ದೇವೇಗೌಡ್ರ ಸಭೆ ಅಂತ್ಯ: ಮಂಡ್ಯ ಜಿಡಿಎಸ್​ ಪಾಲು, ಅಭ್ಯರ್ಥಿ ಸಹ ಬಹುತೇಕ ಫೈನಲ್​!

|

Updated on: Feb 13, 2024 | 4:44 PM

ಮಂಡ್ಯ(Mandya) ಲೋಕಸಭಾ(LokaSaba) ಕ್ಷೇತ್ರವನ್ನು ಜೆಜೆಪಿ, ಜೆಡಿಎಸ್​ಗೆ ಬಿಟ್ಟುಕೊಟ್ಟಂತಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್​ ವರಿಷ್ಠ ಎಚ್​ಡಿ ದೇವೇಗೌಡ ನೇತೃತ್ವದಲ್ಲಿ ಇಂದು (ಫೆ.13) ಮಂಡ್ಯ ಜೆಡಿಎಸ್​ ನಾಯಕರ ಸಭೆ ನಡೆದಿದೆ. ಈ ಮೂಲಕ ಮಂಡ್ಯ ಜೆಡಿಎಸ್​ ಪಾಲಾಗಿರುವುದು ಖಚಿತವಾದಂತಿದೆ. ಇನ್ನು ಸಭೆಯಲ್ಲಿ ದೇವೇಗೌಡ ಅವರು ಯಾರನ್ನು ಅಭ್ಯರ್ಥಿಯನ್ನು ಮಾಡಬೇಕೆಂದು ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದು, ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿವುದು ಪಕ್ಕಾ ಆದಂತಾಗಿದೆ.

ದೇವೇಗೌಡ್ರ ಸಭೆ ಅಂತ್ಯ: ಮಂಡ್ಯ ಜಿಡಿಎಸ್​ ಪಾಲು, ಅಭ್ಯರ್ಥಿ ಸಹ ಬಹುತೇಕ ಫೈನಲ್​!
ಮಂಡ್ಯ ಜಿಡಿಎಸ್ ನಾಯಕರ ಸಭೆ
Follow us on

ಬೆಂಗಳೂರು, (ಫೆಬ್ರವರಿ 13):  ಮಂಡ್ಯ ಲೋಕಸಭಾ (Mandya LokaSaba) ಕ್ಷೇತ್ರ ಈ ಬಾರಿ ಮತ್ತೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಬಹುತೇಕ ಜೆಡಿಎಸ್​ ಪಾಲಾಗುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್​ ವರಿಷ್ಠ ಎಚ್​ಡಿ ದೇವೇಗೌಡ (HD Devegowda)ಅವರು ಇಂದು(ಫೆಬ್ರವರಿ 13) ತಮ್ಮ ಬೆಂಗಳೂರಿನ ನಿವಾಸದಲ್ಲಿ ಮಂಡ್ಯ ಜಿಲ್ಲಾ ಜೆಡಿಎಸ್​ ನಾಯಕರ ಸಭೆ ನಡೆಸಿದ್ದು, ಅಭ್ಯರ್ಥಿ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅಲ್ಲದೇ ಯಾರು ಅಭ್ಯರ್ಥಿಯಾದರೆ ಹೇಗೆ ಎನ್ನುವ  ಸಾಧಕ-ಬಾಧಕಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡ ದೇವೇಗೌಡ, ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕುಮಾರಸ್ವಾಮಿ, ನನಗೆ( ದೇವೇಗೌಡ) ನಿಖಿಲ್​ಗೆ ಒತ್ತಾಯವಿದೆ. ಆದ್ರೆ, ನಾನು ಸ್ಪರ್ಧಿಸಲ್ಲ ಎಂದು ಹೇಳಿದ್ದೇನೆ. ಹಾಗೇ ಈಗಾಗಲೇ ನಿಖಿಲ್ ಸಹ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.  ಇದರೊಂದಿಗೆ ಮೂವರಲ್ಲಿ ಇಬ್ಬರು ಸ್ಪರ್ಧಿಸುವುದಿಲ್ಲ ಎಂದು ಹೇಳಿದ ಮೇಲೆ ಕೊನೆಯದಾಗಿ ಕುಮಾರಸ್ವಾಮಿ ಉಳಿದಿದ್ದು, ಅವರೇ ಮಂಡ್ಯ ಜೆಡಿಎಸ್ ಅಭ್ಯರ್ಥಿಯಾಗುವುದು ನಿಶ್ಚಿತವಾಗಿದೆ. ದೇವೇಗೌಡರ ಮಾತಿನ ಹಿಂದಿನ ಮರ್ಮವೂ ಸಹ ಅದೇ ಆಗಿದೆ, ಆದ್ರೆ, ಅವರು ಬಹಿರಂಗಪಡಿಸಲಿಲ್ಲ ಅಷ್ಟೇ.

ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ ಓಡಾಡಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಕಾರ್ಯಕರ್ತರೊಂದಿಗೆ ಸಭೆ ಮಾಡಿ ಮಾತಾಡಿದ್ದಾರೆ. ಈ ಸಭೆಯಲ್ಲಿ ನಾವು ಮೂವರಲ್ಲಿ ಒಬ್ಬರು ನಿಲ್ಲಿ ಅಂದಿದ್ದಾರೆ. ಆದ್ರೆ, ನಾನು ನಿಲ್ಲಲ್ಲ. ನಿಖಿಲ್ ಕೂಡ ನಿಲ್ಲಲ್ಲ. ಕುಮಾರಸ್ವಾಮಿ ಅವರು ಇವತ್ತು ಸಭೆಯಲ್ಲಿ ಇರಲಿಲ್ಲ. ಅಂತಿಮವಾಗಿ ಲೋಕಸಭೆ ಬಗ್ಗೆ ನಾವು ಒಂದು ಅಭಿಪ್ರಾಯ ತಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಮಂಡ್ಯ ಲೋಕಸಭಾ ಅಭ್ಯರ್ಥಿ ಆಯ್ಕೆ ಕಸರತ್ತು: ನಿಖಿಲ್ ಮನವೋಲಿಸುವಂತೆ ನಾಯಕರ ಒತ್ತಾಯ

ನಾವು ಮೂವರಲ್ಲಿ(ದೇವೇಗೌಡ, ನಿಖಿಲ್, ಕುಮಾರಸ್ವಾಮಿ) ಒಬ್ಬರು ಮಂಡ್ಯದಿಂದ ಸ್ಪರ್ಧಿಸಿ ಎಂದು ಹೇಳುತ್ತಿದ್ದಾರೆ. ಆದ್ರೆ, ನಾನು ಚುನಾವಣೆಗೆ ಸ್ಪರ್ಧಿಸಲ್ಲ, ನಿಖಿಲ್ ಕೂಡ ಸ್ಪರ್ಧಿಸಲ್ಲ ಎಂದು ಸ್ಪಷ್ಟಪಡಿಸಿರುವ ದೇವೇಗೌಡ, ಅಭ್ಯರ್ಥಿ ಕುರಿತು ಅಭಿಪ್ರಾಯ ಸಂಗ್ರಹಿಸಿ, ನಮ್ಮ ಅಭಿಪ್ರಾಯವನ್ನು ಬಿಜೆಪಿ ಹೈಕಮಾಂಡ್ ಗಮನಕ್ಕೆ ತರುತ್ತೇವೆ. ಅಂತಿಮವಾಗಿ ನರೇಂದ್ರ ಮೋದಿ, ಜೆಪಿ ನಡ್ಡಾ, ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

ಮಂಡ್ಯ ಕ್ಷೇತ್ರದ ಎಂಟು ಕ್ಷೇತ್ರದಲ್ಲೂಓಡಾಟ ನಡೆಸುತ್ತೇವೆ. ಇಲ್ಲಿ ಜೆಡಿಎಸ್- ಬಿಜೆಪಿ ಪ್ರಶ್ನೆ ಅಲ್ಲ. ಎನ್​ಡಿಎದಲ್ಲಿ ನಾವು ಇದ್ದೇವೆ. ಅಂತಿಮವಾಗಿ ಮೋದಿ,ನಡ್ಡಾ ಕುಮಾರಸ್ವಾಮಿ,ಯಡಿಯೂರಪ್ಪ ಎಲ್ಲರೂ ಸಮಾಲೋಚನೆ ಮಾಡಿ ತೀರ್ಮಾನ ಮಾಡುತ್ತಾರೆ. ರೇವಣ್ಣ ಎಂದು ಲೋಕಸಭೆಗೆ ಹೋಗುತ್ತೇನೆ ಎಂದು ಹೇಳಿಲ್ಲ. ಇದು ಮಾಧ್ಯಮದವರ ಸೃಷ್ಟಿ. ನಾವು ಮೂರು ಜನ ಒಗ್ಗಟ್ಟಾಗಿ ಹೋಗುತ್ತೇವೆ. ಮಂಡ್ಯದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತೇವೆ. ನಂತರ ನಾವು ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆ ಎಂದು ಹೇಳಿದರು.

ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

ಇನ್ನು ಸಭೆ ಬಳಿಕ ನಿಖಿಲ್ ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ದೇವೇಗೌಡರ ನಿವಾಸದಲ್ಲಿ ಮಂಡ್ಯ ಭಾಗದ ಮುಖಂಡರು ಚರ್ಚೆ ಮಾಡಿದ್ದಾರೆ. ದೇವೇಗೌಡರಿಗೆ ಅವರ ಅಭಿಪ್ರಾಯವನ್ನ ತಿಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ, ಜೆ.ಪಿ.ನಡ್ಡಾ, ಎಲ್ಲರೂ ಸೇರಿ ನಿರ್ಧರಿಸುತ್ತಾರೆ. ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲೂ ಗೆಲ್ಲಬೇಕು. ಹೆಚ್ಚು ಸ್ಥಾನ ಗೆಲ್ಲಬೇಕು, ಹೀಗಾಗಿ ಕೆಲಸ ಮಾಡ್ತಿದ್ದೇವೆ ಎಂದು ಹೇಳಿದರು.

ಇನ್ನು ಮೈತ್ರಿ ಅಭ್ಯರ್ಥಿ ವಿರುದ್ದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಕೆಲಸ ಮಾಡುತ್ತಿರುವ ವಿಚಾರದ ಬಗ್ಗೆ ಮಾತನಾಡಿ, ಒಂದು ವ್ಯಕ್ತಿಯನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸಬಾರದು. ಅಶೋಕಣ್ಣ, ವಿಜಯೇಂದ್ರ, ಅಶ್ವಥಣ್ಣ ಎಲ್ಲಾ ಸೇರಿ ಎಪಿ ರಂಗನಾಥ್ ಅವರ ಗೆಲುವಿನ ಶ್ರಮ ಹಾಕ್ತಿದ್ದಾರೆ. ಹೀಗಾಗಿ ಯಾರೋ ಒಬ್ಬ ವ್ಯಕ್ತಿಯನ್ನಿಟ್ಟುಕೊಂಡು ಮಾತಾಡೋದು ಸೂಕ್ತ ಅಲ್ಲ ಎಂದರು.

ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತ

ಈ ಮೂವರು ಅಂದರೆ ನಿಖಿಲ್ ಕುಮಾರಸ್ವಾಮಿ, ಎಚ್​ಡಿ ದೇವೇಗೌಡ ಹಾಗೂ ಎಚ್​ಡಿ ಕುಮಾರಸ್ವಾಮಿ ಅವರನ್ನು ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಒತ್ತಾಯಗಳು ಇವೆ. ಆದ್ರೆ, ಮೂವರಲ್ಲಿ ಈಗಾಗಲೇ ದೇವೇಗೌಡ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಈಗ ಮೂವರಲ್ಲಿ ಇಬ್ಬರು ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಇದೀಗ ಕಣದಲ್ಲಿ ಕುಮಾರಸ್ವಾಮಿ ಒಬ್ಬರೇ ಉಳಿದುಕೊಂಡಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರೇ ಅಂತಿಮವಾಗಿ ಮಂಡ್ಯದಿಂದ ಅಖಾಡಕ್ಕಿಳಿಯುವುದು ಬಹುತೇಕ ಪಕ್ಕಾ ಆದಂತಾಗಿದೆ. ಆದ್ರೆ, ಈ ಬಗ್ಗೆ ದೇವೇಗೌಡ್ರ ಈಗಾಗಲೇ ಬಹಿರಂಗಪಡಿಸಿಲ್ಲ ಅಷ್ಟೇ.

ಜೆಡಿಎಸ್​​ನಲ್ಲಾಗುವ ಬೆಳವಣಿಗೆಗಳನ್ನು ಗಮನಿಸಿದರೆ ಮಂಡ್ಯ ದಳಪತಿ ಪಾಲಾಗುವುದು ಖಚಿತವಾಗಿದ್ದು, ಕುಮಾರಸ್ವಾಮಿ ಸ್ಪರ್ಧಿಸುವುದು ನಿಶ್ಚಿತವಾಗಿದೆ. ಇದರೊಂದಿಗೆ ಮಂಡ್ಯ ಕ್ಷೇತ್ರ ಯಾರಿಗೆ? ಅಭ್ಯರ್ಥಿ ಯಾರು? ಎನ್ನುವ ಗೊಂದಲಗಳಿಗೆ ತೆರೆ ಬಿದ್ದಿದೆ. ಇದರಿಂದ ಸುಮಲತಾ ಅಂಬರಿಶ್​ಗೆ ನಿರಾಸೆಯಾಗಿದ್ದು, ಇದೀಗ ಅವರ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:41 pm, Tue, 13 February 24