ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಏನೇನು ಚರ್ಚೆ? ಇಲ್ಲಿದೆ ವಿವರ
ಬೆಂಗಳೂರು, ಫೆಬ್ರವರಿ 15: ಮುಂಬರುವ ರಾಜ್ಯಸಭೆ ಚುನಾವಣೆಗೆ (Rajya Sabha Election) ಪಕ್ಷವು 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಎಲ್ಲರೂ ಮತದಾನ ಮಾಡಬೇಕು ಎಂದು ಕಾಂಗ್ರೆಸ್ (Congress) ಶಾಸಕಾಂಗ ಪಕ್ಷದ ಸಭೆಯಲ್ಲಿ (CLP Meeting) ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಬುಧವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯಸಭೆ ಚುನಾವಣೆ, ಗ್ಯಾರಂಟಿ ಅನುಷ್ಠಾನ, ಲೋಕಸಭೆ ಚುನಾವಣೆ ಸಿದ್ಧತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಮುಖ್ಯವಾಗಿ ಸಿಎಲ್ಪಿ ಸಭೆಯಲ್ಲಿ 3 ಪ್ರಮುಖ ವಿಚಾರಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಸಿಎಲ್ಪಿ ಮೀಟಿಂಗ್ನಲ್ಲಿ ನಡೆದ ಚರ್ಚೆ ಹೀಗಿದೆ
- ರಾಜ್ಯಸಭೆಗೆ 5ನೇ ಅಭ್ಯರ್ಥಿ ಹಾಕಿದರೆ ಎಲ್ಲರೂ ವೋಟ್ ಹಾಕಬೇಕು.
- ಚುನಾವಣೆಗೆ ಮುನ್ನ ನಾಯಕರು ಸೂಚಿಸುವ ರೆಸಾರ್ಟ್ಗೆ ಬರಬೇಕು.
- ಸಿಎಂ, ಡಿಸಿಎಂ, ಸಚಿವರು, ಶಾಸಕರು ರೆಸಾರ್ಟ್ಗೆ ಬಂದು ಇರಬೇಕು.
- ಗ್ಯಾರಂಟಿ ಸಮಿತಿ ಘೋಷಣೆಮಾಡಿ ಆದೇಶಿಸಿದ್ದರೂ ಸಮತಿ ರಚಿಸಿಲ್ಲ.
- ಗ್ಯಾರಂಟಿ ಸಮಿತಿ ರಚನೆಗೆ ಉಸ್ತುವಾರಿ ಸಚಿವರು, ಶಾಸಕರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲರಿಂದ ಗಡುವು.
- 2 ವಾರದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಹೆಸರು ಶಿಫಾರಸುಮಾಡಬೇಕು.
- ವಿಧಾನಸಭಾ ಕ್ಷೇತ್ರವಾರು ಸಮಿತಿಗೆ ಹೆಸರು ಕಳುಹಿಸುವಂತೆ ಸೂಚನೆ.
- ಶಾಸಕರು ಹೆಸರು ಕಳುಹಿಸುವಂತೆ ರಣದೀಪ್ ಸುರ್ಜೇವಾಲ ಸೂಚನೆ.
- ಜಿಲ್ಲಾ ಸಮಿತಿಗೆ ಸಚಿವರು ಹೆಸರು ಅಂತಿಮಗೊಳಿಸಿ ಪಟ್ಟಿ ರವಾನಿಸಬೇಕು.
- ಕಾಂಗ್ರೆಸ್ ಕಾರ್ಯಕರ್ತರ ಪಟ್ಟಿ ನೀಡುವಂತೆ ಸಚಿವರಿಗೆ 2 ದಿನ ಗಡುವು.
- ರಾಜ್ಯ ಸಮಿತಿಗೆ 2 ದಿನದೊಳಗೆ ಹೆಸರು ಅಂತಿಮಗೊಳಿಸುವಂತೆ ಸೂಚನೆ.
- 15 ಜಿಲ್ಲೆ ವಿಂಗಡಿಸಿ ಸಿಎಂ, ಡಿಸಿಎಂ ಇಬ್ಬರೂ ಸಮಾವೇಶ ಮಾಡಬೇಕು.
- ಸಿಎಂಗೆ 15 ಜಿಲ್ಲೆಗಳಲ್ಲಿ ಸಮಾವೇಶ ಆಯೋಜನೆ, ಪ್ರಚಾರ ಜವಾಬ್ದಾರಿ.
- ಡಿಸಿಎಂಗೆ 15 ಜಿಲ್ಲೆಗಳಲ್ಲಿ ಸಮಾವೇಶ ಆಯೋಜನೆ, ಪ್ರಚಾರ ಜವಾಬ್ದಾರಿ.
- ಶಾಸಕರ ಮುಂದೆ ತಮ್ಮ ಜವಾಬ್ದಾರಿಗಳನ್ನು ತಿಳಿಸಿದ ಸಿಎಂ, ಡಿಸಿಎಂ.
ಇದನ್ನೂ ಓದಿ: ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ಅಂತ್ಯ: ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು? ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಇನ್ನು ಲೋಕಸಭೆ ಹಾಗೂ ರಾಜ್ಯಸಭೆ ಟಿಕೆಟ್ ಹಂಚಿಕೆ ವಿಚಾರವಾಗಿ ಮತ್ತೊಂದು ಸುತ್ತಿನ ಸಭೆ ಅಗತ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ಬಳಿಕ ಅವರು ಬುಧವಾರ ರಾತ್ರಿ ಈ ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ