ರಾಜಕೀಯ ಲಾಭಕ್ಕಾಗಿ ಮಗನಿಗೆ ಎಸ್​ಸಿ ಹುಡುಗಿಯೊಂದಿಗೆ ಮದುವೆ ಮಾಡಿಸಲು ಮುಂದಾದ ಜಾರ್ಖಂಡ್ ಕಾರ್ಮಿಕ ಸಚಿವಗೆ ಸಾಮಾಜಿಕ ಬಹಿಷ್ಕಾರದ ಭೀತಿ

ಒಂದು ವೇಳೆ ಇದು ಪ್ರೇಮ ವಿವಾಹವಾಗಿದ್ದರೆ ಅದನ್ನು ನಾವು ಒಪ್ಪಿಕೊಳ್ಳುತ್ತಿದ್ದೆವು. ಆದರೆ ಸಚಿವರು ರಾಜಕೀಯ ಉದ್ದೇಶಗಳಿಗಾಗಿ ಎಸ್​ಸಿ ಸಮುದಾಯದ ಯುವತಿಯೊಂದಿಗೆ ಮಗನ ಮದುವೆ ಮಾಡಿಸಲು ಮುಂದಾಗಿದ್ದಾರೆ ಎಂದು ಸಮುದಾಯದ ನಾಯಕರು ದೂರಿದ್ದಾರೆ.

ರಾಜಕೀಯ ಲಾಭಕ್ಕಾಗಿ ಮಗನಿಗೆ ಎಸ್​ಸಿ ಹುಡುಗಿಯೊಂದಿಗೆ ಮದುವೆ ಮಾಡಿಸಲು ಮುಂದಾದ ಜಾರ್ಖಂಡ್ ಕಾರ್ಮಿಕ ಸಚಿವಗೆ ಸಾಮಾಜಿಕ ಬಹಿಷ್ಕಾರದ ಭೀತಿ
ಜಾರ್ಖಂಡ್ ಕಾರ್ಮಿಕ ಸಚಿವ ಸತ್ಯಾನಂದ ಭೋಕ್ತಾ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 08, 2022 | 1:41 PM

ರಾಂಚಿ: ಜಾರ್ಖಂಡ್​ನ ಕಾರ್ಮಿಕ ಸಚಿವ ಮತ್ತು ಛಾತ್ರಾ ಕ್ಷೇತ್ರದ ಶಾಸಕ ಸತ್ಯಾನಂದ್ ಭೊಕ್ತಾ (Satyanand Bhokta) ಅವರಿಗೆ ಅವರದೇ ಸಮುದಾಯ ಸಾಮಾಜಿಕ ಬಹಿಷ್ಕಾರ ಹಾಕಿದೆ. ತಮ್ಮ ರಾಜಕೀಯ ಲಾಭಕ್ಕಾಗಿ ಮಗನಿಗೆ ಸಮುದಾಯದ ಹೊರಗಿನ ಹೆಣ್ಣಿನೊಂದಿಗೆ ಮದುವೆ ಮಾಡಿಸಿದ ಕಾರಣಕ್ಕೆ ಖೈರ್​ವಾರ್​ ಭೋಕ್ತಾ ಸಮಾಜ್ ವಿಕಾಸ್ ಸಂಘವು ಈ ನಿರ್ಧಾರಕ್ಕೆ ಬಂದಿದೆ. ಇತ್ತೀಚೆಗಷ್ಟೇ ಗಂಝೂ (ಭೋಕ್ತಾ) ಸಮುದಾಯಕ್ಕೆ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಲಾಗಿದೆ. ಹೀಗಾಗಿ ಸಚಿವರು ತಮ್ಮ ಹಾಲಿ ಕ್ಷೇತ್ರ ಛಾತ್ರಾದಿಂದ ಸ್ಪರ್ಧಿಸಲು ಸಾದ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಛಾತ್ರಾ ಕ್ಷೇತ್ರವನ್ನು ಪರಿಶಿಷ್ಟ ಜಾತಿಗೆ (ಎಸ್​ಸಿ) ಮೀಸಲಿಡಲಾಗಿದೆ. ಹೀಗಾಗಿ ತಮ್ಮ ಮಗನಿಗೆ ಎಸ್​ಸಿ ಸಮುದಾಯದ ಯುವತಿಯನ್ನು ಮದುವೆ ಮಾಡಿಸುವ ಮೂಲಕ ತಮ್ಮ ಪ್ರಭಾವವಿರುವ ಛಾತ್ರಾ ಕ್ಷೇತ್ರದಲ್ಲಿ ರಾಜಕೀಯದ ಆಟ ಆಡುತ್ತಿದ್ದಾರೆ.

ಸಾಮಾಜಿಕ ಬಹಿಷ್ಕಾರ ಘೋಷಿಸಿರುವ ಸಮುದಾಯದ ನಾಯಕರು ಸಚಿವರ ಕುಟುಂಬದೊಂದಿಗೆ ಯಾವುದೇ ರೀತಿಯ ಸಂಬಂಧ ಇರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಈ ಕುಟುಂಬದಲ್ಲಿ ನಡೆಯುವ ಯಾವುದೇ ಮದುವೆ, ಸಾವು ಅಥವಾ ಯಾವುದೇ ಸಾಮಾಜಿಕ ಚಟುವಟಿಕೆಗಳಲ್ಲಿ ನಾವು ಪಾಲ್ಗೊಳ್ಳುವುದಿಲ್ಲ ಎಂದು ಸಮುದಾಯದ ನಾಯಕರು ತಿಳಿಸಿದ್ದಾರೆ. ಸಂಘವು ಈ ಸಂಬಂಧ ನಿನ್ನೆ (ಡಿ 7) ಪತ್ರಿಕಾ ಹೇಳಿಕೆಯನ್ನು ಹೊರಡಿಸಿದೆ. ಹೇಳಿಕೆ ಹೊರಡಿಸುವ ಮೊದಲು ನಡೆದ ಸುದೀರ್ಘ ಸಭೆಯಲ್ಲಿ ಸಚಿವರು ಸಮುದಾಯದ ಹೊರಗಿನ ಹೆಣ್ಣಿನೊಂದಿಗೆ ಮಗನ ಮದುವೆ ಮಾಡಿಸಲು ಮುಂದಾಗಿರುವುದರ ಬಗ್ಗೆಯೂ ಚರ್ಚೆ ನಡೆಯಿತು.

ಒಂದು ವೇಳೆ ಇದು ಪ್ರೇಮ ವಿವಾಹವಾಗಿದ್ದರೆ ಅದನ್ನು ನಾವು ಒಪ್ಪಿಕೊಳ್ಳುತ್ತಿದ್ದೆವು. ಆದರೆ ಸಚಿವರು ರಾಜಕೀಯ ಉದ್ದೇಶಗಳಿಗಾಗಿ ಎಸ್​ಸಿ ಸಮುದಾಯದ ಯುವತಿಯೊಂದಿಗೆ ಮಗನ ಮದುವೆ ಮಾಡಿಸಲು ಮುಂದಾಗಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸಮುದಾಯದ ನಾಯಕರು ಹೇಳಿದ್ದಅರೆ

‘ನಮ್ಮ ಸಮುದಾಯದಲ್ಲಿ ಇತರ ಸಮುದಾಯದವರನ್ನು ಮದುವೆಯಾಗಲು ಅವಕಾಶ ಇಲ್ಲ. ನಮ್ಮ ಬುಡಕಟ್ಟಿಗೆ ತನ್ನದೇ ಆದ ರೀತಿ-ರಿವಾಜುಗಳಿವೆ. ಈ ನಿಯಮಗಳನ್ನು ರಾಜಕೀಯ ಕಾರಣಗಳಿಗೆ ಮೀರುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ಹೀಗಾಗಿ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕುತ್ತಿದ್ದೇವೆ ಎಂದು ಘೋಕ್ತಾ ಸಮಾಜ ವಿಕಾಸ್ ಸಂಘದ ಅಧ್ಯಕ್ಷ ದರ್ಶನ್ ಗಾಂಝು ಹೇಳಿದ್ದಾರೆ.

ನಮ್ಮ ಸಮುದಾಯದ ಯಾರೊಬ್ಬರು ಸಚಿವ ಸತ್ಯಾನಂತ ಭೋಕ್ತಾ ಅವರಿಗೆ ನೆರವಾಗುವಂತಿಲ್ಲ. ಈ ನಿಯಮ ಮೀರಿದರೆ ಅಂಥ ಕುಟುಂಬಗಳಿಗೂ ಬಹಿಷ್ಕಾರ ಹಾಕುತ್ತೇವೆ ಎಂದು ಅವರು ಎಚ್ಚರಿಸಿದರು. ಮತ್ತೊಂದೆಡೆ ಸಚಿವ ಸತ್ಯಾನಂದ ಭೋಕ್ತಾ ತಮ್ಮ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Dimple Yadav: ಡಿಂಪಲ್ ಯಾದವ್ ಭಾರೀ ಮುನ್ನಡೆ; ಮೈನ್​ಪುರಿ ಉಪಚುನಾವಣೆಯಲ್ಲಿ ಯಾದವ್ ಕುಟುಂಬ ಮತ್ತೆ ಮೇಲುಗೈ

ಮತ್ತಷ್ಟು ರಾಷ್ಟ್ರೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:39 pm, Thu, 8 December 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್