ್ ಸಂಭ್ರಮಿಸುವುದು ಬೇಡ. ಎಲ್ಲಿ ಎಡವಿದ್ದೇವೆ ಎಂದು ನಾವು ಚರ್ಚೆ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಗೆ ಭೇಟಿ ನೀಡುತ್ತೇನೆ. ಈ ಸೋಲನ್ನು ಸಿಎಂ ಒಬ್ಬರ ಮೇಲೆ ಹಾಕಲು ಆಗಲ್ಲ. ಎಲ್ಲರೂ ಕುಳಿತು ಸೋಲಿನ ಬಗ್ಗೆ ಚರ್ಚೆಯನ್ನು ಮಾಡ್ತೇವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಹಾನಗಲ್‌ನಲ್ಲಿ ನಾವು ನಿರೀಕ್ಷಿಸಿದಷ್ಟು ಮತ ಬಂದಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ
ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. ಹಾನಗಲ್‌ನಲ್ಲಿ ನಾವು ನಿರೀಕ್ಷಿಸಿದಷ್ಟು ಮತ ಬಂದಿಲ್ಲ. ನಾವು ಹೋರಾಟ ಮಾಡಿದ್ದೇವೆ. ಉದಾಸಿ ಅವರಿಗೆ ಸಲ್ಲಬೇಕಿದ್ದ ಮತಗಳ ಬೆಂಬಲ ಪಡೆದುಕೊಳ್ಳಲು ನಮಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ 2-3ವರ್ಷದಲ್ಲಿ ಮಾಡಿರುವ ಕೆಲಸವನ್ನು ಜನ ಕೈ ಹಿಡಿದಿದ್ದಾರೆ. ಹೀಗಾಗಿ ಬಿಜೆಪಿಗೆ ಹಿನ್ನಡೆಯಾಗಿದೆ. ನಾನು ಅದನ್ನು ಒಪ್ಪಿಕೊಳ್ತೇನೆ. ನಮ್ಮ ಪಕ್ಷದ ಹಿರಿಯರು, ಕಾರ್ಯಕರ್ತರು ಕಷ್ಟಪಟ್ಟು ಕೆಲಸ ಮಾಡಿದರು ಅವರಿಗೂ ನಾನು ಧನ್ಯವಾದ ಹೇಳುತ್ತೇನೆ. ಚುನಾವಣೆಯಲ್ಲಿ ಒಂದರಲ್ಲಿ ಗೆದ್ದು, ಒಂದರಲ್ಲಿ ಸೋತಿದ್ದೇವೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಇದೇ ರೀತಿ ಆಗಿತ್ತು. ಈ ಫಲಿತಾಂಶವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ಮುಂದೆ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾನಗಲ್‌ನಲ್ಲಿ ಸಣ್ಣಮಟ್ಟದ ಸೋಲಾಗಿದೆ, ಇದನ್ನು ಸವಾಲಾಗಿ ಸ್ವೀಕಾರ ಮಾಡುತ್ತೇವೆ -ನಳಿನ್ ಕುಮಾರ್ ಕಟೀಲ್
ಸಿಂದಗಿ, ಹಾನಗಲ್ ಉಪಚುನಾವಣೆ ಫಲಿತಾಂಶ ಪ್ರಕಟ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಂದಗಿಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವಾಗಿದೆ. ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದು ಸಂಘಟಿತ ಪ್ರಯತ್ನದ ಫಲ. ಹಾನಗಲ್‌ನಲ್ಲಿ ಸಣ್ಣಮಟ್ಟದ ಸೋಲಾಗಿದೆ. ಇದನ್ನು ಸವಾಲಾಗಿ ಸ್ವೀಕಾರ ಮಾಡುತ್ತೇವೆ. ಮುಂದಿನ ಚುನಾವಣೆಗೆ ಇನ್ನಷ್ಟು ಹೋರಾಟ ಮಾಡುತ್ತೇವೆ. ಮತದಾರ ಕೊಟ್ಟ ತೀರ್ಪಿಗೆ ತಲೆಬಾಗುತ್ತೇವೆ. ಹಾನಗಲ್ ಕ್ಷೇತ್ರ ದ ಸೋಲು ಮುಖ್ಯಮಂತ್ರಿಗೆ ಹಿನ್ನಡೆಯಲ್ಲ. ಅವರ ಕ್ಷೇತ್ರ ಅಂತಾನೂ ಇಲ್ಲ. ಅಲ್ಲಿನ ಮತದಾರ ಆಮಿಷಕ್ಕೆ ಒಳಗಾಗಿದ್ದಾನೆ. ಈ ಹಿನ್ನೆಲೆಯಲ್ಲಿ ನಮಗೆ ಹಿನ್ನಡೆಯಾಗಿದೆ. ಈ ಬಗ್ಗೆ ಕೂತು ಚರ್ಚೆ ಮಾಡುತ್ತೇವೆ ಎಂದಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ ಮಾನೆಗೆ ಜಯ
ಕಾಂಗ್ರೆಸ್‌ನ ಮಾನೆಗೆ 7,598 ಮತಗಳ ಅಂತದಿಂದ ಜಯ ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ 87,113 ಮತಗಳು ಪಡೆದಿದ್ದು ಬಿಜೆಪಿಯ ಶಿವರಾಜ್ ಸಜ್ಜನರಗೆ 79,515 ಮತಗಳು, ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ಗೆ 921 ಮತಗಳು ಸಿಕ್ಕಿವೆ
ನನ್ನ ಸೋಲಿಗೆ ಕಾರಣ ಏನು ಎಂದು ಗೊತ್ತಾಗುತ್ತಿಲ್ಲ -ಶಿವರಾಜ್ ಸಜ್ಜನರ
ನನ್ನ ಸೋಲಿಗೆ ಕಾರಣ ಏನು ಎಂದು ಗೊತ್ತಾಗುತ್ತಿಲ್ಲ. ಇದು ನನ್ನ ಸೋಲು ಹೌದು ಪಕ್ಷದ ಸೋಲು ಕೂಡ ಹೌದು. ಕ್ಷೇತ್ರದ ಜನ ಅಭಿವೃದ್ಧಿ ಪರ ಮತ ಹಾಕಿಲ್ಲ ಎಂದು ಹಾನಗಲ್ ಪರಾಜಿತ ಅಭ್ಯರ್ಥಿ ಶಿವರಾಜ್ ಸಜ್ಜನರ ನೋವಿನಿಂದ ಹೇಳಿಕೆ ನೀಡಿದ್ದಾರೆ. ಸಮಯದ ಅಭಾವದಿಂದ ಎಲ್ಲರನ್ನ ತಲುಪಲು ಆಗಲಿಲ್ಲ. ಮೇಲ್ನೋಟಕ್ಕೆ ಇದು ವೈಯಕ್ತಿಕ ಸೋಲು ಅನಿಸುತ್ತಿದೆ. ಬೆಲೆ ಏರಿಕೆ ಉಪಚುನಾವಣೆ ಮೇಲೆ ಪ್ರಭಾವ ಬೀರಿಲ್ಲ. ನನ್ನ ವಿರುದ್ಧ ಯಾವುದೇ ಅಪಸ್ವರ ಇರಲಿಲ್ಲ. ಕಾಂಗ್ರೆಸ್ನವರು ಸೋದರರ ಮಧ್ಯೆ ಸಂಘರ್ಷ ತಂದಿಟ್ರು ಎಂದು ತಿಳಿಸಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ ಮಾನೆಗೆ ಜಯ
ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ ಮಾನೆಗೆ ಬಹುತೇಕ ಜಯ ಸಿಕ್ಕಿದ್ದು ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. 18ನೇ ಸುತ್ತಿನ ಬಳಿಕ ಮಾನೆಗೆ 7,325 ಮತಗಳ ಮುನ್ನಡೆ ಸಿಕ್ಕಿದೆ. ಸುಮಾರು 11 ಸಾವಿರ ಮತಗಳ ಎಣಿಕೆ ಮಾತ್ರ ಬಾಕಿಯಿದೆ.
ಹಾನಗಲ್: 17ನೇ ಸುತ್ತಿನಲ್ಲೂ ಕಾಂಗ್ರೆಸ್ಗೆ ಮುನ್ನಡೆ
ಹದಿನಾರನೇ ಸುತ್ತಿನ ಬಳಿಕ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಕಾಂಗ್ರೆಸ್ ಕಾಯ್ದುಕೊಂಡಿದೆ. ಕಾಂಗ್ರೆಸ್ 78,342, ಬಿಜೆಪಿ 71,326 ಮತ ಪಡೆದಿವೆ.
ಹಾನಗಲ್: 16ನೇ ಸುತ್ತಿನಲ್ಲೂ ಕಾಂಗ್ರೆಸ್ಗೆ ಮುನ್ನಡೆ
ಹದಿನಾರನೇ ಸುತ್ತಿನ ಬಳಿಕ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಕಾಂಗ್ರೆಸ್ ಕಾಯ್ದುಕೊಂಡಿದೆ. ಕಾಂಗ್ರೆಸ್ 73,450, ಬಿಜೆಪಿ 66,622 ಮತ ಪಡೆದಿವೆ.
ಹಾನಗಲ್: 15ನೇ ಸುತ್ತಿನಲ್ಲೂ ಕಾಂಗ್ರೆಸ್ಗೆ ಮುನ್ನಡೆ
ಹದಿನೈದನೇ ಸುತ್ತಿನ ಬಳಿಕ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಕಾಂಗ್ರೆಸ್ ಕಾಯ್ದುಕೊಂಡಿದೆ. ಕಾಂಗ್ರೆಸ್ 68,543, ಬಿಜೆಪಿ 62,228 ಮತ ಪಡೆದಿವೆ.
ಜೆಡಿಎಸ್ ಠೇವಣಿ ಕಳೆದುಕೊಳ್ಳುತ್ತೆಂದು ಮೊದಲೇ ಹೇಳಿದ್ದೆ: ಮಾಜಿ ಸಿಎಂ ಸಿದ್ದರಾಮಯ್ಯ
ನಾನು ಮೊದಲೇ ಹೇಳಿದ್ದೆ ಜೆಡಿಎಸ್ ಠೇವಣಿ ಕಳೆದುಕೊಳ್ಳುತ್ತದೆ ಎಂದು. ಅಲ್ಪ ಸಂಖ್ಯಾತ ಅಭ್ಯರ್ಥಿ ಹಾಕಿದ ಮಾತ್ರಕ್ಕೆ ಜನ ವೋಟ್ ಹಾಕೋಲ್ಲ. ನಾನು ಜೆಡಿಎಸ್ ಬಗ್ಗೆ ಮಾತಾಡೋಲ್ಲ. ಅವರು ಸ್ಪರ್ಧೆಯಲ್ಲೇ ಇಲ್ಲ. 2023 ರಲ್ಲೂ ಸ್ಪರ್ಧೆಗೆ ಇರೋಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಜನರಿಗೆ ಬೇಸರವಿದೆ: ಮಾಜಿ ಸಿಎಂ ಸಿದ್ದರಾಮಯ್ಯ
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಜನರಿಗೆ ಬೇಸರವಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಬೇಸತ್ತಿದ್ದಾರೆ. ಬಿಜೆಪಿಯವರು ಅಧಿಕಾರ ದುರುಪಯೋಗ ಮಾಡಿಕೊಂಡರು. ಆದರೂ ಜನರು ಈಗ ಬದಲಾವಣೆಯನ್ನು ಬಯಸುತ್ತಿದ್ದಾರೆ. ಈ ಉಪಚುನಾವಣೆ ಫಲಿತಾಂಶದಿಂದ ಅದು ಸ್ಪಷ್ಟವಾಗಿದೆ. ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವಾಗಿದೆ. ಉಪಚುನಾವಣೆಗಳು ಯಾವ ಚುನಾವಣೆಗೂ ದಿಕ್ಸೂಚಿ ಅಲ್ಲ. ಆದರೆ ಇದು ಎಚ್ಚರಿಕೆಯ ಗಂಟೆ ಎಂದ ಸಿದ್ದರಾಮಯ್ಯ
ಸಿಂದಗಿ ಕ್ಷೇತ್ರದಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ: ಮಾಜಿ ಸಿಎಂ ಸಿದ್ದರಾಮಯ್ಯ
ನಾವು ಸಿಂದಗಿಯಲ್ಲಿ ದೊಡ್ಡ ಅಂತರದಲ್ಲಿ ಸೋತಿದ್ದೇವೆ. ಕಾಂಗ್ರೆಸ್ ಪಕ್ಷ ಕಳೆದ ಬಾರಿ 3ನೇ ಸ್ಥಾನದಲ್ಲಿ ಇತ್ತು. ಆದರೆ ಈ ಬಾರಿ 2ನೇ ಸ್ಥಾನದಲ್ಲಿದೆ. 3ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಬಂದಿದ್ದು ಸಮಾಧಾನ. ಆದರೆ ಸೋಲು ಸೋಲೇ. ಸಿಂದಗಿ ಕ್ಷೇತ್ರದಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಎನ್ನುವುದು ಸಾಮಾನ್ಯ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಇದು ಮತದಾರರು ಕೊಟ್ಟಂತಹ ನಿರ್ಣಯ ಅದನ್ನು ನಾವು ಸ್ವಾಗತ ಮಾಡುತ್ತೇವೆ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಎನ್ನುವುದು ಸಾಮಾನ್ಯ. ನಾವು ಎಲ್ಲಿ ಎಡವಿದ್ದೇವೆ ಅನ್ನೋದನ್ನ ಪರಾಮರ್ಶೆ ಮಾಡಿಕೊಳ್ಳುತ್ತೇವೆ. ಈ ಬಾರಿ ಸೋಲು ಅನುಭವಿಸಿದ ಕ್ಷೇತ್ರಗಳಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿಕೆ ನೀಡಿದ್ದಾರೆ.
ಹಾನಗಲ್‌ನಲ್ಲಿ ಕಾಂಗ್ರೆಸ್ ಜಯಭೇರಿ: ಸಿಹಿ ಹಂಚಿ ಸಂಭ್ರಮಾಚರಣೆ
ಹಾನಗಲ್‌ನಲ್ಲಿ ಕಾಂಗ್ರೆಸ್ ಜಯಭೇರಿ ಹಿನ್ನಲೆಯಲ್ಲಿ ಕಾಂಗ್ರೆಸ್ ಕೇಂದ್ರ ಕಚೇರಿ ಎದುರು ನೃತ್ಯ ಮಾಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಸಿಹಿ ತಿಂಡಿಗಳನ್ನು ಹಂಚಿ ಸಂಭ್ರಮಿಸಿದ್ದಾರೆ.
ಸಾರ್ವತ್ರಿಕ ಚುನಾವಣೆಗೆ ಇದು ದಿಕ್ಸೂಚಿ: ಕಾಂಗ್ರೆಸ್ ಮುಖ್ಯ ಸಚೇತಕ ಅಜಯ್ ಸಿಂಗ್
ಉಪಚುನಾವಣೆ ಫಲಿತಾಂಶ ಹೊರ ಬರುತ್ತಿದೆ. ಒಂದು ಕಡೆ ನಾವು ಗೆಲ್ತಾಯಿದ್ದೀವಿ. ಮತ್ತೊಂದು ಕಡೆ ಹಿನ್ನಡೆ ಇದೆ. ಎರಡು ಕಡೆ ಗೆಲ್ತೀವಿ ಅಂತ ನಿರೀಕ್ಷೆ ಇತ್ತು. ಎರಡರಲ್ಲಿ ಒಂದು ಗೆದ್ದಿದ್ದೀವಿ. ಸಾರ್ವತ್ರಿಕ ಚುನಾವಣೆಗೆ ಇದು ದಿಕ್ಸೂಚಿ. ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಹಾನಗಲ್, ಸಿಎಂ ಬೊಮ್ಮಾಯಿಯವರ ತವರು ಜಿಲ್ಲೆಯ ಕ್ಷೇತ್ರ. ಅಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಎಂದು ಕಾಂಗ್ರೆಸ್ ಮುಖ್ಯ ಸಚೇತಕ ಅಜಯ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ನಿವಾಸದಲ್ಲಿ ಜೈಕಾರ
ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಕೈ ಕಾರ್ಯಕರ್ತರು, ಮುಖಂಡರು ಆಗಮಿಸುತ್ತಿದ್ದಾರೆ. ಸಿದ್ದರಾಮಯ್ಯ ನಿವಾಸದಲ್ಲಿ ಸಿದ್ದರಾಮಯ್ಯಗೆ ಕಾರ್ಯಕರ್ತರು ಜೈಕಾರ ಹಾಕುತ್ತಿದ್ದಾರೆ. ಜತೆಗೆ ಶ್ರೀನಿವಾಸ ಮಾನೆಗೂ ಜೈಕಾರ ಹಾಕಿದ್ದಾರೆ. ಅಲ್ಲದೇ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಜೈಕಾರ ಕೂಗಿದ್ದಾರೆ.
ಕಾಂಗ್ರೆಸ್ಗಿಂತ ಬಿಜೆಪಿ ಹೆಚ್ಚು ಹಣವನ್ನು ಖರ್ಚು ಮಾಡಿದೆ: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ
ಸಿಂದಗಿಯಲ್ಲಿ ಕಾಂಗ್ರೆಸ್ನವರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಆದರೆ ಕಾಂಗ್ರೆಸ್ಗಿಂತ ಬಿಜೆಪಿ ಹೆಚ್ಚು ಹಣವನ್ನು ಖರ್ಚು ಮಾಡಿದೆ. ಪ್ರತಿ ವೋಟ್ಗೆ 10 ಸಾವಿರ ರೂ. ಕೊಟ್ಟಿದ್ದಾರೆಂದು ಚರ್ಚೆಯಿದೆ. ಕಾಂಗ್ರೆಸ್ ಪಕ್ಷದವರೂ ಚೆನ್ನಾಗಿ ಹಣ ಖರ್ಚುಮಾಡಿದ್ದಾರೆ ಎಂದು ದೆಹಲಿಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.
ಸಿಂದಗಿ ಕ್ಷೇತ್ರದ ಎಲ್ಲ ಮತದಾರರಿಗೆ ಧನ್ಯವಾದ: ಲಲಿತಾ ಭೂಸನೂರ
ಸಿಂದಗಿ ಕ್ಷೇತ್ರದ ಎಲ್ಲ ಮತದಾರರಿಗೆ ಧನ್ಯವಾದ. ಕ್ಷೇತಕ್ಕೆ ಬಂದು ಪ್ರಚಾರ ಮಾಡಿದ ಬಿಜೆಪಿ ನಾಯಕರಿಗೆ ಧನ್ಯವಾದ ಹೇಳುತ್ತೇನೆ. ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಗೂ ಧನ್ಯವಾದ. ಮತದಾನ ಮುಗಿದ ದಿನವೇ 25 ಸಾವಿರ ಮತಗಳಿಂದ ಗೆಲ್ಲುತ್ತೇವೆ ಅಂತಾ ಲೆಕ್ಕಾಚಾರ ಹಾಕಿದ್ದೇವು. ಅದೇ ರೀತಿ ಚುನಾವಣೆ ಫಲಿತಾಂಶ ಬಂದಿದೆ ಎಂದು ವಿಜಯಪುರದಲ್ಲಿ ಟಿವಿ9ಗೆ ರಮೇಶ್ ಭೂಸನೂರ ಪತ್ನಿ ಲಲಿತಾ ಭೂಸನೂರ ಹೇಳಿಕೆ ನೀಡಿದ್ದಾರೆ.
ಸಿಂದಗಿ ಕ್ಷೇತ್ರದಲ್ಲಿ ಜಯಗಳಿಸಿದ ಬಿಜೆಪಿ ಅಭ್ಯರ್ಥಿಗೆ ಟ್ವೀಟ್ ಮೂಲಕ ಅಭಿನಂದನೆ ತಿಳಿಸಿದ ಮಾಜಿ ಸಿಎಂ ಬಿಎಸ್‌ವೈ
ಸಿಂದಗಿ ಕ್ಷೇತ್ರದಲ್ಲಿ ಜಯಗಳಿಸಿದ ಬಿಜೆಪಿ ಅಭ್ಯರ್ಥಿಗೆ ಟ್ವೀಟ್ ಮೂಲಕ ಮಾಜಿ ಸಿಎಂ ಯಡಿಯೂರಪ್ಪ ಅಭಿನಂದನೆ ತಿಳಿಸಿದ್ದಾರೆ. ರಮೇಶ್ ಭೂಸನೂರಗೆ ಬಿಎಸ್‌ವೈ ಅಭಿನಂದನೆ ಸಲ್ಲಿಸಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನರು ಮೆಚ್ಚಿದ್ದಾರೆ. ಇದಕ್ಕೆ ಸಿಂದಗಿ ಕ್ಷೇತ್ರದ ಬಿಜೆಪಿ ಗೆಲವೇ ಸಾಕ್ಷಿಯಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಅಂತಿಮವಾಗಿ ಜನರ ತೀರ್ಪಿಗೆ ತಲೆ ಬಾಗಬೇಕಿದೆ: ಸಂಸದ ಪ್ರತಾಪ್ ಸಿಂಹ
ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಾಗಿದೆ. ಮತ್ತೊಂದು ಕ್ಷೇತ್ರದಲ್ಲಿ ಇನ್ನೂ ಅಂತಿಮ ಫಲಿತಾಂಶ ಬರಬೇಕಿದೆ. ಹಾನಗಲ್‌ನಲ್ಲಿ ಗೆಲವು ಬರಲಿದೆ ಎಂಬ ವಿಶ್ವಾಸ ಇದೆ. ಈಗ ಬಿಜೆಪಿಗೆ ಹೆಚ್ಚು ಬಲವನ್ನು ತಂದುಕೊಡುವ ಬೂತ್ಗಳ ಎಣಿಕೆ ನಡೆಯುತ್ತಿದೆ. ನನಗೆ ವಿಶ್ವಾಸ ಇದೆ ಹಾನಗಲ್‌ನಲ್ಲಿ ಸಣ್ಣ ಅಂತರದಲ್ಲಿ ಗೆಲ್ಲುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ಎಪ್ಪತ್ತೈದು ತೆಂಗಿನಕಾಯಿ ಒಡೆದು ಸಂಭ್ರಮ ಆಚರಿಸಿದ ಕಾಂಗ್ರೆಸ್ ಕಾರ್ಯಕರ್ತರು
ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆಲುವಿನತ್ತ ಸಾಗಿದ ಹಿನ್ನಲೆಯಲ್ಲಿ ಎಪ್ಪತ್ತೈದು ತೆಂಗಿನಕಾಯಿ ಒಡೆದು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮ ಆಚರಿಸಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿರುವ ಮಾಲತೇಶ ದೇವಸ್ಥಾನದ ಬಳಿ ಕಾಯಿ ಒಡೆದ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.
ಮೌಲ್ಯಗಳು ಇನ್ನೂ ಜೀವಂತ ಇದೇ ಎಂಬುದಕ್ಕೆ ಹಾನಗಲ್ ಚುನಾವಣೆ ಸಾಕ್ಷಿ
ಹಾನಗಲ್ ಚುನಾವಣೆ ಪ್ರಜಾಪ್ರಭುತ್ವದ ಗೆಲುವು. ಸ್ವರ್ಗ ತೊರಿಸುತ್ತೇನೆಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ನರಕ ತೊರಿಸಿದ್ದಾರೆ. ಮೌಲ್ಯಗಳು ಇನ್ನೂ ಜೀವಂತ ಇದೇ ಎಂಬುದಕ್ಕೆ ಹಾನಗಲ್ ಚುನಾವಣೆ ಸಾಕ್ಷಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿಕೆ ನೀಡಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ಜನಬಲ ಗೆದ್ದಿದೆ, ಹಣ ಬಲ ಸೋತಿದೆ: ಶ್ರೀನಿವಾಸ ಮಾನೆ
ಯಾವುದೇ ತಂತ್ರಗಳಿಗೆ ಮಣಿಯದೆ ನನಗೆ ಮತ ನೀಡಿದ್ದಾರೆ. ಹಾನಗಲ್‌ನ ಸ್ವಾಭಿಮಾನಿ ಜನರು ನನಗೆ ಮತ ನೀಡಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಜನಬಲ ಗೆದ್ದಿದೆ, ಹಣ ಬಲ ಸೋತಿದೆ ಎಂದು ಟಿವಿ9ಗೆ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಹೇಳಿಕೆ ನೀಡಿದ್ದಾರೆ.
ನಾನು ಇದುವರೆಗೂ ಉಪಚುನಾವಣೆ ಪ್ರಚಾರ ಮಾಡಿರಲಿಲ್ಲ: ಮಾಜಿ ಪ್ರಧಾನಿ ದೇವೇಗೌಡ
ಇದುವರೆಗೂ ನಾನು ಉಪಚುನಾವಣೆ ಪ್ರಚಾರ ಮಾಡಿರಲಿಲ್ಲ. ಆದರೆ ಸಿಂದಗಿ ಉಪಚುನಾವಣೆ ಹೋಗಿದ್ದೆ. ಸಿಂದಗಿ ಜನರು ಕಷ್ಟದಲ್ಲಿದ್ದರು, ಕೂಲಿಗೆ ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿದ್ದರು. ಆ ಭಾಗದ ಜನರಿಗೆ ಏನ್ ಮಾಡಿದ್ದೇನೆ ಅನ್ನೊದನ್ನು ಜನರೇ ಹೇಳುತ್ತಾರೆ ಎಂದು ನವದೆಹಲಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.
ಹಾನಗಲ್: 13ನೇ ಸುತ್ತಿನಲ್ಲೂ ಕಾಂಗ್ರೆಸ್ಗೆ ಮುನ್ನಡೆ
ಹದಿಮೂರನೇ ಸುತ್ತಿನ ಬಳಿಕ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಕಾಂಗ್ರೆಸ್ ಕಾಯ್ದುಕೊಂಡಿದೆ. ಕಾಂಗ್ರೆಸ್ 59985, ಬಿಜೆಪಿ 52922, ಜೆಡಿಎಸ್ 629 ಮತ ಪಡೆದಿವೆ.
ಹಾನಗಲ್ ಜನತೆ ಬಿಜೆಪಿ ಆಡಳಿತ ಸಾಕು ಎಂದಿದ್ದಾರೆ: ಡಿ.ಕೆ.ಶಿವಕುಮಾರ್
ಹಾನಗಲ್ ಜನತೆ ಬಿಜೆಪಿ ಆಡಳಿತ ಸಾಕು ಎಂದಿದ್ದಾರೆ. ಇದು ಸಿಎಂ, ರಾಜ್ಯ ಬಿಜೆಪಿಗೆ ಆಗಿರುವ ಮುಖಭಂಗ. ಮತದಾರರು ಕಾಂಗ್ರೆಸ್ ಕಡೆ ನೋಡ್ತಿದ್ದಾರೆ. ಕೆಲವರಿಗೆ ಪರ್ಸನಲ್ ಅಜೆಂಡಾ ಇರತ್ತದೆ. ಒಂದೇ ಕ್ಷೇತ್ರಕ್ಕೆ ಬಹಳ ಜನ ಆಕಾಂಕ್ಷಿಗಳಿರುತ್ತಾರೆ. ಮುಖ್ಯಮಂತ್ರಿ ಹೇಳಿದ್ದಾರಲ್ಲ ಫಲಿತಾಂಶ ಬಂದರೆ ಏನು ಅಂತ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ ನೀಡಿದ್ದಾರೆ.
ಮತ ಎಣಿಕೆ ಕೇಂದ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ
ಮತ ಎಣಿಕೆ ಕೇಂದ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಆಗಮಿಸಿದ್ದಾರೆ. ಶಿಳ್ಳೆ, ಕೇಕೆ ಹಾಕಿ ಕಾರ್ಯಕರ್ತರು ಸ್ವಾಗತಿಸಿದ್ದಾರೆ,
ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಅದು ಕಾಂಗ್ರೆಸ್ ಗೆಲುವು ಅಲ್ಲ, ಅದು ಮಾನೆ ಗೆಲುವು: ಎಂ.ಪಿ. ರೇಣುಕಾಚಾರ್ಯ
ಸಿಂದಗಿ ಮತ್ತು ಹಾನಗಲ್‌ನಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಇತ್ತು. ಅನಾರೋಗ್ಯದಿಂದ ಸಿ.ಎಂ. ಉದಾಸಿ ಕ್ಷೇತ್ರದಲ್ಲಿ ಓಡಾಡಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಮಾನೆ ಕೊವಿಡ್ ಸಮಯದಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಅದು ಕಾಂಗ್ರೆಸ್ ಗೆಲುವು ಅಲ್ಲ, ಅದು ಮಾನೆ ಗೆಲುವು. ಈ ಗೆಲುವನ್ನು ಇಟ್ಟುಕೊಂಡು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ರಾಜಕೀಯ ಮಾಡಲು ಹೊರಡುವುದು ಬೇಡ. ಪಂಚಮಸಾಲಿ ಸಮುದಾಯ ಯಾವತ್ತೂ ಬಿಜೆಪಿ ಜೊತೆಗೆ ಇದೆ ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಹಾನಗಲ್‌ನ ಎಲ್ಲ ಸ್ವಾಭಿಮಾನಿ ಮತದಾರರಿಗೆ ಸೆಲ್ಯೂಟ್ ಹೊಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಈಗ ತಾನೆ ಮಾನೆಯವರ ಹತ್ರ ಮಾತಾಡಿದ್ದೇನೆ. ಈ ಚುನಾವಣೆ ಫಲಿತಾಂಶ ನಾನು ವಿಶ್ಲೇಷಣೆ ಮಾಡಬೆಕಾಗಿದ್ದಿಲ್ಲ. ಮಾಧ್ಯಮದವರೇ ಎಲ್ಲ ಹೇಳಿದ್ದೀರಿ. ಮಾನೆ 60000 ಓಟಲ್ಲಿ ಹಿಂದೆ ಸೋತಿದ್ದರು. ಆದರೆ ಎರಡೂ ಕ್ಷೇತ್ರದ ಚುನಾವಣೆ ನೋಡಿದರೆ ಜನ ಬದಲಾವಣೆ ಬಯಸಿದ್ದಾರೆ. ಜನ ಬಿಜೆಪಿ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಇಡೀ ದೇಶಕ್ಕೆ ಒಂದು ದೊಡ್ಡ ಸಂದೇಶ. ಹಾನಗಲ್‌ನ ಎಲ್ಲ ಸ್ವಾಭಿಮಾನಿ ಮತದಾರರಿಗೆ ಸೆಲ್ಯೂಟ್ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹಾನಗಲ್: 12ನೇ ಸುತ್ತಿನಲ್ಲೂ ಕಾಂಗ್ರೆಸ್ಗೆ ಮುನ್ನಡೆ
ಹನ್ನೆರಡನೇ ಸುತ್ತಿನ ಬಳಿಕ ಕಾಂಗ್ರೆಸ್ ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಕಾಂಗ್ರೆಸ್ ಕಾಯ್ದುಕೊಂಡಿದೆ. ಕಾಂಗ್ರೆಸ್ 55665, ಬಿಜೆಪಿ 48847, ಜೆಡಿಎಸ್ 570 ಮತ ಪಡೆದಿವೆ.
ಹಾನಗಲ್: 11ನೇ ಸುತ್ತಿನಲ್ಲೂ ಕಾಂಗ್ರೆಸ್ಗೆ ಮುನ್ನಡೆ
ಹನ್ನೊಂದನೇ ಸುತ್ತಿನ ಬಳಿಕ ಕಾಂಗ್ರೆಸ್ ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಕಾಂಗ್ರೆಸ್ ಕಾಯ್ದುಕೊಂಡಿದೆ. ಕಾಂಗ್ರೆಸ್ 50637, ಬಿಜೆಪಿ 44178, ಜೆಡಿಎಸ್ 523 ಮತ ಪಡೆದಿವೆ.
ವಿಜಯಪುರಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಶಿಕಲಾ ಜೊಲ್ಲೆ
ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣರಾದ ಮಹಿಳಾ ಮತದಾರರಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಧನ್ಯವಾದ ತಿಳಿಸಿದ್ದಾರೆ. ಸಾಕಷ್ಟು ತಂತ್ರಗಾರಿಕೆ ಮಾಡಿ ಮತದಾರರನ್ನು ತಲುಪಿದ್ದೇವೆ. ಆರಂಭದಲ್ಲಿ ಮಹಿಳೆಯರು ಮನೆಯಿಂದ ಹೊರ ಬರುತ್ತಿರಲಿಲ್ಲ. ಮೆಹಂದಿ ಕಾರ್ಯಕ್ರಮ ಮಾಡಿ ಮಹಿಳೆಯರನ್ನು ಹೊರ ಕರೆತಂದೆವು. ವಿರೋಧ ಪಕ್ಷದ ಯಾವ ತಂತ್ರಗಾರಿಕೆಯೂ ನಡೆಯಲಿಲ್ಲ. ಪ್ರಧಾನಿ ಅವರ ಕಾರ್ಯಕ್ರಮ, ಸಿಎಂ ಅವರು ನೀಡಿದ ಕಾರ್ಯಕ್ರಮಕ್ಕೆ ಜನ ನಮಗೆ ಬೆಂಬಲ ನೀಡಿದ್ದಾರೆ ಎಂದು ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಉಪಚುನಾವಣೆ ಈ ಫಲಿತಾಂಶ ನಾನು ನಿರೀಕ್ಷಿಸಿರಲಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ
ಉಪಚುನಾವಣೆ ಈ ಫಲಿತಾಂಶ ನಾನು ನಿರೀಕ್ಷಿಸಿರಲಿಲ್ಲ. ಸಂಘಟನೆಯ ಕೊರತೆಯಿಂದ ಜೆಡಿಎಸ್‌ಗೆ ಹಿನ್ನಡೆಯಾಗಿದೆ. ಕಾರ್ಯಕರ್ತರ ಒತ್ತಾಸೆ ಮೇರೆಗೆ ಅಭ್ಯರ್ಥಿ ಹಾಕಿದ್ದೆ. ನಾನು ಉಪಚುನಾವಣೆಗೆ ಹೆಚ್ಚು ಒತ್ತು ಕೊಡುವುದಿಲ್ಲ. 2023ರ ಚುನಾವಣೆಯ ಮೇಲೆ ನಮ್ಮ ಗುರಿ ಇದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ಸಿಂದಗಿ ಕ್ಷೇತ್ರದಲ್ಲಿ 31185 ಮತಗಳಿಂದ ಗೆಲುವು ಸಾಧಿಸಿದ ಬಿಜೆಪಿ
ಬಿಜೆಪಿ 31185 ಮತಗಳಿಂದ ಗೆಲುವು ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿತ್ತು. ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರಗೆ 93,865, ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿಗೆ 62,680, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿಗೆ 4,353 ಪಡೆದುಕೊಂಡಿದ್ದಾರೆ.
ಕೊನೆವರಗೂ ಮತ ಎಣಿಕೆ ಕೇಂದ್ರದತ್ತ ಮುಖ ಮಾಡದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ
ವಿಜಯಪುರದಲ್ಲಿದ್ದರೂ ಮತ ಎಣಿಕೆ ಕೇಂದ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ದೂರ ಉಳಿದ್ದಾರೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಅಶೋಕ ಮನಗೂಳಿಗೆ ನಿರಾಸೆಯಾಗಿದ್ದು, ಕೊನೆವರೆಗೂ ಮತ ಎಣಿಕೆ ಕೇಂದ್ರದತ್ತ ಮುಖ ಮಾಡಲೇ ಇಲ್ಲ.
ಸಿಂದಗಿ ಉಪಚುನಾವಣೆ ಬಿಜೆಪಿ ಗೆಲುವು; ರಮೇಶ್ ಬೂಸನೂರು ಬೆಂಬಲಿಗರಿಂದ ವಿಜಯೋತ್ಸವ
ಸಿಂದಗಿ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಗೆಲುವು ಹಿನ್ನೆಲೆಯಲ್ಲಿ ರಮೇಶ್ ಬೂಸನೂರು ಬೆಂಬಲಿಗರಿಂದ ವಿಜಯೋತ್ಸವ. ಮತ ಎಣಿಕೆ ಕೇಂದ್ರದ ಮುಂದೆ ಪಟಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರು ಸಂಭ್ರಮಪಟ್ಟಿದ್ದಾರೆ.
ಸಿಂದಗಿ ಕ್ಷೇತ್ರದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ: ಸಚಿವ ಆರ್. ಅಶೋಕ್
ಸಿಂದಗಿಯಲ್ಲಿ ಬಹಳ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದೆ. ಸಿಂದಗಿ ಕ್ಷೇತ್ರದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾನಗಲ್ ನಲ್ಲಿ ನೆಕ್ ಟು ನೆಕ್ ಫೈಟ್ ಇದೆ. ಕಾಂಗ್ರೇಸ್ ನಡುವೆ ಬರೀ ಮೂರು ಸಾವಿರ ಅಂತರವಷ್ಟೇ ಇದೆ. ಅಲ್ಲೂ ಕೂಡ ಕಮಲ ಅರಳುತ್ತೆ ಎನ್ನುವ ವಿಶ್ವಾಸವಿದೆ. ಅಲ್ಲಿ ಕೂಡ ಕೂದಲೆಳೆ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಇದು ಮತದಾರರ ಗೆಲುವು, ಅವರ ಪಾದಗಳಿಗೆ ಹಣೆ ಹಚ್ಚಿ ನಮಸ್ಕಾರ ಮಾಡುತ್ತೇನೆ: ಲಕ್ಷ್ಮಣ ಸವದಿ
ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಹಿನ್ನೆಲೆ ವಿಜಯಪುರದಲ್ಲಿ ಟಿವಿ9ಗೆ ಮಾಜಿ ಸಚಿವ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ. ಇದು ಮತದಾರರ ಗೆಲುವು, ಅವರ ಪಾದಗಳಿಗೆ ಹಣೆ ಹಚ್ಚಿ ನಮಸ್ಕಾರ ಮಾಡುತ್ತೇನೆ. ಹೆಚ್ಚಿನ ಮಟ್ಟದಲ್ಲಿ ಮತದಾರರನ್ನು ತಲುಪುವ ಕೆಲಸ ಮಾಡಿದ್ದೇವೆ. ನಮ್ಮ ನಿರೀಕ್ಷೆಯಂತೆ 25ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇವೆ. ಸಿಂದಗಿಯಲ್ಲಿ ಸೋತ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.
ಸಿಂದಗಿ: 20ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ಇಪ್ಪತ್ತನೇ ಸುತ್ತಿನ ಬಳಿಕ ಬಿಜೆಪಿ 28462 ಮತಗಳಿಂದ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ 86222, ಕಾಂಗ್ರೆಸ್ 57760, ಜೆಡಿಎಸ್ 3894 ಮತ ಪಡೆದಿವೆ.
ಸಿಂದಗಿ: 19ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ಹತ್ತೊಂಬತ್ತನೇ ಸುತ್ತಿನ ಬಳಿಕ ಬಿಜೆಪಿ 28163 ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ 84650, ಕಾಂಗ್ರೆಸ್ 56487, ಜೆಡಿಎಸ್ 3729 ಮತ ಪಡೆದಿವೆ.
ಹಾನಗಲ್: 10ನೇ ಸುತ್ತಿನಲ್ಲೂ ಕಾಂಗ್ರೆಸ್ಗೆ ಮುನ್ನಡೆ
ಹತ್ತನೇ ಸುತ್ತಿನ ಬಳಿಕ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಕಾಂಗ್ರೆಸ್ ಕಾಯ್ದುಕೊಂಡಿದೆ. ಕಾಂಗ್ರೆಸ್ 45,515, ಬಿಜೆಪಿ 40,671, ಜೆಡಿಎಸ್ 466 ಮತ ಪಡೆದಿವೆ.
ಹಾನಗಲ್: 9ನೇ ಸುತ್ತಿನಲ್ಲೂ ಕಾಂಗ್ರೆಸ್ಗೆ ಮುನ್ನಡೆ
ಒಂಬತ್ತನೇ ಸುತ್ತಿನ ಬಳಿಕ ಕಾಂಗ್ರೆಸ್ ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಕಾಂಗ್ರೆಸ್ ಕಾಯ್ದುಕೊಂಡಿದೆ. ಕಾಂಗ್ರೆಸ್ 40785, ಬಿಜೆಪಿ 36066,, ಜೆಡಿಎಸ್ 432 ಮತ ಪಡೆದಿವೆ.
ಜನರ ಅನುಕಂಪ ನನ್ನ ಪರವಾಗಿ ಕೆಲಸ ಮಾಡಿದೆ: ರಮೇಶ್ ಭೂಸನೂರ್
ಸಿಂದಗಿ ಉಪಚುನಾವಣೆ ಗೆಲುವಿನ ನಂತರ ಟಿವಿ9 ಗೆ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ್ ಹೇಳಿಕೆ ನೀಡಿದ್ದು, ಜನರ ಅನುಕಂಪ ನನ್ನ ಪರವಾಗಿ ಕೆಲಸ ಮಾಡಿದೆ. ಎಲ್ಲರ ಶ್ರಮದಿಂದ ಗೆಲವು ಸಿಕ್ಕಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ತಂತ್ರ ಫಲಿಸಿಲ್ಲಾ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದ್ದಾರೆ.
ಸಿಂದಗಿ: 18ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ಹದಿನೆಂಟನೇ ಸುತ್ತಿನ ಬಳಿಕ ಬಿಜೆಪಿ 27383 ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ 80020, ಕಾಂಗ್ರೆಸ್ 52637, ಜೆಡಿಎಸ್ 3428 ಮತ ಪಡೆದಿವೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವು ಬಹುತೇಕ ಖಚಿತ
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವು ಬಹುತೇಕ ಖಚಿತವಾಗಿದ್ದು, ಬೆಂಬಲಿಗರಲ್ಲಿ ಸಂಭ್ರಮ ಮನೆ ಮಾಡಿದೆ.
ಸಿಂದಗಿ: 17ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ಹದಿನೇಳನೇ ಸುತ್ತಿನ ಬಳಿಕ ಬಿಜೆಪಿ 24566 ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ 74463, ಕಾಂಗ್ರೆಸ್ 49897, ಜೆಡಿಎಸ್ 3116 ಮತ ಪಡೆದಿವೆ.
ಸಿಂದಗಿ: 16ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ಹದಿನಾರನೇ ಸುತ್ತಿನ ಬಳಿಕ ಬಿಜೆಪಿ 20761 ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ 68444, ಕಾಂಗ್ರೆಸ್ 47683, ಜೆಡಿಎಸ್ 2965 ಮತ ಪಡೆದಿವೆ.
ಸಿಂದಗಿ ಹಾಗೂ ಹಾನಗಲ್‌ನಲ್ಲಿ ಗೆಲ್ಲುತ್ತೇವೆ: ಆರಗ ಜ್ಞಾನೇಂದ್ರ
ಹಾನಗಲ್ ಕ್ಷೇತ್ರದಲ್ಲಿ ಅಲ್ಪ ಸ್ವಲ್ಪ ಹಿನ್ನಡೆ ಇದೆ. ಆದರೆ ಇನ್ನೂ ಮತ ಎಣಿಕೆ ಬಾಕಿ ಇದೆ. ಸಿಂದಗಿ ಹಾಗೂ ಹಾನಗಲ್‌ನಲ್ಲಿ ಗೆಲ್ಲುತ್ತೇವೆ ಮುಂದಿನ ಸುತ್ತುಗಳಲ್ಲಿ ನಾವು ಮುನ್ನಡೆಯಾಗುತ್ತೇವೆ. ನಾನು ಕೂಡ ಹಾನಗಲ್ ಹೋಗಿ ಬಂದಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಪ್ರಚಾರ ಮಾಡಿದ್ದಾರೆ. ಉದಾಸಿ ಕುಟುಂಬವೂ ಸಾಕಷ್ಟು ಕೆಲಸ ಮಾಡಿದೆ. ಬೆಳಗಾವಿ ಎಂಪಿ ಎಲೆಕ್ಷನ್ನಲ್ಲಿ ಕೊನೆ ಕ್ಷಣದವರೆಗೂ ಇದೇ ರೀತಿ ಆಗಿ ಗೆದ್ದಿದ್ದೇವೆ. ಹಾನಗಲ್ನಲ್ಲೂ ಗೆಲ್ಲುವ ವಿಶ್ವಾಸವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸಿಂದಗಿ: 15ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ಹದಿನೈದನೇ ಸುತ್ತಿನ ಬಳಿಕ ಬಿಜೆಪಿ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ 63676, ಕಾಂಗ್ರೆಸ್ 44831, ಜೆಡಿಎಸ್ 2835 ಮತ ಪಡೆದಿವೆ. ಹೀಗಾಗಿ ಸಿಹಿ ಹಂಚಿ ರಮೇಶ್ ಬೂಸನೂರು ಬೆಂಬಲಿಗರು ವಿಜಯೋತ್ಸವ ಆಚರಿಸಿದ್ದಾರೆ.
ಹಾನಗಲ್: ಎಂಟನೇ ಸುತ್ತಿನ ಬಳಿಕ ಕಾಂಗ್ರೆಸ್ ಮುನ್ನಡೆ
ಹಾನಗಲ್ ಕ್ಷೇತ್ರದಲ್ಲಿ ಎಂಟನೇ ಸುತ್ತಿನ ಬಳಿಕ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 36,415, ಬಿಜೆಪಿ 32,002, ಜೆಡಿಎಸ್ 374 ಮತ ಪಡೆದಿದೆ.
ಹಾನಗಲ್: ಏಳನೇ ಸುತ್ತಿನ ಬಳಿಕ ಕಾಂಗ್ರೆಸ್ ಮುನ್ನಡೆ
ಹಾನಗಲ್ ಕ್ಷೇತ್ರದಲ್ಲಿ ಏಳನೇ ಸುತ್ತಿನ ಬಳಿಕ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 31620, ಬಿಜೆಪಿ 29368, ಜೆಡಿಎಸ್ 314 ಮತ ಪಡೆದಿದೆ.
ಸಿಂದಗಿ: 14ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ಹದಿನಾಲ್ಕನೇ ಸುತ್ತಿನ ಬಳಿಕ ಬಿಜೆಪಿ 18312 ಮತಗಳಿಂದ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ 60478, ಕಾಂಗ್ರೆಸ್ 42177, ಜೆಡಿಎಸ್ 2736 ಮತ ಪಡೆದಿವೆ.
ಹಾವೇರಿಯತ್ತ ಮುಖ ಮಾಡಿದ ಶ್ರೀನಿವಾಸ ಮಾನೆ
ಪ್ರತಿ ಸುತ್ತಿನಲ್ಲಿಯೂ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದ್ದಂತೆಯೇ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಹಾವೇರಿಯತ್ತ ಮುಖ ಮಾಡಿದ್ದಾರೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್ನಿಂದ ಹಾವೇರಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಲಾಠಿ ತೋರಿಸಿ ಕಾರ್ಯಕರ್ತರನ್ನು ಚದುರಿಸಿದ ಪೊಲೀಸರು
ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಬೆಂಬಲಿಗರು ಬಣ್ಣ ಎರಚಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಮತ ಎಣಿಕೆ ಕೇಂದ್ರದ ಬಳಿ ಕಾರ್ಯಕರ್ತರ ಆಗಮನ ಹಿನ್ನೆಲೆ ಲಾಠಿ ತೋರಿಸಿ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದ್ದಾರೆ.
ಸಿಂದಗಿ: 13ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ಹದಿಮೂರನೇ ಸುತ್ತಿನ ಬಳಿಕ ಬಿಜೆಪಿ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ 57484, ಕಾಂಗ್ರೆಸ್ 38621, ಜೆಡಿಎಸ್ 2538 ಮತ ಪಡೆದಿವೆ.
ಟಿವಿಯಲ್ಲಿ ಫಲಿತಾಂಶ ವೀಕ್ಷಿಸುತ್ತಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ
ಹಾನಗಲ್, ಸಿಂದಗಿ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಟಿವಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಫಲಿತಾಂಶ ವೀಕ್ಷಿಸುತ್ತಿದ್ದಾರೆ. ಕಾವೇರಿ ನಿವಾಸದಲ್ಲಿ ಬಿಎಸ್‌ವೈ ಟಿವಿ ವಿಕ್ಷಿಸುತ್ತಿದ್ದಾರೆ.
ಪರಸ್ಪರ ಬಣ್ಣ ಎರಚಿ ಕೇಕೆ ಹಾಕುತ್ತಿರುವ ಕಾಂಗ್ರೆಸ್ ಬೆಂಬಲಿಗರು
ಹಾನಗಲ್ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಮುನ್ನೆಡೆ ಹಿನ್ನಲೆ ಪರಸ್ಪರ ಬಣ್ಣ ಎರಚಿ ಬೆಂಬಲಿಗರು ಕೇಕೆ ಹಾಕುತ್ತಿದ್ದಾರೆ. ಮತ ಎಣಿಕೆ ಕೇಂದ್ರದ ಎದುರು ಸಂಭ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತೊಡಗಿದ್ದಾರೆ.
10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ: ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ
ಕಳೆದ ಬಾರಿ ಸೋಲಿನ ಬಳಿಕವೂ ಕ್ಷೇತ್ರದಲ್ಲಿದ್ದು ಸ್ಪಂದಿಸಿದ್ದೆ. ಈ ಬಾರಿ 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.
ಪರಸ್ಪರ ಬಣ್ಣ ಬಳಿದುಕೊಂಡು ವಿಜಯಘೋಷ ಮೊಳಗಿಸಿದ ಬಿಜೆಪಿ ಬೆಂಬಲಿಗರು
ಸಿಂದಗಿ ಉಪ ಚುನಾವಣಾ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, 12 ನೇ ಸುತ್ತಿಲ್ಲೂ ಬಿಜೆಪಿ ಅಭ್ಯರ್ಥಿ ರಮೇಶ್ ಬೂಸನೂರ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಾಗಿ ಬೆಂಬಲಿಗರು ವಿಜಯೋತ್ಸವ ಆಚರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ರಮೇಶ್ ಬೂಸನೂರ ಪುತ್ರ ಮಂಜುನಾಥ್ ಬೂಸನೂರಗೆ ಬಣ್ಣ ಬಳಿದು ವಿಜಯೋತ್ಸವ ಆಚರಿಸಿದ್ದಾರೆ.
ಸಿಂದಗಿ: 12ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ಹನ್ನೆರಡನೇ ಸುತ್ತಿನ ಬಳಿಕ ಬಿಜೆಪಿ 19718 ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ 54407, ಕಾಂಗ್ರೆಸ್ 34688, ಜೆಡಿಎಸ್ 2333 ಮತ ಪಡೆದಿವೆ.
ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ
ಸಿಂದಗಿಯಲ್ಲಿ ಮೊದಲ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ 5255, ಕಾಂಗ್ರೆಸ್ 2054, ಜೆಡಿಎಸ್ 73 ಸಿಂದಗಿಯಲ್ಲಿ 2ನೇ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ-9645, ಕಾಂಗ್ರೆಸ್-5614,ಜೆಡಿಎಸ್-283 ಸಿಂದಗಿಯಲ್ಲಿ 3ನೇ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ-13081, ಕಾಂಗ್ರೆಸ್-8231, ಜೆಡಿಎಸ್-423 ಸಿಂದಗಿಯಲ್ಲಿ 4ನೇ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ-18235, ಕಾಂಗ್ರೆಸ್-11227, ಜೆಡಿಎಸ್-596 ಸಿಂದಗಿಯಲ್ಲಿ 5ನೇ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ-23314, ಕಾಂಗ್ರೆಸ್-13563, ಜೆಡಿಎಸ್-710 ಸಿಂದಗಿಯಲ್ಲಿ 6ನೇ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ-27791, ಕಾಂಗ್ರೆಸ್-16160, ಜೆಡಿಎಸ್-941 ಸಿಂದಗಿಯಲ್ಲಿ 7ನೇ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ-32487, ಕಾಂಗ್ರೆಸ್-19162, ಜೆಡಿಎಸ್-1173 ಸಿಂದಗಿಯಲ್ಲಿ 8ನೇ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ-37021, ಕಾಂಗ್ರೆಸ್-22342, ಜೆಡಿಎಸ್-1328 ಸಿಂದಗಿಯಲ್ಲಿ 9ನೇ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ-41398, ಕಾಂಗ್ರೆಸ್-25448, ಜೆಡಿಎಸ್-1498 ಸಿಂದಗಿಯಲ್ಲಿ 10ನೇ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ-45640, ಕಾಂಗ್ರೆಸ್-28190, ಜೆಡಿಎಸ್-1607
ಸಿಂದಗಿ: 11ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ಹನ್ನೊಂದನೇ ಸುತ್ತಿನ ಬಳಿಕ ಬಿಜೆಪಿ 18577 ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ 50050, ಕಾಂಗ್ರೆಸ್ 31473, ಜೆಡಿಎಸ್ 2067 ಮತ ಪಡೆದಿವೆ.
ಹೋಟೆಲ್ನಲ್ಲಿಯೇ ಕುಳಿತು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಲೆಕ್ಕಚಾರ
ಹಾನಗಲ್‌ನಲ್ಲಿ ಕ್ಷಣ ಕ್ಷಣಕ್ಕೂ ಅಂತರ ಹೆಚ್ಚಿದ ಹಿನ್ನಲೆ ಹೋಟೆಲ್ನಲ್ಲಿಯೇ ಕುಳಿತು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಲೆಕ್ಕಚಾರ ಹಾಕುತ್ತಿದ್ದಾರೆ. ಪ್ರತಿ ಬೂತ್ನ ಮತದಾನದ ಅಂಕಿ ಅಂಶ ಹಿಡಿದು ಲೆಕ್ಕಚಾರ ಮಾಡುತ್ತಿದ್ದಾರೆ. ಯಾವ ಬೂತ್ನಲ್ಲಿ ಹೆಚ್ಚಿಗೆ ಮತ ಬಂದಿದೆ ಎಂದು ಶ್ರೀನಿವಾಸ್ ಮಾನೆ ಲೆಕ್ಕಾಚಾರ ಹಾಕುತ್ತಿದ್ದಾರೆ.
ಸಿಂದಗಿ: 10ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ಹತ್ತನೇ ಸುತ್ತಿನ ಬಳಿಕ ಬಿಜೆಪಿ 17460 ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ 45640, ಕಾಂಗ್ರೆಸ್ 28190, ಜೆಡಿಎಸ್ 1607 ಮತ ಪಡೆದಿವೆ.
ಎಲ್ಲರ ಶ್ರಮದಿಂದ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತೇನೆ: ರಮೇಶ್ ಭೂಸನೂರ್
ಸಿಂದಗಿ ಉಪಚುನಾವಣೆಯಲ್ಲಿ ಈಗಾಗಲೇ ಹತ್ತು ಸಾವಿರ ಮುನ್ನಡೆ ಪಡೆದಿದ್ದೇನೆ. ಇಪ್ಪತ್ತೈದು ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸುತ್ತೇನೆ. ಎಲ್ಲರ ಶ್ರಮದಿಂದ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ್
ಹಾನಗಲ್: ಆರನೇ ಸುತ್ತಿನ ಬಳಿಕ ಕಾಂಗ್ರೆಸ್ ಮುನ್ನಡೆ
ಹಾನಗಲ್ ಕ್ಷೇತ್ರದಲ್ಲಿ ಆರನೇ ಸುತ್ತಿನ ಬಳಿಕ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 27244, ಬಿಜೆಪಿ 25746, ಜೆಡಿಎಸ್ 244 ಮತ ಪಡೆದಿದೆ.
ಸಿಂದಗಿ: ಒಂಬತ್ತನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ಒಂಬತ್ತನೇ ಸುತ್ತಿನ ಬಳಿಕ ಬಿಜೆಪಿ 15950 ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ 41398, ಕಾಂಗ್ರೆಸ್ 25448, ಜೆಡಿಎಸ್ 1498 ಮತ ಪಡೆದಿವೆ.
ಸಿಂದಗಿ: ಎಂಟನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ಎಂಟನೇ ಸುತ್ತಿನ ಬಳಿಕ ಬಿಜೆಪಿ 14679 ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ 37021, ಕಾಂಗ್ರೆಸ್ 22342, ಜೆಡಿಎಸ್ 1328 ಮತ ಪಡೆದಿವೆ.
ಹಾನಗಲ್: ಐದನೇ ಸುತ್ತಿನ ಬಳಿಕ ಕಾಂಗ್ರೆಸ್ ಮುನ್ನಡೆ
ಹಾನಗಲ್ ಕ್ಷೇತ್ರದಲ್ಲಿ ಐದನೇ ಸುತ್ತಿನ ಬಳಿಕ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 23344, ಬಿಜೆಪಿ 22024, ಜೆಡಿಎಸ್ 204 ಮತ ಪಡೆದಿದೆ.
ಹಾನಗಲ್: ನಾಲ್ಕನೇ ಸುತ್ತು ಮುಕ್ತಾಯದ ನಂತರ ಕಾಂಗ್ರೆಸ್ 250 ಮತಗಳಿಂದ ಮುನ್ನಡೆ
ಹಾನಗಲ್ ಕ್ಷೇತ್ರದಲ್ಲಿ ನಾಲ್ಕನೇ ಸುತ್ತು ಮುಕ್ತಾಯದ ನಂತರ ಕಾಂಗ್ರೆಸ್ 250 ಮತಗಳಿಂದ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ – 18019, ಬಿಜೆಪಿ – 17769, ಜೆಡಿಎಸ್ – 149 ಮತ ಪಡೆದುಕೊಂಡಿವೆ.
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆದ್ದೆ ಗೆಲ್ಲುತ್ತಾರೆ ಎಂದು ಟ್ರಾಕ್ಟರ್ ಬೆಟ್ಟಿಂಗ್ ಕಟ್ಟಿದ ಅಭಿಮಾನಿ
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆದ್ದೆ ಗೆಲ್ಲುತ್ತಾರೆ ಎಂದು ಶ್ರೀನಿವಾಸ್ ಮಾನೆ ಅಭಿಮಾನಿ ಟ್ರಾಕ್ಟರ್ ಬೆಟ್ಟಿಂಗ್ ಕಟ್ಟಿದ್ದಾರೆ. ಬಿಜೆಪಿಯರು ಒಂದು ಮತಕ್ಕೆ 2500 ರೂಪಾಯಿ ಕೊಟ್ಟಿದ್ದಾರೆ. ಕಾಂಗ್ರೆಸ್ ಪ್ರಾಮಾಣಿಕವಾಗಿ ಗೆಲ್ಲುತ್ತದೆ ಎಂದು ಅಭಿಮಾನಿ ಹೇಳಿದ್ದಾರೆ.
ಏಳನೇ ಸುತ್ತಿನ ಮತ ಎಣಿಕೆ ಆರಂಭ
ಮತ ಎಣಿಕೆ ಕಾರ್ಯ ಮುಂದುವರಿದೆ. ಏಳನೇ ಸುತ್ತು ಮುಕ್ತಾಯದ ವೇಳೆ ಬಿಜೆಪಿ 32587, ಕಾಂಗ್ರೆಸ್ 19162, ಜೆಡಿಎಸ್ 1173 ಮತ ಪಡೆದಿವೆ. ಬಿಜೆಪಿ 13425 ಮತಗಳ ಮುನ್ನಡೆ ಸಾಧಿಸಿದೆ.
ಸಿಂದಗಿ: ಆರನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ಆರನೇ ಸುತ್ತಿನ ಬಳಿಕ ಬಿಜೆಪಿ 11631 ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ 27791, ಕಾಂಗ್ರೆಸ್ 16160, ಜೆಡಿಎಸ್ 941 ಮತ ಪಡೆದಿದೆ.
ಬಿಜೆಪಿ ಕಾರ್ಯಕರ್ತರ ಭರ್ಜರಿ ಡ್ಯಾನ್ಸ್
ಸಿಂದಗಿ ಉಪಚುನಾವಣೆಯಲ್ಲಿ ರಮೇಶ್ ಬೂಸನೂರು ಮುನ್ನಡೆ ಬೆನ್ನಲ್ಲೇ ಮತ ಕೇಂದ್ರದ ಕಡೆ ಬಿಜೆಪಿ ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ಮತ ಎಣಿಕೆ ಕೇಂದ್ರದ ಬಳಿ ವಿಭಿನ್ನವಾಗಿ ಹೆಜ್ಜೆ ಹಾಕಿ ಬಿಜೆಪಿ ಕಾರ್ಯಕರ್ತನ ಸಂಭ್ರಮಿಸಿದ್ದಾರೆ. ಬಿಜೆಪಿ ಬಾವುಟ ಹಿಡಿದು ಬೂಸನೂರ ಪರ ಘೋಷಣೆ ಕೂಗಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.
ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ
ಮೊದಲ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ-5255, ಕಾಂಗ್ರೆಸ್-2054, ಜೆಡಿಎಸ್-73 ಎರಡನೇ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ-9645, ಕಾಂಗ್ರೆಸ್-5614, ಜೆಡಿಎಸ್-283 ಮೂರನೇ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ-13081, ಕಾಂಗ್ರೆಸ್-8231, ಜೆಡಿಎಸ್-423 ನಾಲ್ಕನೇ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ-18235, ಕಾಂಗ್ರೆಸ್-11227, ಜೆಡಿಎಸ್-596 ಐದನೇ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ-23314, ಕಾಂಗ್ರೆಸ್-13563, ಜೆಡಿಎಸ್-710
ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ
ಮೊದಲ ಸುತ್ತಿನಲ್ಲಿ ಪಡೆದ ಮತಗಳ ವಿವರ: ಕಾಂಗ್ರೆಸ್-4478, ಬಿಜೆಪಿ-4296, ಜೆಡಿಎಸ್-25 ಎರಡನೇ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ-8897, ಕಾಂಗ್ರೆಸ್-9025, ಜೆಡಿಎಸ್-75 ಮೂರನೇ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ-13286, ಕಾಂಗ್ರೆಸ್-13503, ಜೆಡಿಎಸ್-115 ನಾಲ್ಕನೇ ಸುತ್ತಿನಲ್ಲಿ ಪಡೆದ ಮತಗಳ ವಿವರ: ಬಿಜೆಪಿ-17,769, ಕಾಂಗ್ರೆಸ್-18,019, ಜೆಡಿಎಸ್-149
ಸಿಂದಗಿ: ಐದನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ಐದನೇ ಸುತ್ತಿನ ಬಳಿಕ ಬಿಜೆಪಿ 2743 ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಮೊದಲ ಸುತ್ತಿನಲ್ಲಿ 3201 ಮುನ್ನಡೆ. ಎಡರನೇ ಸುತ್ತಿನಲ್ಲಿ ಬಿಜೆಪಿ 830 ಮುನ್ನಡೆ, ಮೂರನೇ ಸುತ್ತಿನಲ್ಲಿ 819 ಮನ್ನಡೆ, ನಾಲ್ಕನೇ ಸುತ್ತಿನಲ್ಲಿ 2158 ಬಿಜೆಪಿ ಮುನ್ನಡೆ ಸಾಧಿಸಿದೆ.
ಸಿಂದಗಿ ಕ್ಷೇತ್ರಕ್ಕೆ ಬಾರದ ಕಾಂಗ್ರೆಸ್ ಅಭ್ಯರ್ಥಿ
ಸಿಂದಗಿ ಉಪಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಹಿನ್ನಲೆ ಮತ ಎಣಿಕೆ ಕೇಂದ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಇನ್ನು ಆಗಮಿಸಿಲ್ಲ. ವಿಜಯಪುರ ಸೈನಿಕ ಶಾಲೆಯಲ್ಲಿ ನಡೆಯುತ್ತಿರುವ ಮತ ಎಣಿಕೆ ಕೇಂದ್ರಕ್ಕೆ ವಿಜಯಪುರದಲ್ಲಿದ್ದರು ಅಶೋಕ ಮನಗೂಳಿ ಆಗಮಿಸಿಲ್ಲ.
ಸಿಂದಗಿ: ನಾಲ್ಕನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ನಾಲ್ಕನೇ ಸುತ್ತಿನ ಬಳಿಕ ಬಿಜೆಪಿ 7008 ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ 18235, ಕಾಂಗ್ರೆಸ್ 11227, ಜೆಡಿಎಸ್ 596 ಮತ ಪಡೆದಿದೆ.
ಸಿಂದಗಿ: ಮೂರನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ಮೂರನೇ ಸುತ್ತಿನ ಬಳಿಕ ಬಿಜೆಪಿ 4,850 ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ 13081, ಕಾಂಗ್ರೆಸ್ 8231, ಜೆಡಿಎಸ್ 423 ಮತ ಪಡೆದಿದೆ.
ಹಾನಗಲ್: 3ನೇ ಸುತ್ತಿನ ಬಳಿಕ ಕಾಂಗ್ರೆಸ್ ಮುನ್ನಡೆ
ಹಾನಗಲ್ ಕ್ಷೇತ್ರದಲ್ಲಿ ಮೂರನೇ ಸುತ್ತಿನ ಬಳಿಕ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 13503, ಬಿಜೆಪಿ 13286, ಜೆಡಿಎಸ್ 115 ಮತ ಪಡೆದಿದೆ. 217 ಮತಗಳಿಂದ ಕಾಂಗ್ರೆಸ್‌ನ ಶ್ರೀನಿವಾಸ್ ಮಾನೆಗೆ ಮುನ್ನಡೆಯಾಗಿದೆ.
ಎರಡು ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ: ಬಸವರಾಜ ಬೊಮ್ಮಾಯಿ
ಇವತ್ತು 11 ಗಂಟೆಗೆ ಕಬಿನಿ ಜಲಾಶಯಕ್ಕೆ ಭಾಗೀನ ಹಾಗೂ ಕೆಆರ್ಎಸ್ಗೆ ಭಾಗೀನ ಕೊಟ್ಟು ಬರುತ್ತೇನೆ. ಉಪಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ. ಎರಡು ಗಂಟೆಯಲ್ಲಿ ಸಂಪೂರ್ಣ ಚಿತ್ರಣ ಬರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮನೆಯಲ್ಲೇ ಕುಳಿತು ಫಲಿತಾಂಶ ಪಡೆಯುತ್ತಿರುವ ಸಿಎಂ
ಹಾನಗಲ್ ಹಾವು ಏಣಿ ಆಟದ ಫಲಿತಾಂಶದಿಂದ ಟೆನ್ಶನ್ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿ ಮನೆಯಲ್ಲೇ ಕುಳಿತು ಫಲಿತಾಂಶ ಪಡೆಯುತ್ತಿದ್ದಾರೆ. ಹಾನಗಲ್ ಮತ ಎಣಿಕೆ ಕೇಂದ್ರದಲ್ಲೇ ಬಿಜೆಪಿ ಅಭ್ಯರ್ಥಿ ಇದ್ದು ಕಾಂಗ್ರೆಸ್ ಅಭ್ಯರ್ಥಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ಗೆ ತೆರಳಿದ್ದಾರೆ. ಹಾನಗಲ್ 2 ಸುತ್ತು ಬಳಿಕ 128 ಮತಗಳಿಂದ ‘ಕೈ’ ಮುನ್ನಡೆಯಲ್ಲಿದೆ.
ಬೆಂಗಳೂರಿನಿಂದ ದೆಹಲಿಗೆ ತೆರಳಿದ ಮಾಜಿ ಪ್ರಧಾನಿ ದೇವೆಗೌಡ
ಮಾಜಿ ಪ್ರಧಾನಿ ದೇವೆಗೌಡ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ಹೆಚ್ ಡಿಡಿ ದೆಹಲಿಗೆ ಪ್ರಯಾಣ ಬೆಳೆಸಿದ್ದು ಸಂಜೆ 8ಕ್ಕೆ ಬೆಂಗಳೂರಿಗೆ ವಾಪಸು ಆಗಲಿದ್ದಾರೆ.
ಹುಬ್ಬಳ್ಳಿಯ ಖಾಸಗಿ ಹೋಟಲ್ಗೆ ಶ್ರೀನಿವಾಸ ಮಾನೆ ಶಿಫ್ಟ್
ಹಾನಗಲ್ ನಲ್ಲಿ ಹಾವು ಏಣಿ ಆಟ ಶುರುವಾದ ಹಿನ್ನಲೆಯಲ್ಲಿ ಹಾನಗಲ್ ಕೈ ಅಭ್ಯರ್ಥಿ ಶ್ರೀನಿವಾಸ ಮಾನೆ ಹುಬ್ಬಳ್ಳಿಯ ಹೊರವಲಯದ ಖಾಸಗಿ ಹೋಟಲ್ಗೆ ಬಂದಿದ್ದಾರೆ. ತಮ್ಮ ಬೆಂಬಲಿಗರ ಜೊತೆ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.
ಸಿಂದಗಿ-ಮೂರನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
ಸಿಂದಗಿ ಕ್ಷೇತ್ರದ ಉಪಚುನಾವಣೆ ಮತ ಎಣಿಕೆಯಲ್ಲಿ ಮೂರನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ ಸಿಕ್ಕಿದೆ. 3ನೇ ಸುತ್ತಿನ ಬಳಿಕ ಬಿಜೆಪಿ 4,850 ಮತಗಳ ಮುನ್ನಡೆ ಗಳಿಸಿದ್ದು ಆರಂಭದಿಂದಲೂ ಬಿಜೆಪಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 13081, ಕಾಂಗ್ರೆಸ್ 8231, ಜೆಡಿಎಸ್ 423 ಮತಗಳು ಸಿಕ್ಕಿವೆ.
ಎರಡನೆ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್ 128 ಮತಗಳ ಮುನ್ನಡೆ
ಹಾನಗಲ್ ಎರಡನೆ ಸುತ್ತಿನ ಅಂತ್ಯಕ್ಕೆ ಬಂದಿದ್ದು ಕಾಂಗ್ರೆಸ್ 128 ಮತಗಳಿಂದ ಮುನ್ನಡೆ ಸಾಧಿಸಿದೆ. ಬಿಜೆಪಿ- 8897, ಕಾಂಗ್ರೆಸ್- 9025, ಜೆಡಿಎಸ್ – 75
ಹಾನಗಲ್‌ನಲ್ಲಿ ಕಾಂಗ್ರೆಸ್ ಹಿಂದಿಕ್ಕಿ ಬಿಜೆಪಿ ಮುನ್ನಡೆ
ಎರಡನೇ ಸುತ್ತಿನ ಮತ ಎಣಿಕೆ ಬಳಿಕ ಬಿಜೆಪಿ ಮುನ್ನಡೆ ಸಾಧಿಸಿದೆ. 54 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದೆ. ಬಿಜೆಪಿ 4601, ಕಾಂಗ್ರೆಸ್ 4547, ಜೆಡಿಎಸ್ 50 ಮತ ಪಡೆದಿದೆ.
ಸಿಂದಗಿಯಲ್ಲಿ ಮೂರನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ
ಸಿಂದಗಿಯಲ್ಲಿ ಮೂರನೇ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ರಮೇಶ್ ಬೂಸನೂರ ಅವರಿಗೆ ಮೂರನೇ ಸುತ್ತಿನಲ್ಲಿ 280 ಮತಗಳ ಮುನ್ನಡೆ ದೊರೆತಿದೆ. ಆ ಮೂಲಕ ಬಿಜೆಪಿ 13801, ಕಾಂಗ್ರೆಸ್ 8231, ಜೆಡಿಎಸ್ 423 ಮತ ಪಡೆದಿದೆ.
ಬಿಜೆಪಿ ಕಾರ್ಯಕರ್ತರ ಸಂಭ್ರಮಚಾರಣೆ
ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆರಂಭಿಕ ಮುನ್ನಡೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಮತ ಎಣಿಕೆ ಕೇಂದ್ರದ ಬಳಿ ಬಿಜೆಪಿ ಬೆಂಬಲಿಗರು ಕುಣಿದು ಕುಪ್ಪಳಿಸಿದ್ದಾರೆ.
ಸಿಎಂ ನಿವಾಸಕ್ಕೆ ಸಚಿವ ಗೋವಿಂದ ಕಾರಜೋಳ ಆಗಮನ
ಸಿಎಂ ಜತೆಗೆ ಮೈಸೂರು ಮತ್ತು ಮಂಡ್ಯಕ್ಕೆ ಗೋವಿಂದ ಕಾರಜೋಳ ತೆರಳುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಗೆ ಸಚಿವ ಗೋವಿಂದ ಕಾರಜೋಳ ಆಗಮಿಸಿದ್ದಾರೆ.
ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ
ಆರಂಭಿಕ ಮುನ್ನಡೆ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರ ಸಮೀಪ ಬೆಂಬಲಿಗರು ಆಗಮಿಸುತ್ತಿದ್ದಾರೆ. ನೂರು ಮೀಟರ್ ನಿಷೆದಾಜ್ಞೆ ಇದ್ದರೂ ಬೆಂಬಲಿಗರು ಆಗಮಿಸುತ್ತಿದ್ದು, ಕಾರ್ಯಕರ್ತರನ್ನು ಕಳುಹಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಹಾನಗಲ್: 2ನೇ ಸುತ್ತಿನ ಬಳಿಕ 190 ಮತಗಳಿಂದ ಕಾಂಗ್ರೆಸ್ ಮುನ್ನಡೆ
ಹಾನಗಲ್‌ನಲ್ಲಿ ಎರಡನೇ ಸುತ್ತಿನಲ್ಲಿಯೂ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಗೆ ಮುನ್ನಡೆ ಯಾಗಿದೆ. ಎರಡನೇ ಸುತ್ತಿನಲ್ಲಿ ಮಾನೆಗೆ 190 ಮತಗಳ ಮುನ್ನಡೆ ದೊರೆತಿದೆ.
ಕಾಂಗ್ರೆಸ್ ಮುನ್ನಡೆಗೆ ಬರುತ್ತಿದ್ದಂತೆ ಮನೆಯಿಂದ ಹೊರಟ ಶ್ರೀನಿವಾಸ ಮಾನೆ
ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಗೆ ಬರುತ್ತಿದ್ದಂತೆ ಮನೆಯಿಂದ ಬೆಂಬಲಿಗರ ಜೊತೆ ಹಾವೇರಿಯತ್ತ ತೆರಳಿದ ಶ್ರೀನಿವಾಸ ಮಾನೆ. ಎರಡನೇ ಸುತ್ತಿನಲ್ಲಿಯೂ ಕೂಡಾ ಕಾಂಗ್ರೆಸ್ ಮುನ್ನಡೆಯಾಗಿದೆ.
ಸಿಎಂ ಭೇಟಿಗೆ ಆಗಮಿಸಿದ ಕರವೇ ಮುಖಂಡ ನಾರಯಣ್ ಗೌಡ
ಆರ್. ಟಿ ನಗರದ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಕರವೇ ಮುಖಂಡ ನಾರಯಣ್ ಗೌಡ ಆಗಮಿಸಿದ್ದಾರೆ.
ಇಂದು ಹಾನಗಲ್, ಸಿಂದಗಿ ಉಪಚುನಾವಣೆ: ಟಿವಿ ನೋಡುತ್ತಿರುವ ಸಿಎಂ
ಇಂದು ಹಾನಗಲ್, ಸಿಂದಗಿ ಉಪಚುನಾವಣೆ ಹಿನ್ನಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಟಿವಿ ವಿಕ್ಷಿಸುತ್ತಿದ್ದಾರೆ. ಆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಸಿಎಂ ಭೇಟಿಗೆ ಆಗಮಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ
ಆರ್. ಟಿ ನಗರದ ಸಿಎಂ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಭೇಟಿ ನೀಡಿದ್ದಾರೆ.
ಸಿಂದಗಿಯಲ್ಲಿ ಎರಡನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ
ಸಿಂದಗಿಯಲ್ಲಿ ಎರಡನೇ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ರಮೇಶ್ ಬೂಸನೂರ ಅವರಿಗೆ ಮುನ್ನಡೆಯಾಗಿದೆ. ಎರಡನೇ ಸುತ್ತಿನಲ್ಲಿ ರಮೇಶ್ ಬೂಸನೂರ 4,001 ಮತಗಳ ಮುನ್ನಡೆ ದೊರೆತಿದೆ.
25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇನೆ: ಬಿಜೆಪಿ ಅಭ್ಯರ್ಥಿ ರಮೇಶ್ ಬೂಸನೂರ
ಅಂಚೆ ಮತ ಎಣಿಕೆ ಹಾಗೂ ಮೊದಲ ಸುತ್ತಿನ ಮತದಲ್ಲೂ ಮುನ್ನಡೆ ಸಾಧಿಸಿದ್ದೇನೆ. ಚುನಾವಣೆಯಲ್ಲೂ ಗೆಲ್ಲೋದು ಖಚಿತ. 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇನೆ. ಚುನಾವಣೆಯಲ್ಲಿ ಯಾವುದೇ ಜಾತಿ ಲೆಕ್ಕಾಚಾರ ಮೊಸಳೆ ಕಣ್ಣೀರು ಏನು ನಡೆಯೋದಿಲ್ಲ. ಎಮ್ಸಿ ಮನಗೂಳಿ ಅವರಿಗಿಂತ ನನ್ನ ಮೇಲೆ ಜನರ ಅನುಕಂಪವಿದೆ. ನಾನು ಗೆಲ್ಲೋದು ಖಚಿತ ಎಂದು ರಮೇಶ್ ಬೂಸನೂರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 3201 ಮತಗಳ ಮುನ್ನಡೆ
ಸಿಂದಗಿ ಉಪಚುನಾವಣೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಮೊದಲ ಸುತ್ತಿನಲ್ಲಿ ಬಿಜೆಪಿ 5255, ಕಾಂಗ್ರೆಸ್ 2054, ಜೆಡಿಎಸ್ 73 ಮತ ಪಡೆದಿದೆ. ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 3201 ಮತಗಳ ಮುನ್ನಡೆ ಪಡೆದಿದ್ದಾರೆ.
ತೋಟದ ಮನೆಯಲ್ಲಿ ಕುಳಿತು ಟಿವಿ ವೀಕ್ಷಿಸುತ್ತಿರು ಹೆಚ್ಡಿಕೆ
ಸಿಂಧಗಿ ಮತ್ತು ಹಾನಗಲ್ ಉಪಚುನಾವಣೆ ಮತ ಎಣಿಕೆ ಹಿನ್ನೆಲೆ, ರಾಮನಗರ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ಬಳಿ ಇರುವ ತಮ್ಮ ತೋಟದ ಮನೆಯಲ್ಲಿ ಕುಳಿತು ಹೆಚ್.ಡಿ.ಕುಮಾರಸ್ವಾಮಿ ಟಿವಿ ವೀಕ್ಷಿಸುತ್ತಿದ್ದಾರೆ. ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ಹೆಚ್ಡಿಕೆ ಪಡೆದುಕೊಳ್ಳುತ್ತಿದ್ದಾರೆ.
ಹಾನಗಲ್‌ನಲ್ಲಿ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಗೆ ಮೊದಲ ಸುತ್ತಿನಲ್ಲಿ ಮುನ್ನಡೆಯಾಗಿದೆ. ಕಾಂಗ್ರೆಸ್ 4,478, ಬಿಜೆಪಿ 4,296, ಜೆಡಿಎಸ್‌ಗೆ 25 ಮತ ದೊರೆತಿದೆ. ಮೊದಲ ಸುತ್ತಿನಲ್ಲಿ ಶ್ರೀನಿವಾಸ ಮಾನೆಗೆ 182 ಮತಗಳಿಂದ ಮುನ್ನಡೆಯಾಗಿದೆ.
ಮತ ಎಣಿಕೆ ಕೇಂದ್ರ ಸಮೀಪ ಕಾರ್ಯಕರ್ತರ ಆಗಮನ
ಸಿಂದಗಿ ಉಪಚುನಾವಣೆ ಹಿನ್ನೆಲೆ ವಿಜಯಪುರ ಸೈನಿಕ ಶಾಲೆ ಮುಂದೆ ಕಾರ್ಯಕರ್ತರು ಆಗಮಿಸಿದ್ದಾರೆ. ತಮ್ಮ ಅಭ್ಯರ್ಥಿ ಗೆದ್ದರೆ ವಿಜಯೋತ್ಸವ ಆಚರಿಸಲು ಬೆಂಬಲಿಗರು ಸಿದ್ಧರಾಗಿದ್ದಾರೆ. ಮತ ಎಣಿಕೆ ಕೇಂದ್ರ ಸಮೀಪ ಬಿಜೆಪಿ, ಕಾಂಗ್ರೆಸ್ ಬೆಂಬಲಿಗರು ಬೀಡು ಬಿಟ್ಟಿದ್ದಾರೆ. ಹೀಗಾಗಿ ಮತ ಎಣಿಕೆ ಕೇಂದ್ರದಿಂದ ಪೊಲೀಸರು ಕಾರ್ಯಕರ್ತರನ್ನು ದೂರ ಕಳಿಸುತ್ತಿದ್ದಾರೆ. ಮತ ಎಣಿಕೆ ಕೇಂದ್ರದ ಸುತ್ತಲಿನ ನೂರು ಮೀಟರ್ ನಿಷೇದಾಜ್ಞೆ ಇರುವುದರಿಂದ ಬೆಂಬಲಿಗರಿಗೆ ದೂರ ನಿಲ್ಲುವಂತೆ ಪೊಲೀಸರು ತಿಳಿಸಿದ್ದಾರೆ.
ಕಾರ್ಯಕರ್ತರಿಗೆ ಹಣ ನೀಡಿದ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ
ಸಿಂದಗಿ ಉಪಚುನಾವಣೆ ಫಲಿತಾಂಶ ಹಿನ್ನೆಲೆ, ಮತ ಎಣಿಕಾ ಕೇಂದ್ರಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಕಾರ್ಯಕರ್ತರಿಗೆ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಹಣ ನೀಡಿದ್ದಾರೆ. ಮಾರ್ಗದಲ್ಲಿ ನಿಂತಿದ್ದ ಕಾರ್ಯಕರ್ತರಿಗೆ ಹಣ ಹಂಚಿಕೆ ಮಾಡಿದ್ದಾರೆ.
ಮತ ಎಣಿಕಾ ಕೇಂದ್ರದತ್ತ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ
ಸಿಂದಗಿ ಉಪಚುನಾವಣೆ ಫಲಿತಾಂಶ ಹಿನ್ನೆಲೆ ಮತ ಎಣಿಕಾ ಕೇಂದ್ರದತ್ತ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಹೊರಟಿದ್ದಾರೆ. ವಿಜಯಪುರ ನಗರದ ಕೆ.ಎಚ್.ಬಿ ಕಾಲೋನಿಯ ನಿವಾಸದಿಂದ ರಮೇಶ್ ತಮ್ಮ ಬೆಂಬಲಿಗರೊಂದಿಗೆ ತೆರಳಿದ್ದು, ರಮೇಶ್ ಭೂಸನೂರ ಅವರ ಪರ ಕಾರ್ಯಕರ್ತರು ಈ ವೇಳೆ ಘೋಷಣೆ ಕೂಗಿದ್ದಾರೆ.
ವಿಜಯಪುರ ಮತ ಎಣಿಕೆ ಕೇಂದ್ರಕ್ಕೆ ಜೆಡಿಎಸ್ ಅಭ್ಯಥಿ೯ ಆಗಮನ
ವಿಜಯಪುರ ಜಿಲ್ಲೆಯ ಸೈನಿಕ ಶಾಲೆಯಲ್ಲಿರುವ ಮತ ಎಣಿಕೆ ಕೇಂದ್ರಕ್ಕೆ ಸಿಂದಗಿ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಅಭ್ಯಥಿ೯ ನಾಜಿಯಾ ಅಂಗಡಿ ಆಗಮಿಸಿದ್ದಾರೆ. ಮತ ಎಣಿಕೆ ಕಾರ್ಯ ಆರಂಭವಾದ ಬೆನ್ನಲ್ಲೆ ಲಘುಬಗೆಯಿಂದ ಮತ ಎಣಿಕೆ ಕೇಂದ್ರಕ್ಕೆ ನಾಜಿಯಾ ಅಂಗಡಿ ಆಗಮಿಸಿದ್ದಾರೆ.
ಟಿವಿ9ನಲ್ಲಿ ಫಲಿತಾಂಶ ವೀಕ್ಷಣೆ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ
ಇಂದು ಸಿಂದಗಿ ಉಪಚುನಾವಣೆ ಫಲಿತಾಂಶ ಹಿನ್ನೆಲೆ ಮನೆಯಲ್ಲಿ ಕುಳಿತು ಟಿವಿ9 ನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಫಲಿತಾಂಶ ವೀಕ್ಷಣೆ ಮಾಡುತ್ತಿದ್ದಾರೆ. ವಿಜಯಪುರ ನಗರದ ಕೆ.ಎಚ್.ಬಿ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿಯೇ ಕುಳಿತು ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಫಲಿತಾಂಶ ವಿಕ್ಷಿಸುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಅವರಿಂದ ಕೊಲೆಬಸವನಿಗೆ ವಿಶೇಷ ಪೂಜೆ
ಇಂದು ಸಿಂದಗಿ ಉಪಚುನಾವಣೆ ಫಲಿತಾಂಶ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಮನೆಯಲ್ಲಿ ಕೊಲೆಬಸವನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ವಿಜಯಪುರ ನಗರದ ಕೆ.ಎಚ್.ಬಿ ಕಾಲೋನಿಯಲ್ಲಿರುವ ನಿವಾಸದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಮತ್ತು ಪುತ್ರಿ, ಆರತಿ ಬೆಳಗಿ, ಬಾಳೆ ಹಣ್ಣು ತಿನ್ನಿಸಿ ಕೊಲೆಬಸವನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅಂಚೆ ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಮುನ್ನಡೆ
ಸಿಂದಗಿ ಉಪಚುನಾವಣೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಅದರಲ್ಲಿ ಮೊದಲು ಅಂಚೆ ಮತಗಳ ಎಣಿಕೆ ಕಾರ್ಯ ಆರಂಭವಾಗಿದೆ. 1296 ಅಂಚೆ ಮತಗಳ ಎಣಿಕೆ ಮಾಡಲಾಗುತ್ತಿದ್ದು, ಅಂಚೆ ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಮುನ್ನಡೆ ಸಾಧಿಸಿದ್ದಾರೆ.
ಹಾನಗಲ್ ಕ್ಷೇತ್ರದ ಅಂಚೆ ಮತಗಳ ಎಣಿಕೆ ಆರಂಭ
ಹಾವೇರಿ ತಾಲೂಕಿನ ದೇವಗಿರಿ ಬಳಿಯಿರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂಚೆ ಮತ ಎಣಿಕೆ ಆರಂಭವಾಗಿದೆ. ಹಾನಗಲ್‌ನಲ್ಲಿ ಸೇವಾಮತ 14, ಅಂಚೆಮತ 463.
ಸಿಂದಗಿ 2021 ಉಪ ಚುನಾವಣೆ ಮಾಹಿತಿ
ಸಿಂದಗಿ ಕ್ಷೇತ್ರದಲ್ಲಿನ ಒಟ್ಟು ಮತದಾರರ ಸಂಖ್ಯೆ 2,34,437, ಪುರುಷ ಮತದಾರರು 1,20,939, ಮಹಿಳಾ ಮತದಾರರು 1,13,466, ಇತರೆ ಮತದಾರರು 32, ಚಲಾವಣೆಯಾದ ಒಟ್ಟು ಮತಗಳು 1,62,852, ಪುರುಷರು 85,859, ಮಹಿಳೆಯರು 76,990, ಇತರೆ ಮತದಾರರು 3, ಒಟ್ಟು ಮತದಾನ ಪ್ರತಿಶತ 69.47, ಅಖಾಡಲ್ಲಿರೋ ಅಭ್ಯರ್ಥಿಗಳು ಒಟ್ಟು 6. ಅಶೋಕ ಮನಗೂಳಿ ಕಾಂಗ್ರೆಸ್ ಪಕ್ಷ, ನಾಜಿಯಾ ಅಂಗಡಿ ಜೆಡಿಎಸ್ ಪಕ್ಷ, ರಮೇಶ ಭೂಸನೂರ ಬಿಜೆಪಿ ಪಕ್ಷ, ಡಾ.ಸುನಿಲ್ ಕುಮಾರ್ ಹೆಬ್ಬಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಪಕ್ಷೇತರರಾಗಿ ಜಿಲಾನಿ ಮುಲ್ಲಾ ಹಾಗೂ ದೀಪಿಕಾ ಎಸ್.
ಸಿಂದಗಿ ಕ್ಷೇತ್ರದ ಮತ ಎಣಿಕೆ ಕಾರ್ಯ ಆರಂಭ
ವಿಜಯಪುರದ ಸೈನಿಕ ಶಾಲೆಯಲ್ಲಿ ಅಂಚೆ ಮತ ಎಣಿಕೆ ಆರಂಭವಾಗಿದೆ. ಮತಪೆಟ್ಟಿಗೆಗಳನ್ನು ಇರಿಸಿದ್ದ ಸ್ಟ್ರಾಂಗ್ ರೂಮ್ ತೆರೆದ ಬಳಿಕ ಮತ ಎಣಿಕಾ ಕೇಂದ್ರಕ್ಕೆ ಅಂಚೆ ಮತಗಳನ್ನು ಸಿಬ್ಬಂದಿಗಳು ರವಾನೆ ಮಾಡಿದ್ದಾರೆ, ಸದ್ಯ ಸಿಂದಗಿ ಉಪಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಒಟ್ಟು 14 ಟೇಬಲ್ ಗಳಲ್ಲಿ ಮತ ಎಣಿಕೆ ಕಾರ್ಯವನ್ನು ಸಿಬ್ಬಂದಿಗಳು ಆರಂಭಿಸಿದ್ದಾರೆ. ಮೊದಲಿಗೆ ಅಂಚೆ ಮತಗಳನ್ನು ಸಿಬ್ಬಂದಿಗಳು ಎಣಿಕೆ ಮಾಡುತ್ತಿದ್ದಾರೆ. ಜಿಲ್ಲಾ ಚುನಾವಣಾ ಅಧಿಕಾರಿಗಳು ಯಾರು ಹಾಗೂ ಇತರ ಅಧಿಕಾರಿಗಳು ಮತ ಎಣಿಕೆ ಕೇಂದ್ರದಲ್ಲಿ ಉಪಸ್ಥಿತರಿದ್ದಾರೆ.
ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ
ವಿಜಯಪುರ ನಗರದ ಕೆ.ಎಚ್.ಬಿ ಕಾಲೋನಿಯಲ್ಲಿರುವ ಶಕ್ತಿದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಟಿವಿ9 ಜತೆ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಮಾತನಾಡಿದ್ದು, ನಾನು 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ಮೊದಲ ಸುತ್ತಿನಲ್ಲಿ ಐದು ಸಾವಿರ ಮತಗಳಿಂದ ಮುನ್ನಡೆ ಸಾಧಿಸುತ್ತೇನೆ. ಜನರ ನಾಡಿಮಿಡಿತವನ್ನು ನಾನು ಅರೆತಿದ್ದು, ಆ ಲೆಕ್ಕಾಚಾರದಲ್ಲಿ ಹೇಳುತ್ತಿದ್ದೇನೆ. ಈ ಹಿಂದೆ ಸೋತಿರುವ ಅನುಕಂಪ ನನ್ನ ಮೇಲಿದೆ. 8.15ಕ್ಕೆ ಮತ ಎಣಿಕಾ ಕೇಂದ್ರಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ಸಿಂದಗಿ ಉಪಚುನಾವಣೆಯ ಮತ ಎಣಿಕೆ ಇನ್ನು ಕೆಲವೇ ಕ್ಷಣದಲ್ಲಿ ಆರಂಭ
ವಿಜಯಪುರ ನಗರದ ಸೈನಿಕ ಶಾಲೆ ಆವರಣದಲ್ಲಿ ನಡೆಯಲಿರುವ ಮತ ಎಣಿಕೆಗೆ ಇನ್ನು ಕೆಲವೇ ಕ್ಷಣಗಳು ಬಾಕಿ ಇದ್ದು, ಇವಿಎಂ ಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂ ಅನ್ನು ಅಧಿಕಾರಿಗಳು ತೆರೆದಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿ, ಆರ್ಓ ಹಾಗೂ ಅಭ್ಯರ್ಥಿಗಳ ಎಜೆಂಟರುಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಅನ್ನು ತೆರೆಯಲಾಗಿದೆ.
ಆರ್ಓ ಅಶೋಕ ತೇಲಿ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರವು
ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಸ್ಟ್ರಾಂಗ್ ರೂಂ ಅನ್ನು ಅಧಿಕಾರಿಗಳು ತೆರೆದಿದ್ದಾರೆ. ಆರ್ಓ ಅಶೋಕ ತೇಲಿ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಆರಂಭವಾಗಲಿದೆ. ಸ್ಟ್ರಾಂಗ್ ರೂಂ ಬಳಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಆಗಮಿಸಿದ್ದಾರೆ.
ಗೆಲುವಿಗಾಗಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪ್ರಾರ್ಥನೆ
ಇಂದು ಸಿಂದಗಿ ಉಪಚುನಾವಣೆಯ ಫಲಿತಾಂಶ ಹಿನ್ನೆಲೆ ಗೆಲುವಿಗಾಗಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪ್ರಾರ್ಥನೆ ಮಾಡುತ್ತಿದ್ದಾರೆ. ಕುಟುಂಬಸ್ಥರ ಜತೆ ನಮಾಜ್ ಮಾಡಿ ತಮ್ಮ ಜಯಕ್ಕಾಗಿ ಪ್ರಾರ್ಥಿಸಿದ್ದಾರೆ. ವಿಜಯಪುರ ಜಿಲ್ಲೆ ಸಿಂದಗಿಯ ಮನೆಯಲ್ಲಿ ನಾಜಿಯಾ ಅಂಗಡಿ ನಮಾಜ್ ಮಾಡಿದ್ದಾರೆ.
ಮಠಕ್ಕೆ ತೆರಳಿದ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ
ಹಾನಗಲ್ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಹಿನ್ನೆಲೆ ದೇವಗಿರಿಯ ಪುಟ್ಟರಾಜ ಗವಾಯಿಗಳ ಮಠಕ್ಕೆ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ ಭೇಟಿ ನೀಡಿದ್ದಾರೆ. ಹಾವೇರಿ ತಾಲೂಕಿನ ದೇವಗಿರಿಯಲ್ಲಿರುವ ಮಠಕ್ಕೆ ಭೇಟಿ ನೀಡಿ, ಬಳಿಕ ಬಸವೇಶ್ವರ ದೇವಾಲಯಕ್ಕೆ ಸಜ್ಜನರ ಭೇಟಿ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು ಗೆಲುವು ನನ್ನದೇ ಎಂದು ಹೇಳಿದ್ದಾರೆ.
ಪಕ್ಷದ ಎಲ್ಲಾ ನಾಯಕರ ಪರಿಶ್ರಮದಿಂದ ಗೆಲ್ಲುತ್ತೇನೆ: ಅಶೋಕ್ ಮನಗೂಳಿ
15-20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ಪಕ್ಷದ ಎಲ್ಲಾ ನಾಯಕರ ಪರಿಶ್ರಮದಿಂದ ನಾನು ಗೆಲ್ಲುತ್ತೇನೆ. ಕಾಂಗ್ರೆಸ್ ಬಗ್ಗೆ ಒಲವು ಇದೆ. ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಜನರಿಗೆ ಮುಟ್ಟಿಸಿದ್ದೇವೆ. ಬಿಜೆಪಿ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ಆಗಿಲ್ಲ. ತೈಲ ಬೆಲೆ ಏರಿಕೆ ಆಗಿದೆ. ಇನ್ನು ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದಾರೆ. ಆದರೆ 90 ರಷ್ಟು ಮುಸ್ಲೀಮರು ನನಗೆ ಮತ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಶೋಕ್ ಮನಗೂಳಿ ತಿಳಿಸಿದ್ದಾರೆ.
ವಿಜಯಪುರ ನಗರದ ಸೈನಿಕ ಶಾಲೆಯ ಆವರಣದಲ್ಲಿ ಸಿಂದಗಿ ಕ್ಷೇತ್ರದ ಮತ ಎಣಿಕೆಗೆ ಸಿದ್ಧತೆ
ಸಿಂದಗಿ ಕ್ಷೇತ್ರದಲ್ಲಿ ಬೆಳಿಗ್ಗೆ 8 ರಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಸೈನಿಕ ಶಾಲೆಯ ಒಡೆಯರ ಹೌಸ್ನಲ್ಲಿ ಮತದಾನ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆಗೆ ಒಟ್ಟು 14 ಟೇಬಲ್ಗಳನ್ನು ನಿಯೋಜಿಸಲಾಗಿದೆ. ಮತ ಎಣಿಕೆಗಾಗಿ ಎರಡು ಹಾಲ್ಗಳನ್ನು ಸಿದ್ಧಪಡಿಸಲಾಗಿದೆ. ಇನ್ನು 60ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಮತ ಎಣಿಕೆಗಾಗಿ ನಿಯೋಜಿಸಲಾಗಿದೆ. ಮತ ಎಣಿಕಾ ಕೇಂದ್ರದ ಸುತ್ತ 100 ಮೀಟರ್ ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ಹಾವೇರಿ ಜಿಲ್ಲೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಾನಗಲ್ ಕ್ಷೇತ್ರದ ಮತ ಎಣಿಕೆ
ಇಂದು ಹಾನಗಲ್ ಕ್ಷೇತ್ರದ ಉಪಚುನಾವಣೆ ಮತ ಎಣಿಕೆಯನ್ನು ಹಾವೇರಿ ತಾಲೂಕಿನ ದೇವಗಿರಿ ಬಳಿಯಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಡಲಾಗುತ್ತದೆ. ಹಾನಗಲ್ ಕ್ಷೇತ್ರದಲ್ಲಿ ಶೇ.83.76ರಷ್ಟು ಮತದಾನವಾಗಿತ್ತು. ಒಟ್ಟು 1,71,264 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಸದ್ಯ ಉಪಚುನಾವಣೆ ಮತ ಎಣಿಕೆಗೆ ಕೊಠಡಿ ಸಿದ್ಧಪಡಿಸಲಾಗಿದೆ. ಪ್ರತಿ ಕೊಠಡಿಯಲ್ಲಿ ತಲಾ 7 ರಂತೆ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ.
Published On - Nov 02,2021 7:04 AM