ಜನತಾ ದರ್ಶನ: ಸಿದ್ದರಾಮಯ್ಯನವರೇ ಈ 9 ಪ್ರಶ್ನೆಗಳಲ್ಲಿ ಒಂದಕ್ಕಾದರೂ ಉತ್ತರಿಸಿ: ಬಿಜೆಪಿ ಟ್ವೀಟ್​

| Updated By: ಗಂಗಾಧರ​ ಬ. ಸಾಬೋಜಿ

Updated on: Nov 27, 2023 | 1:32 PM

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯರಿಂದ ಜನತಾದರ್ಶನ ವಿಚಾರವಾಗಿ ಟ್ವಿಟರ್ ಮೂಲಕ ಸಾಲು ಸಾಲು ಪ್ರಶ್ನೆಗಳನ್ನು ಕೇಳುವ ಮೂಲಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ಮಾಡಿದೆ. ವಿರೋಧ ಪಕ್ಷದ ನಾಯಕ ಅಶೋಕ್​ ಕೂಡ ಈ ಬಗ್ಗೆ ಕಿಡಿಕಾರಿದ್ದು, ಸಿದ್ದರಾಮಯ್ಯ ಇವತ್ತು ನಿದ್ದೆಯಿಂದ ಎದ್ರಾ ಎಂದು ವಾಗ್ದಾಳಿ ಮಾಡಿದ್ದಾರೆ.

ಜನತಾ ದರ್ಶನ: ಸಿದ್ದರಾಮಯ್ಯನವರೇ ಈ 9 ಪ್ರಶ್ನೆಗಳಲ್ಲಿ ಒಂದಕ್ಕಾದರೂ ಉತ್ತರಿಸಿ: ಬಿಜೆಪಿ ಟ್ವೀಟ್​
ಸಿಎಂ ಸಿದ್ದರಾಮಯ್ಯ ಜನತಾ ದರ್ಶನ
Follow us on

ಬೆಂಗಳೂರು, ನವೆಂಬರ್​​ 27: ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಿದ ಬಳಿಕ ಎರಡನೇ ಬಾರಿಗೆ ಸಿದ್ದರಾಮಯ್ಯ (Siddaramaiah) ಅವರು ಸೋಮವಾರ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಆ ಮೂಲಕ ಇಡೀ ದಿನ ಸಿಎಂ ಸಿದ್ದರಾಮಯ್ಯ ಜನರ ಸಮಸ್ಯೆ ಮತ್ತು ಸಂಕಷ್ಟಗಳಿಗೆ ಕಿವಿಗೊಡುತ್ತಿದ್ದು, ನಾಡಿನ ಪ್ರಜೆಗಳ ಅಹವಾಲು ಸ್ವೀಕರಿಸುತ್ತಿದ್ದಾರೆ. ಸದ್ಯ ಈ ವಿಚಾರವಾಗಿ ಸಾಲು ಸಾಲು ಪ್ರಶ್ನೆಗಳನ್ನು ಕೇಳುವ  ಮೂಲಕ  ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ಮಾಡಿದೆ.

ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಛೀ ಥೂ ಎನಿಸಿಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನತಾ ದರ್ಶನದಲ್ಲಿ ಎದುರಾಗುವ ಪ್ರಶ್ನೆಗಳು:

  • ಮೋದಿ ಸರ್ಕಾರದ 5 ಕೆಜಿ ಅಕ್ಕಿ ನೀವು ಕೊಡುತ್ತಿಲ್ಲ ಏಕೆ?
  • ನೀವೇ ಹೇಳಿದ ಹತ್ತು ಕೆಜಿ ಅಕ್ಕಿ ಕೊಟ್ಟಿಲ್ಲ ಏಕೆ?
  • ಗೃಹ ಲಕ್ಷ್ಮಿ ಹೆಸರಲ್ಲಿ ಸ್ವಾಭಿಮಾನಿ ಮಹಿಳೆಯರನ್ನು ವಂಚಿಸಿದ್ದು ಏಕೆ?
  • ಕನ್ನಡಿಗರ ಹಣವನ್ನು ಲೂಟಿ ಮಾಡಿ ಹೈಕಮಾಂಡ್ ಹೊಟ್ಟೆ ತುಂಬಿಸುತ್ತಿರುವುದು ಸರಿಯೇ
  • ಬರಗಾಲವನ್ನು ನಿರ್ವಹಣೆ ಮಾಡಲಿಲ್ಲ, ಪರಿಹಾರವೂ ಕೊಟ್ಟಿಲ್ಲ ಏಕೆ?
  • ನಾಡಿನ ಜನತೆ ಸಂಕಷ್ಟದಲ್ಲಿರುವಾಗ ನಿಮಗೆ ಪಂಚ ರಾಜ್ಯ ಚುನಾವಣೆ ಮುಖ್ಯವೇ?
  • ನಮ್ಮನ್ನು ಉದ್ಧಾರ ಮಾಡುತ್ತೇವೆಂದು ಬಂದು ಬೆಲೆ ಏರಿಕೆ ಮೂಲಕ ತುಳಿದಿದ್ದು ಸರಿಯೇ?
  • ಕಾವೇರಿಯನ್ನು ಕಳ್ಳತನದಿಂದ ಬಿಟ್ಟು ನಮಗೆ ವಂಚಿಸಿದ್ದೇಕೆ?
  • ತೆಲಂಗಾಣ ಚುನಾವಣೆ ಹಣವನ್ನು ಮಂಚದ ಕೆಳಗೆ ಬಚ್ಚಿಟ್ಟಿದ್ದು ಅಲ್ಲದೆ ಮೋಜು ಮಾಡಲು ಸರ್ಕಾರ ಅಲ್ಲಿಗೆ ಟೂರ್ ಹೋಗಿದ್ದೇಕೆ?

ಇದನ್ನೂ ಓದಿ: ಜನತಾ ದರ್ಶನ: ನಾಡಿನ ಪ್ರಜೆಗಳ ಕಷ್ಟ ಆಲಿಸಲು ಇಂದು ಇಡೀ ದಿನ ಮೀಸಲಿಟ್ಟ ಸಿದ್ದರಾಮಯ್ಯ

ಸ್ವಯಂಘೋಷಿತ ಆರ್ಥಿಕ ತಜ್ಞ ಮಜವಾದಿ ಸಿದ್ದರಾಮಯ್ಯ ಅವರ ಬಳಿ ಜನರ ಈ ಪ್ರಶ್ನೆಗಳಿಗೆ ಒಂದಕ್ಕಾದರೂ ಉತ್ತರವಿದೆಯೇ? ಎಂದು ಸಾಲು ಸಾಲು ಪ್ರಶ್ನೆಗಳನು ಬಿಜೆಪಿ ಮಾಡಿದೆ.

ಸಿಎಂ ಸಿದ್ದರಾಮಯ್ಯ ಇವತ್ತು ನಿದ್ದೆಯಿಂದ ಎದ್ರಾ: ವಿಪಕ್ಷ ನಾಯಕ ಆರ್​. ಅಶೋಕ್ ಪ್ರಶ್ನೆ

ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ಪ್ರತಿಕ್ರಿಯಿಸಿದ್ದು, ಸಿಎಂ ಸಿದ್ದರಾಮಯ್ಯ ಇವತ್ತು ನಿದ್ದೆಯಿಂದ ಎದ್ರಾ ಎಂದು ಪ್ರಶ್ನಿಸಿದ್ದಾರೆ. 6 ತಿಂಗಳಲ್ಲಿ ನಿಮ್ಮ ಸಚಿವರು ಎಷ್ಟು ಜನರ ಮನೆ ಬಾಗಿಲಿಗೆ ಹೋಗಿದ್ದಾರೆ. ಜನತಾ ದರ್ಶನ ಬೋಗಸ್​. ಮೊದಲು ಮಂತ್ರಿಗಳ ದರ್ಶನ ಮಾಡಿಸಿ. ಎಷ್ಟು ಹಕ್ಕುಪತ್ರ ವಿತರಣೆ, ಎಷ್ಟು ವಿಧವಾ ವೇತನ ನೀಡಲಾಗಿದೆ? ಮಂತ್ರಿಗಳೇ ಸಿಗುತ್ತಿಲ್ಲ, ಸಿಎಂ ಟೇಬಲ್ ಕುರ್ಚಿ ಹಾಕಿ ಕೂತಿದ್ದಾರೆ. ಇಡೀ ಸರ್ಕಾರವೇ ತೆಲಂಗಾಣದಲ್ಲಿದೆ. ಎಡಬಿಡಂಗಿ ಸರ್ಕಾರ ಇದು. ಈಗ ಏಕಾಏಕಿ ಜನತಾ ದರ್ಶನ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.