AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್​ 123 ಸ್ಥಾನ ಗೆಲ್ಲಲಿದೆ, ಹೆಚ್​ಡಿಕೆ ಸಿಎಂ ಆಗುತ್ತಾರೆ: ಸಿ.ಎಂ ಇಬ್ರಾಹಿಂ

160 ಸ್ಥಾನ ಗುರಿಯಲ್ಲಿ ಕನಿಷ್ಠ 123 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ದೇವರ ಸನ್ನಿಧಿಯಲ್ಲಿ ಘೋಷಣೆ ಮಾಡುತ್ತಿದ್ದೇನೆ ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗುತ್ತಾರೆ ಎಂದು  ಜೆಡಿಎಸ್​​ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್​ 123 ಸ್ಥಾನ ಗೆಲ್ಲಲಿದೆ, ಹೆಚ್​ಡಿಕೆ ಸಿಎಂ ಆಗುತ್ತಾರೆ: ಸಿ.ಎಂ ಇಬ್ರಾಹಿಂ
ಹೆಚ್ ಡಿ ಕುಮಾರಸ್ವಾಮಿ ಮತ್ತು ಸಿ ಎಮ್ ಇಬ್ರಾಹಿಂ
TV9 Web
| Edited By: |

Updated on:Jun 08, 2022 | 3:33 PM

Share

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ (JDS)​ 123 ಸ್ಥಾನ ಗೆಲ್ಲಲಿದೆ. ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಉದ್ಭವಿಸಿದರೆ ಅಭಿವೃದ್ಧಿ ಸಾಧ್ಯವಿಲ್ಲ. ಹಾಗಾಗಿ ಮುಂದಿನ ಚುನಾವಣೆಯಲ್ಲಿ 160 ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumarswamy) ಹೇಳಿದ್ದಾರೆ. 160 ಸ್ಥಾನ ಗುರಿಯಲ್ಲಿ ಕನಿಷ್ಠ 123 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ದೇವರ ಸನ್ನಿಧಿಯಲ್ಲಿ ಘೋಷಣೆ ಮಾಡುತ್ತಿದ್ದೇನೆ ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗುತ್ತಾರೆ ಎಂದು  ಜೆಡಿಎಸ್​​ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ಹೇಳಿದ್ದಾರೆ.

ಮುಂದುವರೆದು JDS ರಾಜ್ಯಾಧ್ಯಕ್ಷ ಇಬ್ರಾಹಿಂ ಕಾಟಾಚಾರದ ಅಧ್ಯಕ್ಷರೆಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾತನಾಡಿದ ಅವರು ಸಿದ್ದರಾಮಯ್ಯ ಸದ್ದಾಂ ಹುಸೇನ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಟಾಂಗ್​​ ಕೊಟ್ಟಿದ್ದಾರೆ. ಇಬ್ರಾಹಿಂಗೆ ಬೆಂಬಲಿಸಿದ ಹೆಚ್​​ಡಿಕೆ ಕಾಂಗ್ರೆಸ್​ನಲ್ಲಿ ಯಾರಿಗೂ ಮಾತನಾಡಲು ಸ್ವಾತಂತ್ರ ಕೊಡುತ್ತಿಲ್ಲ. ಸಿದ್ದರಾಮಯ್ಯಗಿಂತ ದೊಡ್ಡವರನ್ನೇ ಮಾತನಾಡಲು ಬಿಡುತ್ತಿಲ್ಲ. JDS ರಾಜ್ಯಾಧ್ಯಕ್ಷ ಬಗ್ಗೆ ಲಘುವಾಗಿ ಮಾತನಾಡೋದನ್ನು ನಿಲ್ಲಿಸಿ. ನಾವು ಪಕ್ಷದ ಅಧ್ಯಕ್ಷರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದೇವೆ.  ಸಿದ್ದರಾಮಯ್ಯ ಜೆಡಿಎಸ್​ನಲ್ಲಿದ್ದಾಗ ನಡವಳಿಕೆ ನೋಡಿದ್ದೇವೆ. ನಮ್ಮ ದುಡ್ಡಲ್ಲಿ ಸ್ಟೇಜ್ ಹಾಕಿ, ಬ್ಯಾನರ್ ಕಟ್ಟಿದ ಮೇಲೆ ಬರುತ್ತಿದ್ದರು. ಸ್ಟೇಜ್ ರೆಡಿ ಆದ ಮೇಲೆ ಬಂದ್ ಭಾಷಣಮಾಡಿ ಹೋಗುತ್ತಿದ್ದರು.  ಸಿದ್ದರಾಮಯ್ಯ ಮೊದಲಿನಿಂದಲೂ ಅಲ್ಪಸಂಖ್ಯಾತರನ್ನು ಬೆಳೆಸಿಲ್ಲ ಎಂದು ಹೆಚ್​​ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಇದನ್ನು ಓದಿ: ದೇವೇಗೌಡರ ಮರಿ ಮೊಮ್ಮೊಗನ ನಾಮಕರಣ ಶಾಸ್ತ್ರ: ಹೇಗಿದ್ದಾನೆ ನೋಡಿ ನಿಖಿಲ್ ಕುಮಾರ್ ಮಗ

ರಾಜ್ಯಸಭೆ ಚುನವಾಣೆಯಲ್ಲಿ JDS ಅಭ್ಯರ್ಥಿ ಕುಪೇಂದ್ರ ರೆಡ್ಡಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಜೆಡಿಎಸ್​ನಲ್ಲಿ 32 ಶಾಸಕರಿದ್ದಾರೆ, ನಿಮಗೆ ಮತ ಹಾಕುತ್ತೇವೆ.  JDS​ ಮತ ನಿಮಗೆ ಹಾಕುತ್ತೇವೆ. ಕಾಂಗ್ರೆಸ್​ನವರು ನಮಗೆ ಮತ ಹಾಕಲಿ.  ಗ್ರೆಸ್​ಗೆ ಮುಕ್ತ ಆಫರ್​ ಕೊಡುತ್ತಿದ್ದೇನೆ. ಹಿಂದೆ ಆಗಿರುವುದನ್ನು ಮರೆತು ಒಂದಾಗಲು ನಾನು ಸಿದ್ಧನಿದ್ದೇನೆ.  ಇಂತಹ ಕೆಟ್ಟ ಸರ್ಕಾರ ತೆಗೆಯಲು ಜಾತ್ಯತೀತರು ಒಂದಾಗಬೇಕು. ನಿನ್ನೆ ಮೈಸೂರಿನಲ್ಲೇ ಆಫರ್​ ಕೊಟ್ಟಿದ್ದೆ, ಇಂದು ಹೇಳುತ್ತಿದ್ದೇನೆ. ಇನ್ನೂ ಕಾಲ ಮಿಂಚಿಲ್ಲ, ದೇವರು ಏನೇನು ಮಾಡುತ್ತೆ ನೋಡೋಣ. ಶಾಸಕರನ್ನು ವೈಯಕ್ತಿಕವಾಗಿ ಭೇಟಿಯಾಗಿ ಕುಪೇಂದ್ರ ರೆಡ್ಡಿ ಬೆಂಬಲ ಕೋರಿದ್ದಾರೆ ಎಂದರು.

ಇದನ್ನು ಓದಿ: ನೂಪುರ್ ಶರ್ಮಾ ಅಮಾನತು: ಬಿಜೆಪಿಯಲ್ಲಿ ಪರ-ವಿರೋಧ ಹೊಯ್ದಾಟ, ಆರ್​ಎಸ್​ಎಸ್​ ಮೌನಕ್ಕೆ ಹಲವು ಅರ್ಥ

ಸಿಎಲ್​ಪಿ ನಾಯಕ ಸಿದ್ದರಾಮಯ್ಯನವರು ಯಾರನ್ನೂ ಸಂಪರ್ಕಿಸಿಲ್ಲ. ಸಮಾಲೋಚನೆಮಾಡಿ ಅಭ್ಯರ್ಥಿ ಹಾಕಿದ್ದೇವೆ ಎಂದು ಹೇಳುತ್ತಿದ್ದಾರೆ.  ನಾವೇ ಮೊದಲು ಅಭ್ಯರ್ಥಿ ಹಾಕಿದ್ದೇವೆ ಅವರು ಹಿಂದೆ ಸರಿಯಲಿ. JDS​ ಅಭ್ಯರ್ಥಿ ಹಿಂದೆ ಸರಿಯಲಿ ಎಂದು ಹೇಳುವುದು ಸರಿಯಲ್ಲ. ಸಿದ್ದರಾಮಯ್ಯನವರ ದಬ್ಬಾಳಿಕೆ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ. ಈ ಹಿಂದೆ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಪರಿಸ್ಥಿತಿ ಬೇರೆಯಿತ್ತು. ಬಿ.ಎಸ್.ಯಡಿಯೂರಪ್ಪ ಮನವಿ ಮೇರೆಗೆ H.D.ದೇವೇಗೌಡರ ಸ್ಪರ್ಧೆ ಮಾಡಿದ್ದರು. ರಾಜ್ಯಸಭೆಯಲ್ಲಿ H.D.ದೇವೇಗೌಡರ ಉಪಸ್ಥಿತಿ ಬೇಕೆಂದು ಹೇಳಿದ್ದಾರೆ. ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ದೇವೇಗೌಡರು ಸ್ಪರ್ಧಿಸಿದ್ದರು. ಮತ್ತೊಂದೆಡೆ ಮಲ್ಲಿಕಾರ್ಜುನ ಖರ್ಗೆಯವರು ಒತ್ತಡ ಹಾಕಿದ್ದರು. ನನ್ನ ಜತೆ ನೀವು ರಾಜ್ಯಸಭೆಗೆ ಬರುವುದಾದರೆ ನಾನು ಸ್ಪರ್ಧಿಸುತ್ತೇನೆ ಎಂದಿದ್ದರು. ಖರ್ಗೆ 2ನೇ ಅಭ್ಯರ್ಥಿ ಹಾಕದಂತೆ ಕಾಂಗ್ರೆಸ್​ಗೂ ಷರತ್ತು ವಿಧಿಸಿದ್ದರು.  ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ HDD ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಬೆಂಬಲದಿಂದ ಹೆಚ್.ಡಿ.ದೇವೇಗೌಡರು ಆಯ್ಕೆಯಾಗಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:33 pm, Wed, 8 June 22