ಬಿಜೆಪಿಯಲ್ಲಿದ್ದುಕೊಂಡು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ: ರೇಣುಕಾಚಾರ್ಯ ಮಾತಿಗೆ ಯತ್ನಾಳ್ ಆಕ್ಷೇಪ
ಕಾಂಗ್ರೆಸ್ ಸರ್ಕಾರ ಅಧಿಕಾರ ಬರುವ ಪೂರ್ವದಲ್ಲಿ ನೀಡಿದ ಗ್ಯಾರೆಂಟಿಗಳಲ್ಲಿ ಎಲ್ಲರಿಗೂ ಉಚಿತ ಮತ್ತು ಖಚಿತ ಅಂದರು. ಆದರೆ, ಈಗ ನೂರಾರು ಷರತ್ತುಗಳನ್ನು ಹಾಕಿದ್ದಾರೆ. ಇವರ ಯಾವುದೇ ಯೋಜನೆ ಕೂಡ ಪೂರ್ಣ ಪ್ರಮಾಣದಲ್ಲಿ ಈ ಜನರಿಗೆ ಸಿಗಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸೌಧದಲ್ಲಿ ಹೇಳಿದ್ದಾರೆ.
ಬೆಂಗಳೂರು, ಆ.30: ಮೈಸೂರಿನಲ್ಲಿ ಇಂದು(ಆ.30) ಕಾಂಗ್ರೆಸ್ ಸರ್ಕಾರ (Congress Government)ನೂರು ದಿನ ಪೂರೈಸಿದ ಹಿನ್ನಲೆ ಚುನಾವಣಾ ಪೂರ್ವದಲ್ಲಿ ನೀಡಿದ ಗ್ಯಾರೆಂಟಿಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯನ್ನು (Gruha Lakshmi Scheme) ಜಾರಿಗೊಳಿಸಿದೆ. ಈ ಕುರಿತು ‘100 ದಿನದ ಸಾಧನೆ ಅಂದ್ರೆ, ಅದು ವರ್ಗಾವಣೆ ಮಾತ್ರ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಕಾಂಗ್ರೆಸ್ಗೆ ಟಾಂಗ್ ಕೊಟ್ಟಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ ಅಭಿವೃದ್ಧಿ ಕೆಲಸ ಎಲ್ಲಾ ಸ್ಥಗಿತ ಆಗಿದೆ. ನಮ್ಮ ಕಾಲದ ಕೆಲಸಗಳನ್ನೆಲ್ಲ ನಿಲ್ಲಿಸಿದ್ದಾರೆ ಎಂದರು.
ಎಲ್ಲರಿಗೂ ಉಚಿತವೆಂದು, ಈಗ ಕಂಡೀಷನ್
ಹೌದು, ಕಾಂಗ್ರೆಸ್ ಸರ್ಕಾರ ಅಧಿಕಾರ ಬರುವ ಪೂರ್ವದಲ್ಲಿ ನೀಡಿದ ಗ್ಯಾರೆಂಟಿಗಳಲ್ಲಿ ಎಲ್ಲರಿಗೂ ಉಚಿತ ಮತ್ತು ಖಚಿತ ಅಂದರು. ಆದರೆ, ಈಗ ನೂರಾರು ಷರತ್ತುಗಳನ್ನು ಹಾಕಿದ್ದಾರೆ. ಇವರ ಯಾವುದೇ ಯೋಜನೆ ಕೂಡ ಪೂರ್ಣ ಪ್ರಮಾಣದಲ್ಲಿ ಈ ಜನರಿಗೆ ಸಿಗಲ್ಲ. ಪ್ರತಿಪಕ್ಷದ ನಾಯಕನ ಆಯ್ಕೆಗೂ ಚಾರ್ಜ್ ಶೀಟ್ಗೂ ಸಂಬಂಧ ಇಲ್ಲ. ನೂರು ದಿನದ ವೈಪಲ್ಯ ಏನು ಅಂತ ಚಾರ್ಜ್ ಶೀಟ್ ಬಿಡುಗಡೆ ಮಾಡಲಾಗಿದೆ. ಅದಕ್ಕೆ ಅವರು ಮೊದಲು ಉತ್ತರ ಕೊಡಬೇಕು ಎಂದಿದ್ದಾರೆ.
ಇದನ್ನೂ ಓದಿ:ಗೃಹಲಕ್ಷ್ಮೀ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗಿ
ಇನ್ನು ವಿರೋಧ ಪಕ್ಷದ ನಾಯಕನ ಆಯ್ಕೆ ಆಗುತ್ತದೆ. ಅಧಿಕೃತ ವಿರೋಧ ಪಕ್ಷವಾಗಿ ನಾವು ಕೇಳಿದ್ದಕ್ಕೆ ಅವರು ಮೊದಲು ಉತ್ತರ ಕೊಡಲಿ. ಯಾವುದೋ ನೆಪ ಹೇಳಿ ಜಾರಿಕೊಳ್ಳಬಾರದು ಎಂದು ಹೇಳಿದರು. ಇನ್ನು ಇದೇ ವೇಳೆ ಬಿಜೆಪಿ ಕಚೇರಿ ಗಾಸಿಪ್ ಕೇಂದ್ರ ಎಂದ ರೇಣುಕಾಚಾರ್ಯ ಹೇಳಿಕೆ ವಿಚಾರ ‘ ಬಿಜೆಪಿ ಕಚೇರಿ ಪಕ್ಷ ಸಂಘಟನೆಗೆ ಇರುವುದು, ಗಾಸಿಪ್ಗಳೆಲ್ಲಾ ಮನೆಗಳಲ್ಲಿ ಆಗುವುದು. ಗಾಸಿಪ್ಗೆ ಎಂದೇ ಮನೆಗಳು ಬೇರೆ ಬೇರೆ ಇವೆ. ಅವರ ಮನೆಗಳಲ್ಲಿ ಗಾಸಿಪ್ ಸೃಷ್ಟಿ ಆಗ್ತಾವೆ. ಅಲ್ಯಾಕೆ ಹೋಗಿ ಗಾಸಿಪ್ ಬಿಡಬೇಕು.
ಬಿಜೆಪಿ ಒಳಗಡೆಯಿದ್ದುಕೊಂಡು ಹೇಳಿಕೆ ಕೊಡುವುದು ಸರಿಯಲ್ಲ
ಕೆಲವು ಜನ ಪಾರ್ಟಿ ಬಿಡ್ತೀವಿ ಎಂದು ಬೆದರಿಕೆ ಹಾಕುವುದು ಸರಿಯಲ್ಲ. ಪಕ್ಷದಿಂದ ಗೆದ್ದಿದ್ದೇವೆ, ಮಂತ್ರಿಗಳಾಗಿದ್ದೀವಿ. ಏನು ಕರ್ನಾಟಕದಲ್ಲಿ ಬಿಜೆಪಿ ಮುಗಿದೋಯ್ತಾ?, ಪ್ರಿಯಾಂಕ್ ಖರ್ಗೆ ಹೇಳುತ್ತಾರೆ, ಮುಗಿದೋಯ್ತು ಬಿಜೆಪಿ ಕಥೆ ಅಂತಾರೆ. ಇದು ಎಷ್ಟು ಬಾಲಿಷ ಹೇಳಿಕೆ ಅಂದ್ರೆ, ಜಗತ್ತಿನಲ್ಲಿ ಅತೀ ದೊಡ್ಡ ಪಾರ್ಟಿ ಜನತಾ ಪಾರ್ಟಿ. ಮೋದಿಯಂತವರು ಇದ್ದಾಗಲೂ ಹೀಗೆ ಹೇಳುವುದು ಕೆಳಮಟ್ಟದ ಹೇಳಿಕೆ. ಬಿಜೆಪಿ ಒಳಗೆ ಇದ್ದುಕೊಂಡು ಹೇಳಿಕೆ ಕೊಡೋದು ಸರಿಯಲ್ಲ.
ಇದನ್ನೂ ಓದಿ:ಗೃಹಲಕ್ಷ್ಮೀ ಯೋಜನೆ ಚಾಲನೆಗೆ ಮೈಸೂರು ಆಯ್ಕೆ ಹಿಂದಿದೆಯಾ ಮಾಸ್ಟರ್ ಪ್ಲ್ಯಾನ್? ಬೆಳಗಾವಿಯಿಂದ ಶಿಫ್ಟ್ ಆಗಿದ್ದೇಕೆ?
ರೇಣುಕಾಚಾರ್ಯ ಪಕ್ಷ ಬಿಡುತ್ತಾರೆ ಎನ್ನುವ ವಿಚಾರ ‘ ಅವರು ಪಕ್ಷ ಬಿಡೋದಿಲ್ಲ. ಯಾಕೋ ಮನಸ್ಸಿಗೆ ಬೇಜಾರಾಗಿದೆ ಅವರಿಗೆ, ಹೈಕಮಾಂಡ್ ಎಲ್ಲಾ ಗಮನಿಸ್ತಾ ಇದೆ. ಒಳ್ಳೆದಿನ ಬರುತ್ತದೆ, ಗಡಿಬಿಡಿ ಯಾಕೆ? ಜನ ರೆಸ್ಟ್ ಕೊಟ್ಟಿದ್ದಾರೆ. ಸ್ವಲ್ಪ ದಿನ ರೆಸ್ಟ್ ಮಾಡಲಿ. ಲೋಕಸಭಾ ಟಿಕೆಟ್ ಕೇಳಿದ್ರಲ್ಲಿ ತಪ್ಪಿಲ್ಲ. ದಾವಣಗೆರೆ ಲೋಕಸಭೆಗೆ ಅಲ್ಲಿನ ಎಂಪಿ ನಿಲ್ಲಲ್ಲ ಅಂತಿದ್ದಾರೆ. ಹಾಗಾಗಿ ಟಿಕೆಟ್ ಕೇಳಿದ್ದಾರೆ, ಅದರಲ್ಲಿ ತಪ್ಪೇನಿದೆ. ಇನ್ನು ಉದಾಸಿ ಅವರೂ ನಿಲ್ಲೋದಿಲ್ಲವೆಂದು ಹೇಳಿದ್ದಾರೆ. ಸಹಜವಾಗಿ ಟಿಕೆಟ್ ಕೇಳಿದ್ದಾರೆ, ತಪ್ಪೇನು? ಅವರಿಗೆ ಅಧಿಕಾರ ಹಕ್ಕು ಎರಡು ಇದೆ. ಸಿಗುತ್ತೆ ಅಂದ್ರೆ, ಹೋರಾಟ ಮಾಡಲಿ ಎಂದು ಹೇಳಿದರು.
ಪಕ್ಷದ ಮುಖಂಡರು ರಾಜ್ಯಾಧ್ಯಕ್ಷರ ಮೇಲೆ ಆರೋಪ ವಿಚಾರ ‘ ರಾಜ್ಯಾಧ್ಯಕ್ಷರು ಆದಷ್ಟು ಬೇಗ ಮುಕ್ತ ಆಗಬೇಕು ಅಂತಿದ್ದಾರೆ. ಆದರೆ, ಮೇಲಿನವರು ಅವರನ್ನು ಬಿಡಿತ್ತಿಲ್ಲ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಪಾಪ ಅವರು ಒಳ್ಳೆಯ ಮನುಷ್ಯ. ಸೋತಾಗ ನೂರು ಮಂದಿ ಕಲ್ಲು ಹಾಕುತ್ತಾರೆ. ಅದೇ ಗೆದ್ದಿದ್ರೆ, ಅವರನ್ನೇ ಮುಂದುವರೆಸ್ತಾ ಇದ್ದರು ಎಂದು ಶಾಸಕ ಯತ್ನಾಳ್ ಹೇಳಿದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ