Karnataka Congress: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಪ್ರಕಟ

| Updated By: ganapathi bhat

Updated on: Nov 22, 2021 | 10:30 PM

Karnataka Congress: ತುಮಕೂರಿನಲ್ಲಿ ಆರ್.ರಾಜೇಂದ್ರಗೆ ಕಾಂಗ್ರೆಸ್​ ಟಿಕೆಟ್ ಲಭಿಸಿದೆ. ಮಾಜಿ ಶಾಸಕ‌ ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರಗೆ ಟಿಕೆಟ್ ಲಭಿಸಿದೆ. ಬಳ್ಳಾರಿಯಿಂದ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗರಾಗಿರುವ ಕೆ.ಸಿ.ಕೊಂಡಯ್ಯಗೆ ಹೈಕಮಾಂಡ್ ಟಿಕೆಟ್ ನೀಡಿದೆ.

Karnataka Congress: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಕಾಂಗ್ರೆಸ್
Follow us on

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಲಾಗಿದೆ. ಮಂಥರ್ ಗೌಡಗೆ ಕೊಡಗು ಕಾಂಗ್ರೆಸ್​ ಎಂಎಲ್​ಸಿ ಟಿಕೆಟ್ ನೀಡಲಾಗಿದೆ. ಬಿಜೆಪಿ ನಾಯಕ ಎ. ಮಂಜು ಪುತ್ರನಿಗೆ ಕೊಡಗು ‘ಕೈ’ ಟಿಕೆಟ್ ನೀಡಲಾಗಿದೆ. ತುಮಕೂರಿನಲ್ಲಿ ಆರ್.ರಾಜೇಂದ್ರಗೆ ಕಾಂಗ್ರೆಸ್​ ಟಿಕೆಟ್ ಲಭಿಸಿದೆ. ಮಾಜಿ ಶಾಸಕ‌ ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರಗೆ ಟಿಕೆಟ್ ಲಭಿಸಿದೆ. ಬಳ್ಳಾರಿಯಿಂದ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗರಾಗಿರುವ ಕೆ.ಸಿ.ಕೊಂಡಯ್ಯಗೆ ಹೈಕಮಾಂಡ್ ಟಿಕೆಟ್ ನೀಡಿದೆ.

ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ:
ಕಲಬುರಗಿ- ಶಿವಾನಂದ ಪಾಟೀಲ್ ಮರ್ತೂರು
ಬೆಳಗಾವಿ (ದ್ವಿಸದಸ್ಯ ಸ್ಥಾನ)- ಚನ್ನರಾಜ ಹಟ್ಟಿಹೊಳಿ
ಉತ್ತರ ಕನ್ನಡ- ಭೀಮಣ್ಣ ನಾಯ್ಕ್‌
ಧಾರವಾಡ (ದ್ವಿಸದಸ್ಯ ಸ್ಥಾನ)- ಸಲೀಂ ಅಹ್ಮದ್
ಕೊಪ್ಪಳ, ರಾಯಚೂರು- ಶರಣಗೌಡ ಪಾಟೀಲ್
ಚಿತ್ರದುರ್ಗ- ಬಿ. ಸೋಮಶೇಖರ್‌
ಶಿವಮೊಗ್ಗ- ಪ್ರಸನ್ನ ಕುಮಾರ್
ದಕ್ಷಿಣಕನ್ನಡ- ಉಡುಪಿ (ದ್ವಿಸದಸ್ಯ ಸ್ಥಾನ)- ಮಂಜುನಾಥ ಭಂಡಾರಿ
ಚಿಕ್ಕಮಗಳೂರು- ಗಾಯತ್ರಿ ಶಾಂತೇಗೌಡ
ಹಾಸನ- ಎಂ. ಶಂಕರ್​​
ತುಮಕೂರು- ಆರ್​​. ರಾಜೇಂದ್ರ
ಮಂಡ್ಯ- ದಿನೇಶ್ ಗೂಳಿಗೌಡ
ಬೆಂಗಳೂರು ಗ್ರಾಮಾಂತರ- ಎಸ್. ರವಿ
ಕೊಡಗು- ಮಂಥರ್ ಗೌಡ
ವಿಜಯಪುರ- ಬಾಗಲಕೋಟೆ (ದ್ವಿಸದಸ್ಯ ಸ್ಥಾನ)- ಸುನಿಲ್‌ಗೌಡ
ಮೈಸೂರು- ಚಾಮರಾಜನಗರ (ದ್ವಿಸದಸ್ಯ ಸ್ಥಾನ)- ತಿಮ್ಮಯ್ಯ
ಬಳ್ಳಾರಿ- ಕೆ.ಸಿ. ಕೊಂಡಯ್ಯ
ಬೀದರ್- ಭೀಮರಾವ್ ಬಿ. ಪಾಟೀಲ್
ಕೋಲಾರ- ಎಂ.ಎಲ್. ಅನಿಲ್ ಕುಮಾರ್
ಬೆಂಗಳೂರು ನಗರ- ಯೂಸುಫ್ ಷರೀಫ್​​

ಸಕ್ರಿಯ ಕಾರ್ಯಕರ್ತರಿಗೆ ಕಾಂಗ್ರೆಸ್​ ಟಿಕೆಟ್ ನೀಡಿದ್ದೇವೆ. ಕಳೆದ ಬಾರಿಗಿಂತ ಈ ಬಾರಿ ನಮ್ಮ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ ಪಕ್ಷದ ಹೊರಗಿನವರಿಗೆ ಟಿಕೆಟ್ ನೀಡಿಕೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಸ್ಥಳೀಯ ನಾಯಕರು ಹೇಳಿದಂತೆ ನಾವು ಕೇಳಬೇಕಾಗುತ್ತದೆ. ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ನಾವು ನೋಡಿದ್ದೇವೆ. ಹೀಗಾಗಿ ಇದು ಅನಿವಾರ್ಯ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಎಸ್.ಆರ್. ಪಾಟೀಲ್​​ರನ್ನು ನಾವು ಕೈಬಿಡುವ ಪ್ರಶ್ನೆ ಇಲ್ಲ. ಎಸ್.ಆರ್. ಪಾಟೀಲ್​ರಿಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ. ಈ ವಿಚಾರವಾಗಿ ಬೇರೆ ರೀತಿ ತಂತ್ರಗಾರಿಕೆ ನಡೆಯುತ್ತಿದೆ. ಕೆ.ಸಿ. ಕೊಂಡಯ್ಯ ವಿಚಾರದಲ್ಲಿ ಶಾಸಕರಿಂದ ಅಭಿಪ್ರಾಯ ಪಡೆಯಲಾಗಿದೆ. ಆದರೆ ಹೈಕಮಾಂಡ್ ಹೇಳಿದ್ದನ್ನು ನಾವು ಕೇಳಲೇಬೇಕು ಎಂದು ಬೆಂಗಳೂರಲ್ಲಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಪ್ರತಿ ಚುನಾವಣೆಯಲ್ಲಿ ವಿರೋಧ ವ್ಯಕ್ತವಾಗುವುದು ಸಾಮಾನ್ಯ. ನನ್ನ ಮತದಾರರು ಜನ ಪ್ರತಿನಿಧಿಗಳು, ಅವರ ಜೊತೆ ಚರ್ಚೆ ಮಾಡುತ್ತೇವೆ. ನನ್ನ ವಿರೋಧ ಮಾಡಿದ ಶಾಸಕರ ಜೊತೆಯೂ ಮಾತಾಡುವೆ ಎಂದು ಟಿವಿ9ಗೆ ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಕೆ‌.ಸಿ. ಕೊಂಡಯ್ಯ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸಾಗರದಷ್ಟು ಬೆಳೆದಿದ್ದರೂ ಯಾರಿಗೂ ಉಪಯೋಗವಿಲ್ಲ: ಬಿಎಸ್ ಯಡಿಯೂರಪ್ಪ

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ಬಿಜೆಪಿಯಿಂದ 20 ಅಭ್ಯರ್ಥಿಗಳ ಪಟ್ಟಿ ಪ್ರಕಟ

Published On - 7:05 pm, Mon, 22 November 21