ಈ ಬಾರಿ ಸಾವರ್ಕರ್- ಟಿಪ್ಪು ಹೆಸರಿನಲ್ಲೇ ಚುನಾವಣೆ ನಡೆಯಲಿ: ರೇಣುಕಾಚಾರ್ಯ
ಸಾವರ್ಕರ್, ಟಿಪ್ಪು ಹೆಸರಿನ ನಡುವೆ ಚುನಾವಣೆ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆ ಸರಿಯಾಗಿಯೇ ಇದೆ. ಅಪ್ರತಿಮ ದೇಶಭಕ್ತಿ ಸಾವರ್ಕರ್ ಹೆಸರಿನಲ್ಲಿ ಚುನಾವಣೆಗೆ ಹೋಗುವುದು ತಪ್ಪೇನಿದೆ ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆ: ಸಾವರ್ಕರ್ (Veer Savarkar) ಹೆಸರಿನಲ್ಲಿ ಚುನಾವಣೆಗೆ ಹೋಗುವುದರಲ್ಲಿ ತಪ್ಪೇನಿದೆ? ಇಲ್ಲಿ ಹೇಳದೇ ಪಾಕ್‌ನಲ್ಲಿ ಹೋಗಿ ಸಾವರ್ಕರ್ ಹೆಸರು ಹೇಳಬೇಕಾ ಎಂದು ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ (MP Renukacharaya) ಪ್ರಶ್ನಿಸಿದ್ದಾರೆ. ಈ ಚುನಾವಣೆ ರಾಷ್ಟ್ರಭಕ್ತ ಹಾಗೂ ರಾಷ್ಟ್ರ ವಿರೋಧಿಗಳ ನಡುವಿನ ಚುನಾವಣೆ. ಟಿಪ್ಪು (Tipu) ಹಾಗೂ ವೀರ ಸಾವರ್ಕರ್ ನಡುವೆ ನಡೆಯುತ್ತಿರುವ ಚುನಾವಣೆ. ಜನ ನೀವು ಯಾವುದಕ್ಕೆ ಬೆಂಬಲ ನೀಡುತ್ತಿರಾ ಯೋಚನೆ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ನೀಡಿದ ಹೇಳಿಕೆಯನ್ನು ಸಮರ್ಥಿಸಿ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಮಾತನಾಡಿದರು.
ಟಿಪ್ಪು ಹಾಗೂ ವೀರ ಸಾವರ್ಕರ್ ಭಾವಚಿತ್ರ ವಿಚಾರದಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಹಾಗೂ ಟೀಕಾ ಪ್ರಹಾರಗಳಿಗೆ ಕಾರಣವಾಗಿತ್ತು. ಇದೀಗ ತಣ್ಣಗಾಗಿದ್ದ ವಿವಾದಕ್ಕೆ ಮತ್ತೆ ಟಿಪ್ಪು-ಸಾರ್ವಕರ್ ಕಿಡಿ ಹೊತ್ತಿಸಿದ ರೇಣುಕಾಚಾರ್ಯ, ಅಪ್ರತಿಮ ದೇಶಭಕ್ತಿ ಸಾವರ್ಕರ್ ಹೆಸರಿನಲ್ಲಿ ಚುನಾವಣೆಗೆ ಹೋಗುವುದು ತಪ್ಪೇನಿಲ್ಲ. ದೇಶಕ್ಕೋಸ್ಕರ ಸಾವರ್ಕರ್ ಮುಡಿಪಾಗಿ ಇದ್ದವರು. ಈ ಭಾರೀ ಸಾವರ್ಕರ್ ಮತ್ತು ಟಿಪ್ಪು ಹೆಸರಿನಲ್ಲೇ ಚುನಾವಣೆ ನಡೆಯಲಿ ಎಂದರು.
ಇದನ್ನೂ ಓದಿ: ಹಿಂದೂ ಕಾರ್ಯಕರ್ತರನ್ನ ಅಣಬೆಗೆ ಹೋಲಿಸಿದ ಪುತ್ತೂರು ಬಿಜೆಪಿ ಶಾಸಕರ ವಿರುದ್ಧ ಭುಗಿಲೆದ್ದ ಆಕ್ರೋಶ, ಮುತ್ತಿಗೆ
ದಲಿತರು ಸೇರಿ ಎಲ್ಲರು ಕಾಂಗ್ರೆಸ್ನಿಂದ ದೂರ ಆಗಿದ್ದಾರೆ. ಇನ್ನೂಳಿದಿರುವುದು ಅಲ್ಪಸಂಖ್ಯಾತರು ಮಾತ್ರ, ಅವರು ಕೂಡ ಕೈ ಬಿಡಲಿದ್ದಾರೆ. ಕಾಂಗ್ರೆಸ್ನದ್ದು ಮೋಹಿನಿ ಭಸ್ಮಾಸುರ ಕಥೆ ಆಗಿದೆ. ಅಧಿವೇಶನ ಆದ ಮೇಲೆ ಹಲವರು ಬಿಜೆಪಿ ಸೇರ್ಪಡೆ ಆಗುತ್ತಾರೆ, ಕಾದು ನೋಡಿ ಎಂದು ರೇಣುಕಾಚಾರ್ಯ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಭುಗಿಲೆದ್ದ ಧರ್ಮ ದಂಗಲ್ನ ಭಾಗವೆಂಬಂತೆ ವೀರ ಸಾವರ್ಕರ್ ಹಾಗೂ ಟಿಪ್ಪು ಭಾವಚಿತ್ರ ಅಳವಡಿಕೆ ವಿಚಾರವಾಗಿ ಕಲಹ ಉಂಟಾಗಿತ್ತು. ಚಾಕು ಇರಿತ ಪ್ರಕರಣವೂ ನಡೆದಿತ್ತು. ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಸಾವರ್ಕರ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಇವರ ಹೆಸರಿನಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರೇ ಅಂಚೆ ಚೀಟಿ ಬಿಡುಗಡೆ ಮಾಡಿದ್ದರು. ಆದರೀಗ ಕಾಂಗ್ರೆಸ್ ಮುಸ್ಲಿಮರನ್ನ ಓಲೈಸಲು ಸಾವರ್ಕರ್ ಅವರನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿತ್ತು. ಆದರೆ ಕಾಂಗ್ರೆಸ್ ನಾಯಕರು, ಟಿಪ್ಪು ಓರ್ವ ಸ್ವಾತಂತ್ರ್ಯ ಹೋರಾಟಗಾರ, ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಟೀಕಿಸಿತ್ತು. ಇದೀಗ ಮತ್ತೆ ಈ ಇಬ್ಬರ ಹೆಸರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವುದಾಗಿ ಹೇಳುತ್ತಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:12 pm, Thu, 9 February 23