ಎಲ್ಲೂ ಓಡಿಹೋಗಲ್ಲ, ಅವಿತುಕೊಳ್ಳುವುದೂ ಇಲ್ಲ: ಸುಪ್ರೀಂ ನೋಟಿಸ್​ಗೆ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು…

DK Shivakumar Reaction to Supreme court notice; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ವೇಣುಗೋಪಾಲ್ ಜೊತೆ ಸಭೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಇದು ಪಕ್ಷದ ಆಂತರಿಕ ವಿಚಾರ. ಲೋಕಸಭೆ ಚುನಾವಣೆ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಯಿತು. ನಿಗಮ ಮಂಡಳಿ ನೇಮಕಕ್ಕೆ ವೇಗ ನೀಡುವ ಕುರಿತು ಚರ್ಚೆ ಆಯ್ತು.

ಎಲ್ಲೂ ಓಡಿಹೋಗಲ್ಲ, ಅವಿತುಕೊಳ್ಳುವುದೂ ಇಲ್ಲ:  ಸುಪ್ರೀಂ ನೋಟಿಸ್​ಗೆ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು...
ಡಿಸಿಎಂ ಡಿಕೆ ಶಿವಕುಮಾರ್
Updated By: Ganapathi Sharma

Updated on: Oct 16, 2023 | 3:37 PM

ಬೆಂಗಳೂರು, ಅಕ್ಟೋಬರ್ 16: ಎಲ್ಲೂ ಓಡಿಹೋಗಲ್ಲ, ಅವಿತುಕೊಳ್ಳುವುದೂ ಇಲ್ಲ. ಕಾನೂನಿಗೆ ಏನು ಗೌರವ ಕೊಡಬೇಕೋ ಅದನ್ನು ಕೊಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸೋಮವಾರ ಹೇಳಿದರು. ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶ ತಡೆ ಕೋರಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಶಿವಕುಮಾರ್ ಅವರಿಗೆ ನೋಟಿಸ್ ನೀಡಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಎಲ್ಲೂ ಓಡಿ ಹೋಗಲ್ಲ, ಅವಿತುಕೊಳ್ಳೋದೂ ಇಲ್ಲ. ಕಾನೂನಿಗೆ ಏನು ಗೌರವ ಕೊಡಬೇಕೋ ಕೊಡ್ತೀನಿ. ಯಾರ್ಯಾರಿಗೆ ಏನು ಉತ್ತರ ಕೊಡಬೇಕು ಕೊಡುತ್ತೇನೆ ಎಂದು ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ವೇಣುಗೋಪಾಲ್ ಜೊತೆ ಸಭೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಪಕ್ಷದ ಆಂತರಿಕ ವಿಚಾರ. ಲೋಕಸಭೆ ಚುನಾವಣೆ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಯಿತು. ನಿಗಮ ಮಂಡಳಿ ನೇಮಕಕ್ಕೆ ವೇಗ ನೀಡುವ ಕುರಿತು ಚರ್ಚೆ ಆಯ್ತು. ಕಾರ್ಯಕರ್ತರು, ಶಾಸಕರು ಎಲ್ಲರಿಗೂ ನಿಗಮ ಮಂಡಳಿ ಕೊಡಬೇಕು. ಈ ಬಗ್ಗೆ ನಾನು, ಸಿಎಂ ಸಿದ್ದರಾಮಯ್ಯ ಇವತ್ತು ಹಾಗೂ ನಾಳೆ ಚರ್ಚೆ ಮಾಡ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಪಟ್ಟು ಬಿಡದ ಸಿಬಿಐ: ಡಿಸಿಎಂ ಡಿಕೆ ಶಿವಕುಮಾರ್​‌ಗೆ ಸುಪ್ರೀಂಕೋರ್ಟ್ ನೋಟಿಸ್

ಸಚಿವರಿಂದ ಹಣ ಸಂಗ್ರಹ ಮಾಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಲೂಟಿಗೂ ತಿಳಿಸ್ತೀನಿ, ನಕಲಿಗೂ ತಿಳಿಸ್ತೀನಿ. ಬ್ಲಾಕ್ ಮೇಲರ್​​ಗೂ ತಿಳಿಸ್ತೀನಿ, ಪಾರ್ಟಿ ಅಧ್ಯಕ್ಷ, ಮಾಜಿ ಸಿಎಂ ಗೂ ಉತ್ತರ ಕೊಡ್ತೀನಿ. ಈಗಲ್ಲ, ಪಾಪ ಅವರಿಗೆ ಇನ್ಕಂಟ್ಯಾಕ್ಸ್ ಪ್ರೊಸಿಜರ್ ಗೊತ್ತಿಲ್ಲ. ಯಾರೊ ವ್ಯವಹಾರ ಮಾಡ್ತಿದ್ದಾರೆ, ಡೈವರ್ಟ್ ಮಾಡ್ತಿದ್ದಾರೆ ಗೊತ್ತಿಲ್ಲ. ಏಜೆಂಟ್ ತರ ಮತಾಡ್ತಾವರೆ, ಸ್ಪೋಕ್ ಮೆನ್ ತರ ಮಾತಾಡ್ತಾವ್ರೆ. ನಾನೊಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಅವರ ತರ ಮತಾಡೋಕೆ ಆಗಲ್ಲ, ತಪ್ಪಾಗುತ್ತೆ. ಕೋರ್ಟ್ ಕಾನೂನು ಎಲ್ಲಾ ಬರುತ್ತೆ. ಅದಕ್ಕೆಲ್ಲಾ ಮುಹೂರ್ತ ಫಿಕ್ಸ್ ಮಾಡ್ತೀನಿ. ಇವರ್ಯಾರಿಗೂ ಹೆದರಿ ಓಡೋಗಲ್ಲ, ನಕಲಿ ಸ್ಟೇಟ್ ಮೆಂಟ್, ಬ್ಲಾಕ್ ಮೇಲ್ ಸ್ಟೇಟ್ ಮೆಂಟ್ ಗೆಲ್ಲ ಉತ್ತರ ಕೊಡ್ತೀನಿ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ