AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Politics: ದಲಿತ ಬಲ ಪಂಗಡದ ಯುವ ನಾಯಕರ ಹುಡುಕಾಟದಲ್ಲಿ ರಾಜ್ಯ ಬಿಜೆಪಿ

ರಾಜ್ಯ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಬಿಜೆಪಿಯು ಹೊಸ ಯುವ ದಲಿತ ಮುಖವನ್ನು ಶೋಧಿಸುತ್ತಿದೆ. ವಿಶೇಷವಾಗಿ ಕಾಂಗ್ರೆಸ್​ನ ಮತ ಬ್ಯಾಂಕ್ ಎನಿಸಿಕೊಂಡಿರುವ ದಲಿತ ಬಲ ಪಂಗಡಕ್ಕೆ ಸೇರಿದ ಯುವ ನಾಯಕರನ್ನು ಪಕ್ಷಕ್ಕೆ ಸೆಳೆಯಲು ಪ್ರಯತ್ನ ನಡೆಸುತ್ತಿದೆ.

Karnataka Politics: ದಲಿತ ಬಲ ಪಂಗಡದ ಯುವ ನಾಯಕರ ಹುಡುಕಾಟದಲ್ಲಿ ರಾಜ್ಯ ಬಿಜೆಪಿ
BJP
TV9 Web
| Updated By: ನಯನಾ ರಾಜೀವ್|

Updated on: Dec 11, 2022 | 12:25 PM

Share

ರಾಜ್ಯ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಬಿಜೆಪಿಯು ಹೊಸ ಯುವ ದಲಿತ ಮುಖವನ್ನು ಶೋಧಿಸುತ್ತಿದೆ. ವಿಶೇಷವಾಗಿ ಕಾಂಗ್ರೆಸ್​ನ ಮತ ಬ್ಯಾಂಕ್ ಎನಿಸಿಕೊಂಡಿರುವ ದಲಿತ ಬಲ ಪಂಗಡಕ್ಕೆ ಸೇರಿದ ಯುವ ನಾಯಕರನ್ನು ಪಕ್ಷಕ್ಕೆ ಸೆಳೆಯಲು ಪ್ರಯತ್ನ ನಡೆಸುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದರ ಜತೆಗೆ ಕಾಂಗ್ರೆಸ್ ಪಕ್ಷವು ದಲಿತ ಬಲ ಪಂಗಡದ ಸಾಕಷ್ಟು ನಾಯಕರನ್ನು ಹೊಂದಿದೆ.

ಇದಕ್ಕೆ ಪರ್ಯಾಯವಾಗಿ ಬಿಜೆಪಿಯಲ್ಲಿ ಬಲಕ್ಕೆ ಸೇರಿದ ನಾಯಕರ ಸಂಖ್ಯೆ ತೀರಾ ಕಡಿಮೆ ಇದೆ. ಈಗಿರುವ ನಾಯಕರಿಗೂ ಕೂಡ ವಯಸ್ಸಾಗಿದೆ, ಗೋವಿಂದ ಕಾರಜೋಳ, ರಮೇಶ್​ ಜಿಗಜಿಣಗಿ ಸೇರಿ ಇತರರಿಗೆ ವಯಸ್ಸಾಗಿದೆ ಹೀಗಾಗಿ ಯುವ ನಾಯಕರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ.

ಸಾಂಪ್ರದಾಯಿಕವಾಗಿ ಕರ್ನಾಟಕದಲ್ಲಿ ಎಸ್​ಸಿಯನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ದಲಿತ ಎಡ ಮತ್ತು ದಲಿತ ಬಲ. ಸಾಮಾನ್ಯವಾಗಿ ಎಲ್ಲಾ ಸಮುದಾಯದಲ್ಲಿ ಮತ್ತು ವಿಶೇಷವಾಗಿ ದಲಿತರಲ್ಲಿ ವಯಸ್ಸಾದ ನಾಯಕರ ಸಮಸ್ಯೆಯನ್ನು ಪಕ್ಷ ಎದುರಿಸುತ್ತಿದೆ.

ದಲಿತರಲ್ಲಿ ದೊಡ್ಡ ಪಂಗಡಗಳಲ್ಲಿ ಒಂದಾದ ಮಾದಿಗ, ಲಂಬಾಣಿ, ಭೋವಿ ಸಮುದಾಯಗಳನ್ನು ಹೊರತುಪಡಿಸಿ ಹೆಚ್ಚಾಗಿ ಬಿಜೆಪಿಯ ಹಿಂದೆ ಒಟ್ಟುಗೂಡುತ್ತದೆ ಎಂದು ಹೇಳಲಾಗಿದೆ.

ಬಿಜೆಪಿಯಲ್ಲಿ ವಿಶೇಷವಾಗಿ ದಲಿತ ಬಲಕ್ಕೆ ಸೇರಿದ ನಾಯಕರ ಕೊರತೆಯಿದೆ, ಕೋಲಾರ ಸಂಸದ ಎಸ್ ಮುನಿಸ್ವಾಮಿ, ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಸಂದೀಪ್ ಕುಮಾರ್ ಅವರಂತಹ ದಲಿತ ಬಲಪಂಥೀಯ ನಾಯಕರನ್ನು ಕರೆತರಲು ಪಕ್ಷವು ತನ್ನ ಪ್ರಯತ್ನವನ್ನು ಮಾಡುತ್ತಿದೆ.

ಬಿಜೆಪಿಯಲ್ಲಿರುವ ಬಹುತೇಕ ದಲಿತ ಮುಖಂಡರು ಆರ್​ಎಸ್​ಎಸ್​ ಹಿನ್ನೆಲೆಯಿಂದ ಬಂದವರು, ಈ ನಾಯಕರು ಭಾಷಣ ಮಾಡುವುದರಲ್ಲಿ ನಿಪುಣರಾದರೂ ಆರ್​ಎಸ್ಎಸ್​ ಪರವಾದ ಭಾಷಣಗಳನ್ನು ಮಾಡುವುದರಿಂದ ಹಿಂದೆ ಸರಿಯುತ್ತಾರೆ. ಈ ಸಮುದಾಯಗಳಲ್ಲಿ ಭವಿಷ್ಯದ ನಾಯಕತ್ವವನ್ನು ರೂಪಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.​

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ