ಕಾಂಗ್ರೆಸ್ ಗ್ಯಾರಂಟಿಗಳೇ ನಮ್ಮನ್ನು ಸೋಲಿಸಿವೆ; ಕಾರ್ಯಕರ್ತರ ಸಭೆಯಲ್ಲಿ ಅಳಲು ತೋಡಿಕೊಂಡ ಬಿಜೆಪಿ ನಾಯಕರು
ಬಳ್ಳಾರಿ ನಗರದ ಬಸವ ಭವನದಲ್ಲಿ ಇಂದು (ಜೂ.24), ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ 9 ವರ್ಷದ ಆಡಳಿತ ಸಾಧನೆ ಬಗ್ಗೆ ತಿಳಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ. ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗಲಿದ್ದಾರೆಂಬ ಕೂಗಿದೆ. ಅದಕ್ಕೆ ನಾವು ಧ್ವನಿಗೂಡಿಸೋಣ ಎಂದರು.
ಬಳ್ಳಾರಿ: ನರೇಂದ್ರ ಮೋದಿ(Narendra Modi)ಅವರು ಮೂರನೇ ಬಾರಿಗೆ ಪ್ರಧಾನಿ ಆಗಲಿದ್ದಾರೆಂಬ ಕೂಗಿದೆ. ಅದಕ್ಕೆ ನಾವು ಧ್ವನಿಗೂಡಿಸೋಣ ಎಂದು ಮಾಜಿ ಶಾಸಕ ಎಂ.ಎಸ್ ಸೋಮಲಿಂಗಪ್ಪ(MS Somalingappa) ಹೇಳಿದರು. ಬಳ್ಳಾರಿ(Ballari) ನಗರದ ಬಸವ ಭವನದಲ್ಲಿ ಇಂದು (ಜೂ.24), ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದ 9 ವರ್ಷದ ಆಡಳಿತದ ಸಾಧನೆ ಬಗ್ಗೆ ತಿಳಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಗ್ಯಾರಂಟಿ ಯೋಜನೆಗಳು ವಿಫಲಗೊಳ್ಳುವುದು ಖಚಿತ, ಜನತೆ ನಿಮಗೆ ಕಲ್ಲು ಎಸೆಯುವ ದಿನಗಳು ಬರಲಿವೆ. ಕಾಂಗ್ರೆಸ್ ಕಾರ್ಯಕರ್ತರು ಅನೈತಿಕ ದಂಧೆ ಮಾಡಲಿದ್ದಾರೆ. ಅದನ್ನು ಮಟ್ಟ ಹಾಕಲು ಪೊಲೀಸ್ ಠಾಣೆ ಬಾಗಿಲಿಗೆ ಕುಳಿತು ಹೋರಾಟ ಮಾಡಲು ಸಿದ್ದ ಎಂದರು.
ಈ ವೇಳೆ ಪಕ್ಷದ ಹಾಲಿ, ಮಾಜಿ ಶಾಸಕರು, ಸಂಸದರು, ಮುಖಂಡರುಗಳು ಮಾತನಾಡಿ ‘ಕಾಂಗ್ರೆಸ್ನ ಗ್ಯಾರೆಂಟಿಗಳೇ ನಮ್ಮ ಸೋಲುಗೆ ಕಾರಣ ಎಂದು ಗೋಗರೆದು. ಇದೇ ಗ್ಯಾರೆಂಟಿ ಯೋಜನೆಗಳು ಮುಂದೆ ಕಾಂಗ್ರೆಸ್ಗೆ ಮುಳುವಾಗಲಿದೆಯೆಂಬ ಮಾತುಗಳನ್ನಾಡಿದರು. ಇನ್ನು ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ‘ಬಿಹಾರದಲ್ಲಿ ನಡೆದ ಸಭೆಯಲ್ಲಿದ್ದವರೆಲ್ಲ ಜೈಲಿಗೆ ಹೋಗಿ ಬಂದವರು, ಜೊತೆಗೆ ಹೋಗಲು ರೆಡಿಯಾಗಿರುವವರು. ಇಂತಹವರಿಂದ ದೇಶದ ಅಭಿವೃದ್ಧಿ ಸಾಧ್ಯನಾ, ಗ್ಯಾರೆಂಟಿ ಸ್ಕೀಮ್ ಗಳಿಂದ ರಾಜ್ಯವನ್ನು ಕಾಂಗ್ರೆಸ್ ದಿವಾಳಿ ಮಾಡಲಿದೆಂದು ಆರೋಪಿಸಿದರು.
ಇನ್ನೋರ್ವ ಸಂಸದ ವೈ.ದೇವೇಂದ್ರಪ್ಪ ಅವರು ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಯಾರಿಗೇ ನೀಡಲಿ ಬಿಜೆಪಿಯನ್ನು ಗೆಲ್ಲಿಸಿ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡೋಣ ಎಂದರು. ಇದೇ ವೇಳೆ ಮಾಲಿಕಯ್ಯ ಗುತ್ತೇದಾರ್ ಮಾತನಾಡಿ, ‘ಶಿಕ್ಷಣ, ಆರೋಗ್ಯ ಉಚಿತವಾಗಿ ಕೊಡಿ, ಅದು ಬಿಟ್ಟು ಅದು ಇದು ಉಚಿತ ಕೊಟ್ಟರೆ ರಾಜ್ಯ ದಿವಾಳಿಯಾಗಲಿದೆ. 10 ಕೆ.ಜಿ. ಅಕ್ಕಿ ಕೊಡುವುದಾಗಿ ಹೇಳಿ ಈಗ ಕೇಂದ್ರದ ಮೇಲೆ ಗೂಬೆ ಕೂರಿಸಬೇಡಿ, ಹೇಳಿದಂತೆ ಅಕ್ಕಿ ಕೊಡಿ ಎಂದರು.
ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲವು ಸಾಧಿಸಲಿದೆ ಬಿಜೆಪಿ
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ನಳೀನ್ ಕುಮಾರ್ ಕಟೀಲ್ ‘ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಿ, ಕೋವಿಡ್ ನಂತಹ ಅಪಾಯಕಾರಿ ಸೋಂಕನ್ನು ಎದುರಿಸುವ ಶಕ್ತಿಯನ್ನು ನಮ್ಮ ದೇಶ ಮಾಡಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ. ಅವರಂತಹ ಪ್ರಧಾನಿಯನ್ನು ಮತ್ತೊಮ್ಮೆ ಆಯ್ಕೆ ಮಾಡಲು ಲೋಕಸಭೆ ಚುನಾವಣೆನ್ನು ಸಮರ್ಥವಾಗಿ ಎದುರಿಸಲು, ಮತದಾರರಿಗೆ ಮೋದಿ ಅವರ ಸಾಧನೆಗಳನ್ನು ತಿಳಿಸಬೇಕು ಎಂದರು.
ಇದನ್ನೂ ಓದಿ:ವಾಸ್ತವಕ್ಕಿಂತ ಕಡಿಮೆ ಆಸ್ತಿ ಘೋಷಿಸಿದ ಡಿಕೆಶಿ ವಿರುದ್ಧ ತನಿಖೆಯಾಗಲಿ; ಬಿಜೆಪಿ ಆಗ್ರಹಕ್ಕೆ ಈ ವಿಡಿಯೋ ಕಾರಣ!
ಕೇಂದ್ರದಲ್ಲಿ 09 ವರ್ಷ ಬಿಜೆಪಿ ಅಧಿಕಾರ ಪೂರೈಸಿದೆ. ಕೇಂದ್ರ ಸರ್ಕಾರದ ಸಾಧನೆ ಜನರಿಗೆ 7 ತಂಡಗಳ ಮೂಲಕ ತಿಳಿಸುವ ಕಾರ್ಯ ನಡೆಯುತ್ತಿದೆ. ಅನಿರೀಕ್ಷಿತ ಫಲಿತಾಂಶ ಬಂದು, ಬಿಜೆಪಿಗೆ ಹಿನ್ನಡೆ ಆಗಿದೆ. ಹಿಂದೆ ವಾಜಪೇಯಿ, ಅಡ್ವಾಣಿ ಕೂಡ ಸೋತಿದ್ದರು. ಆದ್ರೆ, ಮತ್ತೇ ಪಾರ್ಟಿ ಕಟ್ಟಿ ಬೆಳೆಸಿದರು. ಈಗಲೂ ನಾವು ಒಟ್ಟಾಗಿ ಪಕ್ಷ ಸಂಘಟನೆ ಮಾಡೋಣ. ಈ ಸೋಲನನ್ನ ನಾನು ಸವಾಲಾಗಿ ಸ್ವಿಕರಿಸುವೆ. ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲವು ಬಿಜೆಪಿ ಸಾಧಿಸಲಿದೆ ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಮುಖಂಡರುಗಳಾದ ರೇಣುಕಾ ಪ್ರಸಾದ್, ಶಶಿಲ್ ಜಿ ನಮೋಷಿ, ಎಂ.ಪಿ.ಸುಮಾವಿಜಯ, ಶಿಲ್ಪಾ ರಾಘವೇಂದ್ರ, ಕೆ.ಎ.ರಾಮಲಿಂಗಪ್ಪ, ಡಾ.ಎಸ್.ಜೆ.ವಿ.ಮಹಿಪಾಲ್, ಗುರುಲಿಂಗನಗೌಡ, ಪಾರ್ವತಿ ಇಂದು ಶೇಖರ್, ಕೆ.ಬಿ.ವೆಂಕಟೇಶ್ವರ, ಮಾರುತಿ ಪ್ರಸಾದ್, ಎ.ಎಂ.ಸಂಜಯ್, ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ಮುರಹರಗೌಡ, ಸಿದ್ದೇಶ್ ಯಾದವ್ ಮೊದಲಾದವರು ಇದ್ದರು.
ನಾವು ಸೋತಿಲ್ಲ, ಕಾಂಗ್ರೆಸ್ ಗ್ಯಾರಂಟಿ ಗೆದ್ದಿದೆ
ಇನ್ನು ಸಭೆಯಲ್ಲಿ ಮಾತನಾಡಿದ ಶಾಸಕ ಸೋಮಶೇಖರ್ ರೆಡ್ಡಿ ‘ನಾವು ಸೋತಿಲ್ಲ ಕಾಂಗ್ರೆಸ್ ಗ್ಯಾರಂಟಿ ಗೆದ್ದಿದೆ. ಇವತ್ತು ಫ್ರೀ ಯಾಗಿ ಹೋದ ಬಸ್ಸಿ ನಲ್ಲಿ ಮುಂದೆ ನಾಲ್ಕು ಪಟ್ಟು ಹಣ ಕೊಡಬೇಕಾಗ್ತದೆ. ಎಂ.ಪಿ. ಚುನಾವಣೆಯಲ್ಲಿ ಈ ತಪ್ಪು ಮಾಡಿದ್ರೆ, ಮೋದಿ ಅವರನ್ನು ಕಳೆದು ಕೊಳ್ಳುಬೇಕಾಗುತ್ತದೆ. ಇದಕ್ಕಿಂತ ದುರ್ದೈವ ಇಲ್ಲ. ಕಾಂಗ್ರೆಸ್ ಅವಧಿಯಲ್ಲಿ ಮನ ಮೋಹನ್ ಸಿಂಗ್ ಹೇಗಿರುತ್ತಿದ್ರು. ಈಗ ಮೋದಿ ಹೇಗಿದ್ದಾರೆಂದು ವ್ಯಂಗ್ಯವಾಗಿ ಆ್ಯಂಕ್ಟಿಂಗ್ ಮಾಡಿದರು. ನನಗೆ ನನ್ನ ಸೊಸೆ ಸೋಲಿಸಿದಳು, ಮಾಲೀಲಯ್ಯ ಗುತ್ತಿದಾರ್ ಅವರಿಗೆ ಅವರ ತಮ್ಮ ಸೋಲಿಸಿದ.
ಇನ್ನು ಪಟ್ನಾದಲ್ಲಿ ಸೇರಿದ ವಿರೋಧಿಗಳ ಸಭೆಯಲ್ಲಿ ಮೊನ್ನೆ ಲಾಲು ಪ್ರಸಾದ್ ಅವರು ರಾಹುಲ್ಗೆ ಮದುವೆಯಾಗಿ ಎಂದಿದ್ದಾರೆ. ಆದ್ರೆ, ರಾಹುಲ್ಗೆ ಈಗಾಗಲೇ ಮದುವೆಯಾಗಿದೆ. ನಮ್ಮ ದೇಶದಲ್ಲಿ ಅಲ್ಲ, ಬೇರೆ ದೇಶದಲ್ಲಿ ರಾಹುಲ್ ಮದುವೆಯಾಗಿದೆ. ಮಕ್ಕಳಿದ್ದಾರೆ. ಆದ್ರೆ, ನಮ್ಮ ದೇಶದಲ್ಲಿ ಸನ್ಯಾಸಿಯಾಗಿ ಜೋಡೋ ಜೋಡು ಎಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಓಡಾಡುತ್ತಿದ್ದಾರೆ, ಏನು ಜೋಡಿಸಿದ್ರೋ ಗೊತ್ತಾಗ್ತಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Sat, 24 June 23