2013ರಿಂದ ನನ್ನ ಬಗ್ಗೆ ಅಪಪ್ರಚಾರ, ಜೆಡಿಎಸ್ ಕಟ್ಟಲು ಕಷ್ಟ ಪಟ್ಟಿದ್ದೇನೆ- ಹೆಚ್.ಡಿ. ಕುಮಾರಸ್ವಾಮಿ ಕಣ್ಣೀರು, ಭಾವುಕ ನುಡಿ
ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಆರೋಪಕ್ಕೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡುವ ಭರದಲ್ಲಿ ಭಾವುಕರಾದರು. ಕುಮಾರಸ್ವಾಮಿಯನ್ನು ನಾವೇ ಸಾಕಿದ್ದು, ನಾವೇ ಬೆಳೆಸಿದ್ದು ಅಂತಾರೆ. ಈ ಪಕ್ಷ ಕಟ್ಟಲು ನಾನು ಕಷ್ಟಪಟ್ಟಿದ್ದೇನೆ ಎಂದು ಕಣ್ಣೀರುಗೆರೆಯುತ್ತಾ ಹೆಚ್ಡಿ ಕುಮಾರಸ್ವಾಮಿ ಭಾವುಕರಾದರು. ನಮ್ಮ ಕುಟುಂಬವು ಹಣ ಇಟ್ಕೊಂಡು ರಾಜಕಾರಣ ಮಾಡಿಲ್ಲ. ಆ ದೇವರು ಇದ್ದರೆ ನೋಡಿಕೊಳ್ತಾನೆ ಎಂದು ಹೆಚ್ಡಿಕೆ ಗದ್ಗದಿತರಾದರು.
ತುಮಕೂರು: ಶಿರಾದ ಗುಬ್ಬಿಯಲ್ಲಿ ಜೆಡಿ ಎಸ್ ನಾಯಕರಾದ ಎಸ್ ಆರ್ ಶ್ರೀನಿವಾಸ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ನಡುವಣ ಜಟಾಪಟಿ ಮುಂದುವರಿದಿದೆ. ತುಮಕೂರಲ್ಲಿ ದೇವೇಗೌಡರು ಸೋಲಲು ಶ್ರೀನಿವಾಸ್ ಕಾರಣ. ರಾಜಕೀಯವಾಗಿ ಹೆಚ್ ಡಿ ದೇವೇಗೌಡರನ್ನು ಮುಗಿಸಲು ಯಾರು ಯಾರ ಜತೆ ಸೇರಿದ್ದರು. ಮಧ್ಯರಾತ್ರಿ ಚಿತಾವಣೆ ಮಾಡಿದ್ದು ಕಾರ್ಯಕರ್ತರಿಗೆ ಗೊತ್ತಿದೆ ಎಂದು S.R. ಶ್ರೀನಿವಾಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಅವರೇ ಹೋಗುವ ತೀರ್ಮಾನ ಮಾಡಿದ್ದು, ನಮ್ಮಿಂದ ತಪ್ಪಾಗಿದೆ ಎಂದು ತೋರಿಸಲು ಶತಪ್ರಯತ್ನ ಮಾಡುತ್ತಿದ್ದಾರೆ.ಅವರ ಬಗ್ಗೆ ನಾನು ಎಂದು ಮಾತನಾಡಿಲ್ಲ. ನನ್ನಿಂದ ಅವರಿಗೆ ಯಾವುದೇ ತೊಂದರೆಯಿಲ್ಲ. ನಾನೇನೂ ಅವರಿಗೆ ಪಕ್ಷ ಬಿಟ್ಟು ಹೋಗಿ ಎಂದು ಹೇಳಿಲ್ಲ. ಅವರೇ ಪಕ್ಷ ಬಿಟ್ಟು ಹೋಗುವ ತೀರ್ಮಾನ ಮಾಡಿದ್ದಾರೆ. ಅವರು ನಮ್ಮ ಪಕ್ಷದಲ್ಲೇ ಇರುತ್ತೇನೆ ಅಂದರೆ ಸಂತೋಷ ಎಂದು ಶ್ರೀನಿವಾಸ್ ಬಗ್ಗೆ H.D. ಕುಮಾರಸ್ವಾಮಿ ಹೇಳಿದರು.
ಇನ್ನು, ತುಮಕೂರು ಆಚೆಗೆ ನಡೆಯುತ್ತಿರುವ ಪಕ್ಷದ ಬಗೆಗಿನ ರಾಜಕೀಯದ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸೂಟ್ಕೇಸ್ ತೆಗೆದುಕೊಂಡು ಚುನಾವಣೆ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಆರೋಪಕ್ಕೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡುವ ಭರದಲ್ಲಿ ಭಾವುಕರಾದರು. ಕುಮಾರಸ್ವಾಮಿಯನ್ನು ನಾವೇ ಸಾಕಿದ್ದು, ನಾವೇ ಬೆಳೆಸಿದ್ದು ಅಂತಾರೆ ಅವರು. 2013-14ರಿಂದ ನನ್ನ ಬಗ್ಗೆ ಅಪಪ್ರಚಾರ ಆರಂಭವಾಯಿತು. ಈ ಪಕ್ಷ ಕಟ್ಟಲು ನಾನು ಕಷ್ಟಪಟ್ಟಿದ್ದೇನೆ ಎಂದು ಕಣ್ಣೀರುಗೆರೆಯುತ್ತಾ ಹೆಚ್ಡಿ ಕುಮಾರಸ್ವಾಮಿ ಭಾವುಕರಾದರು. ನಮ್ಮ ಕುಟುಂಬವು ಹಣ ಇಟ್ಕೊಂಡು ರಾಜಕಾರಣ ಮಾಡಿಲ್ಲ. ಹಣಕಾಸಿನ ವಿಚಾರದಲ್ಲಿ ಪಂಚಾಯಿತಿ ನಡೆಯಿತು. ಆ ದೇವರು ಇದ್ದರೆ ನೋಡಿಕೊಳ್ತಾನೆ ಎಂದು ಹೆಚ್ಡಿಕೆ ಗದ್ಗದಿತರಾಗಿ ಹೇಳಿದರು.
ಶ್ರೀನಿವಾಸ್ ಯಾವುದೋ ಸಂದರ್ಭದಲ್ಲಿ ಬಂದಾಗ ದೇವೇಗೌಡರ ಅಭಿಮಾನಿ, ದೇವೇಗೌಡರ ಹೋರಾಟಕ್ಕೆ ಮೆಚ್ಚಿ ಬರ್ತಿನಿ ಅಂದರು. ಕಾಂಗ್ರೆಸ್ ಜಿಪಂ ಸದಸ್ಯ ಆಗಿದ್ದರು. 2004 ರಲ್ಲಿ ದೇವೇಗೌಡರು ಶಿವನಂಜಪ್ಪರಿಗೆ ಮೊದಲೇ ಮಾತು ನೀಡಿದ್ದೇನೆ ಅಂತಾ ಹೇಳಿದ್ದರು. ಆಗ ಶ್ರೀನಿವಾಸ್ ನಮ್ಮ ಮನೆಗೆ ಬಂದರು. ನೀವು ನಿಲ್ಲಲೇ ಬೇಕು ಅನ್ನೋದಾದರೇ ನೀವು ಪಕ್ಷೇತರರಾಗಿ ನಿಲ್ಲಿ ಅಂತಾ ಸಲಹೆ ನೀಡಿದ್ದೆ. ಇದು ಹೊರತುಪಡಿಸಿ ಅಂದು ಲೋಪವಾಗಿರಲಿಲ್ಲ. ಬಳಿಕ ಪಕ್ಷೇತರರಾಗಿ ನಿಂತು ಗೆದ್ದರು. ಸಮ್ಮಿಶ್ರ ಸರ್ಕಾರದಲ್ಲಿ ನನ್ನ ಜೊತೆ ಉತ್ತಮ ಒಡನಾಟವಿತ್ತು. ಬಳಿಕ ರಾಜ್ಯದ ಬೆಳವಣಿಗೆಯಿಂದ ಬಿಜೆಪಿ ಜೊತೆ ಸರ್ಕಾರ ಮಾಡಬೇಕಾಯಿತು. ಅವತ್ತು ಗುಬ್ಬಿ ತಾಲೂಕಿನ ಅಭಿವೃದ್ಧಿ ಮಾಡಿದ್ದೇನೆ. 2013 ರಲ್ಲಿ 40 ಸ್ಥಾನ ಗೆಲ್ತು. ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಹೋದೆ. ಕೇವಲ 40 ಸಾವಿರ ಅಂತರದಲ್ಲಿ ಗೆದ್ದೆ ಎಂದು ಕುಮಾರಸ್ವಾಮಿ ಹಳೆಯದ್ದನ್ನು ಸ್ಮರಿಸಿದರು.
ಕುಮಾರಸ್ವಾಮಿ ಇಮೇಜ್ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ. ನಮ್ಮ ಜೊತೆ ಇದ್ರೆ ಅವರಿಗೆ ಉಪಯೋಗ ಆಗಲ್ಲ ಅಂದಿದ್ದಾರೆ. ಗೊಂದಲಗಳನ್ನ ಸೃಷ್ಟಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ನಮ್ಮಿಂದ ಯಾವುದೇ ರೀತಿಯ ಗೊಂದಲಗಳು ಆಗಿಲ್ಲ. ರಾಜಕಾರಣ ಮಾಡುವುದಾದರೆ ನೇರವಾಗಿ ಮಾಡಬೇಕು. ಹಿಂದೊಂದು ಮುಂದೊಂದು ಮಾತನಾಡುವುದು ಬೇಡ. ಯಾರಿಗೂ ನೋವು ತರಿಸಿಲ್ಲ, ಪ್ರೀತಿಯಿಂದ ನೋಡಿದ್ದೇನೆ ಎಂದು ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ಕುಮಾರಸ್ವಾಮಿ ಹೇಳಿದರು.
ಒಂದು ವಾರ ಜೆಡಿಎಸ್ ಕಾರ್ಯಗಾರ ಮಾಡಿದ್ವಿ. ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಕರೆದಿದ್ದೇವೆ ಎಂದಿದ್ದೆವು. ಆದರೂ ಅವರು ಬರಲಿಲ್ಲ. ಇಲ್ಲಿ ಬೇರೆ ಬೇರೆ ರಾಜಕಾರಣ ನಡೆಯುತ್ತಿದೆ. ನಾವು ಅವರ ಭೇಟಿಯ ದಿನಾಂಕವನ್ನು ಮುಂದೂಡಿಲ್ಲ. ನಾಗರಾಜು ಅವರನ್ನು ಪರ್ಯಾಯ ನಾಯಕರು ಅಂತ ಹೇಳಲ್ಲ. ಶ್ರೀನಿವಾಸ್ ಅವರ ಮನೆಗೆ ಹೋಗಿ ಕಾರ್ಯಕ್ರಮಕ್ಕೆ ಬರುವಂತೆ ನಾಗರಾಜು ಆಹ್ವಾನ ನೀಡಿದ್ದಾರೆ. ಶಕ್ತಿ ತುಂಬಲು ನಿಮ್ಮೊಂದಿಗೆ ಇರುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಮನೆಯ ಸೀಮಂತ ಕಾರ್ಯಕ್ರಮಕ್ಕೆ ಅವರನ್ನು ನಾನು ಆಹ್ವಾನಿಸಿರಲಿಲ್ಲ, ಅವರು ನನ್ನ ಮೊಬೈಲ್ ಗೆ ಸಿಕ್ಕಿರಲಿಲ್ಲ. ನನ್ನ ಪೋನ್ ಸಂಪರ್ಕಕ್ಕೆ ಬಂದು ಎರಡೂವರೆ ವರ್ಷ ಆಯ್ತು. ನನ್ನ ಸಂಪರ್ಕದಲ್ಲೂ ಇಲ್ಲ. ನಮ್ಮ ಪಕ್ಷ ಸಂಘಟನೆಗೆ ಬಂದಿಲ್ಲ, ಶಿರಾ ಚುನಾವಣೆಗೆ ಅವರೇನಾದ್ರೂ ಬಂದ್ರಾ ? ಅವರು ನಮ್ಮ ಕೈಗೆ ಸಿಗದಂತೆ ಓಡಾಡ್ತಾರೆ. ಹೊರ ನೋಟಕ್ಕೆ ಜೆಡಿಎಸ್ ಪಕ್ಷದಲ್ಲಿ ಇದ್ದೇನೆ ಅನ್ನೋದು. ಒಳಗಡೆ ಕಾಂಗ್ರೆಸ್ ನಾಯಕರ ಜೊತೆಗೆ ಸಂಪರ್ಕದಲ್ಲಿ ಇರೋದು ಎಂದು ಶ್ರೀನಿವಾಸ್ ಮೇಲೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.
(jds leader hd kumaraswamy emotional on his party and party former leader zameer ahmed khan in gubbi tumkur)
Published On - 3:12 pm, Mon, 25 October 21