ಮಹಾಭಾರತ ಕಥೆ ಉಲ್ಲೇಖಿಸಿದ ಡಿಕೆ ಶಿವಕುಮಾರ್, ಹೋರಾಟದಲ್ಲಿ ಯಶಸ್ಸು ಗಳಿಸುವ ಸೂತ್ರವನ್ನು ವಿವರಿಸಿದ್ದು ಹೀಗೆ

ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಯುತ್ತಿರುವ ಬೆನ್ನಲ್ಲೇ ಒಂದು ರೀತಿಯ ಮಾರ್ಮಿಕ ಮಾತುಗಳನ್ನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಹಾಭಾರತದ ಕಥೆಯನ್ನು ಉಲ್ಲೇಖಿಸಿ ಹೋರಾಟದಲ್ಲಿ ಯಶಸ್ಸು ಗಳಿಸುವ ಸೂತ್ರದ ಬಗ್ಗೆ ಮಾತನಾಡಿದ್ದಾರೆ.

ಮಹಾಭಾರತ ಕಥೆ ಉಲ್ಲೇಖಿಸಿದ ಡಿಕೆ ಶಿವಕುಮಾರ್, ಹೋರಾಟದಲ್ಲಿ ಯಶಸ್ಸು ಗಳಿಸುವ ಸೂತ್ರವನ್ನು ವಿವರಿಸಿದ್ದು ಹೀಗೆ
ಡಿಕೆ ಶಿವಕುಮಾರ್Image Credit source: PTI
Follow us
Ganapathi Sharma
|

Updated on: May 15, 2023 | 8:37 PM

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಯುತ್ತಿರುವ ಬೆನ್ನಲ್ಲೇ ಒಂದು ರೀತಿಯ ಮಾರ್ಮಿಕ ಮಾತುಗಳನ್ನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ (DK Shivakumar), ಮಹಾಭಾರತದ ಕಥೆಯನ್ನು ಉಲ್ಲೇಖಿಸಿ ಹೋರಾಟದಲ್ಲಿ ಯಶಸ್ಸು ಗಳಿಸುವ ಸೂತ್ರದ ಬಗ್ಗೆ ಮಾತನಾಡಿದ್ದಾರೆ. ನನಗೆ ಆರೋಗ್ಯದ ಸಮಸ್ಯೆಯಿದೆ. ವಿಶ್ರಾಂತಿ ಪಡೆಯುವಂತೆ ವೈದ್ಯರು ಹೇಳಿದ್ದಾರೆ. ಹೊಟ್ಟೆ ನೋವಿದೆ. ಹೀಗಾಗಿ ದೆಹಲಿಗೆ ಹೋಗುವುದಿಲ್ಲ. ನನಗೆ ಯಾರ ಬೆಂಬಲ ಬೇಡ. ಯಾರು ಯಾರನ್ನು ಬೇಕಾದರೂ ಕರೆದುಕೊಂಡು ಹೋಗಬಹುದು ಎಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಹೋರಾಟದಲ್ಲಿ ಯಶಸ್ಸು ಸಿಗಬೇಕಾದ್ರೆ ತಾಳ್ಮೆ ಇರಬೇಕು. ಧರ್ಮರಾಯರಂತೆ ತಾಳ್ಮೆ ಇರಬೇಕು. ಜತೆಗೆ, ದಾನವೀರ ಶೂರ ಕರ್ಣನಂತಿರಬೇಕು, ಅರ್ಜುನನ ಗುರಿ ಇರಬೇಕು. ಭೀಮನ ಬಲವಿರಬೇಕು, ಕೃಷ್ಣನ ತಂತ್ರ, ವಿದುರನ ನೀತಿ ಇರಬೇಕು ಎಂದು ಹೇಳಿದರು. ಈ ಮೂಲಕ ಮಹಾಭಾರತದ ಪಾತ್ರಗಳ ಗುಣಲಕ್ಷಣಗಳನ್ನು ಅಳವಡಿಸಿಕೊಂಡು ಯಶಸ್ಸು ಗಳಿಸುವ ತಂತ್ರ ತಮ್ಮಲ್ಲಿದೆ ಎಂಬುದನ್ನು ಮಾರ್ಮಿಕವಾಗಿ ನುಡಿದರು.

ಪೂಜೆ ಪುನಸ್ಕಾರ, ಹುಟ್ಟುಹಬ್ಬ ಆಚರಣೆ ಬಳಿಕ ದೆಹಲಿಗೆ ತೆರಳುತ್ತೇನೆ. ನನ್ನ ಬಳಿ ಶಾಸಕರು ಇಲ್ಲ, ಯಾರನ್ನೂ ದೆಹಲಿಗೆ ಕರೆದೊಯ್ಯಲ್ಲ. ನನಗೆ ಯಾರ ಬೆಂಬಲವೂ ಬೇಡ. ಎಷ್ಟು ಜನರನ್ನಾದ್ರೂ ಅವರು ಕರೆದುಕೊಂಡು ಹೋಗಲಿ. ನನ್ನನ್ನು ಬಂಡೆ ಅಂತಾ ನೀವು ಕರೆದ್ರಿ, ಬಂಡೆ ಅಂದ್ರೆ ಪ್ರಕೃತಿ. ನನ್ನನ್ನು ಯಾವ ರೀತಿಯಲ್ಲಿ ಬೇಕಾದ್ರೂ ಬಳಸಿಕೊಳ್ಳಲಿ ಎಂದು ಅವರು ಹೇಳಿದರು.

ಇದನ್ನೂ ಓದಿ: DK Shivakumar: ಮತ್ತೆ ನೊಣವಿನಕೆರೆ ಅಜ್ಜಯ್ಯನ ಮೊರೆ ಹೋದ ಡಿಕೆ ಶಿವಕುಮಾರ್

ಇದಕ್ಕೂ ಮುನ್ನ ಅವರು ಬೆಂಗಳೂರಿನ ವಿಜಯನಗರದಲ್ಲಿರುವ, ನೊಣವಿನಕೆರೆ ಅಜ್ಜಯ್ಯನ ಶಾಖಾ ಮಠಕ್ಕೆ ಭೇಟಿ ನೀಡಿ ಅಜ್ಜಯ್ಯನ ಪಾದುಕೆ ಮುಂದೆ ಸುಮಾರು ಅರ್ಧ ಗಂಟೆ ಪ್ರಾರ್ಥನೆ ಸಲ್ಲಿಸಿದ್ದರು. ಆ ನಂತರ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಗೆ ತೆರಳಿ ಅಜ್ಜಯ್ಯನ ದರ್ಶನ ಪಡೆದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ