ಒಂದೇ ಕಲ್ಲಲ್ಲಿ ಹಲವು ಹಕ್ಕಿಗಳನ್ನು ಹೊಡೆದಿದ್ದಾರೆ; ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್
ಬಿಟ್ಕಾಯಿನ್ ವಿಚಾರ ಮೊದಲು ಪ್ರಸ್ತಾಪಿಸಿದ್ದು ಸಿದ್ದರಾಮಯ್ಯ. ಡಿಕೆ ಶಿವಕುಮಾರ್ ಬಣದ ನಲಪಾಡ್ಗೆ ಅಧಿಕಾರ ತಪ್ಪಿಸುವುದು, ವಿನಾಕಾರಣ ರಾಜಕೀಯ ಹುಯಿಲೆಬ್ಬಿಸುವುದೇ ಇದರ ಉದ್ದೇಶ.
ಬೆಂಗಳೂರು: ಬುರುಡೆರಾಮಯ್ಯ ಎಂದು ಸಿದ್ದರಾಮಯ್ಯ (Siddaramaiah) ವಿರುದ್ಧ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ. ಡಿಕೆಶಿ ವಿರುದ್ಧ ಮಾತನಾಡಿದ್ದ ಉಗ್ರಪ್ಪರನ್ನು ರಕ್ಷಿಸುವುದು. ಶಿಸ್ತುಕ್ರಮದಿಂದ ವಿ ಎಸ್ ಉಗ್ರಪ್ಪರನ್ನು ರಕ್ಷಿಸುವುದು. ನಲಪಾಡ್ಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತಪ್ಪಿಸುವುದು. ಡಿಕೆಶಿರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವುದು. ದಲಿತ ವಿರೋಧಿ ಆರೋಪದಿಂದ ಪಾರಾಗುವುದು. ಬಿಜೆಪಿ ವಿರುದ್ಧ ಸಲ್ಲದ ಅಪಪ್ರಚಾರವನ್ನು ನಡೆಸುವುದು. ಹೀಗೆ ಶಂಕಿತ ಬಿಟ್ಕಾಯಿನ್ ಹಗರಣದಿಂದ ಸಿದ್ದರಾಮಯ್ಯ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆದಿದ್ದಾರೆ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್ ಮಾಡಿದೆ.
ಬಿಟ್ಕಾಯಿನ್ ವಿಚಾರ ಮೊದಲು ಪ್ರಸ್ತಾಪಿಸಿದ್ದು ಸಿದ್ದರಾಮಯ್ಯ. ಡಿಕೆ ಶಿವಕುಮಾರ್ ಬಣದ ನಲಪಾಡ್ಗೆ ಅಧಿಕಾರ ತಪ್ಪಿಸುವುದು, ವಿನಾಕಾರಣ ರಾಜಕೀಯ ಹುಯಿಲೆಬ್ಬಿಸುವುದೇ ಇದರ ಉದ್ದೇಶ. ಬಿಟ್ ಕಾಯಿನ್ ವಿಚಾರ ರಾಜಕೀಯ ವೈಷಮ್ಯದ ಪ್ರತಿಪಲನವಷ್ಟೆ. ಕಾಂಗ್ರೆಸ್ ನಾಯಕರಿಬ್ಬರ ನಡುವಿನ ರಾಜಕೀಯ ವೈಷಮ್ಯದ ಪ್ರತಿಫಲನ. ಅದರಿಂದಾಚೆಗೆ ಬೇರೇನಿಲ್ಲ ಅಂತ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮೂಲಕ ಅಭಿಪ್ರಾಯಪಟ್ಟಿದೆ.
ಜನವರಿಯಲ್ಲಿ ನನಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂಬ ಕಾರಣಕ್ಕಾಗಿ ನನ್ನನ್ನು ಸಿಲುಕಿಸಲಾಗುತ್ತಿದೆ ಎಂದು ನಲಪಾಡ್ ಆರೋಪಿಸುತ್ತಿದ್ದಾರೆ. ತಮ್ಮ ಆಪ್ತನ ಪುತ್ರ ರಕ್ಷಾ ರಾಮಯ್ಯಗಾಗಿ ಸಿದ್ದರಾಮಯ್ಯ ಅವರು ನಲಪಾಡ್ ವಿರೋಧಿಸಿದ್ದು ರಾಜ್ಯಕ್ಕೆ ತಿಳಿದಿದೆ. ಹಾಗಾದರೆ ಇದರ ಹಿಂದಿರುವುದು ಏನು ಅಂತ ಬಿಜೆಪಿ ಪ್ರಶ್ನಸಿದೆ.
√ ಡಿಕೆಶಿ ವಿರುದ್ಧ ಮಾತನಾಡಿದ್ದ ತಮ್ಮ ಆಪ್ತ ಉಗ್ರಪ್ಪ ಅವರನ್ನು ಶಿಸ್ತುಕ್ರಮದಿಂದ ರಕ್ಷಿಸುವುದು.
√ ಮೊಹಮ್ಮದ್ ನಲಪಾಡ್ ಅವರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತಪ್ಪಿಸುವುದು.
√ ಡಿಕೆಶಿ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವುದು.
— BJP Karnataka (@BJP4Karnataka) November 14, 2021
ಇದನ್ನೂ ಓದಿ