ಸಮುದ್ರಕ್ಕೆ ಗಂಗಾ ಜಲವೂ ಬರುತ್ತೆ, ಚರಂಡಿ ನೀರೂ ಬರುತ್ತೆ: ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಗೆ ಕೆಎನ್​ ರಾಜಣ್ಣ ಅಸಮಾಧಾನ

| Updated By: Ganapathi Sharma

Updated on: Nov 15, 2023 | 3:41 PM

ಗೌರಿಶಂಕರ್ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಸಂತೋಷ ಎಂದು ಕುಟುಕಿದ ರಾಜಣ್ಣ, ನಮ್ಮ ಜಿಲ್ಲೆಯಲ್ಲಿ ಏನೇ ಆದ್ರೂ ನಿಭಾಯಿಸುವ ಶಕ್ತಿ ಜನ ನೀಡಿದ್ದಾರೆ. ನಮ್ಮ ಜಿಲ್ಲೆಯ ಜನರು ನನಗೆ, ಡಾ. ಜಿ ಪರಮೇಶ್ವರ್‌ಗೆ ಶಕ್ತಿ ಕೊಟ್ಟಿದ್ದಾರೆ. ಎಂತಹ ಸಂದರ್ಭ ಬಂದ್ರೂ ನಿಭಾಯಿಸ್ತೇವೆ, ನಾವು ಅಶಕ್ತರೇನಲ್ಲ ಎಂದು ರಾಜಣ್ಣ ಹೇಳಿದ್ದಾರೆ.

ಸಮುದ್ರಕ್ಕೆ ಗಂಗಾ ಜಲವೂ ಬರುತ್ತೆ, ಚರಂಡಿ ನೀರೂ ಬರುತ್ತೆ: ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಗೆ ಕೆಎನ್​ ರಾಜಣ್ಣ ಅಸಮಾಧಾನ
ಕೆಎನ್​ ರಾಜಣ್ಣ
Follow us on

ಹಾಸನ, ನವೆಂಬರ್ 15: ಜೆಡಿಎಸ್‌ನ ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್ (Congress) ಸೇರ್ಪಡೆಗೆ ಪಕ್ಷದ ಹಿರಿಯ ನಾಯಕ, ಇಲಾಖೆಯ ಸಚಿವ ಕೆಎನ್ ರಾಜಣ್ಣ (KN Rajanna) ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಸನದಲ್ಲಿ ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಪೂಜೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಮ್ಮ ಗಮನಕ್ಕೆ ತರದೆ ಗೌರಿಶಂಕರ್ ಅವರನ್ನು ಸೇರ್ಪಡೆ ಮಾಡಿಕೊಂಡಿದ್ದಕ್ಕೆ ಅಸಮಾಧಾನವಿದೆ. ಜಿಲ್ಲೆಯ ಯಾವ ನಾಯಕರನ್ನೂ ಸಂಪರ್ಕಿಸದೆ ಸೇರಿಸಿಕೊಂಡಿದ್ದಕ್ಕೆ ಅಸಮಾಧಾನವಿದೆ. ಅವರ ಸೇರ್ಪಡೆ ಬಗ್ಗೆ ನನಗೆ, ಜಿ ಪರಮೇಶ್ವರ್‌ಗೆ, ಜಿಲ್ಲೆಯ ಉಳಿದ ಕಾಂಗ್ರೆಸ್‌ ಶಾಸಕರಿಗಾಗಲಿ ಮಾಹಿತಿ ನೀಡಿಲ್ಲ. ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗಾಗಲಿ ಮಾಹಿತಿ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

ಗೌರಿಶಂಕರ್ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಸಂತೋಷ ಎಂದು ಕುಟುಕಿದ ರಾಜಣ್ಣ, ನಮ್ಮ ಜಿಲ್ಲೆಯಲ್ಲಿ ಏನೇ ಆದ್ರೂ ನಿಭಾಯಿಸುವ ಶಕ್ತಿ ಜನ ನೀಡಿದ್ದಾರೆ. ನಮ್ಮ ಜಿಲ್ಲೆಯ ಜನರು ನನಗೆ, ಡಾ. ಜಿ ಪರಮೇಶ್ವರ್‌ಗೆ ಶಕ್ತಿ ಕೊಟ್ಟಿದ್ದಾರೆ. ಎಂತಹ ಸಂದರ್ಭ ಬಂದ್ರೂ ನಿಭಾಯಿಸ್ತೇವೆ, ನಾವು ಅಶಕ್ತರೇನಲ್ಲ ಎಂದು ರಾಜಣ್ಣ ಹೇಳಿದ್ದಾರೆ.

ಕಾಂಗ್ರೆಸ್ ಅನ್ನೋದು ಸಮುದ್ರವಿದ್ದಂತೆ. ಸಮುದ್ರದಲ್ಲಿ ಗಂಗಾ ಮಾತೆಯಷ್ಟು ಪವಿತ್ರ ಜಲವೂ ಬರುತ್ತೆ. ಪಕ್ಕದ ಚರಂಡಿ ನೀರು ಕೂಡ ಬರುತ್ತೆ, ಸಮುದ್ರದಲ್ಲಿ ಅಮೃತವೂ ಇದೆ, ವಿಷವೂ ಇದೆ. ಅಮೃತ ಸಿಗೋರಿಗೆ ಅಮೃತ ಸಿಗುತ್ತೆ, ವಿಷ ಸಿಗೋರಿಗೆ ವಿಷ ಸಿಗುತ್ತೆ ಎಂದು ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ರಾಜಣ್ಣ ಮಾರ್ಮಿಕವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಕಾಂತರಾಜು ವರದಿ ಬಂದಾಕ್ಷಣಕ್ಕೆ ಒಪ್ಪಲು ಅದೇನು ಭಾರತದ ಸಂವಿಧಾನನಾ?: ಕೆಎನ್ ರಾಜಣ್ಣ

ಗೌರಿಶಂಕರ್ ಪಕ್ಷ ಸೇರ್ಪಡೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಸಲೀಂ ಅಹ್ಮದ್ ಮಾಹಿತಿ ನೀಡಿದರು. ನಾನು ಆಯ್ತು ಎಂದು ಹೇಳಿದೆ, ಬೇರೆ ಕಾರ್ಯಕ್ರಮ ಇತ್ತು, ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:37 pm, Wed, 15 November 23