ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿ ಮಿಂಚಿನ ಸಂಚಾರ: ಜನ ಬೆಂಬಲ ನೋಡಿ ಬಿಜೆಪಿ ಸೀಕ್ರೆಟ್ ಸಭೆಯಲ್ಲಿ ಅಮಿತ್ ಶಾ ಫುಲ್ ಖುಷ್

ಎಲೆಕ್ಷನ್​ಗೆ ರಣಕಹಳೆ ಮೊಳಗಿಸಿರುವ ರಾಜ್ಯ ಬಿಜೆಪಿ ಪಡೆಗೆ ಇಂದು(ಜನವರಿ 28) ಅಮಿತ್ ಶಾ ಎಂಟ್ರಿಯಿಂದ ಮತ್ತಷ್ಟು ಬೂಸ್ಟರ್ ಡೋಸ್ ಕೊಟ್ಟಂತಾಗಿದೆ. ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಿಂಚಿನ ಸಂಚಾರ ನಡೆಸಿದ ಬಿಜೆಪಿ ಚಾಣಕ್ಯ ಅಬ್ಬರಿಸುವುದರ ಜೊತೆಗೆ ಸೀಕ್ರೆಟ್ ಮೀಟಿಂಗ್ ಮಾಡಿ ಗೆಲುವಿನ ಟಾಸ್ಕ್ ಕೂಡಾ ಕೊಟ್ಟಿದ್ದಾರೆ.

ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿ ಮಿಂಚಿನ ಸಂಚಾರ: ಜನ ಬೆಂಬಲ ನೋಡಿ ಬಿಜೆಪಿ ಸೀಕ್ರೆಟ್ ಸಭೆಯಲ್ಲಿ ಅಮಿತ್ ಶಾ ಫುಲ್ ಖುಷ್
ಅಮಿತ್ ಶಾ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Jan 28, 2023 | 11:42 PM

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿ, ಕಲಬುರಗಿ, ಯಾದಗಿರಿಗೆ ಬಂದು ಹೋದ ವಾರದ ಬೆನ್ನಲ್ಲೇ ಇಂದು ಅಮಿತ್ ಶಾ ಸಾಲು ಸಾಲು ಕಾರ್ಯಕ್ರಮ, ಬಿಡುವಿಲ್ಲದ ಶೆಡ್ಯೂಲ್ ಹಾಕೊಂಡು ಕರ್ನಾಟಕಕ್ಕೆ ಬಂದು ಕೇಸರಿ ಪರ ದೊಡ್ಡ ಸುನಾಮಿಯನ್ನೇ ಎಬ್ಬಿಸಿದ್ದಾರೆ. ಅದರಲ್ಲೂ ಬೆಂಗಳೂರಿನ ನಂತರ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನ ಹೊಂದಿರುವ ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಅವಳಿ ವಾಣಿಜ್ಯ ನಗರಗಳಾದ ಹುಬ್ಬಳ್ಳಿ-ಧಾರವಾಡಕ್ಕೆ ಬಂದಿದ್ದು ವಿಶೇಷವಾಗಿತ್ತು. ವಿಜಯ ಸಂಕಲ್ಪ ಅಭಿಯಾನ, ಬೃಹತ್ ಸಮಾವೇಶ, ರೋಡ್ ಶೋ, ಜನಪ್ರತಿನಿಧಿಗಳ ಸಭೆ, ಸೀಕ್ರೆಟ್ ಟಾಸ್ಕ್ ಹೀಗೆ ಇಡೀ ದಿನ ಬಿಡುವಿಲ್ಲದೇ ಕಾರ್ಯಕ್ರಮಗಳ ಮೂಲಕ ಸಂಚಲನ  ಎಬ್ಬಿಸಿದರು. ಇನ್ನು ಅಂತಿಮವಾಗಿ ದೆಹಲಿಗೆ ಹೊರಡುವ ಮುನ್ನ ಚುನಾವಣಾ ಚಾಣಕ್ಯ ಶಾ, ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರು ಸೇರಿದಂತೆ ರಾಜ್ಯ ನಾಯರೊಂದಿಗೆ ಸೀಕ್ರೆಟ್ ಸಭೆ ನಡೆಸಿದರು. ಈ ಸಭೆಯಲ್ಲಿ ಕೆಲ ಮಹತ್ವದ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಇನ್ನು ಸಭೆ ಬಳಿಕ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರು ಮಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸಭೆ ಅಂಶಗಳನ್ನು ತಿಳಿಸಿದ್ದಾರೆ. ಅದು ಈ ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: ಅಶೋಕ್‌ಗೆ ಮಂಡ್ಯ ಉಸ್ತುವಾರಿ..ಲೋಕಲ್ ನಲ್ಲಿ ‘ಉರಿ’: ಬಿಜೆಪಿ ಮಿಷನ್ ಮಂಡ್ಯ ಟಾರ್ಗೆಟ್‌ಗೆ ಜೆಡಿಎಸ್ ಕೌಂಟರ್

ಬೆಳಗಾವಿಯಲ್ಲಿ ಸಭೆಯ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಒಟ್ಟಾಗಿ ಕೆಲಸ ಮಾಡುವಂತೆ ಅಮಿತ್ ಶಾ ಸಲಹೆ ನೀಡಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಪರ ಅಲೆ ಇದೆ. ಬೆಳಗ್ಗೆಯಿಂದ ನೋಡಿದ ಎಲ್ಲ ಕಾರ್ಯಕ್ರಮಗಳು ಬಹಳ ಯಶಸ್ವಿಯಾಗಿವೆ. ನನಗೆ ಸಮಾಧಾನ ಆಗಿದೆ, ತೃಪ್ತಿಯಾಗಿದೆ ಎನ್ನುವ ಮಾತನ್ನ ಅಮಿತ್ ಶಾ ಅವರು ಹೇಳಿದ್ದಾರೆ. ಬೆಳಗಾವಿಯಲ್ಲಿ ನಾವು ಪ್ರಯತ್ನ ಮಾಡಿದರೆ ಹದಿನೆಂಟಕ್ಕೆ ಹದಿನೆಂಟು ಸೀಟ್ ಗೆಲ್ಲಲು ಸಾಧ್ಯತೆ ಇದೆ. ಈಗ ಹದಿಮೂರು ಸೀಟ್ ಗೆದ್ದಿದ್ದು ಎಲ್ಲರೂ ಪ್ರಯತ್ನ ಮಾಡಿ ಬೆಳಗಾವಿ ಎಲ್ಲ ಸೀಟ್ ಗೆಲ್ಲಬೇಕು ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ಬಿಎಸ್​ವೈ ತಿಳಿಸಿದರು.

ನಾಳೆ ಬರುವ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಕರ್ನಾಟಕದಲ್ಲಿ 140ಕ್ಕೂ ಹೆಚ್ಚು ಸೀಟ್ ಗೆಲ್ಲುವುದರ ಮೂಲಕ ಅಧಿಕಾರಕ್ಕೆ ಬರುವುದು ನಿಶ್ಚಿತ. ನಾನು ಇನ್ನೊಮ್ಮೆ ಬೆಳಗಾವಿಗೆ ಬರುತ್ತೇನೆ. ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ಮೋದಿಜೀ ಮತ್ತು ನಿವೇಲ್ಲರೂ ಒಟ್ಟಾಗಿ ಪ್ರಯತ್ನ ಮಾಡಿದರೆ ಕರ್ನಾಟಕದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ನಡೆಸಲು ಕಷ್ಟ ಆಗಲ್ಲ. ಕಾಂಗ್ರೆಸ್​ನವರು ನಾವೇ ಮುಖ್ಯಮಂತ್ರಿ ಅಂತಾ ತಿರುಕನ‌ ಕನಸು ಕಾಣುತ್ತಿದ್ದಾರೆ ಅದ್ಯಾವುದು ನನಸು ಆಗಲ್ಲ. ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೋ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಆ ದಿಕ್ಕಿನಲ್ಲಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕೆಂದು ಅಮಿತ್ ಶಾ ಅವರು ಸೂಚನೆ ಕೊಟ್ಟು ಹೋಗಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಎಲ್ಲರೂ ಕೂಡ ತಲೆಬಾಗಿ ಒಪ್ಪಿಕೊಂಡಿದ್ದೇವೆ. ಹಗಲು ರಾತ್ರಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ನಮ್ಮೆಲ್ಲ ಮುಖಂಡರನ್ನ ವಿಶ್ವಾಸಕ್ಕೆ ತಗೊಂಡು ಒಟ್ಟಾಗಿ ಹೋಗಿ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಎಲ್ಲ ಕಡೆ ಅಮಿತ್ ಶಾ ಪ್ರವಾಸ ಮಾಡಲಿದ್ದಾರೆ. ನನಗೆ ಎಂಬತ್ತು ವರ್ಷ ಇನ್ನೊಂದು ತಿಂಗಳಲ್ಲಿ ಮುಗಿಯುತ್ತೆ. ಆದರೂ ಚುನಾವಣೆ ಮುಗಿಯುವವರೆಗೂ ಮನೆ ಸೇರುವುದಿಲ್ಲ. ಪ್ರಧಾನಿ ಮೋದಿ ಅಮಿತ್ ಶಾ ನಾಯಕತ್ವ ನಮಗಿದೆ ಕಾಂಗ್ರೆಸ್ ನವರಿಗೆ ಇಂತಹ ನಾಯಕತ್ವ ಎಲ್ಲಿದೆ. ಕರ್ನಾಟಕದಲ್ಲಿ ನಿಶ್ಚಿತವಾಗಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸ ಕೊಟ್ಟಿದ್ದೇವೆ ಅವರು ಆ ವಿಶ್ವಾಸದಲ್ಲೇ ಹೋಗಿದ್ದಾರೆ ಎಂದು ಹೇಳಿದರು.

ಇನ್ನು ಇದೇ ವೇಳೆ ಬೆಳಗಾವಿ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ವಿಚಾರಕ್ಕೆ ಸಂಬಂಧಿಸಿದಂತೆ ಬಿಎಸ್​ವೈ ಪ್ರತಿಕ್ರಿಯಿಸಿದ್ದು, ಯಾವುದೇ ಭಿನ್ನಮತ ಭಿನ್ನಾಭಿಪ್ರಾಯ ಇಲ್ಲ.ಒಂದೇ ತಾಯಿ ಮಕ್ಕಳಂತೆ ಕೆಲಸ ಮಾಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಒಟ್ಟಿನಲ್ಲಿ ಅಮಿತ್ ಶಾ ಬೆಳಗಾವಿ ಬಿಜೆಪಿಯಲ್ಲಿದ್ದ ಭಿನ್ನಾಭಿಪ್ರಾಯವನ್ನು ಸದ್ಯಕ್ಕೆ ಸರಿಪಡಿಸುವುದರ ಜೊತೆಗೆ ಬೆಳಗಾವಿಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಟಾಸ್ಕ್ ಕೊಟ್ಟು ಹೋಗಿದ್ದಾರೆ. ಆದ್ರೆ, ಇತ್ತ ರಾಜ್ಯ ನಾಯಕರು ಏನು ಮಾಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್