ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಸಂಸತ್ತಿನಲ್ಲಿ ಬಿಸಿಬಿಸಿ ಚರ್ಚೆ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವು ಸಂಸತ್ತಿನಲ್ಲಿ ಬಿಸಿ ಚರ್ಚೆಗೆ ಕಾರಣವಾಯಿತು ಮತ್ತು ಎರಡೂ ರಾಜ್ಯಗಳ ಹಲವಾರು ಸಂಸದರು ಈ ವಿಷಯವನ್ನು ಪ್ರಸ್ತಾಪಿಸಿದರು.
ದೆಹಲಿ: ಸಂಸತ್ತಿನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ (Winter Session of Parliament)ದ ಮೊದಲ ದಿನ ಕರ್ನಾಟಕ ಮತ್ತು ಮಹಾರಾಷ್ಟ್ರ (Karnataka-Maharashtra) ರಾಜ್ಯಗಳ ಹಲವಾರು ಸಂಸದರು ಗಡಿ ವಿವಾದ (Border dispute)ದ ಬಗ್ಗೆ ಪ್ರಸ್ತಾಪಿಸಿದ ಹಿನ್ನೆಲೆ ಅಧಿವೇಶನದಲ್ಲಿ ವಿವಾದದ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಿತು. ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನದ ಶೂನ್ಯ ವೇಳೆಯಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಸಂಸದೆ ಸುಪ್ರಿಯಾ ಸುಳೆ ಅವರು ಈ ವಿಷಯವನ್ನು ಮೊದಲು ಪ್ರಸ್ತಾಪಿಸಿ ಕೇಂದ್ರ ಗೃಹ ಸಚಿವಾಲಯ (Union Home Ministry)ದ ಮಧ್ಯಪ್ರವೇಶವನ್ನು ಕೋರಿದರಲ್ಲದೆ ಮಹಾರಾಷ್ಟ್ರವನ್ನು ಒಡೆಯುವ ಪಿತೂರಿ ಇದೆ ಎಂದು ಅವರು ಹೇಳಿದರು. ಇದು ಬಿಜೆಪಿ ಸಂಸದರ ಪ್ರತಿಭಟನೆಗೆ ಕಾರಣವಾಯಿತು.
ಇದನ್ನೂ ಓದಿ: ಬೆಳಗಾವಿಯಲ್ಲಿ ಗಡಿ ಕಿಚ್ಚು: ಬೊಮ್ಮಾಯಿಗೆ ಕರೆ ಮಾಡಿ ಶಾಂತಿ ಮಂತ್ರ ಪಠಿಸಿದ ಮಹಾರಾಷ್ಟ್ರ ಸಿಎಂ ಶಿಂಧೆ
ಕಳೆದ 10 ದಿನಗಳಲ್ಲಿ ಮಹಾರಾಷ್ಟ್ರವನ್ನು ಒಡೆಯಲು ಪಿತೂರಿ ನಡೆದಿದೆ. ಈ ವಿಚಾರದಲ್ಲಿ ಅಮಿತ್ ಶಾ ಮಧ್ಯಪ್ರವೇಶಿಸಬೇಕು ಎಂದು ಸುಳೆ ಅವರು ಹೇಳಿದರು. ಅಲ್ಲದೆ, ಈ ಪ್ರದೇಶದಲ್ಲಿ ಮಹಾರಾಷ್ಟ್ರದ ಜನರು ಹೊಡೆಯಲ್ಪಡುತ್ತಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯವರು ಮಹಾರಾಷ್ಟ್ರವನ್ನು ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಎರಡೂ ರಾಜ್ಯಗಳಲ್ಲೂ ಬಿಜೆಪಿ ಆಡಳಿತದಲ್ಲಿದೆ. ನಿನ್ನೆ ಮಹಾರಾಷ್ಟ್ರದ ಜನರನ್ನು ಥಳಿಸಲಾಗಿದೆ. ಇದನ್ನು ಅನುಮತಿಸಲಾಗುವುದಿಲ್ಲ. ಇದು ಒಂದೇ ದೇಶ ಎಂದು ಹೇಳಿದರು. ಇದನ್ನು ಬಿಜೆಪಿ ಸಂಸದರು ಖಂಡಿಸಿದರು.
ಈ ವೇಳೆ ಎದ್ದುನಿಂತ ಕರ್ನಾಟಕದ ಹಾವೇರಿಯ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಅವರು, ಗಡಿ ವಿವಾದ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿರುವ ಕಾರಣ ಮಹಾರಾಷ್ಟ್ರದ ಯಾವುದೇ ಸಂಸದರಿಗೆ ಈ ವಿಷಯದ ಬಗ್ಗೆ ಮಾತನಾಡಲು ಸ್ಪೀಕರ್ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 am, Thu, 8 December 22