AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇವಣ್ಣರವರೇ ನಿಂಬೆ ಹಣ್ಣು ಮಂತ್ರಿಸಿ ಸರ್ಕಾರ ಬೀಳಿಸಿ: ಸದನದಲ್ಲಿ ಬಿಜೆಪಿ-ಕಾಂಗ್ರೆಸ್​​ ನಾಯಕರ ಹಾಸ್ಯ ಚಟಾಕೆ

ಕೊಬ್ಬರಿ ಬೆಳೆಗೆ ಬೆಂಬಲ ಬೆಲೆ ಚರ್ಚೆಗೆ ಉತ್ತರಿಸುವಾಗ ಏಕೆ ಇರಲಿಲ್ಲ. ನೀವು ಬರುವಾಗ ಮಂತ್ರಿ ಬರಲು ಆಗುತ್ತದೆಯೋ ಎಂದು ಹೆಚ್​ಡಿ ರೇವಣ್ಣಗೆ ಸ್ಪೀಕರ್ ಪ್ರಶ್ನೆ​ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಸರ್ಕಾರಿ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ನಿಂಬೆಹಣ್ಣು, ಮಂತ್ರ ಜೆಡಿಎಸ್​ ಶಾಸಕ ರೇವಣ್ಣಗೆ ಬಿಟ್ಟಿದ್ದೇವೆ. ಹೆಚ್​.ಡಿ.ರೇವಣ್ಣರವರೇ ನಿಂಬೆ ಹಣ್ಣು ಮಂತ್ರಿಸಿ ಸರ್ಕಾರ ಬೀಳಿಸಿ ಎಂದು ಕಿಡಿಕಾರಿದ್ದಾರೆ.

ರೇವಣ್ಣರವರೇ ನಿಂಬೆ ಹಣ್ಣು ಮಂತ್ರಿಸಿ ಸರ್ಕಾರ ಬೀಳಿಸಿ: ಸದನದಲ್ಲಿ ಬಿಜೆಪಿ-ಕಾಂಗ್ರೆಸ್​​ ನಾಯಕರ ಹಾಸ್ಯ ಚಟಾಕೆ
ವಿಧಾನಸಭೆ
ಕಿರಣ್​ ಹನಿಯಡ್ಕ
| Edited By: |

Updated on: Feb 14, 2024 | 4:53 PM

Share

ವಿಧಾನಸಭೆ, ಫೆಬ್ರವರಿ 14: ನಿಂಬೆಹಣ್ಣು, ಮಂತ್ರ ಜೆಡಿಎಸ್​ ಶಾಸಕ ರೇವಣ್ಣ (hd revanna) ಗೆ ಬಿಟ್ಟಿದ್ದೇವೆ. ಹೆಚ್​.ಡಿ.ರೇವಣ್ಣರವರೇ ನಿಂಬೆ ಹಣ್ಣು ಮಂತ್ರಿಸಿ ಸರ್ಕಾರ ಬೀಳಿಸಿ ಎಂದು ಸರ್ಕಾರಿ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ವಾಗ್ದಾಳಿ ಮಾಡಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಹುಕಾಲ ಇದ್ದರೆ ಬರಲ್ಲ, ಯಮಗಂಡ ಕಾಲ ಇದ್ದರಂತೂ ರೇವಣ್ಣ ಬರುವುದೇ ಇಲ್ಲ ಎಂದು ಹೇಳಿದ್ದಾರೆ. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್​​ ಅಶೋಕ್​, ನಾಲ್ಕು ನಿಂಬೆಹಣ್ಣು ಮಂತ್ರಿಸಿ ಸರ್ಕಾರ ಬೀಳಿಸಿ. ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆ ನಿಮ್ಮದೇ ಎಂದಿದ್ದಾರೆ. ನೀವೇ ಸರ್ಕಾರ ಬೀಳಿಸಿಕೊಳ್ಳಿ ಎಂದು ಅಶೋಶ್​ಗೆ ರೇವಣ್ಣ ಹೇಳಿದ್ದಾರೆ. ನಮ್ಮ ಮೈತ್ರಿ ಸರ್ಕಾರ ವೇಳೆ ರೇವಣ್ಣ ಸಂಪುಟ ಸಭೆಗೆ ನಿಗದಿ ಮಾಡುತ್ತಿದ್ದರು. ವಿಪಕ್ಷ ನಾಯಕನಾಗಿ ಒಳಗೆ ಬರುವಾಗ ನನ್ನ ಕೈ ಹಿಡಿದು ನಿಲ್ಲಿಸಿದ್ದರು. ರಾಹುಕಾಲ ಇದೆ ಇರಿ ಎಂದು. ನಾನು ಬರುವಾಗ ಕಲಾಪ ಆರಂಭ ಆಗಿಬಿಟ್ಟಿತ್ತು ಎಂದು ಆರ್.ಅಶೋಕ್​ ಹೇಳಿದ್ದಾರೆ.

ಕೊಬ್ಬರಿ ಬೆಳೆಗೆ ಬೆಂಬಲ ಬೆಲೆ ಚರ್ಚೆಗೆ ಉತ್ತರಿಸುವಾಗ ಏಕೆ ಇರಲಿಲ್ಲ. ನೀವು ಬರುವಾಗ ಮಂತ್ರಿ ಬರಲು ಆಗುತ್ತದೆಯೋ ಎಂದು ಹೆಚ್​ಡಿ ರೇವಣ್ಣಗೆ ಸ್ಪೀಕರ್ ಪ್ರಶ್ನೆ​ ಮಾಡಿದ್ದಾರೆ.

ಇದನ್ನೂ ಓದಿ: ಜನ ಪ್ರತಿನಿಧಿಗಳ ಮಧ್ಯಾಹ್ನದ ಊಟಕ್ಕೆ ಸಮಯದ ಸೀಮೆ ಇಲ್ಲವೇ? ಲಂಚ್ ಅವರ್ ನಂತರ ಸದನ ಖಾಲಿ ಖಾಲಿ!

ವಿಧಾನಸಭೆಯಲ್ಲಿ ಸಚಿವರ ಅನುಪಸ್ಥಿತಿಗೆ ವಿಪಕ್ಷ ಬಿಜೆಪಿ 10 ನಿಮಿಷ ಕಲಾಪ ಮುಂದೂಡಲು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಆಗ್ರಹಿಸಿದರು. ತಮ್ಮ ಅನುಪಸ್ಥಿತಿಯಲ್ಲಿ ಕೊಬ್ಬರಿ ಬೆಂಬಲ ಬೆಲೆ ಚರ್ಚೆಗೆ ಸರ್ಕಾರ ಉತ್ತರ ನೀಡಿದ್ದಕ್ಕೆ ಶಾಸಕ H.D.ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ಕಾಫಿ ಕುಡಿದು ಬರುತ್ತೇವೆ ಎಂದು ಬಿಜೆಪಿ ಸದಸ್ಯರು ಹೊರಟರು. ನೀವು ಹೇಳಿದಂತೆ ಮಾಡಲು ಆಗಲ್ಲ. ಕುಳಿತುಕೊಳ್ಳಿ ಎಂದು ಸ್ಪೀಕರ್ ಹೇಳಿದ್ದಾರೆ.

ಇದನ್ನೂ ಓದಿ: ನಾನು ರಾಮನ ಶ್ಲೋಕ ಹೇಳುತ್ತೇನೆ, ನೀವು ಹೇಳ್ತೀರಾ? ಆರ್​ ಅಶೋಕ್​ಗೆ ಶಾಸಕ ರವಿ ಗಣಿಗ ಸವಾಲು

ವಿಪ್ ನೋಡಿಕೊಳ್ಳಲು ಮತ್ತೊಬ್ಬ ವಿಪ್‌ರನ್ನು ನೇಮಕ ಮಾಡಿ ಕ್ಯಾಬಿನೆಟ್ ರ್ಯಾಂಕ ಕೊಡಿ ಎಂದು ಬಿಜೆಪಿ ಸದಸ್ಯರು ಹೇಳಿದ್ದಾರೆ. ನೀವು ಜಾಸ್ತಿ ಟೀಕೆ ಮಾಡಿದರೆ ರಾಜೀನಾಮೆ ಕೊಡುತ್ತಾರೆ ಎಂದು ಸ್ಪೀಕರ್ ಹೇಳಿದ್ದು, ಅಶೋಕ್ ಪಟ್ಟಣ ಹೋಗಿ ರಾಜೀನಾಮೆ ಕೊಡುತ್ತಾರೆ ಎಂದು ಸ್ಪೀಕರ್ ಹೇಳಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರ ಕೊಬ್ಬರಿ ಖರೀದಿ ಮಾಡುತ್ತಿದೆ: ಸಚಿವ ಶಿವಾನಂದ ಪಾಟೀಲ್

ಕೊಬ್ಬರಿ ಬೆಂಬಲ ಬೆಲೆ ಕುರಿತ ಜೆಡಿಎಸ್‌ ನಿಲುವಳಿ ಸೂಚನೆ ಮೇಲೆ ನಡೆದ ಚರ್ಚೆಗೆ ವಿಧಾನಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ್​ ಉತ್ತರ ನೀಡಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಕೊಬ್ಬರಿ ಖರೀದಿ ಮಾಡುತ್ತಿದೆ. 1 ವಾರದ ಮಟ್ಟಿಗೆ ಕೊಬ್ಬರಿ ಖರೀದಿ ಅವಧಿ ಮುಂದೂಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ನಿಜವಾದ ರೈತರಿಂದ ಕೊಬ್ಬರಿ ಖರೀದಿಗೆ ಮುಂದಾಗುತ್ತೇವೆ. ರೈತರಿಗೆ ಖರೀದಿ ಲಾಭ ಸಿಗಬೇಕು ಎಂದು ಹೇಳಿದ್ದಾರೆ.

ರೈತರ ಹೆಸರಲ್ಲಿ ವರ್ತಕರು ಮೋಸ ಮಾಡದಂತೆ ಕ್ರಮಕೈಗೊಳ್ಳಲಾಗುವುದು. ಉಂಡೆ ಕೊಬ್ಬರಿ ಮಾತ್ರ ಈಗ ಖರೀದಿ ಮಾಡುತ್ತಿದ್ದೇವೆ. ಕೊಬ್ಬರಿ ಬೆಲೆ ಬಗ್ಗೆ ಸದಸ್ಯರ ಸಲಹೆ ತೆಗೆದುಕೊಂಡಿದ್ದೇವೆ. ಸ್ವಲ್ಪ ಅವಕಾಶ ಕೊಡಿ, ಮೋಸ ಮಾಡುವ ವರ್ತಕರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.