ಬೆಂಗಳೂರು: ವಿಧಾನಪರಿಷತ್ ಚುನಾವಣೆ ಡಿಸೆಂಬರ್ 10 ರಂದು ನಡೆಯಲಿದೆ. ಈ ಹಿನ್ನೆಲೆ 25 ಸ್ಥಾನಗಳ ಪೈಕಿ 20 ಸ್ಥಾನಗಳಿಗೆ ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಹಾಲಿ ಸದಸ್ಯರ ಪೈಕಿ ಕೊಡಗು ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ. ಹಾಲಿ ಎಂಎಲ್ಸಿ ಸುನಿಲ್ ಸುಬ್ರಮಣಿ ಸೋದರನಿಗೆ ಟಿಕೆಟ್ ನೀಡಲಾಗಿದೆ. ಸುನಿಲ್ ಸುಬ್ರಮಣಿ ಸಹೋದರ ಸುಜಾ ಕುಶಾಲಪ್ಪಗೆ ಟಿಕೆಟ್ ಕೊಡಲಾಗಿದೆ. ಶಿವಮೊಗ್ಗದಲ್ಲಿ ವಿಧಾನಪರಿಷತ್ನ ಮಾಜಿ ಸಭಾಪತಿ ಶಂಕರಮೂರ್ತಿ ಪುತ್ರ ಅರುಣ್ಗೆ ಟಿಕೆಟ್ ನೀಡಲಾಗಿದೆ.
ಡಿಸೆಂಬರ್ 10 ರಂದು ವಿಧಾನಪರಿಷತ್ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಬಿಜೆಪಿಯಿಂದ 20 ಅಭ್ಯರ್ಥಿಗಳ ಪಟ್ಟಿ ಪ್ರಕಟ.
ಪಟ್ಟಿ ಇಲ್ಲಿ ನೀಡಲಾಗಿದೆ:
ಕೊಡಗು- ಸುಜಾ ಕುಶಾಲಪ್ಪ
ದಕ್ಷಿಣ ಕನ್ನಡ- ಕೋಟ ಶ್ರೀನಿವಾಸ ಪೂಜಾರಿ
ಚಿಕ್ಕಮಗಳೂರು- ಎಂ.ಕೆ. ಪ್ರಾಣೇಶ್
ಶಿವಮೊಗ್ಗ- ಡಿ.ಎಸ್. ಅರುಣ್
ಧಾರವಾಡ- ಪ್ರದೀಪ್ ಶೆಟ್ಟರ್
ಬೆಳಗಾವಿ- ಮಹಾಂತೇಶ್ ಕವಟಗಿಮಠ
ಕಲಬುರಗಿ- ಬಿ.ಜಿ. ಪಾಟೀಲ್
ಚಿತ್ರದುರ್ಗ- ಕೆ.ಎಸ್. ನವೀನ್
ಮೈಸೂರು- ರಘು ಕೌಟಿಲ್ಯ
ಹಾಸನ- ವಿಶ್ವನಾಥ್
ಉತ್ತರ ಕನ್ನಡ- ಗಣಪತಿ ಉಳ್ವೇಕರ್
ಬೀದರ್- ಪ್ರಕಾಶ್ ಖಂಡ್ರೆ
ಬೆಂಗಳೂರು ನಗರ- ಗೋಪಿನಾಥ್ ರೆಡ್ಡಿ
ಮಂಡ್ಯ- ಕೆ.ಆರ್. ಪೇಟೆ ಮಂಜು
ಕೋಲಾರ- ಡಾ.ಕೆ.ಎನ್. ವೇಣುಗೋಪಾಲ್
ರಾಯಚೂರು- ವಿಶ್ವನಾಥ್ ಬನಹಟ್ಟಿ
ಬೆಂಗಳೂರು ಗ್ರಾಮಾಂತರ- ಬಿ.ಎಂ. ನಾರಾಯಣಸ್ವಾಮಿ
ಬಳ್ಳಾರಿ- ವೈ.ಎಮ್. ಸತೀಶ್
ತುಮಕೂರು- ಎನ್. ಲೋಕೇಶ್
ವಿಜಯಪುರ- ಪಿ.ಹೆಚ್. ಪುಜಾರ್
ದ್ವಿಸದಸ್ಯ ಕ್ಷೇತ್ರಗಳಲ್ಲಿ 1 ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಸ್ಪರ್ಧೆ ಮಾಡಲಿದೆ. ಬಿಜೆಪಿ ಟಿಕೆಟ್ಗಾಗಿ ಪ್ರಯತ್ನಿಸಿದ್ದ ಸಂದೇಶ್ಗೆ ನಿರಾಸೆ ಉಂಟಾಗಿದೆ. ಜೆಡಿಎಸ್ ಸದಸ್ಯ ಸಂದೇಶ್ ನಾಗರಾಜ್ಗೆ ಭಾರಿ ನಿರಾಸೆ ಆಗಿದೆ. ಮೈಸೂರಿನಿಂದ ಸಂದೇಶ್ ನಾಗರಾಜ್, ಕೋಲಾರದಿಂದ ಸಿ.ಆರ್. ಮನೋಹರ್, ಬೆಳಗಾವಿಯಿಂದ ಲಖನ್ ಸ್ಪರ್ಧೆ ಊಹಾಪೋಹಕ್ಕೆ ತೆರೆ ಬಿದ್ದಿದೆ. 2ನೇ ಅಭ್ಯರ್ಥಿಯಾಗಿ ಸ್ಪರ್ಧೆ ಕುರಿತ ಊಹಾಪೋಹಕ್ಕೆ ತೆರೆ ಬಿದ್ದಿದೆ.
ಇದನ್ನೂ ಓದಿ: ಕೊರೊನಾ ಹಿನ್ನೆಲೆ; ವಿಧಾನ ಪರಿಷತ್ ಚುನಾವಣೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ
ಇದನ್ನೂ ಓದಿ: ಬಳ್ಳಾರಿ ವಿಧಾನ ಪರಿಷತ್ ಚುನಾವಣೆ; ಮುಂಡರಗಿ ನಾಗರಾಜ್ಗೆ ಟಿಕೆಟ್ ನೀಡುವಂತೆ ಸೋನಿಯಾ ಗಾಂಧಿಗೆ ಪತ್ರ ಬರೆದ ದಲಿತ ನಾಯಕರು
Published On - 10:00 pm, Fri, 19 November 21