ಬೆಂಗಳೂರು, ಸೆಪ್ಟೆಂಬರ್ 27: ಜೆಡಿಎಸ್-ಬಿಜೆಪಿ ಮೈತ್ರಿ (JDS-BJP alliance) ಬೆನ್ನಲ್ಲೇ ಇದೀಗ ಜೆಡಿಎಸ್ ಶಾಸಕರಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಜೆಡಿಎಸ್ ವರಿಷ್ಠರ ನಿರ್ಧಾರಕ್ಕೆ ಶಾಸಕಿ ಕರೇಯಮ್ಮ, ಶರಣಗೌಡ ಕಂದಕೂರು ಸೇರಿದಂತೆ ಐದು ಶಾಸಕರು ಬೇಸರ ಹೊರಹಾಕಿದ್ದಾರೆ. ಮೈತ್ರಿಗೆ ಬಿಜೆಪಿ ವಿರುದ್ದ ಗೆದ್ದಿರುವ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ವರಿಷ್ಠ ಹೆಚ್ಡಿ ದೇವೆಗೌಡ ಮತ್ತು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮುಂದೆ ಅಭಿಪ್ರಾಯ ಹೇಳಲು ಶಾಸಕರು ತೀರ್ಮಾನಿಸಿದ್ದಾರೆ.
ಜೆಡಿಎಸ್-ಬಿಜೆಪಿ ಮೈತ್ರಿವಾಗಿ ವಿಚಾರವಾಗಿ ಶಾಸಕ ಶರಣಗೌಡ ಕಂದಕೂರು ಮಾತನಾಡಿದ್ದು, ಬಿಜೆಪಿ ಮೈತ್ರಿ ವಿಚಾರವಾಗಿ ಕೆಲ ಶಾಸಕರಿಗೆ ಬೇಸರ ಇರುವುದು ಸತ್ಯ. ರಾಜಕೀಯ ಭವಿಷ್ಯದಿಂದ ಬೇಸರ ಆಗಿರುವುದು ನಿಜ. ಮಾಜಿ, ಹಾಲಿ ಶಾಸಕರು ಬೇಸರ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ: ಅವತ್ತೇ ಅಮಿತ್ ಶಾ ಮಾತಿಗೆ ಒಪ್ಪಿದ್ದರೆ 5 ವರ್ಷ ಸಿಎಂ ಆಗುತ್ತಿದ್ದೆ: ಶಾ ಕರೆ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಆದಷ್ಟು ಬೇಗ ವರಿಷ್ಠರು ಶಾಸಕರನ್ನು ಕರೆದು ಮಾತನಾಡಿದರೆ ಒಳ್ಳೆಯದು. ಇಲ್ಲ ಅಂದರೆ ಅವರು ಸಭೆ ಮಾಡಿ ನಿರ್ಧಾರ ಮಾಡುತ್ತಾರೆ. ಕೆಲ ಶಾಸಕರು ಬಿಜೆಪಿ ವಿರುದ್ಧ ಗೆದ್ದಿದ್ದಾರೆ ಅವರಿಗೆ ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಇದೆ ಎಂದು ಹೇಳಿದ್ದಾರೆ.
ಕೊಪ್ಪಳದಲ್ಲಿ ದೇವದುರ್ಗ ಶಾಸಕಿ ಕರಿಯಮ್ಮ ಮತ್ತೊಮ್ಮೆ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಪರೋಕ್ಷ ಅಸಮಧಾನ ಹೊರಹಾಕಿದ್ದು, ನಮ್ಮ ವರಿಷ್ಠರ ತಿರ್ಮಾನಕ್ಕೆ ಬದ್ಧರಾಗಿದ್ದೇವೆ. ಆದರೆ ನಮ್ಮ ನಮ್ಮ ಕ್ಷೇತ್ರದ ಸಮಸ್ಯೆ ಬಗೆಹರಿಸುವಂತೆ ವರಿಷ್ಠರ ಬಳಿ ಹೇಳಿದ್ದೇವೆ. ಬಗೆಹರಿಸುತ್ತೆನೆಂದು ಹೇಳಿದ್ದಾರೆ ಎಂದರು.
ಇದನ್ನೂ ಓದಿ: ಬಿಜೆಪಿ ಜತೆ ಮೈತ್ರಿ ಬೆನ್ನಲ್ಲೇ ತಮ್ಮ ಸೆಕ್ಯುಲರಿಸಂ ಪ್ರಶ್ನಿಸಿದವರಿಗೆ ಖಡಕ್ ಉತ್ತರ ಕೊಟ್ಟ ದೇವೇಗೌಡ
ನಾವು ಸೋತಿರಬಹುದು ಆದರೆ ಸತ್ತಿಲ್ಲ. ನಾವೇಲ್ಲ ಶಾಸಕರು ಒಂದಾಗಿದ್ದೇವೆ. ಹೆಚ್ಡಿ ಕುಮಾರಸ್ವಾಮಿ ಅವರು ಬಸ್ನಲ್ಲಿ ಓಡಾಡಿ ಪಕ್ಷ ಕಟ್ಟಿದ್ದಾರೆ. ನಾವೇಲ್ಲ ಅವರ ಜೊತೆಗೆ ಇದ್ದೇವೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೇಲ್ಲ ಬದ್ಧರಾಗಿದ್ದೇವೆ. ನಮ್ಮಲ್ಲಿ ಏನೂ ಗೊಂದಲಗಳಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.