ಕರ್ನಾಟಕ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ನಡುವೆ ಒಳ ರಾಜಕೀಯ ಶುರು
ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಲವು ಕ್ಷೇತ್ರಗಳ ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಲವು ಕ್ಷೇತ್ರಗಳ ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ನಡುವೆ ಒಳರಾಜಕೀಯ ಶುರುವಾಗಿದೆ, ಒಬ್ಬೊಬ್ಬ ನಾಯಕರನ್ನು ನಂಬಿಕೊಂಡು ಆಕಾಂಕ್ಷಿಗಳು ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಕೆಲವರಿಗೆ ಸಿದ್ದರಾಮಯ್ಯ ಬೆಂಬಲವಿದ್ದರೆ ಇನ್ನೂ ಕೆಲವರಿಗೆ ಡಿಕೆ ಶಿವಕುಮಾರ್ ಬೆಂಬಲವಿದೆ ಇವರಿಬ್ಬರ ಬೆಂಬಲಿಗರ ನಡುವೆಯೇ ಟಿಕೆಟ್ ಹಂಚಿಕೆಗೆ ಪೈಪೋಟಿ ನಡೆಯುತ್ತಿದೆ. ನಂಜನಗೂಡು ಟಿಕೆಟ್ಗಾಗಿ ಎಚ್ಸಿ ಮಹದೇವಪ್ಪ-ಧೃವನಾರಾಯಣ ನಡುವೆ ಪೈಪೋಟಿ ನಡೆಯುತ್ತಿದ್ದರೆ, ಇನ್ನು ಸಿದ್ದರಾಮಯ್ಯ ಬೆಂಬಲದಿಂದ ತೀರ್ಥಹಳ್ಳಿ ಟಿಕೆಟ್ಗೆ ಕಿಮ್ಮನೆ ರತ್ನಾಕರ್ ಅರ್ಜಿ ಸಲ್ಲಿಸಿದ್ದಾರೆ.
ಅದೇ ಕ್ಷೇತ್ರಕ್ಕೆ ಡಿಕೆ ಶಿವಕುಮಾರ್ ಬೆಂಬಲಿಗ ಮಂಜುನಾಥ್ ಗೌಡ ಟಿಕೆಟ್ ಕೇಳುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲೂ ಡಿದ್ದರಾಮಯ್ಯ, ಡಿಕೆ ಶಿವಕುಮಾರ್ ಬೆಂಬಲಿಗರ ನಡುವೆ ಪೈಪೋಟಿ ಜೋರಾಗಿದೆ. ಇನ್ನು ಅರಕಲಗೂಡು ಟಿಕೆಟ್ಗಾಗಿ ಡಿಕೆಶಿ ಬೆಂಬಲಿಗ ಶ್ರೀಧರ್ ಗೌಡ ಅರ್ಜಿ ಸಲ್ಲಿಸಿದ್ದಾರೆ. ಅದೇ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬೆಂಬಲಿಗ ಕೃಷ್ಣೇಗೌಡ ಕೂಡ ಆಕಾಂಕ್ಷಿಯಾಗಿದ್ದಾರೆ.
ಇನ್ನು ಅದೇ ಕ್ಷೇತ್ರದ ಟಿಕೆಟ್ ಕೇಳಿ ಕಾಂಗ್ರೆಸ್ಗೆ ಮರಳಿ ಬರಲು ಎ ಮಂಜು ಸಿದ್ಧರಾಗಿದ್ದಾರೆ ಎನ್ನುವ ಮಾತೂ ಕೇಳಿಬರುತ್ತಿದೆ. ಶಿವಮೊಗ್ಗದಲ್ಲಿ ಡಿಕೆ ಶಿವಕುಮಾರ್ ಬೆಂಬಲಿಗ ಸುಂದರೇಶ್ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ ಬೆಂಬಲದಿಂದ ಪ್ರಸನ್ನ ಕುಮಾರ್ ಮತ್ತೊಮ್ಮೆ ಟಿಕೆಟ್ ಕೇಳಿದ್ದಾರೆ.
ಕಲಘಟಗಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾಗರಾಜ್ ಛಬ್ಬಿಗೆ ಡಿಕೆಶಿ ಅಭಯ ನೀಡಿದ್ದಾರೆ. ಕಲಘಟಗಿ ಟಿಕೆಟ್ ಕೊಡದಿದ್ದರೆ ಮುಂದಿನ ನಿರ್ಧಾರ ಎಂದು ಸಿದ್ದರಾಮಯ್ಯ ಬೆಂಬಲಿಗ ಸಂತೋಷ್ ಲಾಡ್ ಹೇಳುತ್ತಿದ್ದಾರೆ.
ಬಸವನಗುಡಿ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಬೆಂಬಲಿಗ ಡಾ. ಶಂಕರ್ ಗುಹಾ ಟಿಕೆಟ್ ಪಡೆಯುವ ಭರವಸೆಯಲ್ಲಿದ್ದಾರೆ. ಅದೇ ಕ್ಷೇತ್ರದ ಟಿಕೆಟ್ ಮೇಲೆ ಯುಬಿ ವೆಂಕಟೇಶ್ ಕಣ್ಣಿಟ್ಟಿದ್ದಾರೆ.
ಇನ್ನು ಸಿದ್ದರಾಮಯ್ಯ ಬೆಂಬಲಿಗ ಅಖಂಡ ಶ್ರೀನಿವಾಸಮೂರ್ತಿಗೆ ಅಡ್ಡಲಾಗಿ ಡಿಕೆ ಶಿವಕುಮಾರ್ ಬೆಂಬಲಿಗ ಪ್ರಸನ್ನ ಕುಮಾರ್ ಇದ್ದಾರೆ. ಇನ್ನೂ ಹಲವು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬೆಂಬಲಿಗರ ನಡುವೆ ಟಿಕೆಟ್ಗಾಗಿ ಭಾರಿ ಪೈಪೋಟಿ ನಡೆದಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ