ತೋಡೋ ಪಿತಾಮಹನ ಮರಿಮಗನಿಂದ ಜೋಡಿಸಲು ಸಾಧ್ಯವೇ ? ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ಪಂಚ್

| Updated By: ರಮೇಶ್ ಬಿ. ಜವಳಗೇರಾ

Updated on: Oct 01, 2022 | 12:48 PM

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ವಿರುದ್ಧ ಕರ್ನಾಟಕ ಬಿಜೆಪಿಯ ಟ್ವೀಟ್ ವಾರ್ ಮುಂದುವರಿದಿದೆ.

ತೋಡೋ ಪಿತಾಮಹನ ಮರಿಮಗನಿಂದ ಜೋಡಿಸಲು ಸಾಧ್ಯವೇ ? ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ಪಂಚ್
Bharat jodo yatra
Follow us on

ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat jodo yatra) ಕರ್ನಾಟಕ ಪ್ರವೇಶ ಮಾಡಿದ್ದು, ನಿನ್ನೆ(ಸೆಪ್ಟೆಂಬರ್.30) ಮೊದಲ ದಿನದ ನಡಿಗೆ ಮುಗಿಸಿ ಇಂದು(ಅ.01) ಎರಡನೇ ದಿನ ಚಾಮರಾಜನಗರದಿಂದ ಮೈಸೂರು ಜಿಲ್ಲೆಯತ್ತ ಹೆಜ್ಜೆ ಹಾಕುತ್ತಿದೆ. ಮತ್ತೊಂದೆಡೆ ಕರ್ನಾಟಕ ಬಿಜೆಪಿ ಸಹ ಭಾರತ್ ಜೋಡೋ ಯಾತ್ರೆ ಟಾಂಗ್ ಕೊಡುತ್ತಲೇ ಇದೆ.

ಹೌದು…ಎರಡನೇ ದಿನದ ಭಾರತ್ ಜೋಡೋ ಯಾತ್ರೆ ವಿರುದ್ಧ ಬಿಜೆಪಿ ಸರಣಿ ಟ್ವೀಟ್ ಮಾಡಿದ್ದು, ತೋಡೋ ಪಿತಾಮಹನ ಮರಿಮಗನಿಂದ ಜೋಡಿಸಲು ಸಾಧ್ಯವೇ ? ಎಂದು ಪ್ರಶ್ನಿಸಿದೆ.


ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ಕರ್ನಾಟಕದಲ್ಲಿ ರಾಹುಲ್​ ಗಾಂಧಿ ಫಸ್ಟ್ ಡೇ ಫಸ್ಟ್ ಶೋನಲ್ಲಿ ಒಗ್ಗಟ್ಟಿನ ಜಪ.. 

ಭಾರತ ವಿಭಜನೆಯ ಪಿತಾಮಹನ ಪಕ್ಷದಿಂದ ಬಾರತ ಐಕ್ಯತೆ ಸಾಧ್ಯವೆ? ತನ್ನ ಅಧಿಕಾರದ ಹಪಹಪಿಗೆ ದೇಶವಾಸಿಗಳ ರಕ್ತಹರಿಸಿದ ಪಕ್ಷದಿಂದ ಭಾರತ ಐಕ್ತಯತೆ ಸಾಧ್ಯವೆ? ದೇಶ ವಿಭಜನೆಯ ಪರಂಪರೆಯಲ್ಲಿ ಬಂದವರಿಂದ, ದೇಶ ಒಡೆಯುವವರನ್ನು ಬೆಂಬಲಿಸಿದವರಿಂದ ಭಾರತ ಐಕ್ಯತೆ ಸಾಧ್ಯವೆ? ಬಾರತ ಐಕ್ಯತಾ ಯಾತ್ರೆಯ ನಿಜವಾದ ಅಜೆಂಡಾ ಭಾರತ ವಿಭಜನೆಯೇ ಆಗಿದೆ ಎಂದು ಕಿಡಿಕಾರಿದೆ.


ತಮಿಳುನಾಡು, ಕೇರಳದಲ್ಲಿ ತೋರಿದ ಹಿಂದೂ ದ್ವೇಷವನ್ನು ರಾಹುಲ್ ಗಾಂಧಿ ಕರ್ನಾಟಕದಲ್ಲೂ ಬಿಡಲಿಲ್ಲ. ಮತಾಂಧರ ಮೂಲಕ ಡಿಜೆ ಹಳ್ಳಿಯ ಹಿಂದೂಗಳ ಮನೆಗೆ ಬೆಂಕಿಹಚ್ಚಲು ಪ್ರಚೋದನೆ ನೀಡಿದ ಸಂಪತ್‌ ರಾಜ್‌ ಯಾತ್ರೆಯಲ್ಲಿ ರಾಹುಲ್‌ ಜೊತೆ ಹೆಜ್ಜೆ ಹಾಕಿದ್ದಾನೆ. ಕಾಂಗ್ರೆಸ್ಸಿಗರೇ, ಯಾತ್ರೆಯ ಹೆಸರನ್ನು #HinduVirodhiYatra ಎಂದು ಬದಲಾಯಿಸಿಕೊಳ್ಳುವಿರಾ? ಎಂದು ಬಿಜೆಪಿ ಟ್ವೀಟ್ ಮಾಡಿದೆ.

ನಡುಬೀದಿಯಲ್ಲಿ ಗೋವಿನ ತಲೆ ಕಡಿದ ಯುವ ಕಾಂಗ್ರೆಸ್‌ ಮುಖಂಡನೊಂದಿಗೆ ಪಾದಯಾತ್ರೆ ಮಾಡುವ ಮೂಲಕ ರಾಹುಲ್‌ ಗಾಂಧಿ ಬಹುಸಂಖ್ಯಾತ ಹಿಂದೂಗಳನ್ನು ಅಪಮಾನಿಸಿದ್ದಾರೆ. ಹಿಂದೂಗಳ ಪೂಜನೀಯ ಗೋವಿನ ಹತ್ಯೆಗೆ ರಾಹುಲ್‌ ಗಾಂಧಿ ಅವರ ಸಮ್ಮತಿಯಿದೆಯೇ ಎಂದು ಕೇಳಿದೆ.


ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ: ಮೊದಲ ದಿನದ ನಡಿಗೆಯಲ್ಲಿ ನಡೆದ ವಿಶಿಷ್ಟ ಪ್ರಸಂಗಗಳು

ರಾಹುಲ್ ಗಾಂಧಿ ಯಾತ್ರೆ ಹಿಂದೂ ವಿರೋಧಿ ಯಾತ್ರೆಯಾಗಿ ಬದಲಾಗುತ್ತಿದೆ. ತಮಿಳುನಾಡಿನಿಂದ ಆರಂಭಗೊಂಡ ಯಾತ್ರೆ ಹೆಜ್ಜೆ ಹೆಜ್ಜೆಗೂ ಹಿಂದೂಗಳನ್ನು ಅವಮಾನಿಸುತ್ತಿದೆ. ಹಿಂದೂ ಸಮಾಜವನ್ನು ಕೆಣಕಿ ನಿಮ್ಮ ಮತಬ್ಯಾಂಕ್‌ ಗಟ್ಟಿಗೊಳಿಸುವ ಹುನ್ನಾರವೇ ಇದು? ಎಂದು ಸರಣಿ ಟ್ವೀಟ್ ಮೂಲಕ ಸಾಲು ಸಾಲು ಪ್ರಶ್ನೆಗಳ ಪಂಚ್ ಕೊಟ್ಟಿದೆ.


ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ