ಬಳ್ಳಾರಿ ವಿಧಾನ ಪರಿಷತ್ ಚುನಾವಣೆ; ಮುಂಡರಗಿ ನಾಗರಾಜ್​ಗೆ ಟಿಕೆಟ್ ನೀಡುವಂತೆ ಸೋನಿಯಾ ಗಾಂಧಿಗೆ ಪತ್ರ ಬರೆದ ದಲಿತ ನಾಯಕರು

ಈಗಾಗಲೇ ಲೋಕಸಭೆ, ರಾಜ್ಯಸಭೆ ವಿಧಾನ ಪರಿಷತ್ ಸೇರಿ 6 ಬಾರಿ ಕೆ.ಸಿ.ಕೊಂಡಯ್ಯಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಹೀಗಾಗಿ ಈ ಬಾರಿ ಮುಂಡರಗಿ ನಾಗರಾಜ್ಗೆ ಟಿಕೆಟ್ ನೀಡುವಂತೆ ಶಾಸಕರಾದ ಭೀಮಾ ನಾಯಕ್, ನಾಗೇಂದ್ರ, ಜೆ.ಎನ್.ಗಣೇಶ್, ತುಕಾರಾಂ ಹಾಗೂ ಮಾಜಿ ಶಾಸಕ ಅನಿಲ್ ಲಾಡ್ ಆಗ್ರಹಿಸಿದ್ದಾರೆ.

ಬಳ್ಳಾರಿ ವಿಧಾನ ಪರಿಷತ್ ಚುನಾವಣೆ; ಮುಂಡರಗಿ ನಾಗರಾಜ್​ಗೆ ಟಿಕೆಟ್ ನೀಡುವಂತೆ ಸೋನಿಯಾ ಗಾಂಧಿಗೆ ಪತ್ರ ಬರೆದ ದಲಿತ ನಾಯಕರು
ಸೋನಿಯಾ ಗಾಂಧಿ

ಬಳ್ಳಾರಿ: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಟಿಕಿಟ್ಗಾಗಿ ಪೈಪೋಟಿ ತೀವ್ರಗೊಂಡಿದೆ. ಕೆ.ಸಿ.ಕೊಂಡಯ್ಯಗೆ ವಿಧಾನ ಪರಿಷತ್ ಟಿಕೆಟ್ ನೀಡಲು ವಿರೋಧ ವ್ಯಕ್ತವಾಗಿದ್ದು ಮುಂಡರಿಗಿ ನಾಗರಾಜ್ಗೆ ಟಿಕೆಟ್ ನೀಡಲು ಶಾಸಕರ ಒತ್ತಾಯ ಕೇಳಿ ಬಂದಿದೆ.

ಈಗಾಗಲೇ ಲೋಕಸಭೆ, ರಾಜ್ಯಸಭೆ ವಿಧಾನ ಪರಿಷತ್ ಸೇರಿ 6 ಬಾರಿ ಕೆ.ಸಿ.ಕೊಂಡಯ್ಯಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಹೀಗಾಗಿ ಈ ಬಾರಿ ಮುಂಡರಗಿ ನಾಗರಾಜ್ಗೆ ಟಿಕೆಟ್ ನೀಡುವಂತೆ ಶಾಸಕರಾದ ಭೀಮಾ ನಾಯಕ್, ನಾಗೇಂದ್ರ, ಜೆ.ಎನ್.ಗಣೇಶ್, ತುಕಾರಾಂ ಹಾಗೂ ಮಾಜಿ ಶಾಸಕ ಅನಿಲ್ ಲಾಡ್ ಆಗ್ರಹಿಸಿದ್ದಾರೆ. ಅಲ್ಲದೆ ಸ್ಥಳೀಯ ನಾಯಕರೂ ಕೂಡ ಕೆ.ಸಿ.ಕೊಂಡಯ್ಯಗೆ ಟಿಕಿಟ್ ನೀಡುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಮುಖ ಸಮಾಜಗಳಿಗೆ ಆದ್ಯತೆ ನೀಡಲು ಮನವಿ ಮಾಡಿದ್ದಾರೆ. ದಲಿತ ಎಡಗೈ ಸಮಾಜದ ಮುಂಡರಗಿ ನಾಗರಾಜ್ಗೆ ಟಿಕೆಟ್ ನೀಡಲು ಪಟ್ಟು ಹಿಡಿದಿದ್ದಾರೆ. ಆದರೆ ಕೆ.ಸಿ.ಕೊಂಡಯ್ಯ ಪರ ಮಲ್ಲಿಕಾರ್ಜುನ ಖರ್ಗೆ ಬ್ಯಾಟಿಂಗ್ ಬೀಸಿದ್ದಾರೆ.

ಇನ್ನು ಮತ್ತೊಂದೆಡೆ ಎಂಎಲ್ಸಿ ಚುನಾವಣೆ ವಿಚಾರಕ್ಕೆ ಸಂಬಂಧಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕಾಂಗ್ರೆಸ್ ದಲಿತ ನಾಯಕರು ಪತ್ರ ಬರೆದಿದ್ದಾರೆ. ಕೆ.ಹೆಚ್. ಮುನಿಯಪ್ಪ, ಎಲ್ ಹನುಮಂತಯ್ಯ, ಹೆಚ್ ಆಂಜನೇಯ, ಆರ್.ಬಿ. ತಿಮ್ಮಾಪುರ, ಚಂದ್ರಪ್ಪರಿಂದ ಜಂಟಿ ಪತ್ರ ಬರೆಯಲಾಗಿದೆ.

ಬಳ್ಳಾರಿ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಅನ್ನ ಮುಂಡರಗಿ ನಾಗರಾಜ್ಗೆ ನೀಡುವಂತೆ ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಮುಂಡರಗಿ ನಾಗರಾಜ್, 1999 ರ ಚುನಾವಣೆಯಲ್ಲಿ ಸೋನಿಯಾ ಪರ ಕೆಲಸ ಮಾಡಿದ್ದರು. ಆ ಬಳಿಕ ಕಾಂಗ್ರೆಸ್ ಗೆ ಸೇರ್ಪಡೆಗೊಂಡು ಪಕ್ಷ ಸಂಘಟನೆ ಮಾಡಿದ್ದರು. ಪಕ್ಷ ಕೂಡ ಈ ಹಿಂದೆ ಅವರಿಗೆ ಸೂಕ್ತ ಭರವಸೆ ನೀಡಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ದಲಿತರಿಗೆ ಸ್ಥಾನಮಾನ‌ ನೀಡಬೇಕಿದೆ. ಎಲ್ಲಾ ಅಂಶಗಳನ್ನ ಪರಿಗಣಿಸಿ ಕಾಂಗ್ರೆಸ್ ಟಿಕೆಟ್ ನೀಡುವಂತೆ ಕಾಂಗ್ರೆಸ್ ದಲಿತ ನಾಯಕರು ಪತ್ರ ಬರೆದಿದ್ದಾರೆ. ಈಗಾಗಲೇ ಕೆ.ಸಿ. ಕೊಂಡಯ್ಯಗೆ ಟಿಕೆಟ್ ನೀಡಲು ಕಾಂಗ್ರೆಸ್ ಮುಂದಾಗಿದೆ.

ಇದನ್ನೂ ಓದಿ: ನಿಜವಾದ ರೈತರಿಗೆ ದೀರ್ಘಕಾಲೀನ ನಷ್ಟವನ್ನು ಉಂಟು ಮಾಡಿದೆ; ಕೃಷಿ ಕಾನೂನು ವಾಪಸ್ ಪಡೆದ ಬಗ್ಗೆ ಭಾರತೀಯ ಕಿಸಾನ್ ಸಂಘ ಪ್ರತಿಕ್ರಿಯೆ

Click on your DTH Provider to Add TV9 Kannada