ದೇಶದಲ್ಲಿ ಜೈನ ಸಮುದಾಯ ಬಿಜೆಪಿ ಜತೆಗಿದೆ; ಪ್ರೀತಿ ವಿಶ್ವಾಸ ಹೀಗೆ ಮುಂದುವರಿಯಲಿ: ಚುನಾವಣೆ ವೇಳೆ ಸಿಎಂ ಬೊಮ್ಮಾಯಿ ಆಶಯ

ಜೈನ‌ ಸಮುದಾಯದ ಹಲವು ಬೇಡಿಕೆ‌ಗಳು ಬಾಕಿ‌ ಇವೆ. ದೇಶದಲ್ಲಿ ಜೈನ ಸಮುದಾಯ ನಮ್ಮ ಬಿಜೆಪಿ ಜೊತೆಗಿದೆ. ಈ‌ ಪ್ರೀತಿ ವಿಶ್ವಾಸ ಹೀಗೆ ಮುಂದುವರಿಯಲಿ ಎಂದು ಆಶಿಸಿದ ಸಿಎಂ ಬೊಮ್ಮಾಯಿ ಸಂಖ್ಯೆಗಿಂತ ಒಗ್ಗಟ್ಟು, ಪ್ರೀತಿ ಮುಖ್ಯ- ಬಸವರಾಜ ಬೊಮ್ಮಾಯಿ

ದೇಶದಲ್ಲಿ ಜೈನ ಸಮುದಾಯ ಬಿಜೆಪಿ ಜತೆಗಿದೆ; ಪ್ರೀತಿ ವಿಶ್ವಾಸ ಹೀಗೆ ಮುಂದುವರಿಯಲಿ: ಚುನಾವಣೆ ವೇಳೆ ಸಿಎಂ ಬೊಮ್ಮಾಯಿ ಆಶಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 25, 2021 | 7:39 PM

ಹಾನಗಲ್: ಅಕ್ಟೋಬರ್ 30ರಂದು ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್‌ ನಿಗದಿಯಾಗಿದ್ದು, ಆಡೂರು ಗ್ರಾಮದಲ್ಲಿ ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಚಾರ ಸಭೆ ನಡೆಸಿದರು. ವೀರಶೈವ ಲಿಂಗಾಯತ, ಬಣಜಿಗ, ಮರಾಠ,ಜೈನ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ತ್ಯಾಗದ ಸಂಕೇತವಾದ ಶ್ರೇಷ್ಠ ಸಮುದಾಯ ಜೈನ ಸಮಾಜ. ಚುನಾವಣೆಯ ಸಮಯದಲ್ಲಿ ಭರವಸೆಗಳನ್ನ ಕೊಡುವಂತಿಲ್ಲ. ನಿಮ್ಮ ಮನದಾಳದ ಬೇಡಿಕೆಗೆ ನಮ್ಮ ಸರ್ಕಾರ ಸ್ಪಂದಿಸಲಿದೆ ಎಂದು ಹಾನಗಲ್​ ತಾಲೂಕಿನ ಆಡೂರು ಗ್ರಾಮದಲ್ಲಿ ಸಿಎಂ ಬೊಮ್ಮಾಯಿ ಹೇಳಿದರು.

ಜೈನ‌ ಸಮುದಾಯದ ಹಲವು ಬೇಡಿಕೆ‌ಗಳು ಬಾಕಿ‌ ಇವೆ. ದೇಶದಲ್ಲಿ ಜೈನ ಸಮುದಾಯ ನಮ್ಮ ಬಿಜೆಪಿ ಜೊತೆಗಿದೆ. ಈ‌ ಪ್ರೀತಿ ವಿಶ್ವಾಸ ಹೀಗೆ ಮುಂದುವರಿಯಲಿ ಎಂದು ಆಶಿಸಿದ ಸಿಎಂ ಬೊಮ್ಮಾಯಿ ಸಂಖ್ಯೆಗಿಂತ ಒಗ್ಗಟ್ಟು- ಪ್ರೀತಿ ಮುಖ್ಯ ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಚಿಕ್ಕ ಚಿಕ್ಕ‌ ಸಮುದಾಯವನ್ನು ಗೌರವಿಸುವ ಕೆಲಸ ಬಿಜೆಪಿ ಮಾಡುತ್ತದೆ:

ಚಿಕ್ಕ ಚಿಕ್ಕ‌ ಸಮುದಾಯವನ್ನು ಗೌರವಿಸುವ ಕೆಲಸ ಬಿಜೆಪಿ ಮಾಡುತ್ತದೆ. ಹಾನಗಲ್ ಸಮಗ್ರ ಅಭಿವೃದ್ಧಿ ಮಾಡುತ್ತೇವೆ, 2023ರ ಚುನಾವಣೆಗೆ ಹೇಳಿದ ಕೆಲಸ ಮಾಡಿಯೇ ನಿಮ್ಮ ಬಳಿಗೆ ಬರುತ್ತೇನೆ. ನಮ್ಮ ಭವಿಷ್ಯ ಮತ್ತು ತಾಲ್ಲೂಕಿನ ಭವಿಷ್ಯ ನಿಮ್ಮ ಕೈಯಲ್ಲಿದೆ. ಬಹಳ ದೊಡ್ಡ ಅರಿವು ಮೂಡುತ್ತಿದೆ. ಕ್ಷೇತ್ರದಲ್ಲಿ ನಿರೀಕ್ಷೆಗೆ ಮೀರಿ‌ ಬೆಂಬಲ ಸಿಕ್ಕುತ್ತಿದೆ. ಮೊದಲ ಬಾರಿಗೆ ಸಾಮಾಜಿಕ ಸಮೀಕರಣವಾಗುತ್ತಿದೆ. ಸದ್ಯ ಯಾವುದೇ ಗುಂಪುಗಾರಿಕೆ ಇಲ್ಲ. ವಿಶೇಷವಾಗಿ ನನ್ನ ಮೇಲೆ ಪ್ರೀತಿ ವಿಶ್ವಾಸ ಇರಲಿ. ಸೇವಕನಾಗಿ ಅಳಿಯನ ಸೇವೆ ಇದ್ದೇ ಇರುತ್ತೇ. ನಮ್ಮ ಗೌರವ ಉಳಿಸಿ, ನಿಮ್ಮ ಸೇವೆ ಮಾಡುವ ಅವಕಾಶ ಕೊಡಿ ಎಂದು ಭಾಷಣದಲ್ಲಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಾವನ ಮನೆಯಲ್ಲಿ ಮತ ಯಾಚಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರು ಪಟ್ಟಣದ ಹಳ್ಳೂರ ಓಣಿಯಲ್ಲಿ ಬೊಮ್ಮಾಯಿಯವರ ಪತ್ನಿಯ ತವರು ಮನೆ ಇದೆ. ಸಿಎಂ ಆದ ಬಳಿಕ ಬೊಮ್ಮಾಯಿ ಪ್ರಥಮ ಬಾರಿಗೆ ಮಾವನ ಮನೆಗೆ ಇಂದು ಬಂದಿದ್ದರು. ಮನೆ ಅಳಿಯನಿಗೆ ಬೀಗರು ಆರತಿ ಬೆಳಗಿ, ಹೂಗುಚ್ಛ ನೀಡಿ ಸ್ವಾಗತಿಸಿದರು. ಸಿಎಂ ಬೊಮ್ಮಾಯಿ ತಮ್ಮ ಮಾವನ ಮನೆಯಲ್ಲಿದ್ದ ಸಂಬಂಧಿಕರನ್ನೆಲ್ಲ ಕುಶಲೋಪಚಾರ ವಿಚಾರಿಸಿ, ಫೋಟೋ ತೆಗೆಸಿಕೊಂಡರು. ಬೀಗರ ಮನೆಯಲ್ಲಿ ಮಂಡಕ್ಕಿ, ಮಿರ್ಚಿ ಮತ್ತು ಚಹಾ ಸೇವಿಸಿದರು. ಅಲ್ಪ ಉಪಹಾರ ಸೇವನೆ ನಂತರ ಬೀಗರ‌ ಮನೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಶಿವರಾಜ ಸಜ್ಜನರಗೆ ಮತ ನೀಡಿ ಎಂದು ಬಸವರಾಜ ಬೊಮ್ಮಾಯಿ ಮತಯಾಚಿಸಿದರು.

CM Bommai Taunts Against DK Shivakumar | ಹಣ ಹಂಚುತ್ತಿದ್ದಾರೆಂಬ ಡಿಕೆಶಿ ಆರೋಪಕ್ಕೆ ಸಿಎಂ ತಿರುಗೇಟು

(Jain community is with bjp in india continue it pleads karnataka cm basavaraj bommai in hangal by election campaign)

Published On - 7:00 pm, Mon, 25 October 21

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್