ಬಿಜೆಪಿ 140 ಗೋಲ್: ಅಮಿತ್ ಶಾ ಸಭೆಯಲ್ಲಿ ತಂತ್ರಗಾರಿಕೆ, ಮೈಸೂರು-ಮಂಡ್ಯ ಗೆಲ್ಲಲು ಸ್ಥಳೀಯ ಮುಖಂಡರ ಟಾರ್ಗೆಟ್

| Updated By: Rakesh Nayak Manchi

Updated on: Jan 30, 2023 | 6:45 PM

Karnataka Election 2023: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಇದಕ್ಕಾಗಿ ನಿನ್ನೆ (ಜ.29) ಅಮಿತ್ ಶಾ ಅವರು ರಾಜ್ಯ ನಾಯಕರ ಸಭೆ ನಡೆಸಿದ್ದು, ಗೆಲ್ಲುವ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿ 140 ಗೋಲ್: ಅಮಿತ್ ಶಾ ಸಭೆಯಲ್ಲಿ ತಂತ್ರಗಾರಿಕೆ, ಮೈಸೂರು-ಮಂಡ್ಯ ಗೆಲ್ಲಲು ಸ್ಥಳೀಯ ಮುಖಂಡರ ಟಾರ್ಗೆಟ್
ಅಮಿತ್ ಶಾ ಮತ್ತು ಬಿ.ಎಸ್.ಯಡಿಯೂರಪ್ಪ
Follow us on

ಶಿವಮೊಗ್ಗ: ಸಮೀಪಿಸುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election 2023) ಬಿಜೆಪಿ 140 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಇದಕ್ಕಾಗಿ ನಿನ್ನೆ (ಜನವರಿ 29) ಅಮಿತ್ ಶಾ (Amit Shah) ಅವರು ರಾಜ್ಯ ನಾಯಕರ ಸಭೆ ನಡೆಸಿದ್ದು, ಗೆಲ್ಲುವ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ (B.S.Yediyurappa), ನಿನ್ನೆ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ಅವರು ಸುದೀರ್ಘ ಚರ್ಚೆ ನಡೆಸಿದ್ದಾರೆ. 140 ಸ್ಥಾನ ಗೆಲ್ಲುವ ಬಗ್ಗೆ ತಂತ್ರಗಾರಿಕೆ ಬಗ್ಗೆ ಚರ್ಚೆಯಾಗಿದೆ. ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಎಲ್ಲಾ ಕ್ಷೇತ್ರ ಗೆಲ್ಲಲು ಚಿಂತನೆ ನಡೆದಿದೆ ಎಂದರು.

ಚುನಾವಣೆಯಲ್ಲಿ 140 ಸ್ಥಾನ ಪಡೆದು ಯಾರ ಬೆಂಬಲ ಇಲ್ಲದೇ ಸರ್ಕಾರ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಯಡಿಯೂರಪ್ಪ, ಗುರಿ ತಲುಪುವ ನಿಟ್ಟಿನಲ್ಲಿ ಎಲ್ಲರೂ ಕೂಡ ರಾಜ್ಯದಲ್ಲಿ ಪ್ರವಾಸ ಮಾಡಲು ಆರಂಭಿಸಿದ್ದೇವೆ. ಅಧಿವೇಶನದ ನಂತರ ಮತ್ತೆ ಎಲ್ಲಾ ಕಡೆ ಪ್ರವಾಸ ಕೈಗೊಂಡು ಪಕ್ಷ ಸಂಘಟಿಸುತ್ತೇವೆ. ಹಗಲು ಕನಸು ಕಾಣೋರ ಬಗ್ಗೆ ನಾವೇನು ಚರ್ಚೆ ಮಾಡಲ್ಲ. ಮಂಡ್ಯ, ಮೈಸೂರು ಭಾಗದಲ್ಲಿ ಸಹ ಓಡಾಟ ಮಾಡಿ ಎಲ್ಲರನ್ನೂ ಸಂಪರ್ಕ ಮಾಡುತ್ತಿದ್ದೇವೆ. ಅನೇಕ ಮುಖಂಡರು ಬಿಜೆಪಿಗೆ ಬರಲು ಸಿದ್ದರಾಗಿದ್ದಾರೆ. ಇದೆಲ್ಲವೂ ಮಂಡ್ಯ-ಮೈಸೂರು ಭಾಗದಲ್ಲಿ ಗೆಲ್ಲಲು ಅನುಕೂಲ ಆಗಲಿದೆ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ಶುರುವಾಯ್ತು ಪಕ್ಷಾಂತರ ಪರ್ವ: ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ಮುಖಂಡರು ಬಿಜೆಪಿ ಸೇರ್ಪಡೆ

ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್​​ಗೆ ಲಾಭ ವಿಚಾರವಾಗಿ ಮಾತನಾಡಿದ ಯಡಿಯೂರಪ್ಪ, ಭಾರತ್ ಜೋಡೋ ಯಾತ್ರೆ ಬಗ್ಗೆ ಯಾರು ತಲೆ ಕೆಡಿಸಿಕೊಂಡಿಲ್ಲ. ಅವರೋಬ್ಬರು ಈ ತುದಿಯಿಂದ ಆ ತುದಿಗೆ ಹೋಗಿಬಂದರು. ನಾನು ಅದನ್ನು ಅಲ್ಲಗಳೆಯಲ್ಲ. ಆದರೆ ಆದರಿಂದ ರಾಜಕೀಯ ಲಾಭ ಆಗುತ್ತೇ ಅಂತಾ ನನಗನಿಸಲ್ಲ. ಏಕೆಂದರೆ ಕಾಂಗ್ರೆಸ್ ಪಕ್ಷದಲ್ಲಿ ನಾಯಕರೇ ಇಲ್ಲ. ರಾಹುಲ್ ಗಾಂಧಿ ನಾಯಕರು ಅಂತಾ ಯಾರು ಒಪ್ಪಿಕೊಳ್ಳುತ್ತಾರೆ? ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಓಡಾಟ ಮಾಡುತ್ತಿದ್ದಾರೆ. ಅದರಿಂದ ನಮಗೆ ಲಾಭ ಅಗಲಿದೆ. ಪ್ರಧಾನಿ ಇನ್ನೂ ಹೆಚ್ಚಿನ ಸಮಯ ಕೊಡುತ್ತಾರೆ ಎಂದರು.

ಸಮುಲತಾ ಮನಸ್ಸಿನಲ್ಲಿ ಏನಿದ್ಯೋ ಗೊತ್ತಿಲ್ಲ

ಸಂಸದೆ ಸುಮಲತಾ ಅಂಬರೀಷ್ ಬಿಜೆಪಿ ಸೇರ್ಪಡೆ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಅವರ ನಡೆ ಯಾವ ಕಡೆ ಎಂಬ ಕುತೂಹಲವೂ ಮೂಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ನಾವ್ಯಾರು ಚರ್ಚೆ ಮಾಡಿಲ್ಲ. ಅವರ ಮನಸ್ಸಲ್ಲಿ ಏನಿದ್ಯೋ ಗೊತ್ತಿಲ್ಲ. ಅವರ ಬೆಂಬಲಿಗರೆಲ್ಲಾ ಬಹುತೇಕ ಜನ ಬಿಜೆಪಿಗೆ ಬರುತ್ತಾ ಇದ್ದಾರೆ. ಅದರ ಸೂಚನೆ ಏನು ಅಂತಾ ನೀವೇ ತಿಳಿದುಕೋಳ್ಳಬೇಕು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:45 pm, Mon, 30 January 23