AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಾಯಕ ಸೈನಿಕರನ್ನ ಬಲಿಕೊಟ್ಟ ಕೀರ್ತಿ ಬಿಜೆಪಿಯದ್ದು: ಕಾಂಗ್ರೆಸ್​ ಶಾಸಕ ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ

MLA HC balakrishna controversial statement: ಅಮಾಯಕ ಸೈನಿಕರನ್ನ ಬಲಿಕೊಟ್ಟ ಕೀರ್ತಿ ಬಿಜೆಪಿಗೆ. ಇವರು ಬ್ರಿಟಿಷರಿಗಿಂತ ಡೇಂಜರ್ ಎಂದು ಕಾಂಗ್ರೆಸ್ ಶಾಸಕ ಹೆಚ್​ಸಿ ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೇ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆಯೂ ಮಾತನಾಡಿದ್ದು, ಅದು ಈ ಕೆಳಗಿನಂತಿದೆ.

ಅಮಾಯಕ ಸೈನಿಕರನ್ನ ಬಲಿಕೊಟ್ಟ ಕೀರ್ತಿ ಬಿಜೆಪಿಯದ್ದು: ಕಾಂಗ್ರೆಸ್​ ಶಾಸಕ ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ
ಹೆಚ್​ಸಿ ಬಾಲಕೃಷ್ಣ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Nov 27, 2023 | 10:33 AM

Share

ರಾಮನಗರ, (ನವೆಂಬರ್ 27): ಕಳೆದ ಭಾರಿ ಪುಲ್ವಾಮ ದಾಳಿಯಾಗದಿದ್ದರೆ(pulwama attack) ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನೆಗೆ ಕಳುಹಿಸುತ್ತಿದ್ದರು. ಈ ಬಾರಿ ವಿಶ್ವಮಾನವ ಆಗಲು ಟಾಟಾ ಮಾಡುತ್ತಿದ್ದಾರೆ. ಬಿಜೆಪಿಯವರು (BJP) ಬ್ರಿಟಿಷ್ ನವರು ಇದ್ದಂತೆ. ಅಮಾಯಕ ಸೈನಿಕರನ್ನ ಬಲಿಕೊಟ್ಟಂತಹ ಕೀರ್ತಿ ಬಿಜೆಪಿಯದ್ದು ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್​ಸಿ ಬಾಲಕೃಷ್ಣ ( HC Balakrishna) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಮನಗರ ಜಿಲ್ಲೆಯ ಮಾಗಡಿ‌ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ‌ಮಾತನಾಡಿರುವ ಬಾಲಕೃಷ್ಣ, ಬಿಜೆಪಿಯವರು ಬ್ರಿಟಿಷರು ಇದ್ದಂಗೆ, ಯಾರು ಪ್ರಬಲವಾಗಿರುತ್ತಾರೆ ಅವರ ಮಧ್ಯೆ ಗುಂಪು ಕಟ್ಟಿ ಎತ್ತಿಕಟ್ಟಿ ಒಡೆದಾಳುವ ನೀತಿ ಅನುಸರಿಸುತ್ತಾರೆ. ದೇಶದಲ್ಲಿ ಅಮಾಯಕ ಸೈನಿಕರನ್ನು ಬಲಿ ಕೊಟ್ಟಂತಹ ಕೀರ್ತಿ ಮೋದಿ ಸರಕಾರಕ್ಕೆ ಸಲ್ಲುತ್ತದೆ. ದೇಶ ಆಳುವ ವ್ಯಕ್ತಿಗೆ ನಮ್ಮ ಸೈನಿಕರಿಗೆ ತೊಂದರೆ ಇದೆ ಎಂದು ಅವರ ಸರಕಾರಕ್ಕೆ ಹೇಳಲು ಸಾಧ್ಯವಿಲ್ಲ ಎನ್ನುವುದಾದರೆ ಹೇಗೆ?. ಬಲಿದಾನವಾಗಿದ್ದು ಸೈನಿಕರು, ಅಧಿಕಾರ ಬಂದಿದ್ದು ಮೋದಿಗೆ. ಈ ಬಗ್ಗೆ ಜನತೆ ಅರ್ಥಮಾಡಿಕೊಳ್ಳಬೇಕು ಎಂದರು.

ಇದನ್ನೂ ಓದಿ: ಮಠಮಾನ್ಯಗಳ ಮೂಲಕ ಸೋಮಣ್ಣ ಮನವೊಲಿಕೆಗೆ ಯತ್ನ, ಹೈಕಮಾಂಡ್​ಗೆ ಒಂದು ಖಡಕ್ ಮಾತು ಹೇಳಿದ ಸ್ವಾಮೀಜಿ

ಮಾಯಾವತಿ ಮುಂದಿನ ಪ್ರಧಾನಿ ಎಂದು ಹೇಳುತ್ತಿದ್ದಂತೆ ಉತ್ತರ ಪ್ರದೇಶದಲ್ಲಿ ಬಿಜೆಪಿಯವರು ಮಾಯಾವತಿ ಅವರ ಹೆಸರಿಲ್ಲದಂತೆ ಮಾಡಿಬಿಟ್ಟರು. ಇನ್ನು ಕರ್ನಾಟಕದಲ್ಲಿ ಕುಮಾರಣ್ಣ ಯಾವ ಲೆಕ್ಕ. ನಮ್ಮನ್ನು ನೋಡಿದ ತಕ್ಷಣ ಕುಮಾರಣ್ಣ ಬಿಜೆಪಿಯವರನ್ನು ತಬ್ಬಿಕೊಳ್ಳುತ್ತಾರೆ. ಹಲವು ವರ್ಷಗಳಿಂದ ನಾವು ಜಾತ್ಯಾತೀತ, ಜಾತ್ಯಾತೀತ ಎಂದು ಹೇಳುತ್ತಿದ್ದ ಜನತಾದಳ ಮತ್ತು ದೇವೇಗೌಡರು ಇಳಿವಯಸ್ಸಿನಲ್ಲಿ ಅದು ಸಾಯುವ ಕಾಲದಲ್ಲಿ ಕುಮಾರಣ್ಣ ದೇವೇಗೌಡರನ್ನು ಕೋಮುವಾದಿ ಮಾಡಿಬಿಟ್ಟರು ಎಂದು ಛೇಡಿಸಿದರು.

ಈಗಲೇ ಜೆಡಿಎಸ್ ಪಕ್ಷದವರು ಎಚ್ಚೆತ್ತುಕೊಳ್ಳದಿದ್ದರೆ ಅವರ ಅಸ್ಥಿತ್ವವನ್ನು ಸಂಪೂರ್ಣ ಮುಗಿಸುವ ಕೀರ್ತಿ ಬಿಜೆಪಿಯವರಿಗೆ ಸಲ್ಲುತ್ತದೆ. ಮಾಯಾವತಿ ಮುಂದಿನ ಪ್ರಧಾನಿ ಎಂಬಂತೆ ಹೊರಹೊಮ್ಮಿದ್ದ ಅವರನ್ನೆ ಉತ್ತರ ಪ್ರದೇಶದಲ್ಲಿ ಹೆಸರಿಲ್ಲದಂತೆ ಬಿಜೆಪಿ ಮಅಡಿದೆ. ಇನ್ನೂ ಕರ್ನಾಟಕದ ಕುಮಾರಣ್ಣ ಯಾವ ಲೆಕ್ಕ. ಉತ್ತರ ಪ್ರದೇಶದ ಬಿಎಸ್‍ಪಿ ರೀತಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವನ್ನು ಬಿಜೆಪಿಯವರು ಮಾಡದಿದ್ದರೆ ನಾನು ನನ್ನ ಹೆಸರನ್ನು ಬದಲಾವಣೆ ಮಾಡಿಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?