ಕೊಳ್ಳೆಗಾಲದಲ್ಲಿ ಶುರುವಾಯ್ತು ಹಾಲಿ- ಮಾಜಿ ಶಾಸಕರ ಮುಸುಕಿನ ಗುದ್ದಾಟ: ಬಿಜೆಪಿ ಹೈಕಮಾಂಡ್ ಒಲವಿನತ್ತ ಇಬ್ಬರ ಚಿತ್ತ

| Updated By: ವಿವೇಕ ಬಿರಾದಾರ

Updated on: Nov 11, 2022 | 7:53 PM

ಕೊಳ್ಳೆಗಾಲ ನಗರಸಭೆ ಉಪಚುನಾವಣೆ ನಡೆಯುತ್ತಿದ್ದು, ಹಾಲಿ ಮತ್ತು ಮಾಜಿ ಶಾಸಕರ ಮುಸುಕಿನ ಗುದ್ದಾಟ ಶುರುವಾಗಿದೆ.

ಕೊಳ್ಳೆಗಾಲದಲ್ಲಿ ಶುರುವಾಯ್ತು ಹಾಲಿ- ಮಾಜಿ ಶಾಸಕರ ಮುಸುಕಿನ ಗುದ್ದಾಟ: ಬಿಜೆಪಿ ಹೈಕಮಾಂಡ್ ಒಲವಿನತ್ತ ಇಬ್ಬರ ಚಿತ್ತ
ಶಾಸಕ ಎನ್​ ಮಹೇಶ ಮತ್ತು ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ
Follow us on

2023ರ ಚುನಾವಣೆ ಕಾವು ರಾಜ್ಯಾದ್ಯಂತ ಜೋರಾಗಿದೆ. ಗಡಿಜಿಲ್ಲೆ ಚಾಮರಾಜನಗರದಲ್ಲೂ ರಾಜಕೀಯ ಆಟ ಶುರುವಾಗಿದೆ. ಕೊಳ್ಳೆಗಾಲ ನಗರಸಭೆ ಉಪಚುನಾವಣೆ ನಡೆಯುತ್ತಿದ್ದು, ಹಾಲಿ ಮತ್ತು ಮಾಜಿ ಶಾಸಕರ ಮುಸುಕಿನ ಗುದ್ದಾಟ ಶುರುವಾಗಿದೆ. ಹೌದು ಬಿಎಸ್ಪಿ ತೊರೆದು ಕೇಸರಿ ಪಡೆ ಸೇರಿರುವ ಶಾಸಕ ಎನ್. ಮಹೇಶ್ ಕುರಿತು ಬಿಜೆಪಿ ಪಕ್ಷದಲ್ಲೇ ವಿರೋಧಿಗಳು ಹೆಚ್ಚಾಗಿದ್ದಾರೆ. ಇದಕ್ಕೆ ಕಾರಣ ಇತ್ತೀಚಿಗೆ ನಡೆದ ನಗರಸಭೆ ಉಪಚುನಾವಣೆಯಲ್ಲಿ ಆನೆ ತ್ಯಜಿಸಿ ಕಮಲ ಹಿಡಿದ ಆರು ಸದಸ್ಯರ ಗೆಲುವು. ಆರು ಬಾರಿ ಚುನಾವಣೆ ಎದುರಿಸಿ ಎರಡು ಬಾರಿ ಶಾಸಕರಾಗಿರುವ ಜಿ.ಎನ್. ನಂಜುಂಡಸ್ವಾಮಿ ತಾವೇ ಮುಂದಿನ ಬಿಜೆಪಿ ಅಭ್ಯರ್ಥಿ ಎಂಬ ಉಮೇದಿನಲ್ಲಿದ್ದರು. ಆದರೆ ಉಪಚುನಾವಣೆಯ ಗೆಲುವು ಮಹೇಶ್​ಗೆ ವರವಾಗಿದೆ.

ಜೊತೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಸೋಮಣ್ಣ ಅವರು ಎನ್.ಮಹೇಶ್ ಅವರನ್ನು ಗೆಲ್ಲಿಸಬೇಕೆಂದು ಬಹಿರಂಗ ಹೇಳಿಕೆ ನೀಡಿರುವುದು ನಂಜುಂಡಸ್ವಾಮಿ ಅವರಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಹೀಗಾಗಿ ಅವರು ಎನ್. ಮಹೇಶ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಿಎಸ್ಪಿ ತ್ಯಜಿಸಿ ಬಿಜೆಪಿ ಸೇರಿರುವ ಎನ್. ಮಹೇಶ್ 2023ರ ಅದೃಷ್ಟ ಪರೀಕ್ಷೆಗೆ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ನಗರಸಭೆ ಉಪಚುನಾವಣೆ ಫಲಿತಾಂಶ ಬಿಜೆಪಿಪರ ಬಂದಿರುವುದು ಮಾತ್ರವಲ್ಲದೇ ರಾಜ್ಯ ಮಟ್ಟದ ನಾಯಕರು ಹೋದಲ್ಲಿ ಬಂದಲ್ಲಿ ಕೊಳ್ಳೆಗಾಲದ ಗೆಲುವನ್ನು ಪುನರುಚ್ಛರಿಸುತ್ತಿರುವುದು ಮಹೇಶ್ ಸಂತಸಕ್ಕೆ ಕಾರಣವಾಗಿದೆ. ಹೀಗಾಗಿ ಮಹೇಶ್​ ಕ್ಷೇತ್ರದಲ್ಲಿ ಎದ್ದಿರುವ ಭಿನ್ನಮತವನ್ನು ಅವರು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರಿದ್ದೇನೆ. ಚುನಾವಣೆಯಲ್ಲಿ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ ಇಲ್ಲವಾದರೆ ಪಕ್ಷದ ಅಭ್ಯರ್ಥಿಪರ ಕೆಲಸ ಮಾಡುತ್ತೇನೆ. ಇದರ ಜೊತೆಗೆ ತಾನು ಸಹ ಟಿಕೆಟ್ ಆಕಾಂಕ್ಷಿ ಎಂದು ಜಾಣ್ಮೆಯ ಉತ್ತರ ನೀಡುತ್ತಿದ್ದಾರೆ. ಸದ್ಯ ಚಾಮರಾಜನಗರ ಬಿಜೆಪಿಯಲ್ಲಿ ಎಲ್ಲವು ಸರಿ ಇಲ್ಲ ಅಂತ ಪದೇ ಪದೇ ಸಾಬೀತಾಗುತ್ತಿದೆ. ಅಂತರಿಕವಾಗಿ ನಡೆಯುತ್ತಿದ್ದ ಕಚ್ಚಾಟ ಇತ್ತೀಚಿಗೆ ಬೀದಿ ರಂಪಟವಾಗುತ್ತಿದೆ. ಬಿಜೆಪಿ ಹೈಕಮಾಂಡ್ ನೋವಿಗೆ ಮುಲಾಮು ಹಚ್ಚುವ ಕೆಲಸ ಮಾಡತ್ತಾ ಕಾದುನೋಡಬೇಕಿದೆ.

2023ರ ಚುನಾವಣೆ ಕಾವು ರಾಜ್ಯಾದ್ಯಂತ ಜೋರಾಗಿದೆ. ಗಡಿಜಿಲ್ಲೆ ಚಾಮರಾಜನಗರದಲ್ಲೂ ರಾಜಕೀಯ ಆಟ ಶುರುವಾಗಿದೆ. ಕೊಳ್ಳೆಗಾಲ ನಗರಸಭೆ ಉಪಚುನಾವಣೆ ನಡೆಯುತ್ತಿದ್ದು, ಹಾಲಿ ಮತ್ತು ಮಾಜಿ ಶಾಸಕರ ಮುಸುಕಿನ ಗುದ್ದಾಟ ಶುರುವಾಗಿದೆ. ಹೌದು ಬಿಎಸ್ಪಿ ತೊರೆದು ಕೇಸರಿ ಪಡೆ ಸೇರಿರುವ ಶಾಸಕ ಎನ್. ಮಹೇಶ್ ಕುರಿತು ಬಿಜೆಪಿ ಪಕ್ಷದಲ್ಲೇ ವಿರೋಧಿಗಳು ಹೆಚ್ಚಾಗಿದ್ದಾರೆ. ಇದಕ್ಕೆ ಕಾರಣ ಇತ್ತೀಚಿಗೆ ನಡೆದ ನಗರಸಭೆ ಉಪಚುನಾವಣೆಯಲ್ಲಿ ಆನೆ ತ್ಯಜಿಸಿ ಕಮಲ ಹಿಡಿದ ಆರು ಸದಸ್ಯರ ಗೆಲುವು. ಆರು ಬಾರಿ ಚುನಾವಣೆ ಎದುರಿಸಿ ಎರಡು ಬಾರಿ ಶಾಸಕರಾಗಿರುವ ಜಿ.ಎನ್. ನಂಜುಂಡಸ್ವಾಮಿ ತಾವೇ ಮುಂದಿನ ಬಿಜೆಪಿ ಅಭ್ಯರ್ಥಿ ಎಂಬ ಉಮೇದಿನಲ್ಲಿದ್ದರು. ಆದರೆ ಉಪಚುನಾವಣೆಯ ಗೆಲುವು ಮಹೇಶ್​ಗೆ ವರವಾಗಿದೆ.

ಜೊತೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಸೋಮಣ್ಣ ಅವರು ಎನ್.ಮಹೇಶ್ ಅವರನ್ನು ಗೆಲ್ಲಿಸಬೇಕೆಂದು ಬಹಿರಂಗ ಹೇಳಿಕೆ ನೀಡಿರುವುದು ನಂಜುಂಡಸ್ವಾಮಿ ಅವರಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಹೀಗಾಗಿ ಅವರು ಎನ್. ಮಹೇಶ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಿಎಸ್ಪಿ ತ್ಯಜಿಸಿ ಬಿಜೆಪಿ ಸೇರಿರುವ ಎನ್. ಮಹೇಶ್ 2023ರ ಅದೃಷ್ಟ ಪರೀಕ್ಷೆಗೆ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ನಗರಸಭೆ ಉಪಚುನಾವಣೆ ಫಲಿತಾಂಶ ಬಿಜೆಪಿಪರ ಬಂದಿರುವುದು ಮಾತ್ರವಲ್ಲದೇ ರಾಜ್ಯ ಮಟ್ಟದ ನಾಯಕರು ಹೋದಲ್ಲಿ ಬಂದಲ್ಲಿ ಕೊಳ್ಳೆಗಾಲದ ಗೆಲುವನ್ನು ಪುನರುಚ್ಛರಿಸುತ್ತಿರುವುದು ಮಹೇಶ್ ಸಂತಸಕ್ಕೆ ಕಾರಣವಾಗಿದೆ. ಹೀಗಾಗಿ ಮಹೇಶ್​ ಕ್ಷೇತ್ರದಲ್ಲಿ ಎದ್ದಿರುವ ಭಿನ್ನಮತವನ್ನು ಅವರು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರಿದ್ದೇನೆ. ಚುನಾವಣೆಯಲ್ಲಿ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ ಇಲ್ಲವಾದರೆ ಪಕ್ಷದ ಅಭ್ಯರ್ಥಿಪರ ಕೆಲಸ ಮಾಡುತ್ತೇನೆ. ಇದರ ಜೊತೆಗೆ ತಾನು ಸಹ ಟಿಕೆಟ್ ಆಕಾಂಕ್ಷಿ ಎಂದು ಜಾಣ್ಮೆಯ ಉತ್ತರ ನೀಡುತ್ತಿದ್ದಾರೆ.

ಸದ್ಯ ಚಾಮರಾಜನಗರ ಬಿಜೆಪಿಯಲ್ಲಿ ಎಲ್ಲವು ಸರಿ ಇಲ್ಲ ಅಂತ ಪದೇ ಪದೇ ಸಾಬೀತಾಗುತ್ತಿದೆ. ಅಂತರಿಕವಾಗಿ ನಡೆಯುತ್ತಿದ್ದ ಕಚ್ಚಾಟ ಇತ್ತೀಚಿಗೆ ಬೀದಿ ರಂಪಟವಾಗುತ್ತಿದೆ. ಬಿಜೆಪಿ ಹೈಕಮಾಂಡ್ ನೋವಿಗೆ ಮುಲಾಮು ಹಚ್ಚುವ ಕೆಲಸ ಮಾಡತ್ತಾ ಕಾದುನೋಡಬೇಕಿದೆ.

ದಿಲೀಪ್ ಚೌಡಹಳ್ಳಿ ‌ಟಿವಿ9 ಚಾಮರಾಜನಗರ

Published On - 7:53 pm, Fri, 11 November 22