ಸದನದಲ್ಲಿ ಕೆರಗೋಡು ಹನುಮಧ್ವಜ ವಿವಾದದ ಸದ್ದು ಗದ್ದಲ: ಬಿಜೆಪಿಯಲ್ಲಿ ಮತ್ತೆ ತಪ್ಪಿದ ತಾಳ

ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಮೊದಲ ಬಜೆಟ್​ ಅಧಿವೇಶನದಲ್ಲಿ ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ಮಾಡದೇ ಮುಗಿಸಿದೆ. ಇನ್ನು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಬಿಜೆಪಿ ನಾಯಕರಲ್ಲೇ ಹೊಂದಾಣಿಕೆ ಕಂಡುಬಂದಿರಲಿಲ್ಲ. ಇದೀಗ ಮತ್ತೊಮ್ಮೆ ಬಿಜೆಪಿ ಬಿಜೆಪಿಯಲ್ಲಿ ತಾಳ ತಪ್ಪಿದೆ. ಮಂಡ್ಯದ ಕೆರಗೋಡು ಹನುಮಧ್ವಜ ವಿವಾದದ ಪ್ರಸ್ತಾಪವಾಗುತ್ತಿದ್ದಂತೆಯೇ ಕೇವಲ ಮಂಗಳೂರು ಭಾಗದ ಶಾಸಕರು ಧ್ವನಿ ಎತ್ತಿದರೆ, ಇನ್ನುಳಿದ ವಿಪಕ್ಷ ನಾಯಕ, ಉಪನಾಯಕ ಧ್ವನಿ ಬರಲೇ ಇಲ್ಲ. ಇದರೊಂದಿಗೆ ಬಿಜೆಪಿಯಲ್ಲಿ ಹೊಂದಾಣಿಕೆ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಸದನದಲ್ಲಿ ಕೆರಗೋಡು ಹನುಮಧ್ವಜ ವಿವಾದದ ಸದ್ದು ಗದ್ದಲ: ಬಿಜೆಪಿಯಲ್ಲಿ ಮತ್ತೆ ತಪ್ಪಿದ ತಾಳ
ವಿಧಾನಸಭೆ
Follow us
ಕಿರಣ್​ ಹನಿಯಡ್ಕ
| Updated By: ಗಂಗಾಧರ​ ಬ. ಸಾಬೋಜಿ

Updated on: Feb 14, 2024 | 7:36 PM

ವಿಧಾನಸಭೆ, ಫೆಬ್ರವರಿ 14: ಮಂಡ್ಯ (Mandya) ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹೊತ್ತಿದ ಹನುಮಧ್ವಜ ವಿವಾದದ ಕಿಡಿ ಇಡೀ ರಾಜ್ಯಕ್ಕೆ ವ್ಯಾಪಿಸಿತ್ತು. ಆಡಳಿತ ಪಕ್ಷ ಕಾಂಗ್ರೆಸ್​ ಮತ್ತು ಬಿಜೆಪಿ ನಾಯಕರ ಮಧ್ಯೆ ವಾಕ್ಸಮರವೇ ನಡೆದಿತ್ತು. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಪ್ರತಿಭಟನೆ ಕೂಡ ಮಾಲಾಗಿತ್ತು. ಇದೇ ವಿವಾದ ಸದ್ಯ ವಿಧಾನಸಭೆಯಲ್ಲಿ ಮತ್ತೆ ಗದ್ದಲ ಉಂಟುಮಾಡಿದೆ. ವಿವಾದದ ಪ್ರಸ್ತಾಪವಾಗುತ್ತಿದ್ದಂತೆಯೇ ಕೇವಲ ಮಂಗಳೂರು ಭಾಗದ ಶಾಸಕರು ಧ್ವನಿ ಎತ್ತಿದರೆ, ಇನ್ನುಳಿದ ವಿಪಕ್ಷ ನಾಯಕ, ಉಪನಾಯಕ ಧ್ವನಿ ಬರಲೇ ಇಲ್ಲ. ಇದರೊಂದಿಗೆ ಬಿಜೆಪಿಯಲ್ಲಿ ಹೊಂದಾಣಿಕೆ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಸದನದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿಕೆ ‌ನೀಡಲು ಮುಂದಾದಾಗ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ ಆಡಳಿತ ಪಕ್ಷ ಕಾಂಗ್ರೆಸ್​, ವಿಪಕ್ಷ ಬಿಜೆಪಿ ಸದಸ್ಯರ ಮಧ್ಯೆ ಗದ್ದಲ, ಕೋಲಾಹಲವೇ ನಡೆದಿದೆ.

ಕೆರೆಗೋಡು ಹನುಮ ಧ್ವಜ ಪ್ರಕರಣದ ಬಗ್ಗೆ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಪ್ರಸ್ತಾಪಿಸಿದ್ದು, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಹೈಕಮಾಂಡ್ ದಾರಿ ತಪ್ಪಿಸಿ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದರು ಎಂದಿದ್ದಾರೆ. ವಿಪಕ್ಷ ಬಿಜೆಪಿಯಿಂದ ರವಿಕುಮಾರ್ ಮಾತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಸ್ಪಷ್ಟೀಕರಣ ಕೇಳಿದ ಹರೀಶ್ ಪೂಂಜಾ

ಕೆರೆಗೋಡಿನಲ್ಲಿ ಕಲ್ಲು ಹೊಡೆಯಲು ಮಂಗಳೂರಿನಿಂದ ಬಂದಿದ್ದರು ಎಂಬ ಮಾತಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸ್ಪಷ್ಟೀಕರಣ ಕೇಳಿದ್ದಾರೆ. ಆದರೆ ಮಾತನಾಡಲು ಸ್ಪೀಕರ್ ಅವಕಾಶ ನೀಡಿಲ್ಲ. ಈ ವೇಳೆ ವಿಪಕ್ಷ ನಾಯಕ ಅಶೋಕ್ ಮತ್ತು ಉಳಿದ ಬಿಜೆಪಿ ಶಾಸಕರು ಮೌನವಾಗಿದ್ದರು. ಸಿಟ್ಟಾಗಿ ವಿಪಕ್ಷ ನಾಯಕರೇ ಹೇಗೆ ಅವರ ಮಾತನ್ನು ನೀವು ಒಪ್ಪಿಕೊಳ್ಳುತ್ತೀರಿ ಎಂದು ಅಶೋಕ್​ಗೆ ಹರೀಶ್ ಪೂಂಜಾ ಕೇಳಿದ್ದಾರೆ.

ಇದನ್ನೂ ಓದಿ: ನಾನು ರಾಮನ ಶ್ಲೋಕ ಹೇಳುತ್ತೇನೆ, ನೀವು ಹೇಳ್ತೀರಾ? ಆರ್​ ಅಶೋಕ್​ಗೆ ಶಾಸಕ ರವಿ ಗಣಿಗ ಸವಾಲು

ಈ ವೇಳೆ ಅವರು ಮಂಡ್ಯ, ನೀವು ಮಂಗಳೂರು ಏನು ಸಂಬಂಧ ಎಂದು ಸ್ಪೀಕರ್ ಮಾತನಾಡಲು ಅವಕಾಶ ನೀಡಿಲ್ಲ. ಈ ವೇಳೆ ಪೂಂಜಾ ನೆರವಿಗೆ ಬಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮತ್ತು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಮತ್ತು ಕಾರ್ಕಳ ಶಾಸಕ ಸುನೀಲ್ ಕುಮಾರ್​ ಕಲ್ಲು ಹೊಡೆಯಲು ಮಂಗಳೂರಿನಿಂದ ಯಾರು ಬಂದಿದ್ದರು ಎಂದು ಸ್ಪಷ್ಟೀಕರಣ ಕೊಡಿ ಎಂದು ಸದನದ ಬಾವಿಗಿಳಿಯಲು ಮುಂದಾಗಿದ್ದರು.

ಹನುಮಧ್ವಜ ಹಾರಿಸುತ್ತೇವೆ ಎಂದು ಗ್ರಾಮ ಪಂಚಾಯತ್​ಗೆ ಅರ್ಜಿಯನ್ನೇ ಕೊಟ್ಟಿಲ್ಲ: ಸಚಿವ ಎನ್​.ಚಲುವರಾಯಸ್ವಾಮಿ

ವಿಧಾನಸಭೆಯಲ್ಲಿ ಕೃಷಿ ಸಚಿವ ಎನ್​.ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದು, ಬೆಳಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ತಪ್ಪು ಮಾಹಿತಿ ನೀಡಿದ್ದಾರೆ. ಧ್ವಜಕ್ಕೆ ಅನುಮತಿ ಕೊಟ್ಟು ಬಳಿಕ ನಿರಾಕರಿಸಿದ್ದಾರೆ ಅಂತಾ ಹೇಳಿದ್ದಾರೆ. ಹನುಮಧ್ವಜ ಹಾರಿಸುತ್ತೇವೆ ಎಂದು ಗ್ರಾಮ ಪಂಚಾಯತ್​ಗೆ ಅರ್ಜಿಯನ್ನೇ ಕೊಟ್ಟಿಲ್ಲ. ಧಾರ್ಮಿಕ ಧ್ವಜ ಹಾರಿಸುತ್ತೇವೆ ಅಂತಲೂ ಕೂಡ ಅರ್ಜಿ ಸಲ್ಲಿಸಿಲ್ಲ. ಕನ್ನಡ ಧ್ವಜ ಅಥವಾ ರಾಷ್ಟ್ರ ಧ್ವಜ ಹಾರಿಸುತ್ತೇವೆಂದು ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ರೇವಣ್ಣರವರೇ ನಿಂಬೆ ಹಣ್ಣು ಮಂತ್ರಿಸಿ ಸರ್ಕಾರ ಬೀಳಿಸಿ: ಸದನದಲ್ಲಿ ಬಿಜೆಪಿ-ಕಾಂಗ್ರೆಸ್​​ ನಾಯಕರ ಹಾಸ್ಯ ಚಟಾಕೆ

ಗ್ರಾಮ ಪಂಚಾಯಿತಿ ಷರತ್ತಿಗೆ ಒಪ್ಪಿರುವುದಾಗಿಯೂ ಅರ್ಜಿ ಕೊಟ್ಟಿದ್ದಾರೆ. ರಾಜಕೀಯ ಅಥವಾ ಧರ್ಮದ ಧ್ವಜ ಹಾರಿಸಲ್ಲವೆಂದು ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇದರ ನಡುವೆ ಹನುಮ ಧ್ವಜ ಹಾರಿಸಿದ್ದಾರೆ. ಜ.26ರಂದು ರಾಷ್ಟ್ರಧ್ವಜ ಇಳಿಸಿ, ಅಂದೇ ಹನುಮಧ್ವಜ ಹಾರಿಸಿದ್ದಾರೆ. ಆಗ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?