ಬಿಜೆಪಿಯನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ: ಬಿಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ಪರೋಕ್ಷ ವಾಗ್ದಾಳಿ

ಇತ್ತೀಚೆಗಷ್ಟೇ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದ ಹೊನ್ನಾಳಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಕಾಂಗ್ರೆಸ್ ಸೇರುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿತ್ತು. ಇದೀಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ಕಟ್ಟಿ ಬೆಳೆಸಿದ್ದ ಬಿಜೆಪಿಯನ್ನು ಈಗ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿಯನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ: ಬಿಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ಪರೋಕ್ಷ ವಾಗ್ದಾಳಿ
ಎಂಪಿ ರೇಣುಕಾಚಾರ್ಯ ಮತ್ತು ಬಿಎಲ್ ಸಂತೋಷ್
Follow us
| Updated By: Rakesh Nayak Manchi

Updated on:Aug 29, 2023 | 6:46 PM

ದಾವಣಗೆರೆ, ಆಗಸ್ಟ್ 29: ಇತ್ತೀಚೆಗಷ್ಟೇ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದ ಹೊನ್ನಾಳಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ (M.P.Renukacharya) ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿತ್ತು. ಇದೀಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ (B.L.Santhosh) ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಬಿ.ಎಸ್. ಯಡಿಯೂರಪ್ಪ (B.S.Yediyurappa) ಕಟ್ಟಿ ಬೆಳೆಸಿದ್ದ ಬಿಜೆಪಿಯನ್ನು ಈಗ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ನರೇಂದ್ರ ಮೋದಿ, ಅಮಿತ್ ಶಾ ಅಥವಾ ಜೆಪಿ ನಡ್ಡಾ ಬಗ್ಗೆ ನಾನು ಮಾತಾಡಲ್ಲ. ಆದರೆ ಕೆಲವರು ಪಕ್ಷವನ್ನ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ರಿಮೋಟ್ ಕಂಟ್ರೋಲ್ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ರೇಣುಕಾಚಾರ್ಯ ಅವರು ಪರೋಕ್ಷವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶ ಬಿಎಲ್ ಸಂತೋಷ ವಿರುದ್ಧ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಕಟ್ಟಿ ಬೆಳೆಸಿದ್ದ ಬಿಜೆಪಿಯನ್ನು ಈಗ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ನಮ್ಮ ಮುಖಂಡರು ಸೌಜನ್ಯಕ್ಕಾದರೂ ಕರೆ ಮಾಡಿ ಮಾತನಾಡುತ್ತಿಲ್ಲ. ನಮ್ಮ ನಾಯಕರು ಗಟ್ಟಿಯಾಗಿ ಬಾಗಿಲು ಹಾಕಿಕೊಂಡು ಕೂತಿದ್ದಾರೆ. ನಮ್ಮನ್ನು ಬಿಜೆಪಿಯಿಂದ ಹೊರ ಕಳಿಸಲು ನೋಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ತುಮಕೂರು: ಎಂಪಿ ರೇಣುಕಾಚಾರ್ಯ ಕಾಂಗ್ರೆಸ್​ ಸೇರ್ಪಡೆ; ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು

ಈ ಗಟ್ಟಿ ಧ್ವನಿಯನ್ನು ಯಾರು ಅಡಿಗಿಸಲು ಸಾದ್ಯವಿಲ್ಲ ಎಂದು ಹೇಳಿದ ರೇಣುಕಾಚಾರ್ಯ, ಗೆದ್ದಲು ಹುತ್ತ ಕಟ್ಟಿದರೆ, ಬಂದು ಸೇರಿಕೊಳ್ಳುವಂತಾಗಿದೆ (ಹಾವುಗಳು). ಅದೇ ರೀತಿ ಯಡಿಯೂರಪ್ಪ ಕಟ್ಟಿದ ಹುತ್ತದಲ್ಲಿ ಬಂದು ಸೇರಿಕೊಂಡಿದ್ದಾರೆ. ಈಗ ಬಿಜೆಪಿ ಕಚೇರಿಯಲ್ಲಿ ಕೂತಿರುವವರು ಯಾರು ಪಕ್ಷ ಕಟ್ಟಿಲ್ಲ. ಸದ್ಯ ಪಕ್ಷವನ್ನು ಕರ್ನಾಟಕದವರು ದೆಹಲಿಯಲ್ಲಿ ಕೂತಿದ್ದಾರಲ್ಲ ಅವರು ಕಂಟ್ರೋಲ್ ಮಾಡುತ್ತಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಐದು ಜನ ಮಾತ್ರ ರಾಜ್ಯ ಬಿಜೆಪಿಯನ್ನು ಕಂಟ್ರೋಲ್ ಮಾಡುತ್ತಿದ್ದಾರೆ ಎಂದರು.

ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಕೂಡ ಅವರ (ಬಿಎಲ್ ಸಂತೋಷ್) ಮಾತು ಕೇಳಿಬೇಕಿತ್ತು. ಪಕ್ಷವನ್ನು ಅಷ್ಟು ಕಂಟ್ರೋಲ್ ಮಾಡಿದ್ದಾರೆ. ನಮ್ಮ ಜಿಲ್ಲೆಯ ನಾಯಕರು ಕೂಡ ನನ್ನನ್ನು ತುಳಿಯಲು ಪ್ರಯತ್ನ ಮಾಡಿದ್ದರು. ಐದು ಜನರು ಸೇರಿ ಯಾರಿಗಾದರೂ ಸಚಿವ ಸ್ಥಾನ ನೀಡಿ ಎಂದು ಕೇಳಿದ್ದೇವು. ಆದರೆ ನಮ್ಮ ಜಿಲ್ಲೆಯ ಮಹಾನ್ ನಾಯಕರೇ ಅದನ್ನು ತಪ್ಪಿಸಿದರು ಎಂದರು.

ಅಧಿಕಾರಿಗಳು ನಮ್ಮ ಮನೆಯ ಮುಂದೆ ಬರುವುದಿಲ್ಲ. ನಮ್ಮ ಕೈಯಿಂದ ಪವರ್ ಕೈತಪ್ಪುತ್ತದೆ ಎಂದು ಯಾರಿಗೂ ಸಚಿವ ಸ್ಥಾನ ಕೊಡಿಸಲಿಲ್ಲ ಎಂದು ಹೇಳುವ ಮೂಲಕ ರೇಣುಕಾಚಾರ್ಯ ಅವರು ಸಂಸದ ಜಿಎಂ ಸಿದ್ದೇಶ್ವರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ರಾಜ್ಯಾಧ್ಯಕ್ಷರ ಸ್ಥಾನ ಮುಗಿದು ಎರಡು ವರ್ಷ ಆಯ್ತು. ಅದರೂ ಯಾವ ಪುರುಷಾರ್ಥವಾಗಿ ಅವರನ್ನು ಮುಂದುವರೆಸುತ್ತೀರಿ ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಯಡಿಯೂರಪ್ಪ ಅವರಿಗೆ ಸಂಸದೀಯ ಮಂಡಳಿ ಸ್ಥಾನ‌ನೀಡಿರುವುದು ನಾಮಕವಸ್ಥೆಗೆ. ಮೋದಿಯನ್ನು ಕರೆತಂದು ಮೂಲೆ ಮೂಲೆ ತಿರುಗಿಸಿ ಬೆಲೆ ಕಡಿಮೆ ಮಾಡಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:44 pm, Tue, 29 August 23